logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jammu And Kashmir Elections: ಜಮ್ಮು ಕಾಶ್ಮೀರದಲ್ಲಿ ಕಮಲ ಏಕೆ ಪೂರ್ಣ ಅರಳಲಿಲ್ಲ, ಅಬ್ದುಲ್ಲಾ ಕುಟುಂಬ ಮತ್ತೆ ಕೈ ಹಿಡಿದಿದ್ದೇಕೆ;5 ಅಂಶಗಳು

Jammu and Kashmir Elections: ಜಮ್ಮು ಕಾಶ್ಮೀರದಲ್ಲಿ ಕಮಲ ಏಕೆ ಪೂರ್ಣ ಅರಳಲಿಲ್ಲ, ಅಬ್ದುಲ್ಲಾ ಕುಟುಂಬ ಮತ್ತೆ ಕೈ ಹಿಡಿದಿದ್ದೇಕೆ;5 ಅಂಶಗಳು

Umesha Bhatta P H HT Kannada

Oct 08, 2024 03:46 PM IST

google News

ಜಮ್ಮು ಮತ್ತು ಕಾಶ್ರೀರದಲ್ಲಿ ಎನ್‌ಸಿಪಿ-ಕೈಗೆ ಬಲ. ಸೋತ ಬಿಜೆಪಿ ತಂತ್ರಗಾರಿಕೆ.

  • ಒಂದು ದಶಕದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದು ಮತ್ತೆ ಎನ್‌ಸಿಪಿ ಕಾಂಗ್ರೆಸ್‌ ಇಲ್ಲಿ ಅಧಿಕಾರ ಉಳಿಸಿಕೊಂಡವು. ರಾಜ್ಯ ಸ್ಥಾನಮಾನವೊಂದಿಗೆ ವಿಶ್ವಾಸ ತುಂಬಿದ ಬಿಜೆಪಿ ಕಣಿವೆ ರಾಜ್ಯದ ಮನಸು ಗೆಲ್ಲಲು ಆಗಲಿಲ್ಲ. ಇಲ್ಲಿದೆ ಐದು ಅಂಶಗಳು.

ಜಮ್ಮು ಮತ್ತು ಕಾಶ್ರೀರದಲ್ಲಿ ಎನ್‌ಸಿಪಿ-ಕೈಗೆ ಬಲ. ಸೋತ ಬಿಜೆಪಿ ತಂತ್ರಗಾರಿಕೆ.
ಜಮ್ಮು ಮತ್ತು ಕಾಶ್ರೀರದಲ್ಲಿ ಎನ್‌ಸಿಪಿ-ಕೈಗೆ ಬಲ. ಸೋತ ಬಿಜೆಪಿ ತಂತ್ರಗಾರಿಕೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ದೊರೆತ ನಂತರ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಜನ ಸ್ಥಳೀಯ ಪಕ್ಷವಾದ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ ಎನ್‌ಸಿಪಿಯನ್ನೇ ಮತ್ತೊಮ್ಮೆ ಅಪ್ಪಿಕೊಂಡಿದ್ದಾರೆ. ದಶಕದ ನಂತರ ಅಲ್ಲಿ ಎನ್‌ಸಿಪಿಯು ಕಾಂಗ್ರೆಸ್‌ ಮೈತ್ರಿಯೊಂದಿಗೆ ಅಧಿಕಾರಕ್ಕೆ ಬರಲು ಅಣಿಯಾಗಿದೆ. ಆಗಲೂ ಸಿಎಂ ಆಗಿದ್ದ ಎನ್‌ಸಿಪಿ ನಾಯಕ ಒಮರ್‌ ಅಬ್ದುಲ್ಲಾ ಅವರೇ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ. ಜನ ಹೊಸ ರಾಜ್ಯ ಸ್ಥಾನಮಾನ ನೀಡಿದರೂ ಬಿಜೆಪಿಗೆ ಬೆಂಬಲ ನೀಡಿಲ್ಲ ಏಕೆ ಎನ್ನುವ ಚರ್ಚೆ ಶುರುವಾಗಿದೆ. ಅಲ್ಲದೇ ಎನ್‌ಸಿಪಿಯನ್ನೇ ಜನ ಕೈ ಹಿಡಿದಿದ್ದು ಹೇಗೆ ಎನ್ನುವ ವಿಶ್ಲೇಷಣೆಗಳೂ ನಡೆದಿವೆ.

ಬಿಜೆಪಿ ಹಿಂದೆ ಬಿದ್ದಿದ್ದು ಏಕೆ

  • ಈ ಹಿಂದಿನ ಲೋಕಸಭೆ ಚುನಾವಣೆಗಳಲ್ಲಿಉತ್ತಮ ಸ್ಥಾನ ಪಡೆದಿದ್ದ ಬಿಜೆಪಿ ಇಲ್ಲಿ ವಿಧಾನಸಭೆಯಲ್ಲಿ ಮತದಾರ ಕೈ ಹಿಡಿದಿಲ್ಲ. ಪಕ್ಷದ ಮೇಲೆ ಇನ್ನಷ್ಟು ವಿಶ್ವಾಸ ವೃದ್ದಿಸುವ ಕೆಲಸ ಆದಂತೆ ಕಾಣುತ್ತಿಲ್ಲ
  • ಇಲ್ಲಿ ಏಕ ಪಕ್ಷದ ಆಡಳಿತ ಬಾರದೇ ಎರಡು ದಶಕಗಳೇ ಕಳೆದಿವೆ. ಇಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗಿಂತ ಪ್ರಾದೇಶಿಕ ಪ್ರಭಾವ ಈಗಲೂ ಗಟ್ಟಿಯಾಗಿದೆ. ಬಿಜೆಪಿ ಇಲ್ಲಿ ಮೈತ್ರಿ ಮಾಡಿಕೊಂಡು ಏಕಾಂಗಿಯಾಗಿ ಹೋಗಿದ್ದು ಹೊಡೆತ ನೀಡಿರಬಹುದು
  • ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ರಾಜ್ಯ ಸ್ಥಾನ ಮಾನ ನೀಡಿದ್ದರೂ ಅಭಿವೃದ್ದಿಗೆ ವಿಶೇಷ ಯೋಜನೆ ಇನ್ನಷ್ಟು ಬೇಕಿತ್ತು. ಕೇಂದ್ರದಲ್ಲಿ ಸರ್ಕಾರ ಇದ್ದರೂ ಬಿಜೆಪಿಗೆ ಹೆಚ್ಚಿನ ಬೆಂಬಲ ಕೊಡಲಿಲ್ಲ ಎನ್ನುವ ಕಾರಣವೂ ಅಡಗಿದೆ
  • ಜಮ್ಮು ಮತ್ತು ಕಾಶ್ಮೀರಕ್ಕೆ ಮುಂದಿನ ಒಂದು ದಶಕದಲ್ಲಿ ಏನು ಅಭಿವೃದ್ದಿ ಮಾಡುತ್ತೇವೆ. ನಮ್ಮ ಅಜೆಂಡಾ ಹೇಗಿರಬಹುದು. ಇದಕ್ಕಾಗಿ ರೋಡ್‌ ಮ್ಯಾಪ್‌ ಹಾಕಿಕೊಡುವಲ್ಲಿ ಬಿಜೆಪಿ ಎಡವಿದೆ.
  • ಜಮ್ಮು ಭಾಗಕ್ಕಿಂತ ಕಾಶ್ಮೀರ ಭಾಗದಲ್ಲಿ ಹಿಂದೂ ಮತದಾರರೂ ಹೆಚ್ಚಿದ್ದಾರೆ. ಆದರೆ ಮುಸ್ಲೀಂ ಮತದಾರರೇ ಅಧಿಕವಾಗಿರುವ ಇಲ್ಲಿ ಸಮಗ್ರ ಪಕ್ಷವಾಗಿ ಹೊರ ಹೊಮ್ಮಲು ಬಿಜೆಪಿಗೆ ಸಾಧ್ಯವಾಗಿಲ್ಲ. ಪ್ರತ್ಯೇಕವಾಗಿ ಸ್ಪರ್ಧಿಸಿದ ಪಿಡಿಪಿ ಕೂಡ ಹೆಚ್ಚು ಮತ ಪಡೆಯದಿರುವುದು ಬಿಜೆಪಿಗೆ ಪೂರಕವಾಗಲಿಲ್ಲ.

ಎನ್‌ಸಿಪಿ ಕಾಂಗ್ರೆಸ್‌ ಗೆದ್ದಿದ್ದು ಹೇಗೆ

  • ಎನ್‌ಸಿಪಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಡಿತ ಹೊಂದಿರುವ ಪಕ್ಷ. ಇಲ್ಲಿ ಶೇಖ್‌ ಅಬ್ದುಲ್‌ ಅವರು ಕಾಶ್ಮೀರ ಸ್ಥಾಪನೆ ಹೋರಾಟಗಾರ. ಅವರು ಮುಖ್ಯಮಂತ್ರಿಯೂ ಆಗಿದ್ದರು. ಅವರ ನಂತರ ಅವರ ಪುತ್ರ ಫರೂಕ್‌ ಅಬ್ದುಲ್ಲಾ ಕೂಡ ಸಿಎಂ ಆಗಿದ್ದವರು. ನಂತರ ಮೂರನೇ ತಲೆಮಾರಿನ ಒಮರ್‌ ಅಬ್ದುಲ್ಲಾ ಕೂಡ ಸಿಎಂ ಆಗಿದ್ದು ಈಗ ಎನ್‌ಸಿಪಿ ಮುನ್ನಡೆಸುತ್ತಿದ್ದಾರೆ. ಈ ಕುಟುಂಬದ ಮೇಲೆ ಜನರ ವಿಶ್ವಾಸ ಕರಗಿದಂತೆ ಕಾಣುತ್ತಿಲ್ಲ
  • ಎನ್‌ಸಿಪಿ ಸ್ಥಳೀಯ ನಾಯಕರ ಪಕ್ಷ ಎನ್ನುವ ವಿಶ್ವಾಸ ಕೆಲಸ ಮಾಡಿದೆ. ಅಲ್ಲದೇ ಕಳೆದ ಹತ್ತು ವರ್ಷದ ಹಿಂದಿನ ಅವಧಿಯ ಆಡಳಿತದಲ್ಲಿ ಎನ್‌ಸಿಪಿ ನೀಡಿದ್ದ ಕಾರ್ಯಕ್ರಮಗಳು ಜನರನ್ನು ತಲುಪಿರುವುದು ಕಂಡು ಬರುತ್ತಿದೆ.
  • ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯ ರಚನೆಯಾದರೂ ಇಲ್ಲಿಗೆ ಬಿಜೆಪಿ ಹೇಗೆ ಅನ್ಯಾಯ ಮಾಡಿತು. ಕಣಿವೆ ರಾಜ್ಯಕ್ಕೆ ಏನನ್ನೂ ನೀಡಲಿಲ್ಲ ಎನ್ನುವುದನ್ನು ಜನರಿಗೆ ತಲುಪಿಸಲು ಎನ್‌ಸಿಪಿ ಕಾಂಗ್ರೆಸ್‌ ಮೈತ್ರಿ ಯಶಸ್ವಿಯಾಯಿತು
  • ಚುನಾವಣೆ ಪೂರ್ವವಾಗಿಯೇ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಮೈತ್ರಿಯನ್ನು ಖಚಿತಪಡಿಸಿದ್ದವು. ಈ ಹಿಂದಿನ ಇಂಡಿಯಾ ಬ್ಲಾಕ್‌ ಮೈತ್ರಿಯನ್ನೇ ಮುಂದುವರೆಸಿದ್ದರಿಂದ ಜನ ಈ ಮೈತ್ರಿಗೆ ಬಲ ತುಂಬಿರುವುದು ಫಲಿತಾಂಶ ತೋರಿಸುತ್ತಿದೆ
  • ಜಮ್ಮು ಮತ್ತು ಕಾಶ್ಮೀರಕ್ಕೆ ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎನ್ನುವುದನ್ನು ಮೈತ್ರಿ ಪಕ್ಷಗಳು ನೀಡಿದ ಕಾರ್ಯಕ್ರಮ, ಸ್ಥಳೀಯ ಸಮಸ್ಯೆಗಳಿಗೆ ದನಿಯಾಗಬಲ್ಲ ವಿಶ್ವಾಸವೂ ಎನ್‌ಸಿಪಿ ಕಾಂಗ್ರೆಸ್‌ಗೆ ಕೈ ಹಿಡಿದಿವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ