logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Yasin Malik: ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ಗೆ ಗಲ್ಲು ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋದ ಎನ್‌ಐಎ

Yasin Malik: ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ಗೆ ಗಲ್ಲು ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋದ ಎನ್‌ಐಎ

HT Kannada Desk HT Kannada

May 26, 2023 07:52 PM IST

google News

ಜಮ್ಮು -ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲ್ಲಿಕ್‌ಗೆ ಗಲ್ಲು ಶಿಕ್ಷೆ ಕೋರಿ ಎನ್‌ಐಎ ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ.

  • Yasin Malik: ನ್ಯಾಷನಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿಯು ಜೆಕೆಎಲ್‌ಎಫ್‌ ನಾಯಕ ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲ್ಲಿಕ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ.

ಜಮ್ಮು -ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲ್ಲಿಕ್‌ಗೆ ಗಲ್ಲು ಶಿಕ್ಷೆ ಕೋರಿ ಎನ್‌ಐಎ ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ.
ಜಮ್ಮು -ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲ್ಲಿಕ್‌ಗೆ ಗಲ್ಲು ಶಿಕ್ಷೆ ಕೋರಿ ಎನ್‌ಐಎ ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ. (HT Kannada)

ನ್ಯಾಷನಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿಯು ಜೆಕೆಎಲ್‌ಎಫ್‌ ನಾಯಕ ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲ್ಲಿಕ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ.

ಜೆಕೆಎಲ್‌ಎಫ್‌ ನಾಯಕ ಮೊಹಮ್ಮದ್ ಯಾಸಿನ್ ಮಲಿಕ್‌ಗೆ ಮರಣದಂಡನೆಯನ್ನು ಕೋರಿ ಭಾರತದ ರಾಷ್ಟ್ರೀಯ ತನಿಖಾ ದಳವು ಕೋರ್ಟ್‌ ಮೆಟ್ಟಿಲೇರಿದೆ ಎಂದು ಲೈವ್ ಲಾ ವರದಿ ಮಾಡಿದೆ.

2022 ರ ಮೇ ತಿಂಗಳಲ್ಲಿ ಭಯೋತ್ಪಾದನೆ ಆರೋಪದ ಮೇಲೆ ನವದೆಹಲಿಯ ನ್ಯಾಯಾಲಯವು ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸೆಕ್ಷನ್ 16 (ಉಗ್ರಗಾಮಿ ಕೃತ್ಯ), 17 (ಉಗ್ರಗಾಮಿ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದು), 18 (ಉಗ್ರಗಾಮಿ ಕೃತ್ಯಕ್ಕೆ ಪಿತೂರಿ) ಮತ್ತು 20 (ಉಗ್ರಗಾಮಿ ಗ್ಯಾಂಗ್ ಅಥವಾ ಸಂಘಟನೆಯ ಸದಸ್ಯ) ಸೇರಿದಂತೆ ತನ್ನ ವಿರುದ್ಧ ಯುಎಪಿಎ ಮತ್ತು ಐಪಿಸಿಯ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 124-ಎ (ದೇಶದ್ರೋಹ) ಸೆಕ್ಷನ್‌ಗಳ ಪ್ರಕಾರ ಹೊರಿಸಲಾದ ಆರೋಪಗಳನ್ನು ತಾನು ವಿರೋಧಿಸುವುದಿಲ್ಲ ಎಂದು ಮಲ್ಲಿಕ್‌ ನ್ಯಾಯಾಲಯಕ್ಕೆ ತಿಳಿಸಿದ್ದ.

54 ವರ್ಷದ ಯಾಸಿನ್ ಮಲಿಕ್ ಅವರನ್ನು ಮಾರ್ಚ್ 2019 ರಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಬಂಧಿಸಿದ ನಂತರ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಆದರೆ ತಿಂಗಳ ನಂತರ ಅವರನ್ನು ರಾಷ್ಟ್ರೀಯ ತನಿಖಾ ದಳ (NIA)ದ ಕಸ್ಟಡಿಗೆ ನೀಡಲಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 1987ರ ಚುನಾವಣೆಯಲ್ಲಿ ಮಲಿಕ್, ಸಲಾವುದ್ದೀನ್ ಎಂಬಾತನ ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡಿದ್ದ. ವಂಚನೆ ಮೂಲಕ ಚುನಾವಣೆಯನ್ನು ಹಾಳು ಮಾಡಿ, ಈ ಪ್ರದೇಶದಲ್ಲಿ ದಂಗೆ ಸೃಷ್ಟಿಯಾಗಲು ಕಾರಣನಾದ ಆರೋಪ ಈತನ ಮೇಲಿತ್ತು. ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯು 1980ರ ದಶಕದ ಅಂತ್ಯದಲ್ಲಿ ಕಣಿವೆ ನಾಡಿನಲ್ಲಿ ದಂಗೆಯನ್ನು ಮುನ್ನಡೆಸಿದವು. 1990ರ ದಶಕದ ಮಧ್ಯಭಾಗದಲ್ಲಿ ಹಿಂಸಾಚಾರ ನಿಂತ ಬಳಿಕ ಮಲಿಕ್‌ನನ್ನು ಜೈಲಿಗೆ ಅಟ್ಟಲಾಯಿತು. ಮಹಾಪಧಮನಿಯ ಕವಾಟದ ಬದಲಾವಣೆಗೆ ಒಳಗಾಗಿದ್ದ ಮಲಿಕ್, ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ. 1990ರಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಈತ, ಐದನೇ ಮಹಡಿಯ ಕಿಟಕಿಯಿಂದ ಜಿಗಿದಿದ್ದ. ಹೀಗಾಗಿ ಒಂದು ಕಿವಿಯ ಶ್ರವಣ ಶಕ್ತಿ ಕಳೆದುಕೊಂಡು, ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ. ವಿವರ ಓದಿಗೆ - ಉಗ್ರರಿಗೆ ಆರ್ಥಿಕ ನೆರವು; ಯಾಸಿನ್‌ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ದಿವಂಗತ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯಾ ಸಯೀದ್ ಅವರನ್ನು ಅಪಹರಿಸಿದವರಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಕೂಡ ಸೇರಿದ್ದಾರೆ. ವಿಶೇಷ ಸಿಬಿಐ ಕೋರ್ಟ್‌ನಲ್ಲಿ ರುಬೈಯಾ ಸಯೀದ್ ಅವರು ಕಳೆದ ವರ್ಷ ಜುಲೈನಲ್ಲಿ ತನ್ನ ಅಪಹರಣಕಾರರನ್ನು ಗುರುತಿಸಿದ್ದರು.

ರುಬೈಯಾ ಸಯೀದ್ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಸಹೋದರಿ. ರುಬೈಯಾ ಸಯೀದ್‌ರನ್ನು 1989ರ ಡಿಸೆಂಬರ್ 8 ರಂದು ಅಪಹರಿಸಲಾಗಿತ್ತು. ಐವರು ಭಯೋತ್ಪಾದಕರನ್ನು ಬಿಡುಗಡೆಗೊಳಿಸಿದ ನಂತರ ರುಬೈಯಾ ಸಯೀದ್ ಅವರನ್ನು ಡಿಸೆಂಬರ್ 13 ರಂದು ಬಿಡುಗಡೆ ಮಾಡಲಾಗಿತ್ತು. ಈ ಅಪಹರಣ ಪ್ರಕರಣದ ತನಿಖೆಯನ್ನು 1990ರ ದಶಕದ ಆರಂಭದಲ್ಲಿ ಸಿಬಿಐ ವಹಿಸಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ರುಬೈಯಾ ಸಯೀದ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಇದೇ ಮೊದಲ ಬಾರಿಗೆ ತಿಳಿಸಲಾಗಿದೆ. ರುಬೈಯಾ ಸಯೀದ್ ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಸಯೀದ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಹಾಜರುಪಡಿಸಿತ್ತು. ವಿವರ ಓದಿಗೆ| Yasin Malik: ಪ್ರತ್ಯೇಕತಾವಾದಿ ನಾಯಕ ತನ್ನ ಅಪಹರಣಕಾರ ಎಂದು ಗುರುತಿಸಿದ ರುಬೈಯಾ ಸಯೀದ್‌

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ