logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Minus Zero Zpod: ಭಾರತದ ಮೊದಲ ಸ್ವಯಂಚಾಲಿತ ಕಾರು ಅನಾವರಣ; ಬೆಂಗಳೂರು ಮೂಲದ ಸ್ಟಾರ್ಟಪ್‌ ಪ್ರಯತ್ನ

Minus Zero zPod: ಭಾರತದ ಮೊದಲ ಸ್ವಯಂಚಾಲಿತ ಕಾರು ಅನಾವರಣ; ಬೆಂಗಳೂರು ಮೂಲದ ಸ್ಟಾರ್ಟಪ್‌ ಪ್ರಯತ್ನ

HT Kannada Desk HT Kannada

Jun 05, 2023 03:49 PM IST

ಮೈನಸ್ ಝೀರೋ (Minus Zero) ದ ಮೊದಲ ಸ್ವಾಯತ್ತ ಕಾರ್ zPod ಎಲ್ಲಾ ಪರಿಸರ ಮತ್ತು ಭೌಗೋಳಿಕ ಪರಿಸ್ಥಿತಿಯಲ್ಲೂ ಸ್ವತಃ ಚಾಲನೆ ಮಾಡಬಲ್ಲದು. ಅದೇ ರೀತಿ, ಹಂತ 5 ರ ಸ್ವಾಯತ್ತತೆಯ ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವಂತಿದೆ ಎಂದು ಕಂಪನಿ ಹೇಳಿದೆ.

  • Minus Zero zPod: ಮೈನಸ್ ಝೀರೋ ಎಂಬ ಬೆಂಗಳೂರು ಮೂಲದ ಎಐ ಸ್ಟಾರ್ಟ್ಅಪ್, ಎಲ್ಲ ಪರಿಸರ ಮತ್ತು ಭೌಗೋಳಿಕ ಪ್ರದೇಶಗಳಲ್ಲಿ ಸ್ವಯಂಚಾಲಿತವಾಗಿ ಸಂಚರಿಸುವ zPod ಎಂಬ ಸೆಲ್ಫ್‌ ಡ್ರೈವಿಂಗ್‌ ಕಾರನ್ನು ಅನಾವರಣಗೊಳಿಸಿದೆ. ಇದು ದೇಶದ ಮೊದಲನೇಯ ಸ್ವಯಂಚಾಲಿತ ಕಾರು ಎನ್ನಲಾಗುತ್ತಿದೆ. ಇದರ ವಿವರ ಇಲ್ಲಿದೆ.

ಮೈನಸ್ ಝೀರೋ (Minus Zero) ದ ಮೊದಲ ಸ್ವಾಯತ್ತ ಕಾರ್ zPod ಎಲ್ಲಾ ಪರಿಸರ ಮತ್ತು ಭೌಗೋಳಿಕ ಪರಿಸ್ಥಿತಿಯಲ್ಲೂ ಸ್ವತಃ ಚಾಲನೆ ಮಾಡಬಲ್ಲದು. ಅದೇ ರೀತಿ, ಹಂತ 5 ರ ಸ್ವಾಯತ್ತತೆಯ ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವಂತಿದೆ ಎಂದು ಕಂಪನಿ ಹೇಳಿದೆ.
ಮೈನಸ್ ಝೀರೋ (Minus Zero) ದ ಮೊದಲ ಸ್ವಾಯತ್ತ ಕಾರ್ zPod ಎಲ್ಲಾ ಪರಿಸರ ಮತ್ತು ಭೌಗೋಳಿಕ ಪರಿಸ್ಥಿತಿಯಲ್ಲೂ ಸ್ವತಃ ಚಾಲನೆ ಮಾಡಬಲ್ಲದು. ಅದೇ ರೀತಿ, ಹಂತ 5 ರ ಸ್ವಾಯತ್ತತೆಯ ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವಂತಿದೆ ಎಂದು ಕಂಪನಿ ಹೇಳಿದೆ. (HT Auto)

ಭಾರತದಲ್ಲಿ ಸ್ವಾಯತ್ತ ಕಾರುಗಳ ಪರಿಕಲ್ಪನೆಯು ಇನ್ನೂ ಅತ್ಯಂತ ಶೈಶವಾವಸ್ಥೆಯಲ್ಲಿದೆ. ಆದರೆ, ಭಾರತೀಯ ಸ್ಟಾರ್ಟ್ಅಪ್ ಈ ವಿಚಾರದಲ್ಲಿ ಸ್ವಲ್ಪ ಮುನ್ನಡೆ ಸಾಧಿಸಿದೆ. ದೇಶದ ಮೊದಲ ಸ್ವಯಂಚಾಲಿತ ಕಾರನ್ನು (first self-driving car) ಅನಾವರಣಗೊಳಿಸಿದೆ. ಬೆಂಗಳೂರು ಮೂಲದ ಎಐ ಸ್ಟಾರ್ಟಪ್ (Bengaluru-based AI startup) ಮೈನಸ್ ಝೀರೋ (Minus Zero) ʻzPodʼ ಎಂಬ ಸ್ವಯಂಚಾಲಿತ ಕಾರನ್ನು ಅನಾವರಣಗೊಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ಇದು ಜಾಗತಿಕವಾಗಿ ತೋರಿಸಿರುವ ಕೆಲವು ಸ್ವಯಂಚಾಲಿತ ವಾಹನಗಳಂತೆ ಟೋಸ್ಟರ್‌ ಆಕಾರದಲ್ಲಿದೆ. zPod ಸ್ವಯಂಚಾಲಿತ ಕಾರು ತನ್ನ ಕ್ಯಾಮರಾ-ಸೆನ್ಸರ್ ಸೂಟ್‌ ಮೂಲಕ ಎಲ್ಲ ರೀತಿಯ ಪರಿಸ್ಥಿತಿಗಳು ಮತ್ತು ಹವಾಮಾನ ಇದ್ದಾಗಲೂ ಚಾಲನೆ ಮಾಡಿಕೊಂಡು ಹೋಗಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

ಮೈನಸ್ ಝೀರೋ ಝ್‌ಪಾಡ್‌ನ ವಿಶಿಷ್ಟ ಫೀಚರ್‌

ಸ್ಟೀರಿಂಗ್ ಚಕ್ರ ಇಲ್ಲದೇ ಇರುವುದೇ ಮೈನಸ್ ಝೀರೋ ಝ್‌ಪಾಡ್‌ (Minus Zero Zpod)ನ ಅತ್ಯಂತ ವಿಶಿಷ್ಟ ಫೀಚರ್‌. ಬದಲಾಗಿ, ಇದು ಟ್ರಾಫಿಕ್ ಸೇರಿ ಡ್ರೈವಿಂಗ್ ಪರಿಸ್ಥಿತಿಗಳನ್ನು ವಿಶ್ಲೇಷಿಸಲು ಆಯಕಟ್ಟಿನ ಜಾಗದಲ್ಲಿ ಇರಿಸಲಾಗಿರುವ ಹೈ ರೆಸಲ್ಯೂಶನ್ ಕ್ಯಾಮೆರಾಗಳ ಸರಣಿಯನ್ನು ಬಳಸುತ್ತದೆ.

ಈ ಸ್ವಾಯತ್ತ ಕಾರನ್ನು 5 ನೇ ಹಂತದ ಸ್ವಾಯತ್ತತೆ (Level 5 autonomy) ಯವರೆಗೆ ಮುಂದುವರಿಯಬಹುದು. ಇದು ಸ್ವಯಂಚಾಲಿತ ಕಾರು ಹೊಂದಬಹುದಾದ ಗರಿಷ್ಠ ಸೌಕರ್ಯದ ಸ್ವಾಯತ್ತತೆ. ಇಲ್ಲಿ ಈ ಕಾರು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಚಾಲನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸ್ಟಾರ್ಟ್ಅಪ್ ಹೇಳುತ್ತದೆ.

zPod ನ ಕ್ಯಾಮೆರಾ-ಸೆನ್ಸರ್ ಸೂಟ್ ವಾಹನದ ಸುತ್ತಮುತ್ತಲಿನ ನೈಜ-ಸಮಯದ ಚಿತ್ರಗಳನ್ನು ಸೆರೆಹಿಡಿಯಬಹುದು. ಅದರಲ್ಲಿರುವ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (AI) ವ್ಯವಸ್ಥೆಯೊಂದಿಗೆ ಆ ಚಿತ್ರಗಳನನು ಶೇರ್‌ ಮಾಡುತ್ತದೆ. ಇಷ್ಟಾದ ನಂತರ ರಸ್ತೆಯಲ್ಲಿನ ಅಡೆತಡೆಗಳನ್ನು ತಪ್ಪಿಸಲು, ಅದರ ವೇಗವನ್ನು ನಿಯಂತ್ರಿಸಲು ಮತ್ತು ನಿಲ್ಲಿಸಲು ವಾಹನವನ್ನು ನ್ಯಾವಿಗೇಟ್ ಮಾಡಲು ಚಿತ್ರಗಳ ಮೂಲಕ ಮಾಹಿತಿಯನ್ನು ಒದಗಿಸುವ ಪ್ರಕ್ರಿಯೆಯನ್ನು ಎಐ ಪೂರ್ಣಗೊಳಿಸುತ್ತದೆ.

ವೇಮೊ ಮತ್ತು ಇತರೆ ಸ್ವಾಯತ್ತ ಕಾರುಗಳಿಗಿಂತ ಭಿನ್ನ

ಗೂಗಲ್‌ನ ವೇಮೊ ಮತ್ತು ಇತರರು ಅಭಿವೃದ್ಧಿಪಡಿಸಿದ ಇತರ ಕೆಲವು ಜಾಗತಿಕ ಸ್ವಾಯತ್ತ ಕಾರುಗಳಿಗಿಂತ zPod ಭಿನ್ನವಾಗಿರುವುದು, ಅದರ ಕ್ಯಾಮೆರಾ ತಂತ್ರಜ್ಞಾನದ ಕಾರಣ. ಇದು ದುಬಾರಿ ಸೆನ್ಸರ್‌ಗಳಿಗಿಂತ ಅನುಕೂಲಕರ ಎಂಬುದು ಕಂಪನಿಯ ಪ್ರತಿಪಾದನೆ.

ಪ್ರಸ್ತುತ, ಕ್ಯಾಂಪಸ್ ಅಥವಾ ದೊಡ್ಡ ವಸತಿ ಸಂಕೀರ್ಣಗಳಂತಹ ಸುತ್ತುವರಿದ ಮತ್ತು ನಿಯಂತ್ರಿತ ಪ್ರದೇಶದೊಳಗೆ ಸಾಗಲು ಅಗತ್ಯವಾದಷ್ಟು zPod ಉತ್ತಮವಾಗಿದೆ ಎಂದು ಸ್ಟಾರ್ಟ್ಅಪ್ ಹೇಳುತ್ತದೆ.

"ನೈಜ ದೃಷ್ಟಿ ಸ್ವಾಯತ್ತತೆ (true vision autonomy) ಮುಂಚೂಣಿಗೆ ಬರುವುದರೊಂದಿಗೆ, ಸ್ವಾಯತ್ತ ವಾಹನಗಳನ್ನು ರಿಯಾಲಿಟಿ ಮಾಡಬಹುದು. ಇದು ಪ್ರಯಾಣಕ್ಕೆ ಸಂಬಂಧಿಸಿದ ಪ್ರಮುಖ ಲೋಪದೋಷಗಳ ಅಂಶಗಳನ್ನು ಪರಿಹರಿಸಬಹುದು" ಎಂದು ಮೈನಸ್ ಝೀರೋದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೀಹಾಲ್ ಹೇಳಿದರು.

ಬೆಂಗಳೂರು ಮೂಲದ ಸ್ಟಾರ್ಟಪ್‌ ಮೈನಸ್ ಝೀರೋ (Minus Zero)

ಟೆಸ್ಲಾ ಮತ್ತು ಗೂಗಲ್‌ನಂತಹ ಸಂಪೂರ್ಣ ಸ್ವಾಯತ್ತ ವಾಹನಗಳನ್ನು ತಯಾರಿಸುವ ಯೋಜನೆಯೊಂದಿಗೆ 2021 ರಲ್ಲಿ ಅವರು ಮತ್ತು ಗುರ್ಸಿಮ್ರಾನ್ ಕಲ್ರಾ ಅವರು ಮೈನಸ್ ಝೀರೋ (Minus Zero) ಸ್ಟಾರ್ಟಪ್ ಅನ್ನು ಸ್ಥಾಪಿಸಿದರು. ಇದು ತಮ್ಮ ವಾಹನಗಳಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ (Advance Driver Assistant System - ADAS) ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಇತರ ಕಾರು ತಯಾರಕರೊಂದಿಗೆ ತನ್ನ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಉದ್ದೇಶವನ್ನು ಹೊಂದಿದೆ.

ಮೈನಸ್ ಝೀರೋ ಭಾರತೀಯ ರಸ್ತೆಗಳಿಗೆ ಸೂಕ್ತವಾದ ಸ್ವಾಯತ್ತ ವಾಹನಗಳನ್ನು ಅಭಿವೃದ್ಧಿಪಡಿಸಲು ಎಐ ಅನ್ನು ಬಳಸಲು ಯೋಜಿಸಿದೆ. ಇದು ಸಾರ್ವಜನಿಕ ರಸ್ತೆಗಳನ್ನು ಒಳಗೊಂಡಂತೆ ಮುಂದಿನ ಎರಡು ವರ್ಷಗಳಲ್ಲಿ ಸ್ಥಿರವಾದ ನಿಯಂತ್ರಕ ಮಾನದಂಡಗಳೊಂದಿಗೆ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ಪ್ರಯೋಗಗಳನ್ನು ವಿಸ್ತರಿಸಲು ಯೋಜಿಸಿದೆ.

    ಹಂಚಿಕೊಳ್ಳಲು ಲೇಖನಗಳು