ಜಾರ್ಖಂಡ್ ವಿಧಾನಸಭಾ ಚುನಾವಣೆ: 24 ವರ್ಷ, 13 ಮುಖ್ಯಮಂತ್ರಿಗಳು; ಹೀಗಿದೆ ಜಾರ್ಖಂಡ್ ರಾಜ್ಯದ ಅಸ್ಥಿರ ರಾಜಕೀಯ ಇತಿಹಾಸದ ಚಿತ್ರಣ
ಜಾರ್ಖಂಡ್ ರಾಜ್ಯ ಉದಯವಾಗಿ 25 ವರ್ಷಗಳು ಕಳೆದಿವೆ. ಇಂದು (ನವೆಂಬರ್ 23) ಈ ರಾಜ್ಯದ 6ನೇ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಪ್ರಾದೇಶಿಕ ಪಕ್ಷ ಜೆಎಂಎಂ ಹಾಗೂ ರಾಷ್ಟ್ರೀಯ ಪಕ್ಷ ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ. ಫಲಿತಾಂಶ ಪ್ರಕಟಕ್ಕೂ ಮುನ್ನ ಜಾರ್ಖಂಡ್‌ನ ಅಸ್ಥಿರ ರಾಜಕೀಯ ಇತಿಹಾಸದ ಕುರಿತ 10 ಅಂಶಗಳನ್ನು ತಿಳಿಯಿರಿ.
ಹೇಮಂತ್ ಸೊರೆನ್ (ಮೊದಲ ಚಿತ್ರ), ಬಾಬುಲಾಲ್ ಮರಾಂಡಿ (ಎರಡನೇ ಚಿತ್ರ) ಚಂಪೈ ಸೊರೆನ್ (ಮೂರನೇ ಚಿತ್ರ)
ಜಾರ್ಖಂಡ್ ರಾಜ್ಯದ 6ನೇ ವಿಧಾನಸಭಾ ಚುನಾವಣೆ ನವೆಂಬರ್ 13 ಹಾಗೂ ನವೆಂಬರ್ 20 ರಂದು ಎರಡು ಹಂತಗಳಲ್ಲಿ ನಡೆದಿದೆ. ಒಟ್ಟು 81 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇಂದು (ನವೆಂಬರ್ 23) ಮತದಾನದ ಫಲಿತಾಂಶ ಹೊರಬೀಳಲಿದೆ. 2025ರ ಜನವರಿಗೆ ಜಾರ್ಖಂಡ್ ವಿಧಾನಸಭಾ 5ನೇ ವರ್ಷದ ಅವಧಿ ಮುಕ್ತಯವಾಗಲಿದೆ. ಪ್ರಸ್ತುತ ರಾಜ್ಯದಲ್ಲಿ ಆಡಳಿತದಲ್ಲಿರುವ ಜೆಎಂಎಂ ಅಧಿಕಾರಕ್ಕೆ ಬರುವುದೋ ಅಥವಾ ರಾಷ್ಟ್ರೀಯ ಪಕ್ಷ ಬಿಜೆಪಿ ತೆಕ್ಕೆ ಜಾರ್ಖಂಡ್ ಜಾರುವುದೋ ಎಂಬ ಕುತೂಹಲ ಎದುರಾಗಿದೆ. ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅದಕ್ಕೂ ಮೊದಲು ಜಾರ್ಖಂಡ್ ರಾಜ್ಯದ ಅಸ್ಥಿರ ರಾಜಕೀಯ ಇತಿಹಾಸದ ಬಗ್ಗೆ ಒಂದು ಒಳನೋಟ ಇಲ್ಲಿದೆ.
ಹೀಗಿದೆ ಜಾರ್ಖಂಡ್ ರಾಜ್ಯ ರಾಜಕೀಯ ಚಿತ್ರಣ
- ಅಪಾರ ಖನಿಜ ಸಂಪನ್ಮೂಲಗಳನ್ನ ಹೊಂದಿರುವ ಜಾರ್ಖಂಡ್ 2000ನೇ ಇಸವಿಯಿಂದ ಬಿಹಾರದಿಂದ ಬೇರ್ಪಟ್ಟು ಸ್ವತಂತ್ರ್ಯ ರಾಜ್ಯವಾಗುತ್ತದೆ. ಅಲ್ಲಿಂದ ಇಲ್ಲಿಯವರೆಗೆ ಇಲ್ಲಿನ ರಾಜಕೀಯದಲ್ಲಿ ಅಸ್ಥಿರತೆ ಎದುರಾಗುತ್ತಲೇ ಇದೆ. ರಾಜ್ಯವನ್ನು ಮುನ್ನಡೆಸಿದ 7 ಮುಖ್ಯಮಂತ್ರಿಗಳಲ್ಲಿ, ರಘುಬರ್ ದಾಸ್ ಮಾತ್ರ ಸಂಪೂರ್ಣ ಐದು ವರ್ಷಗಳ ಅವಧಿಯನ್ನು ಅಡೆತಡೆಯಿಲ್ಲದೆ ಪೂರ್ಣಗೊಳಿಸಿದರು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಮೂರು ವಿಭಿನ್ನ ನಿದರ್ಶನಗಳಿವೆ.
- ಜಾರ್ಖಂಡ್‌ನಲ್ಲಿ ಈವರೆಗೆ ನಡೆದ 5 ವಿಧಾನಸಭಾ ಚುನಾವಣೆಗಳಲ್ಲಿ, ಯಾವುದೇ ಪಕ್ಷವು ಸಂಪೂರ್ಣ ಬಹುಮತವನ್ನು ಪಡೆದುಕೊಂಡಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಾಥಮಿಕವಾಗಿ ಬಿಜೆಪಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಈ ಎರಡು ಪಕ್ಷಗಳಿಂದ ಪ್ರಾಬಲ್ಯ ಹೊಂದಿದೆ.
- ನವೆಂಬರ್ 15, 2000ದಲ್ಲಿ ಬಿಹಾರ ಮರುಸಂಘಟನೆ ಕಾಯ್ದೆಯ ಮೂಲಕ ಜಾರ್ಖಂಡ್ ಭಾರತದ 28ನೇ ರಾಜ್ಯವಾಯಿತು.ಈ ದಿನವು ಬುಡಕಟ್ಟು ಐಕಾನ್ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವದ ದಿನವಾಗಿದೆ.
ಇದನ್ನೂ ಓದಿ: Maharashtra Jharkhand Results Live: ಇಂದು ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ಚುನಾವಣಾ ಫಲಿತಾಂಶ, ಮತ ಎಣಿಕೆ ಆರಂಭ - ಜಾರ್ಖಂಡ್ ರಚನೆಯಾದಾಗ ಕರಿಯಾ ಮುಂಡಾ ಬಿಜೆಪಿಯ ಪ್ರಮುಖ ಬುಡಕಟ್ಟು ನಾಯಕರಾಗಿದ್ದರೂ, ಆರ್‌ಎಸ್‌ಎಸ್ ಬೇರುಗಳನ್ನು ಹೊಂದಿರುವ ಬುಡಕಟ್ಟು ನಾಯಕ ಬಾಬುಲಾಲ್ ಮರಾಂಡಿ ಅವರನ್ನು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು.
- 14 ವರ್ಷಗಳಲ್ಲಿ ಜೆಎಂಎಂನ ಶಿಬು ಸೊರೆನ್ ಮತ್ತು ಬಿಜೆಪಿಯ ಅರ್ಜುನ್ ಮುಂಡಾ ಮೂರು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಬಾಬುಲಾಲ್ ಮರಾಂಡಿ, ಮಧು ಕೋಡಾ ಮತ್ತು ಹೇಮಂತ್ ಸೊರೆನ್ ಇಂದೊಂದು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಜಾರ್ಖಂಡ್ ಅಸೆಂಬ್ಲಿಯಲ್ಲಿ ಶಿಬು ಸೊರೆನ್ ಅವರ ಪಕ್ಷಕ್ಕೆ 3 ಬಾರಿ ಬಹುಮತ ಸಾಧಿಸಲು ಆಗದೇ 10 ದಿನಗಳಲ್ಲಿ ಅಧಿಕಾರದಿಂದ ಕೆಳಗೆ ಇಳಿದಿತ್ತು.
- 2014ರಲ್ಲಿ ಅಧಿಕಾರ ವಹಿಸಿಕೊಂಡ ರಘುಬರ್ ದಾಸ್ ಅವರ ನೇತೃತ್ವದ ಸರ್ಕಾರ ಮೊದಲ ಬಾರಿಗೆ ಸ್ಥಿರವಾದ ಹಾಗೂ ಪೂರ್ಣ 5 ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿತ್ತು. ಆ ಕಾರಣಕ್ಕೆ ರಘುಬರ್ ದಾಸ್ ಮೊದಲು ಬಾರಿಗೆ 5 ವರ್ಷ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ಇದನ್ನೂ ಓದಿ: Jharkhand Election Live 2024: ಮೊದಲ ಎಕ್ಸಿಟ್ ಪೋಲ್, ಜಾರ್ಖಂಡ್‌ನಲ್ಲಿ ಎನ್‌ಡಿಎ ಜಯಭೇರಿ ಸೂಚನೆ, ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ ಸಾಧ್ಯತೆ - 2019ರ ವಿಧಾನಸಭಾ ಚುನಾವಣೆಯಲ್ಲಿ, ಹೇಮಂತ್ ಸೊರೆನ್ ಅವರು ಕಾಂಗ್ರೆಸ್ ಮತ್ತು ಮೂರು ಸಣ್ಣ ಮಿತ್ರಪಕ್ಷಗಳ ಬೆಂಬಲದೊಂದಿಗೆ JMM ಅನ್ನು ಅಧಿಕಾರಕ್ಕೆ ತಂದರು. ಇದು ಜಾರ್ಖಂಡ್‌ನ ರಾಜಕೀಯ ರಂಗದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ.
- ಹೇಮಂತ್ ಸೋರೆನ್ ಮತ್ತೆ ಮುಖ್ಯಮಂತ್ರಿಯಾದರು. ಆದರೆ ಈ ವರ್ಷದ ಆರಂಭದಲ್ಲಿ ಭೂ ಹಗರಣದಲ್ಲಿ ಬಂಧಿಸಲ್ಪಟ್ಟಿದ್ದರಿಂದ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಹಿರಿಯ ಜೆಎಂಎಂ ನಾಯಕ ಚಂಪೈ ಸೊರೆನ್ ಅವರನ್ನು ಈ ಪಾತ್ರಕ್ಕೆ ನೇಮಿಸಲಾಯಿತು ಮತ್ತು ಸುಮಾರು 153 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.
- ಜೈಲಿನಿಂದ ಮರಳಿದ ಹೇಮಂತ್ ಸೋರೆನ್ ಪುನಃ ಅಧಿಕಾರ ವಹಿಸಿಕೊಳ್ಳುತ್ತಾರೆ. ಆದರೆ ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ್ದ ಚಂಪೈ ಸೊರೆನ್ ಇದರಿಂದ ಅಸಮಾಧಾನಗೊಳ್ಳುತ್ತಾರೆ. ಮಾತ್ರವಲ್ಲ ನಂತರ ಕೆಲವೇ ದಿನಗಳಲ್ಲಿ ಬಿಜೆಪಿಗೆ ಸೇರುತ್ತಾರೆ. ಜೆಎಂಎಂ ಪಕ್ಷದಿಂದ ತಮಗೆ ಅವಮಾನ ಆಗಿದೆ ಎಂದು ಚಂಪೈ ಆರೋಪಿಸಿದ್ದಾರೆ.
- 2024 ರ ವಿಧಾನಸಭಾ ಚುನಾವಣೆಯಲ್ಲಿ ಚಂಪೈ ಸೊರೆನ್ ಸರೈಕೆಲಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ. ಈ ಸ್ಥಾನಕ್ಕೆ ಜೆಎಂಎಂನ ಗಣೇಶ್ ಮಹಾಲಿ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣಕ್ಕಾಗಿ 5 ಗ್ರಾಫ್ ನೋಡೋಣ
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.