Mysore Dasara 2024: ಮೈಸೂರು ಅರಮನೆ ಅಂಗಳದಲ್ಲಿ ವಯೋಲಿನ್ ಮೋಡಿ, ಸಿತಾರ್-ಹಿಂದೂಸ್ತಾನಿ ಗಾಯನದ ಆಸ್ವಾದ
- ಮೈಸೂರಿನ ಅರಮನೆ ಅಂಗಳದಲ್ಲಿ ದಸರಾ ಅಂಗವಾಗಿ ಆಯೋಜನೆಗೊಂಡಿರುವ ಸಾಂಸ್ಕೃತಿಕ ವೇದಿಕೆಯಲ್ಲಿ ದಿಗ್ಗಜರ ಸಂಗೀತ ಮನ ಸೂರೆಗೊಳ್ಳುತ್ತಿದೆ. ಹಲವು ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
- ಮೈಸೂರಿನ ಅರಮನೆ ಅಂಗಳದಲ್ಲಿ ದಸರಾ ಅಂಗವಾಗಿ ಆಯೋಜನೆಗೊಂಡಿರುವ ಸಾಂಸ್ಕೃತಿಕ ವೇದಿಕೆಯಲ್ಲಿ ದಿಗ್ಗಜರ ಸಂಗೀತ ಮನ ಸೂರೆಗೊಳ್ಳುತ್ತಿದೆ. ಹಲವು ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
(1 / 6)
ಮೈಸೂರು ಆವರಣದಲ್ಲಿ ಬುಧವಾರ ಸಂಜೆ ಮಳೆ ನಿಂತ ಇಳೆಯಲ್ಲಿ ಸಂಗೀತ ರಸದೌತಣ. ಅದೂ ಸಿತಾರ್ ವಾದನಕ್ಕೆ ಹಿಂದೂಸ್ಥಾನಿ ಗಾಯನದ ಜುಗುಲ್ ಬಂದಿ.
(2 / 6)
ಧಾರವಾಡದವರಾದ ಉಸ್ತಾದ್ ಶಫೀಕ್ ಖಾನ್ ಅವರು ಸಿತಾರ್ ಲಾಲಿತ್ಯದೊಂದಿಗೆ ನಿನಾದ ಸೃಷ್ಟಿಸಿದರೆ, ಉಸ್ತಾದ್ ಫಯಾಜ್ ಖಾನ್ ಅವರು ಹಿಂದೂಸ್ಥಾನಿ ಗಾಯನದೊಂದಿಗೆ ಮನ ಸೂರೆ ಗೊಂಡರು.
(3 / 6)
ಆಂಧ್ರ ಮೂಲದವರಾದರೂ ಬೆಂಗಳೂರಿನಲ್ಲಿ ನೆಲೆಸಿರುವ ವಿದುಷಿ ಡಾ.ಜ್ಯೋತ್ಸಾ ಶ್ರೀಕಾಂತ್ ವಯೋಲಿನ್ ಕಾರ್ಯಕ್ರಮ ನಡೆಸಿಕೊಟ್ಟರು.
(4 / 6)
ಜ್ಯೋತ್ಸಾ ನಾಡಿನ ನಾನಾ ಭಾಗಗಳಲ್ಲಿ ಕಾರ್ಯಕ್ರಮ ನೀಡುತ್ತಲೇ ಇದ್ದಾರೆ. ಇಳಯರಾಜ, ಹಂಸಲೇಖ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಇತರ ಗ್ಯಾಲರಿಗಳು