logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kandahar Hijack Case: ಉಗ್ರ ಮುಷ್ತಾಕ್ ಜರ್ಗರ್‌ನ ಶ್ರೀನಗರ ಆಸ್ತಿ ಜಪ್ತಿ; ಭಯೋತ್ಪಾದಕರ ವಿರುದ್ಧ ಎನ್‌ಐಎ ಮಹತ್ವದ ಕ್ರಮ

Kandahar hijack case: ಉಗ್ರ ಮುಷ್ತಾಕ್ ಜರ್ಗರ್‌ನ ಶ್ರೀನಗರ ಆಸ್ತಿ ಜಪ್ತಿ; ಭಯೋತ್ಪಾದಕರ ವಿರುದ್ಧ ಎನ್‌ಐಎ ಮಹತ್ವದ ಕ್ರಮ

HT Kannada Desk HT Kannada

Mar 02, 2023 10:29 AM IST

ಕಂದಹಾರ್‌ ವಿಮಾನ ಅಪಹರಣ (ಕಡತ ಚಿತ್ರ)

  • Kandahar hijack case: ಕಂದಹಾರ್‌ ವಿಮಾನ ಅಪಹರಣದ ಕೇಸ್‌, ಒತ್ತೆಯಾಳುಗಳ ಬಿಡುಗಡೆಗೆ ಉಗ್ರರ ವಿನಿಮಯ ವಿಚಾರ ಇತಿಹಾಸದ ಪುಟ ಸೇರಿದೆ. ಆದರೂ, ಅದು ಮರೆಯುವಂತಹ ವಿಚಾರವಲ್ಲ. ಅಂದು ವಿನಿಮಯದ ಮೂಲಕ ಸೆರೆಯಿಂದ ಬಚಾವ್‌ ಆಗಿದ್ದ ಉಗ್ರನ ಆಸ್ತಿಯನ್ನು ಜಪ್ತಿ ಮಾಡುವ ಮೂಲಕ ಎನ್‌ಐಎ ಇಂದು ಜಗತ್ತಿನ ಗಮನಸೆಳೆದಿದೆ.

ಕಂದಹಾರ್‌ ವಿಮಾನ ಅಪಹರಣ (ಕಡತ ಚಿತ್ರ)
ಕಂದಹಾರ್‌ ವಿಮಾನ ಅಪಹರಣ (ಕಡತ ಚಿತ್ರ) (HT File Photo)

ಪಾಕಿಸ್ತಾನದ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿರುವ ಪ್ರಮುಖ ಕಾರ್ಯಾಚರಣೆ ಇದು. ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ ಮಸೂದ್ ಅಜರ್ ಜತೆಗೆ ಬಿಡುಗಡೆಯಾದ ಅಲ್-ಉಮರ್ ಮುಜಾಹಿದ್ದೀನ್ ಸಂಸ್ಥಾಪಕ ಮತ್ತು ಮುಖ್ಯ ಕಮಾಂಡರ್ ಮುಷ್ತಾಕ್ ಜರ್ಗರ್ ಯಾನೆ ಲಟ್ರಾಮ್ ಗೆ ಸೇರಿದ ಆಸ್ತಿಯನ್ನು ಶ್ರೀನಗರದಲ್ಲಿ ಎನ್‌ಐಎ ಜಪ್ತಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಮುಷ್ತಾಕ್‌ ಜರ್ಗರ್‌ ಎಂಬ ಈ ಉಗ್ರ ಅಲ್‌ -ಉಮರ್‌ ಮುಜಾಹಿದ್ದೀನ್‌ನ ಚೀಫ್‌ ಕಮಾಂಡರ್‌ ಮತ್ತು ಸಂಸ್ಥಾಪಕ. ಬಹವಾಲ್‌ಪುರ ಮೂಲದ ಜೈಶ್‌ ಏ ಮೊಹಮ್ಮದ್‌ ಉಗ್ರ ಸಂಘಟನೆಯ ಮು‍ಖ್ಯಸ್ಥ ಮಸೂದ್‌ ಅಜರ್‌ ಜತೆಗೆ ಈತನ ಬಿಡುಗಡೆ ಆಗಿತ್ತು. 1999ರಲ್ಲಿ ಕಂದಹಾರ್‌ ವಿಮಾನ ಅಪಹರಣ (ಇಂಡಿಯನ್‌ ಏರ್‌ಲೈನ್ಸ್‌ ಐಸಿ 814) ನಡೆಸಿದಾಗ ಅದರಲ್ಲಿದ್ದ ಪ್ರಯಾಣಿಕರ ಸುರಕ್ಷಿತ ಬಿಡುಗಡೆಗೆ ಉಗ್ರರ ವಿನಿಮಯವನ್ನು ಅಪಹರಣಕಾರರು ಬಯಸಿದ್ದರು. ಅದರಂತೆ ಈತನ ಬಿಡುಗಡೆ ಆಗಿತ್ತು. ಜರ್ಗರ್‌ 1989ರಲ್ಲಿ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಪುತ್ರಿ ರುಬಿಯ್ಯಾ ಅವರನ್ನು ಅಪರಹರಿಸಿದ ಕೇಸ್‌ನಲ್ಲೂ ಆರೋಪಿ. ರುಬಿಯ್ಯಾ ಅವರು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಸಹೋದರಿ.

ಎನ್‌ಐಎ ವಕ್ತಾರರ ಪ್ರಕಾರ, ಶ್ರೀನಗರದ ನೌಹಟ್ಟಾ, ಜಾಮಿಯಾ ಮಸೀದಿಯ ಗನೈ ಮೊಹಲ್ಲಾದಲ್ಲಿರುವ ಜರ್ಗರ್‌ಗೆ ಸಂಬಂಧಿಸಿ ಎರಡು ಮಾರ್ಲಾಸ್ ಮನೆ (ಖಾಸ್ರಾ ನಂ. 182) ಯುಎ(ಪಿ)ಎ ನಿಬಂಧನೆಗಳ ಅಡಿಯಲ್ಲಿ ಲಗತ್ತಿಸಲಾಗಿದೆ. ಜರ್ಗರ್ ಯುಎ(ಪಿ) ಕಾಯಿದೆಯಡಿ 'ಘೋಷಿತ ಒಂಟಿ ಭಯೋತ್ಪಾದಕ' ಮತ್ತು ಬಿಡುಗಡೆಯಾದಾಗಿನಿಂದಲೂ ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿದ್ದಾನೆ. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ನೀಡುತ್ತಿದ್ದಾನೆ.

ಜರ್ಗರ್ ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ನೊಂದಿಗೆ ಗುರುತಿಸಿಕೊಂಡಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಿಗೆ ಕಾರಣನಾಗಿದ್ದ. ಕೊಲೆಗಳು ಸೇರಿ ಇತರ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದ.ಅಲ್-ಖೈದಾ ಮತ್ತು ಜೆಎಂನಂತಹ ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾನೆ.

ಯುಎಪಿಎಯ ನಾಲ್ಕನೇ ಷೆಡ್ಯೂಲ್ ಪ್ರಕಾರ ಕೇಂದ್ರ ಸರ್ಕಾರವು ಜರ್ಗರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಆತ ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿ ಬೆಳೆದು. ಜೆಕೆಎಲ್‌ಎಫ್‌ಗೆ ಸೇರಿದ್ದ. 1989 ರಲ್ಲಿ ರುಬಯ್ಯ ಸಯೀದ್‌ ಅವರನ್ನು ಅಪಹರಿಸಿದ ಸದಸ್ಯರಲ್ಲಿ ಒಬ್ಬನಾಗಿಗಿದ್ದ. ಐದು ಭಯೋತ್ಪಾದಕರಿಗೆ ಬದಲಾಗಿ ಆಕೆಯನ್ನು ಬಿಡುಗಡೆ ಮಾಡುವ ಮಾತುಕತೆ ನಡೆಸಿದ್ದ ಎಂದು ವಕ್ತಾರರು ಹೇಳಿದರು.

ಜರ್ಗರ್‌ನನ್ನು 1992ರ ಮೇ 15 ರಂದು ಬಂಧಿಸಲಾಯಿತು. ಹರ್ಕತ್-ಉಲ್-ಅನ್ಸಾರ್ ಭಯೋತ್ಪಾದಕ ಒಮರ್ ಸಯೀದ್ ಶೇಖ್ ಜತೆಗೆ ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 814 ಒತ್ತೆಯಾಳು ವಿನಿಮಯ ಒಪ್ಪಂದದ ಭಾಗವಾಗಿ 1999ರ ಡಿಸೆಂಬರ್ 31ರಂದು ಜೈಲಿನಿಂದ ಬಿಡುಗಡೆಯಾದ. ನಂತರ ಡೇನಿಯಲ್ ಪರ್ಲ್ ಹತ್ಯೆ ಪ್ರಕರಣದ ಆರೋಪಿಯಾಗಿ 2002ರಲ್ಲಿ ಆತ ಪಾಕಿಸ್ತಾನದಲ್ಲಿ ಬಂಧಿಯಾದ.

ಮಸೂದ್ ಅಜರ್ ಮತ್ತು ಒಮರ್ ಸಯೀದ್ ಇಬ್ಬರೂ ಆಗಿನ ಹರ್ಕತ್-ಉಲ್-ಅನ್ಸಾರ್ ಗುಂಪಿನ ತೀವ್ರ ಭಯೋತ್ಪಾದಕರಾದರು. ಕಾಶ್ಮೀರ ಸಮಸ್ಯೆಗೆ ಬೆಂಬಲ ಘೋಷಿಸಿ ಮುಷ್ತಾಕ್‌ ಜರ್ಗರ್‌ನನ್ನು ಬಿಡುಗಡೆ ಮಾಡಿದ್ದರು. ಆತ ಮತ್ತೆ ಸಕ್ರಿಯನಾಗಿದ್ದಾನೆ. ಶೇಖ್‌ ಪಾಕಿಸ್ಥಾನದ ಜೈಲು ಸೇರಿದ್ದರೆ, ಮಸೂದ್‌ ಅಜರ್‌ ಪಾಕಿಸ್ತಾನದ ಬಹವಾಲ್‌ಪುರದ ಜೈಷ್‌ ಏ ಮೊಹಮ್ಮದ್‌ನ ಕೇಂದ್ರ ಕಚೇರಿಯಲ್ಲಿದ್ದಾನೆ.

    ಹಂಚಿಕೊಳ್ಳಲು ಲೇಖನಗಳು