logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jharkhand Assembly Elections 2024: ಜಾರ್ಖಂಡ್ ವಿಧಾನಸಭೆ ಚುನಾವಣೆ, ಕೊನೆಯ ಹಂತದ ಮತದಾನ ಆರಂಭ, ಶೇ.31.37ರಷ್ಟು ಹಕ್ಕು ಚಲಾವಣೆ

Jharkhand Assembly Elections 2024: ಜಾರ್ಖಂಡ್ ವಿಧಾನಸಭೆ ಚುನಾವಣೆ, ಕೊನೆಯ ಹಂತದ ಮತದಾನ ಆರಂಭ, ಶೇ.31.37ರಷ್ಟು ಹಕ್ಕು ಚಲಾವಣೆ

Umesha Bhatta P H HT Kannada

Nov 20, 2024 05:46 PM IST

google News

ಜಾರ್ಖಂಡ್‌ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೊದಲ ಬಾರಿ ಮತ ಹಾಕಿ ಯುವತಿಯ ಖುಷಿಯ ಕ್ಷಣಗಳು

  • ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ಪ್ರಕ್ರಿಯೆ ಬುಧವಾರ ಬೆಳಿಗ್ಗೆಯಿಂದಲೇ ಆರಂಭಗೊಂಡಿದ್ದು, ಎಲ್ಲೆಡೆ ಶಾಂತಿಯುತವಾಗಿದೆ.

ಜಾರ್ಖಂಡ್‌ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೊದಲ ಬಾರಿ ಮತ ಹಾಕಿ ಯುವತಿಯ ಖುಷಿಯ ಕ್ಷಣಗಳು
ಜಾರ್ಖಂಡ್‌ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೊದಲ ಬಾರಿ ಮತ ಹಾಕಿ ಯುವತಿಯ ಖುಷಿಯ ಕ್ಷಣಗಳು

ರಾಂಚಿ: ಬಿಹಾರದಿಂದ ಬೇರ್ಪಟ್ಟ24 ವರ್ಷಗಳಲ್ಲಿ ನಾಲ್ಕನೇ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಜಾರ್ಖಂಡ್ ರಾಜ್ಯದ 2ನೇ ಹಂತದ 38 ಸ್ಥಾನಗಳಿಗೆ ಮತದಾನ ಬುಧವಾರ ಬೆಳಿಗ್ಗೆಯೇ ಆರಂಭವಾಗಿದೆ. ಈಗಾಗಲೇ ಒಟ್ಟು 81 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿಯೇ ಕಳೆದ ವಾರ 43 ಸ್ಥಾನಗಳಿಗೆ ಮತದಾನವಾಗಿತ್ತು. ಜಾರ್ಖಂಡ್‌ನ ಎರಡನೇ ಮತ್ತು ಅಂತಿಮ ಹಂತದ ಚುನಾವಣೆಯ 38 ವಿಧಾನಸಭಾ ಸ್ಥಾನಗಳಿಗೆ ಬುಧವಾರದಂದು ಬಿಗಿ ಭದ್ರತೆಯ ನಡುವೆ ಮತದಾನ ಶುರುವಾಯಿತು. 12 ಜಿಲ್ಲೆಗಳ 14,218 ಬೂತ್‌ಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೂ ಮತದಾನ ನಡೆಯಲಿದೆ. ಬೆಳಗ್ಗೆ 11 ಗಂಟೆಯವರೆಗೆ ಶೇ.31.37ರಷ್ಟು ಮತದಾನವಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಡಾ.ನೇಹಾ ಅರೋರಾ ತಿಳಿಸಿದ್ದಾರೆ. ಸಿಎಂ ಹೇಮಂತ್‌ ಸೋರೇನ್‌ ಸೇರಿದಂತೆ ಘಟಾನುಘಟಿ ನಾಯಕರು ಎರಡನೇ ಹಂತದ ಚುನಾವಣೆಯ ಪ್ರತಿಷ್ಠಿತ ಕ್ಷೇತ್ರಗಳ ಅಭ್ಯರ್ಥಿಗಳು.

ಮತದಾನದ ನಿರೀಕ್ಷೆ

ನವೆಂಬರ್ 13 ರಂದು ನಡೆದ ಜಾರ್ಖಂಡ್‌ನಲ್ಲಿ 1 ನೇ ಹಂತದ ಮತದಾನದಲ್ಲಿ ಶೇ.66.65 ರಷ್ಟು ಮತದಾನವಾಗಿತ್ತು, ಇದು 2019 ರ ಚುನಾವಣೆಯ ಮತದಾನಕ್ಕಿಂತ ಶೇ 2.75 ಹೆಚ್ಚು. ಎರಡನೇ ಹಂತದಲ್ಲೂ ಉತ್ತಮ ಮತದಾನವಾಗುವ ನಿರೀಕ್ಷೆಯಿದೆ.

ಇದಕ್ಕಾಗಿ ಎಲ್ಲಾ ರೀತಿಯಲ್ಲೂ ವ್ಯವಸ್ಥೆ ಮಾಡಲಾಗಿದ್ದು. ಮತದಾರರು ಮತಗಟ್ಟೆ ಕೇಂದ್ರಗಳ ಕಡೆ ಆಗಮಿಸಿರುವುದು ಕಂಡು ಬರುತ್ತಿದೆ.

ಯುವ ಮತದಾರರು ಉತ್ಸಾಹದಿಂದಲೇ ಮೊದಲ ಬಾರಿಗೆ ಮತ ಹಾಕಿದ ಖುಷಿ ಅನುಭವಿಸುತ್ತಿದ್ದಾರೆ.

ಮತದಾರರು ಎಷ್ಟು

2024 ರ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯ ಅಂತಿಮ ಹಂತದ 38 ಅಸೆಂಬ್ಲಿ ಸ್ಥಾನಗಳಲ್ಲಿ 1.23 ಕೋಟಿ ರೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

60.79 ಲಕ್ಷ ಮಹಿಳೆಯರು ಮತ್ತು 147 ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು 1.23 ಕೋಟಿ ಮತದಾರರು ನವೆಂಬರ್ 20 ರಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 14,218 ಮತಗಟ್ಟೆಗಳ ಪೈಕಿ 239 ರಲ್ಲಿ ಮಹಿಳಾ ಸಿಬ್ಬಂದಿಗಳೇ ಸಂಪೂರ್ಣ ನಿಯೋಜನೆಗೊಂಡಿದ್ದಾರೆ. 22 ಮಂದಿ ಅಂಗವಿಕಲರು (ಪಿಡಬ್ಲ್ಯುಡಿಗಳು) ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕೆ. ರವಿ ಕುಮಾರ್ ತಿಳಿಸಿದ್ದಾರೆ.

ಅಭ್ಯರ್ಥಿಗಳು ಎಷ್ಟು

ಎರಡನೇ ಹಂತದಲ್ಲಿ ಬಿಜೆಪಿ 32 ಸ್ಥಾನಗಳಲ್ಲಿ ಮತ್ತು ಅದರ ಮಿತ್ರಪಕ್ಷ ಎಜೆಎಸ್‌ಯು ಆರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಭಾರತ ಬ್ಲಾಕ್‌ಗೆ, ಜೆಎಂಎಂ 20 ಸ್ಥಾನಗಳಿಂದ, ಕಾಂಗ್ರೆಸ್ 13 ರಿಂದ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ನಾಲ್ಕರಿಂದ ಮತ್ತು ಆರ್‌ಜೆಡಿ ಎರಡು ಸ್ಥಾನಗಳಿಂದ ಸ್ಪರ್ಧಿಸುತ್ತಿದೆ. ಧನ್ವರ್‌ನಲ್ಲಿ ಜೆಎಂಎಂ ಮತ್ತು ಸಿಪಿಐ(ಎಂಎಲ್) ಸೌಹಾರ್ದ ಸ್ಪರ್ಧೆಯನ್ನು ನಡೆಸಲಿದ್ದು, ಚತ್ತರ್‌ಪುರ ಮತ್ತು ಬಿಶ್ರಾಮ್‌ಪುರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಸೌಹಾರ್ದ ಹೋರಾಟ ನಡೆಸಲಿವೆ.

ಬಿಜೆಪಿ ವಿಶ್ವಾಸ

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬುಧವಾರ ಬೆಳಗ್ಗೆ ಆರಂಭವಾಗುತ್ತಿದ್ದಂತೆ, ಬಿಜೆಪಿ-ಎನ್‌ಡಿಎ ಮೈತ್ರಿಕೂಟವು ಚುನಾವಣೆಯಲ್ಲಿ 51 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಸರ್ಕಾರ ರಚಿಸಲಿದೆ ಎಂದು ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ಬಾಬುಲಾಲ್ ಮರಾಂಡಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಡಳಿತಾರೂಢ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ ಹಾಗೂ ಕಾಂಗ್ರೆಸ್‌, ಆರ್‌ಜೆಡಿ ಮೈತ್ರಿಯನ್ನು ಈ ಬಾರಿ ಜನ ಮಣಿಸಿ ಬಿಜೆಒಇಗೆ ಅಧಿಕಾರ ನೀಡಲಿದ್ದಾರೆ. ಕಳೆದ 5 ವರ್ಷಗಳಲ್ಲಿ ತಮ್ಮ ಆಡಳಿತದಲ್ಲಿ ಏರಿಳಿತ ಅನುಭವಿಸಿದ ಹೇಮಂತ್ ಸೋರೆನ್ ನೇತೃತ್ವದ ಜೆಎಂಎಂ ಸರ್ಕಾರವನ್ನು ಬದಲಾಯಿಸುವುದು ಜಾರ್ಖಂಡ್‌ನ ಜನರ ಉದ್ದೇಶವಾಗಿದೆ. ಬದಲಾವಣೆಗಾಗಿ ಜನರು ಮತ ಹಾಕುತ್ತಾರೆ ಎಂದು ಮರಾಂಡಿ ಎಎನ್‌ಐಗೆ ತಿಳಿಸಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ