logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೀದರ್‌ನ ನರಸಿಂಹಲು ಗೌಡ್‌ ದಪ್ಪೂರುಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ; ತೆಲಂಗಾಣದವರಿಗೆ ಸಂಭ್ರಮ, ಖುಷಿ, ಕಾರಣ ಇದು

ಬೀದರ್‌ನ ನರಸಿಂಹಲು ಗೌಡ್‌ ದಪ್ಪೂರುಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ; ತೆಲಂಗಾಣದವರಿಗೆ ಸಂಭ್ರಮ, ಖುಷಿ, ಕಾರಣ ಇದು

Umesh Kumar S HT Kannada

Nov 04, 2024 11:37 AM IST

google News

ಬೀದರ್‌ನ ಜಾನಪದ ಹಾಡುಗಾರ ನರಸಿಂಹಲು ದಪ್ಪೂರು ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಕ್ಷಣ.

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ, ಪ್ರಶಸ್ತಿ ಪ್ರದಾನ ಎಲ್ಲವೂ ಆಗಿದೆ ನಿಜ. ಆದರೆ ತೆರೆಮರೆಯ ಸಾಧಕರ ವಿವರ ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಈಗ ಬೀದರ್‌ನ ಜಾನಪದ ಹಾಡುಗಾರ ನರಸಿಂಹಲು ದಪ್ಪೂರು ಅವರ ಸುದ್ದಿ ಗಮನಸೆಳೆದಿದೆ. ನರಸಿಂಹಲು ಅವರಿಗೆ ಪ್ರಶಸ್ತಿ ಬಂದಿರುವುದಕ್ಕೆ ತೆಲಂಗಾಣದವರಿಗೆ ಸಂಭ್ರಮ, ಖುಷಿ. ಅದಕ್ಕೆ ಕಾರಣ ಇಲ್ಲಿದೆ.

ಬೀದರ್‌ನ ಜಾನಪದ ಹಾಡುಗಾರ ನರಸಿಂಹಲು ದಪ್ಪೂರು ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಕ್ಷಣ.
ಬೀದರ್‌ನ ಜಾನಪದ ಹಾಡುಗಾರ ನರಸಿಂಹಲು ದಪ್ಪೂರು ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಕ್ಷಣ.

ಬೆಂಗಳೂರು: ಬೀದರ್‌ನ ಜಾನಪದ ಹಾಡುಗಾರ ನರಸಿಂಹಲು ಗೌಡ್‌ ದಪ್ಪೂರು ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಈ ವಿಚಾರವಾಗಿ ತೆಲಂಗಾಣದಲ್ಲಿ ಖುಷಿ ಮತ್ತು ಸಂಭ್ರಮ ಸಡಗರ ಕಂಡುಬಂದಿದೆ. ಅವರ ಹೆಸರೇ ಸೂಚಿಸುವಂತೆ ಅವರು ತೆಲುಗು ಪ್ರಾಂತ್ಯದವರು. ತೆಲಂಗಾಣದ ಮಾಧ್ಯಮಗಳಲ್ಲಿ ನರಸಿಂಹಲು ದಪ್ಪೂರು ಅವರ ಸಾಧನೆ ಮತ್ತು ಅತ್ಯಂತ ವಿರಳ ಸನ್ಮಾನ, ಪುರಸ್ಕಾರ. ಅವರು ಜಾನಪದ ಸಂಗೀತ ಕ್ಷೇತ್ರದಲ್ಲಿ ಯುವ ತಲೆಮಾರನ್ನು ಬೆಳೆಸುತ್ತಿದ್ದು, ಅವರ ಸಾಧನೆಯನ್ನು ಕರ್ನಾಟಕ ಸರ್ಕಾರ ಗುರುತಿಸಿದ್ದು ಹೆಮ್ಮೆ ಎಂಬಂತೆ ವಿಷಯ ಪ್ರಸ್ತುತಿಯಾಗಿದೆ. ದಪ್ಪೂರು ಗ್ರಾಮದಲ್ಲಿ ಇದು ಸಂಭ್ರಮಕ್ಕೆ ಕಾರಣವಾಗಿದೆ.

ಜಾನಪದ ಹಾಡುಗಾರ ನರಸಿಂಹಲು ಗೌಡ್‌ ದಪ್ಪೂರು ಯಾರು?

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಬೀದರ್‌ನಿಂದ ಆಯ್ಕೆಯಾದ ವರು ನರಸಿಂಹಲು ದಪ್ಪೂರು. ಬೀದರ್‌ನ ಗಡಿ ಭಾಗದವರು. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನ್ಯಾಯಲ್‌ಕಲ್ ಮಂಡಲದ ದಪ್ಪೂರು ಗ್ರಾಮದವರು.ಅಂದ ಹಾಗೆ ಬೀದರ್ ಪಟ್ಟಣದಿಂದ ದಪ್ಪೂರು 15 ಕಿ.ಮೀ. ಅಂತರದಲ್ಲಿದೆ. ಅವರಿಗೆ ಈಗ 62 ವರ್ಷ. 20 ವರ್ಷ ಹಿಂದೆ ಬೀದರ್‌ನಲ್ಲಿ ಬಂದು ನೆಲೆಸಿದರು. ಬೀದರ್‌ನಲ್ಲಿ ಸಂಗೀತ ಶಾಲೆಯನ್ನು ಸ್ಥಾಪಿಸಿ ಮಕ್ಕಳಿಗೆ ಸಂಗೀತ ಪಾಠ ಹೇಳುತ್ತ ಬಂದವರು. ಅವರ ಶಿಷ್ಯಂದಿರು ಜಾನಪದ ಸಂಗೀತ ಕ್ಷೇತ್ರದಲ್ಲಿ ತಾವೂ ಸಾಧನೆ ಮಾಡುತ್ತ ಮುಂದುವರಿಯುತ್ತಿದ್ದಾರೆ.

ನರಸಿಂಹಲು ಗೌಡ್ ದಪ್ಪೂರು ಅವರು ಮಕ್ಕಳಿಗೆ ಸಂಗೀತ ಪಾಠ ಹೇಳುವುದಷ್ಟೇ ಅಲ್ಲ, ತಾವೂ ವಿವಿಧೆಡೆ ಆಹ್ವಾನಿತರಾಗಿ ಸಂಗೀತ ಕಾರ್ಯಕ್ರಮವನ್ನೂ ಕೊಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಅನೇಕ ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಅವರು ನಡೆಸಿಕೊಟ್ಟಿದ್ದಾರೆ ಎಂಬ ಅಂಶದ ಕಡೆಗೆ ತೆಲಂಗಾಣ ಟುಡೇ ಗಮನಸೆಳೆದಿದೆ.

ಬಾಲ್ಯದಲ್ಲೇ ದೃಷ್ಟಿ ಕಳೆದುಕೊಂಡ ನರಸಿಂಹಲು ಗೌಡ್‌

ನರಸಿಂಹಲು ಗೌಡ್‌ ದಪ್ಪೂರು ಅವರು ಬಾಲ್ಯದಲ್ಲೇ ಅಂದರೆ 5 ವರ್ಷದ ಬಾಲಕನಿದ್ದಾಗಲೇ ಅನಾರೋಗ್ಯ ಉಂಟಾಗಿ ದೃಷ್ಟಿ ಕಳೆದುಕೊಂಡರು. ಶಾಲಾ ಶಿಕ್ಷಣ ಪಡೆಯಲು ಕಷ್ಟಪಟ್ಟರು. ಕೊನೆಗೆ, ದಪ್ಪೂರು ಗ್ರಾಮದ ಗುಂಡೇರಾವ್ ಮಹಾರಾಜ್ ಎಂಬುವವರು ನರಸಿಂಹಲು ಅವರನ್ನು ಮೈಸೂರಿನ ಅಂಧ ಮಕ್ಕಳ ಶಾಲೆಗೆ ಸೇರಿಸುವಲ್ಲಿ ನೆರವಾದರು. ಆಸಕ್ತಿಯಿಂದ ವಿದ್ಯೆ ಕಲಿತು ಎಲ್‌ಎಲ್‌ಬಿ ಮತ್ತು ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಿಕ್‌ ಸಂಗೀತದಲ್ಲೂ ಮಾಸ್ಟರ್ಸ್‌ ಮಾಡಿದರು. ಹಿಂದೂಸ್ತಾನಿ ಸಂಗೀತದಲ್ಲೂ ಪರಿಣತಿ ಹೊಂದಿದರು.

ಅಂಬರೀಷ, ಉಮಾರಾಣಿ, ಪವನ್ ಎಂಬ ಮೂವರು ಮಕ್ಕಳು ಇದ್ದು ಎಲ್ಲರೂ 20ರ ಹರೆಯದವರು. ಅವರೂ ತಂದೆಯಿಂದ ಸಂಗೀತ ಕಲಿತು, ಸಂಗೀತ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ನರಸಿಂಹಲು ಅವರಿಗೆ ಸರ್ಕಾರದಿಂದ 5 ಲಕ್ಷ ರೂ ನಗದು, ಎರಡು ತೊಲ ಬಂಗಾ ಮತ್ತು ಪ್ರಮಾಣ ಪತ್ರವೂ ಸಿಕ್ಕಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ