Priyanka Gandhi Assets: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಸ್ತಿ ಪ್ರಮಾಣ ಎಷ್ಟು, ಪತಿ ರಾಬರ್ಟ್ ವಾದ್ರಾ ಪತ್ನಿಗಿಂತ ಶ್ರೀಮಂತ
Oct 23, 2024 07:49 PM IST
ಪ್ರಿಯಾಂಕ ಗಾಂಧಿ, ಪತಿ ರಾಬರ್ಟ್ ವಾದ್ರಾ ಆಸ್ತಿ ಪ್ರಮಾಣ ಎಷ್ಟಿದೆ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಸ್ತಿ ಪ್ರಮಾಣ ಎಷ್ಟು, ಲೋಕಸಭೆ ಚುನಾವಣೆ ಕಣದಲ್ಲಿರುವ ಪ್ರಿಯಾಂಕ ಅಫಿಡವಿಟ್ ನಲ್ಲಿ ಸಲ್ಲಿಸಿರುವ ಆಸ್ತಿ ವಿವರ, ಪತಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರ ಆಸ್ತಿ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.
ವಯನಾಡು: ಮೊದಲ ಬಾರಿಗೆ ಚುನಾವಣೆ ಕಣಕ್ಕೆ ಇಳಿದಿರುವ ಕಾಂಗ್ರೆಸ್ ನಾಯಕಿ ಹಾಗೂ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಸ್ತಿ ಪ್ರಮಾಣ ಎಷ್ಟಿರಬಹುದು. ಅವರ ಪತಿ, ವಿವಾದಿತ ಉದ್ಯಮಿ ರಾಬರ್ಟ್ ವಾದ್ರಾ ಅವರ ಆಸ್ತಿ ಪ್ರಮಾಣ ಎಷ್ಟಿದೆ. ಪತಿಗಿಂತ ಪತ್ನಿ ಶ್ರೀಮಂತರೇ, ಪತ್ನಿಗಿಂತ ಪತಿಯೇ ಹೆಚ್ಚು ಆಸ್ತಿ ವಂತರೇ ಎನ್ನುವ ಪ್ರಶ್ನೆ ಎದುರಾಗಬಹುದು. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪ್ರಿಯಾಂಕ ಗಾಂಧಿ ವಾದ್ರಾ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಪ್ರಮಾಣ, ಅದರಲ್ಲೀ ಸ್ಥಿರಾಸ್ಥಿ ಹಾಗೂ ಚರಾಸ್ಥಿ ವಿವರವನ್ನು ಉಲ್ಲೇಖಿಸಿದ್ದಾರೆ. ಪತಿ ರಾಬರ್ಟ್ ವಾದ್ರಾ ಅವರ ಆಸ್ತಿ ವಿವರವೂ ನಮೂದಾಗಿದೆ.
ಸ್ಥಿರಾಸ್ತಿ ಎಷ್ಟು
- ಪ್ರಿಯಾಂಕಾ ಗಾಂಧಿ ಅವರ ನಾಲ್ಕು ಬ್ಯಾಂಕ್ ಖಾತೆಯಲ್ಲಿ 3.70 ಲಕ್ಷ ರೂ. ನಗದು ಇದೆ. ದೆಹಲಿಯ ಎಚ್‌ಡಿಎಫ್‌ಸಿ, ಯೂಕೋ ಬ್ಯಾಂಕ್, ಕೇರಳದ ಕಲ್ಪೆಟ್ಟ ಕೆನರಾ ಬ್ಯಾಂಕ್‌ಗಳು ಇದರಲ್ಲಿ ಸೇರಿವೆ
- ಮೂಚುಯಲ್ ಫಂಡ್‌ನಲ್ಲಿ ಪ್ರಿಯಾಂಕಾ ಹೂಡಿಕೆ ಇದೆ. ಇದರಲ್ಲಿ ಫ್ರಾಂಕ್ಲಿನ್ ಇಂಡಿಯಾ ಸಂಸ್ಥೆಯಲ್ಲಿಯೇ 2.25 ಕೋಟಿ ರೂ. ಹೂಡಿಕೆಯನ್ನು ಮಾಡಿದ್ದಾರೆ.
- ಪ್ರಿಯಾಂಕಾ ಅವರ ಪಿಪಿಎಫ್ ಖಾತೆಯಲ್ಲಿ 17.38 ಲಕ್ಷ ಉಳಿತಾಯ ಮಾಡಲಾಗಿದೆ.
- ಅವರ ಹೆಸರಿನಲ್ಲಿ ಒಂದು ಕಾರು ಇದೆ. ಅದು ಎಂಟು ಲಕ್ಷದ ಸಿಆರ್‌ವಿ ಕಾರು. ಅದನ್ನು ಪತಿ ರಾಬರ್ಟ್ ವಾದ್ರಾ ಕೊಡುಗೆಯಾಗಿ ನೀಡಿದ್ದಾರೆ.
- ಪ್ರಿಯಾಂಕಾ ಬಳಿ ಚಿನ್ನಾಭರಣ ಭಾರೀ ಪ್ರಮಾಣದಲ್ಲಿಯೇ ಇದೆ. ಅವರ ಬಳಿ ಬರೋಬ್ಬರಿ ಎರಡೂವರೆ ಕೆಜಿ ಚಿನ್ನ, 60 ಕೆಜಿ ಬೆಳ್ಳಿ ಇದೆ. ಚಿನ್ನದ ಮೌಲ್ಯವೇ 1.16 ಕೋಟಿ ರೂ. ಬೆಳ್ಳಿಯ ಬೆಲೆ 30 ಲಕ್ಷ ರೂ.
- ಒಟ್ಟು4.28 ಕೋಟಿ ರೂ. ಚರಾಸ್ತಿಯನ್ನು ಪ್ರಿಯಾಂಕ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ
ಸ್ಥಿರಾಸ್ತಿ ಎಷ್ಟು
- ಪ್ರಿಯಾಂಕಾ ಗಾಂಧಿ ಅವರು ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ಕಡೆ ಭೂಮಿ ಹೊಂದಿದ್ದಾರೆ. ಪತಿ ರಾಬರ್ಟ್ ವಾದ್ರಾ, ಸಹೋದರ ರಾಹುಲ್ ಗಾಂಧಿ ಹೆಸರಲ್ಲೂ ಜಂಟಿಯಾಗಿವೆ
- ಹಿಮಾಚಲ ಪ್ರದೇಶದಲ್ಲಿ 2 .10 ಕೋಟಿ ರೂ,. ಬೆಲೆ ಬಾಳುವ ಭೂಮಿ. 56 ಲಕ್ಷ ಮೌಲ್ಯದ ನಿವೇಶಮ ಹರಿಯಾಣದಲ್ಲಿ ಒಟ್ಟು 7.74 ಕೋಟಿ ರೂ. ಮೌಲ್ಯದ ಭೂಮಿ. ಇದಲ್ಲದೇ ದೆಹಲಿಯಲ್ಲೂ ಕಟ್ಟಡಗಳಿವೆ.
- ಆದಾಯದ ಮೂಲವನ್ನು ಕಟ್ಟಡಗಳ ಬಾಡಿಗೆ, ಹೂಡಿಕೆಯ ಬಡ್ಡಿ, ಇತರೆ ವಹಿವಾಟಿನಿಂದ ಬರುತ್ತಿದೆ ಎನ್ನುವುದನ್ನು ಪ್ರಿಯಾಂಕಾ ತಿಳಿಸಿದ್ದಾರೆ.
- ಸ್ಥಿರಾಸ್ತಿ ಪ್ರಮಾಣವೇ 14 ಕೋಟಿ ರೂ.ಗಳಿಗೂ ಅಧಿಕವಾಗಿದೆ.
- ಪ್ರಿಯಾಂಕಾ ವಿರುದ್ದ ಮೂರು ಪ್ರಕರಣಗಳಿದ್ದರೂ ಯಾವುದೂ ಕ್ರಿಮಿನಲ್ ಪ್ರಕರಣವಲ್ಲ.
- ಇನ್ನು ಪತಿಗಿಂತ ಪತ್ನಿಯೇ ಹೆಚ್ಚಿನ ಆದಾಯ ತೆರಿಗೆ ತುಂಬಿದ್ದಾರೆ. ಐದು ವರ್ಷದಲ್ಲಿ ಪ್ರಿಯಾಂಕಾ ಗಾಂಧಿ ಅವರು 2.30 ಕೋಟಿ ರೂ. ಆಸ್ತಿ ತೆರಿಗೆ ಪಾವತಿಸಿದ್ದಾರೆ. ರಾಬರ್ಟ್ ವಾದ್ರಾ 90 ಲಕ್ಷ ರೂ. ತೆರಿಗೆ ಪಾವತಿಸಿರುವ ವಿವರವಿದೆ.
- ಪ್ರಿಯಾಂಕ ಚರಾಸ್ತಿ ಹಾಗೂ ಸ್ಥಿರಾಸ್ತಿ ಒಟ್ಟು ಪ್ರಮಾಣವೇ 22 ಕೋಟಿ ರೂ.ಗೂ ಅಧಿಕವಿದೆ.
- ಪ್ರಿಯಾಂಕ ಅವರ ಸಾಲದ ಪ್ರಮಾಣ 15. 75 ಲಕ್ಷ ರೂ.ಗಳಷ್ಟಿದೆ.
ರಾಬರ್ಟ್ ವಾದ್ರಾ ಆಸ್ತಿ ಪ್ರಮಾಣ
ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಉದ್ಯಮಿ. ಹಲವು ರಿಯಲ್ ಎಸ್ಟೇಟ್ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಮೂಚುವಲ್ ಫಂಡ್‌ಗಳಲ್ಲಿಯೂ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ದೆಹಲಿ, ಹರಿಯಾಣ ಸಹಿತ ಪ್ರಮುಖ ಕಡೆಗಳಲ್ಲಿ ವಾಣಿಜ್ಯ ಕಟ್ಟಡಗಳಿದ್ದು, ಕೋಟಿಗಟ್ಟಲೇ ಬಾಡಿಗೆಯೇ ಬರುತ್ತದೆ. ಇದೇ ಪ್ರಮುಖ ವಹಿವಾಟು ಎನ್ನುವುದನ್ನು ತೋರಿಸಿದ್ದಾರೆ.
- ವಾದ್ರಾ ಒಟ್ಟು ಹತ್ತು ಬ್ಯಾಂಕ್‌ಗಳಲ್ಲಿ 17ಲಕ್ಷ ರೂ. ಹಣ ಹೊಂದಿದ್ದಾರೆ. ವಿವಿಧ ಖಾತೆಗಳಲ್ಲಿ ಠೇವಣಿ ಮೊತ್ತ35 ಲಕ್ಷ ರೂ. 63 ಲಕ್ಷ ರೂ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿದ್ದಾರೆ.
- ಎಲ್‌ಐಸಿಯಲ್ಲಿ ಆರು ಲಕ್ಷ ರೂ. ಮೊತ್ತದ ಪಾಲಿಸಿಗಳಿವೆ. 35 ಕೋಟಿ ರೂ.ಗಳನ್ನು ವಿವಿಧ ಕಂಪೆನಿಗಳಲ್ಲಿ ಪಾಲುದಾರರಾಗಿ ಹೂಡಿದ್ದಾರೆ.
- 59 ಲಕ್ಷ ರೂ.ಗಳ ಎರಡು ಕಾರು ಹಾಗೂ ಒಂದು ಬೈಕ್ ವಾದ್ರಾ ಬಳಿ ಇದೆ.
- ಯಾವುದೇ ಬೆಳ್ಳಿ, ಬಂಗಾರ ಇಲ್ಲ
- ರಾಬರ್ಟ್ ವಾದ್ರಾ ಒಟ್ಟು ಚರಾಸ್ತಿ ಪ್ರಮಾಣ 38 ಕೋಟಿ ರೂ.
ಸ್ಥಿರಾಸ್ತಿ
- ರಾಬರ್ಟ್ ವಾದ್ರಾ ಹೆಸರಲ್ಲಿ ಎಲ್ಲಿಯೂ ಜಮೀನು ಇಲ್ಲ.
- 27.64 ಕೋಟಿ ರೂ.ಬೆಲೆ ಬಾಳುವ ವಾಣಿಜ್ಯ ಕಟ್ಟಡಗಳು ದೆಹಲಿಯಲ್ಲಿವೆ.
- ರಾಬರ್ಟ್ ವಾದ್ರಾ ಒಟ್ಟು ಆಸ್ತಿ 66 ಕೋಟಿ ರೂ.
- ರಾಬರ್ಟ್ ಹೆಸರಲ್ಲಿ 10 ಕೋಟಿ ರೂ.ಗೂ ಅಧಿಕ ಸಾಲವಿದೆ.