ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರಲ್ಲೇ ಗಾಳಿ, ಬೆಳಕು ಚೆನ್ನಾಗಿರೋದು; ಕಳವಳ ಮೂಡಿಸಿದೆ ಮಾಲಿನ್ಯ ಸಮಸ್ಯೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರಲ್ಲೇ ಗಾಳಿ, ಬೆಳಕು ಚೆನ್ನಾಗಿರೋದು; ಕಳವಳ ಮೂಡಿಸಿದೆ ಮಾಲಿನ್ಯ ಸಮಸ್ಯೆ

ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರಲ್ಲೇ ಗಾಳಿ, ಬೆಳಕು ಚೆನ್ನಾಗಿರೋದು; ಕಳವಳ ಮೂಡಿಸಿದೆ ಮಾಲಿನ್ಯ ಸಮಸ್ಯೆ

ಭಾರತದ ರಾಜಧಾನಿ ದೆಹಲಿಗೆ ಹೋಲಿಸಿದರೆ ಕರ್ನಾಟಕದ ರಾಜಧಾನಿ ಬೆಂಗಳೂರಲ್ಲೇ ಉತ್ತಮ ಗಾಳಿ, ಬೆಳಕು ಎಲ್ಲವೂ ಚೆನ್ನಾಗಿರೋದು. ಆದರೆ ಮಾಲಿನ್ಯ ಸಮಸ್ಯೆ ಕಳವಳಕಾರಿಯಾಗಿ ಬೆಳೆಯುತ್ತಿದ್ದು, ವ್ಯಾಪಕವಾಗಿ ಸವಾಲನ್ನು ಒಡ್ಡುತ್ತಿರುವುದು ವಾಸ್ತವ. ಸದ್ಯದ ಪರಿಸ್ಥಿತಿಯ ಕಿರುನೋಟದ ವರದಿ ಇಲ್ಲಿದೆ.

ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರಲ್ಲೇ ಗಾಳಿ, ಬೆಳಕು ಚೆನ್ನಾಗಿರೋದು. ಆದಾಗ್ಯೂ, ಮಾಲಿನ್ಯ ಸಮಸ್ಯೆ ಕಳವಳ ಮೂಡಿಸಿದೆ. (ಸಾಂಕೇತಿಕ ಚಿತ್ರ)
ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರಲ್ಲೇ ಗಾಳಿ, ಬೆಳಕು ಚೆನ್ನಾಗಿರೋದು. ಆದಾಗ್ಯೂ, ಮಾಲಿನ್ಯ ಸಮಸ್ಯೆ ಕಳವಳ ಮೂಡಿಸಿದೆ. (ಸಾಂಕೇತಿಕ ಚಿತ್ರ) (PC- @namma_vjy/ HT File)

ಬೆಂಗಳೂರು: ಉತ್ತರ ಭಾರತದ ಬಹುಪಾಲು ಭೂಭಾಗ ದಟ್ಟ ಹೊಗೆ ತುಂಬಿದ ವಾತಾವರಣದಲ್ಲಿ ಸಂಕಷ್ಟಕ್ಕೀಡಾಗಿದ್ದರೆ ದಕ್ಷಿಣ ಭಾರತದ ಭೂಭಾಗದಲ್ಲಿ ಶುದ್ಧ ಗಾಳಿ ಮತ್ತು ನೀಲಾಕಾಶ ಗಮನಸೆಳೆಯುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಪ್ರಕಾರ ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರಲ್ಲೇ ಗಾಳಿ, ಬೆಳಕು ಚೆನ್ನಾಗಿರೋದು. ಒಟ್ಟಾರೆಯಾಗಿ ಮಾಲಿನ್ಯ ಸಮಸ್ಯೆ ಕಳವಳ ಮೂಡಿಸಿದೆ. ನವೆಂಬರ್ 15ರ ವಾಯು ಮಾಲಿನ್ಯ ಗುಣಮಟ್ಟ ಗಮನಿಸುವುದಾದರೆ ಬೆಂಗಳೂರು ನಗರದ ಎಕ್ಯೂಐ 50 (ಉತ್ತಮ) ಇದ್ದು, ಉತ್ತಮವೆನಿಸಿದೆ. ಅಪಾಯಕಾರಿ ಮಾಲಿನ್ಯದ ವಾತಾವರಣದಿಂದ ಪಾರಾಗಲು ಬಯಸುವವರಿಗೆ ಈ ವಾತಾವರಣ ಚೇತೋಹಾರಿ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಏತನ್ಮಧ್ಯೆ, ಭಾರತದ ರಾಜಧಾನಿ ದೆಹಲಿಯು ಮಾಲಿನ್ಯದ ಬಿಕ್ಕಟ್ಟಿನ ಕೇಂದ್ರ ಬಿಂದುವಾಗಿ ಉಳಿದಿದೆ. ಅಲ್ಲಿಎಕ್ಯೂಐ ಮಟ್ಟ 'ತೀವ್ರ' ಕಳವಳಕಾರಿ ಮತ್ತು 'ಅತ್ಯಂತ ಕಳಪೆ' ವರ್ಗದಲ್ಲಿದೆ. ನವೆಂಬರ್ 15 ರಂದು ದೆಹಲಿ ನಗರದಲ್ಲಿ ಸರಾಸರಿ ಎಕ್ಯೂಐ 396 ('ಅತ್ಯಂತ ಕಳಪೆ') ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ ಅಂಶ ಉಲ್ಲೇಖಿಸಿ ಟೈಮ್ಸ್ ನೌ ವರದಿ ಮಾಡಿದೆ. ಅಲಿಪುರ್ (433), ಆನಂದ್ ವಿಹಾರ್ (436), ಮತ್ತು ಅಶೋಕ್ ವಿಹಾರ್ (438) ನಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಇನ್ನಷ್ಟು ಭಯಾನಕ ಚಿತ್ರಣವನ್ನು ಒದಗಿಸಿವೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಲಿನ್ಯ ತಡೆಗೆ ದೆಹಲಿಯ ಯೋಜನೆ

ಸದ್ಯದ ಮಾಲಿನ್ಯ ಪರಿಸ್ಥಿತಿಯು ದೆಹಲಿ ಸರ್ಕಾರವನ್ನು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಹಂತ-III ಅನ್ನು ಜಾರಿಗೊಳಿಸುವಂತೆ ಒತ್ತಾಯಿಸಿದೆ. ಈ ಹಿಂದಿನ ಕ್ರಮಗಳಲ್ಲಿ ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲಿನ ನಿರ್ಬಂಧಗಳು, ನಿರ್ಮಾಣದ ಮೇಲಿನ ನಿರ್ಬಂಧಗಳು ಮತ್ತು ಸರಿಹೊಂದಿಸಲಾದ ಸರ್ಕಾರಿ ಕಚೇರಿ ಸಮಯಗಳ ಬದಲಾವಣೆಗಳು ಸೇರಿಕೊಂಡಿವೆ. ಈ ಪ್ರಯತ್ನಗಳ ಹೊರತಾಗಿಯೂ, ದಟ್ಟ ಹೊಗೆಯು ನಗರವಾಸಿಗಳ ಉಸಿರುಗಟ್ಟಿಸುವಿಕೆಯನ್ನು ಮುಂದುವರೆಸಿದೆ. ಈ ಅವಧಿಯಲ್ಲಿ ದೆಹಲಿಯು ಭಾರತದಲ್ಲಿ ಹೆಚ್ಚು ಕಲುಷಿತ ನಗರ ಎಂಬ ಕುಖ್ಯಾತಿಗೆ ಒಳಗಾಗಿದೆ.

ಆದಾಗ್ಯೂ, ಮಾಲಿನ್ಯದ ಬಿಕ್ಕಟ್ಟು ದೆಹಲಿಗೆ ಸೀಮಿತವಾಗಿಲ್ಲ. ಹತ್ತಿರದ ಪ್ರದೇಶಗಳಾದ ಚಂಡೀಗಢ, ನೋಯ್ಡಾ ಮತ್ತು ಗುರುಗ್ರಾಮ್‌ನಂತಹ ನಗರಗಳಿಗೂ ವ್ಯಾಪಿಸಿದೆ. ನವೆಂಬರ್ 15 ರಂದು ಚಂಡೀಗಢದಲ್ಲಿ ಎಕ್ಯೂಐ ಮಟ್ಟ 309, ನೋಯ್ಡಾ 316 ಮತ್ತು ಗುರುಗ್ರಾಮ್ 304 ದಾಖಲಿಸಿದೆ. ಇವೆಲ್ಲವೂ ಅತ್ಯಂತ ಕಳಪೆ ವಾಯುಗುಣ ಮಟ್ಟವೇ ಆಗಿದೆ.

ಮತ್ತೊಂದೆಡೆ, ಬೆಂಗಳೂರು ಮತ್ತು ಚೆನ್ನೈನಂತಹ ದಕ್ಷಿಣ ಭಾರತದ ನಗರಗಳು ಕ್ರಮವಾಗಿ 50 ಮತ್ತು 45 ಎಕ್ಯೂಐಗಳೊಂದಿಗೆ, ‘ಉತ್ತಮ’ ವರ್ಗದಲ್ಲಿದ್ದು, ಶುದ್ಧ ಗಾಳಿ ಬೆಳಕಿನೊಂದಿಗೆ ಮನುಷ್ಯರ ಬದುಕನ್ನು ಹಸನಾಗಿಸಿದೆ. ಹೈದರಾಬಾದ್, ಮುಂಬೈ ಮತ್ತು ಅಹಮದಾಬಾದ್‌ನಂತಹ ಇತರ ನಗರಗಳ ಎಕ್ಯೂಐ ಮಟ್ಟ ಇವುಗಳ ನಡುವೆ ಇದ್ದು, ಮಧ್ಯಮ- ಕಳಪೆ ನಡುವೆ ಇವೆ.

ಬೆಂಗಳೂರು ವಾಯು ಗುಣಮಟ್ಟ; ವಿಜಯ ಸೂತ್ರ ಏನು

ಹಾಗಾದರೆ, ಬೆಂಗಳೂರು ಮಹಾನಗರದ ಗಾಳಿಯ ಗುಣಮಟ್ಟವನ್ನು ನಿಯಂತ್ರಣದಲ್ಲಿರಿಸುವುದು ಯಾವುದು? ಮಹಾ ನಗರದ ಸಾಕಷ್ಟು ಹಸಿರು, ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಮತ್ತು ತುಲನಾತ್ಮಕವಾಗಿ ಕಡಿಮೆ ಕೈಗಾರಿಕಾ ಹೊರಸೂಸುವಿಕೆಗೆ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ.

ಕ್ಷಿಪ್ರ ನಗರೀಕರಣವು ಅದರ ಸವಾಲುಗಳನ್ನು ಮುಂದಿಟ್ಟಿದೆಯಾದರೂ, ಪೂರ್ವಭಾವಿ ನಗರ ಯೋಜನೆ ಮತ್ತು ಸಾರ್ವಜನಿಕ ಜಾಗೃತಿ ಅಭಿಯಾನಗಳು ಮಾಲಿನ್ಯದ ಮಟ್ಟವನ್ನು ದೂರ ಇರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಅನೇಕ ದೆಹಲಿ ನಿವಾಸಿಗಳಿಗೆ, ಈ ವ್ಯತಿರಿಕ್ತ ಸನ್ನಿವೇಶವು ಸಂಪೂರ್ಣವಾಗಿ ಮತ್ತು ಆಕರ್ಷಕವೆನಿಸತೊಡಗಿದೆ ಎಂದು ವರದಿ ಹೇಳಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.