logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Netaji's Birth Anniversary: ಕೋಲ್ಕತದಲ್ಲಿ ನೇತಾಜಿ ಜಯಂತಿ; ದೀದಿಯ ಭದ್ರಕೋಟೆಯಲ್ಲಿ ಆರೆಸ್ಸೆಸ್‌ ಮುಖ್ಯಸ್ಥರ ಮುಖ್ಯ ಬಾಷಣ

Netaji's birth anniversary: ಕೋಲ್ಕತದಲ್ಲಿ ನೇತಾಜಿ ಜಯಂತಿ; ದೀದಿಯ ಭದ್ರಕೋಟೆಯಲ್ಲಿ ಆರೆಸ್ಸೆಸ್‌ ಮುಖ್ಯಸ್ಥರ ಮುಖ್ಯ ಬಾಷಣ

HT Kannada Desk HT Kannada

Jan 17, 2023 05:02 PM IST

ಕೋಲ್ಕತದಲ್ಲಿ ನೇತಾಜಿ ಜಯಂತಿ; ದೀದಿಯ ಭದ್ರಕೋಟೆಯಲ್ಲಿ ಜನವರಿ 23ರಂದು ಆರೆಸ್ಸೆಸ್‌ ಮುಖ್ಯಸ್ಥರ ಮುಖ್ಯ ಬಾಷಣ

  • Netaji's birth anniversary: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಗಳ ಪ್ರಕಾರ, ಕೋಲ್ಕತ್ತದ ಶಹೀದ್‌ ಮಿನಾರ್‌ ಗ್ರೌಂಡ್‌ನಲ್ಲಿ ಜನವರಿ 23ರಂದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜಯಂತಿ ಆಚರಣೆ ಆಯೋಜನೆ ಆಗಿದೆ. ಮುಖ್ಯ ಭಾಷಣಕಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಮು‍ಖ್ಯ ಭಾಷಣ ಮಾಡಲಿದ್ದಾರೆ.

ಕೋಲ್ಕತದಲ್ಲಿ ನೇತಾಜಿ ಜಯಂತಿ; ದೀದಿಯ ಭದ್ರಕೋಟೆಯಲ್ಲಿ ಜನವರಿ 23ರಂದು ಆರೆಸ್ಸೆಸ್‌ ಮುಖ್ಯಸ್ಥರ ಮುಖ್ಯ ಬಾಷಣ
ಕೋಲ್ಕತದಲ್ಲಿ ನೇತಾಜಿ ಜಯಂತಿ; ದೀದಿಯ ಭದ್ರಕೋಟೆಯಲ್ಲಿ ಜನವರಿ 23ರಂದು ಆರೆಸ್ಸೆಸ್‌ ಮುಖ್ಯಸ್ಥರ ಮುಖ್ಯ ಬಾಷಣ

ಕೋಲ್ಕತ್ತ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಜಯಂತಿ ಆಚರಣೆ ನಿಮಿತ್ತ ಜ.23ರಂದು ಕೋಲ್ಕತ್ತದಲ್ಲಿ ಬೃಹತ್‌ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಆಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಮು‍ಖ್ಯ ಭಾಷಣ ಮಾಡಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಗಳ ಪ್ರಕಾರ, ಕೋಲ್ಕತ್ತದ ಶಹೀದ್‌ ಮಿನಾರ್‌ ಗ್ರೌಂಡ್‌ನಲ್ಲಿ ಜನವರಿ 23ರಂದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜಯಂತಿ ಆಚರಣೆ ಆಯೋಜನೆ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಜನವರಿ 19ರಂದು ಕೋಲ್ಕತಕ್ಕೆ ಆಗಮಿಸುತ್ತಿದ್ದು, ಐದು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಇದೇ ಅವಧಿಯಲ್ಲಿ ಕೋಲ್ಕತ್ತದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅವರು ಮುಖ್ಯಭಾಷಣ ಮಾಡಲಿದ್ದಾರೆ.

ಆರೆಸ್ಸೆಸ್‌ನ ಪೂರ್ವ ವಲಯ ಪ್ರಮುಖರಾಗಿರುವ ಅಜಯ್‌ ನಂದಿ ಅವರು ಹೇಳಿದ ಪ್ರಕಾರ, ಡಾ.ಮೋಹನ್‌ ಭಾಗವತ್‌ ಅವರು ಸಂಘಟನಾತ್ಮಕ ಬೈಠಕ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ರಾಜ್ಯದ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಜನವರಿ 23ರಂದು ಸಂಘದ ಕಾರ್ಯಕರ್ತರ ಸಾರ್ವಜನಿಕ ಸಭೆಯಲ್ಲಿ ಅವರು ಮುಖ್ಯಭಾಷಣ ಮಾಡಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆಗೆ ಮುನ್ನ ಆರ್‌ಎಸ್‌ಎಸ್‌ ಮುಖ್ಯಸ್ಥರ ಭೇಟಿ ಆಯೋಜನೆ ಆಗಿದ್ದು, ರಾಜಕೀಯವಾಗಿ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ.

ಗಮನಿಸಬಹುದಾದ ಸುದ್ದಿಗಳು

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು - ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು 'ಹಿಂದೂ' ಮತ್ತು ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಆಗಿರುತ್ತದೆ. ಯಾರೊಬ್ಬರೂ ತಮ್ಮ ಆಚರಣೆಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

'ಆರೆಸ್ಸೆಸ್​ ಮರದ ಬೇರಾದರೆ, ಬಿಜೆಪಿ ಅದರ ಹಣ್ಣು.. ಅವೆರಡನ್ನು ಪ್ರತ್ಯೇಕವಾಗಿ ನೋಡುವುದಿಲ್ಲ' - ಕನ್ಹಯ್ಯಾ ಕುಮಾರ್

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ಹಯ್ಯಾ ಕುಮಾರ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಸಂದರ್ಶನವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ. “ಆರೆಸ್ಸೆಸ್​ನವರು ತಮ್ಮನ್ನು ತಾವು ಸಾಂಸ್ಕೃತಿಕ ಸಂಘಟನೆ ಎಂದು ಕರೆದರೂ, ಅವರ ಸಿದ್ಧಾಂತವು ಸಂಪೂರ್ಣವಾಗಿ ರಾಜಕೀಯವನ್ನು ಆಧರಿಸಿದೆ. ಬಲಪಂಥೀಯ ಸಂಘಟನೆಯ ಸಿದ್ಧಾಂತವು ಯಾವಾಗಲೂ ಸಂಪೂರ್ಣವಾಗಿ ರಾಜಕೀಯವನ್ನು ಆಧರಿಸಿರುತ್ತದೆ. ಧರ್ಮವು ದೇಶಕ್ಕೆ ಸೇರಿದ್ದು ಆದರೆ ಕೋಮುವಾದವಲ್ಲ. ಆರೆಸ್ಸೆಸ್ ಧಾರ್ಮಿಕ ಚಿಹ್ನೆಗಳನ್ನು ಬಳಸಿಕೊಂಡು ಕೋಮುವಾದಿ ರಾಜಕಾರಣ ಮಾಡುತ್ತಿದೆ” ಎಂದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಸಂಘನಿಕೇತನದಲ್ಲಿ ರಾಷ್ಟ್ರ ತಪಸ್ವಿ ಶ್ರೀಗುರೂಜಿ ಪುಸ್ತಕ ಬಿಡುಗಡೆ; ಚಂದ್ರಶೇಖರ ಭಂಡಾರಿಯವರ ಅನುವಾದ ಕೃತಿ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಹಿರಿಯ ಚೇತನ ದಿವಂಗತ ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿರುವ "ರಾಷ್ಟ್ರ ತಪಸ್ವಿ ಶ್ರೀ ಗುರೂಜಿ" ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಮಣ್ಣಗುಡ್ಡದ ಸಂಘನಿಕೇತನದಲ್ಲಿ ಮಂಗಳವಾರ ನಡೆಯಿತು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು