logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಂಬ್ಯುಲೆನ್ಸ್‌ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ ವಿಧಿಸಿ ಲೈಸನ್ಸ್‌ ಕ್ಯಾನ್ಸಲ್‌ ಮಾಡಿದ ಪೊಲೀಸರು

ಆಂಬ್ಯುಲೆನ್ಸ್‌ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ ವಿಧಿಸಿ ಲೈಸನ್ಸ್‌ ಕ್ಯಾನ್ಸಲ್‌ ಮಾಡಿದ ಪೊಲೀಸರು

Rakshitha Sowmya HT Kannada

Nov 18, 2024 11:59 AM IST

google News

ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಬೇಜವಾಬ್ದಾರಿ ತೋರಿದ ಕಾರು ಚಾಲಕ; ವಿಡಿಯೋ ವೈರಲ್

  • ಹಿಂಬಳಿ ಬರುತ್ತಿದ್ದ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಬೇಜವಾಬ್ದಾರಿ ತೋರಿದ ಕಾರು ಚಾಲಕನಿಗೆ ಕೇರಳ ಪೊಲೀಸರು 2.5 ಲಕ್ಷ ರೂ ದಂಡ ವಿಧಿಸಿರುವುದು ಅಲ್ಲದೆ ಆತನ ಲೈಸನ್ಸ್‌ ಕ್ಯಾನ್ಸಲ್‌ ಮಾಡಿ ಬುದ್ಧಿ ಕಲಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಕಾರು ಚಾಲಕನ ವರ್ತನೆಗೆ ನೆಟಿಜನ್ಸ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಬೇಜವಾಬ್ದಾರಿ ತೋರಿದ ಕಾರು ಚಾಲಕ; ವಿಡಿಯೋ ವೈರಲ್
ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಬೇಜವಾಬ್ದಾರಿ ತೋರಿದ ಕಾರು ಚಾಲಕ; ವಿಡಿಯೋ ವೈರಲ್ (PC: @vijeshetty)

ಆಂಬ್ಯುಲೆನ್ಸ್‌ಗೆ ದಾರಿ ಬಿಡದ ಕಾರ್‌ ಮಾಲೀಕನೋರ್ವನಿಗೆ ಪೊಲೀಸರು 2.5 ಲಕ್ಷ ರೂ ದಂಡ ವಿಧಿಸಿರುವುದಲ್ಲದೆ. ಲೈಸನ್ಸ್‌ ಕೂಡಾ ರದ್ದುಗೊಳಿಸಿರುವ ಘಟನೆ ಕೇರಳದ ತ್ರಿಸೂರ್‌ನಲ್ಲಿ ನಡೆದಿದೆ. ಕಾರ್‌ ಮಾಲೀಕನ ನಡೆಗೆ ನೆಟಿಜನ್ಸ್‌ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದು, ಆತನಿಗೆ ಬುದ್ಧಿ ಕಲಿಸಿದ ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇರಳದ ತ್ರಿಶೂರ್‌ ಬಳಿ ನ.7 ರಂದು ನಡೆದಿರುವ ಘಟನೆ

ನವೆಂಬರ್‌ 7 ರಂದು ಈ ಘಟನೆ ನಡೆದಿದೆ. ಕೇರಳದ ತ್ರಿಸೂರ್‌ನ ಚಾಲಕುಡಿ ಬಳಿಯ ಮೆಡಿಕಲ್‌ ಕಾಲೇಜ್‌ ಬಳಿ ಆಂಬ್ಯುಲೆನ್ಸ್‌ ಒಂದರಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ಸಮಯದಲ್ಲಿ ಆಂಬ್ಯುಲೆನ್ಸ್‌ ಮುಂದೆ ಸಾಗುತ್ತಿದ್ದ ಕಾರಿನ ಚಾಲಕ ದಾರಿ ಬಿಡದೆ ಸತಾಯಿಸಿದ್ದಾನೆ. ಆಂಬ್ಯುಲೆನ್ಸ್‌ ಚಾಲಕ ಎಷ್ಟೇ ಹಾರ್ನ್‌ ಮಾಡಿದರೂ ಕಾರಿನ ಚಾಲಕ ಮಾತ್ರ ದಾರಿ ಬಿಡದೆ ಕಿಲೋಮೀಟರ್‌ಗಟ್ಟಲೆ ಹಾಗೇ ಸಾಗಿದ್ದಾನೆ. ಇದನ್ನು ಗಮನಿಸಿದ ಆಂಬ್ಯುಲೆನ್ಸ್‌ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಈ ವಿಡಿಯೋ ರೆಕಾರ್ಡ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಜೊತೆಗೆ ಪೊಲೀಸರಿಗೆ ಕೂಡಾ ಮಾಹಿತಿ ನೀಡಿದ್ದಾರೆ. ಮತ್ತೊಂದು ಮಾಹಿತಿಯ ಪ್ರಕಾರ ಆಂಬುಲೆನ್ಸ್‌, ಪೊನ್ನೈನಿಂದ ಚಾಲಕುಡಿಗೆ ಬರುತ್ತಿತ್ತು ಎನ್ನಲಾಗಿದೆ.

2.5 ಲಕ್ಷ ರೂ ದಂಡ ವಿಧಿಸಿದ ಪೊಲೀಸರು

ಪೊಲೀಸರು ವಿಡಿಯೋ ನೋಡಿ ಕಾರ್‌ ಮಾಲೀಕನಿಗೆ 2.5 ಲಕ್ಷ ರೂ ದಂಡ ವಿಧಿಸಿರುವುದು ಅಲ್ಲದೆ, ಆತನ ಲೈಸನ್ಸ್‌ ರದ್ದುಗೊಳಿಸಿದ್ದಾರೆ. @coolfunnytshirt ಎಂಬ ಸೋಷಿಯಲ್‌ ಮೀಡಿಯಾ ಯೂಸರ್‌, ಈ ವಿಡಿಯೋವನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಕೆಲವೇ ಸಮಯದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ ಕಾರ್‌ ಚಾಲಕನ ವರ್ತನೆ ಕಂಡು ನೆಟಿಜನ್ಸ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್‌ ಮಾಲೀಕ ಮನುಷ್ಯತ್ವ ಇಲ್ಲದಂತೆ ವರ್ತಿಸಿದ್ದಾನೆ. ಒಂದು ಜೀವನ ಬಹಳ ಮುಖ್ಯ. ಒಂದು ಕ್ಷಣ ತಡವಾದರೂ ರೋಗಿಗಳಿಗೆ ಎಷ್ಟು ಕಷ್ಟವಾಗುತ್ತದೆ. ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ ರೋಗಿಗೆ ಏನು ಸಮಸ್ಯೆ ಇತ್ತೋ ಏನೋ. ಆ ಕಾರ್‌ ಮಾಲೀಕ ಸ್ವಲ್ಪವೂ ಕನಿಕರ ಇಲ್ಲದಂತೆ ವರ್ತಿಸಿದ್ದಾನೆ. ಇಂಥ ವ್ಯಕ್ತಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ನೆಟಿಜನ್ಸ್‌ ಕಾಮೆಂಟ್‌ ಮಾಡುತ್ತಿದ್ದಾರೆ.

ಪೊಲೀಸರ ಕ್ರಮಕ್ಕೆ ನೆಟಿಜನ್ಸ್‌ ಪ್ರಶಂಸೆ

ಪೊಲೀಸರು ವಿಧಿಸಿರುವ ದಂಡದ ಮೊತ್ತ ಜಾಸ್ತಿ ಆಯ್ತು. ಆದರೂ ಇಂಥ ಜನರಿಗೆ ಬುದ್ಧಿ ಕಲಿಸಲು ಬೇರೆ ದಾರಿ ಇಲ್ಲ. ಇವರನ್ನು ನೋಡಿ ಬೇರೆಯವರು ಬುದ್ಧಿ ಕಲಿಯುತ್ತಾರೆ. ಆತ ಕೂಡಾ ಇನ್ನೆಂದಿಗೂ ಜೀವನದಲ್ಲಿ ಈ ರೀತಿ ತಪ್ಪು ಮಾಡುವುದಿಲ್ಲ. ವಿದ್ಯಾವಂತರೇ ಈ ರೀತಿ ವರ್ತಿಸಿದರೆ ಅವಿದ್ಯಾವಂತರ ಕಥೆ ಏನು? ಇದಕ್ಕೂ ಮುನ್ನ ಇಂಥಹ ಸಾಕಷ್ಟು ಘಟನೆಗಳಾಗಿವೆ. ತ್ರಿಸೂರ್‌ನಲ್ಲಿ ಮಾತ್ರವಲ್ಲ, ಇಡೀ ಕೇರಳದಲ್ಲಿ ಹಾಗೂ ಇಡೀ ದೇಶದಲ್ಲಿ ಪೊಲೀಸರು ಈ ರೀತಿ ಕ್ರಮ ಕೈಗೊಂಡರೆ ಖಂಡಿತ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಆಗುವುದಿಲ್ಲ. ಆಗ ಅಪಘಾತ ಪ್ರಕರಣ ಕೂಡಾ ಕಡಿಮೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ