ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Yasin Malik: ಪ್ರತ್ಯೇಕತಾವಾದಿ ನಾಯಕ ತನ್ನ ಅಪಹರಣಕಾರ ಎಂದು ಗುರುತಿಸಿದ ರುಬೈಯಾ ಸಯೀದ್‌

Yasin Malik: ಪ್ರತ್ಯೇಕತಾವಾದಿ ನಾಯಕ ತನ್ನ ಅಪಹರಣಕಾರ ಎಂದು ಗುರುತಿಸಿದ ರುಬೈಯಾ ಸಯೀದ್‌

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ದಿವಂಗತ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿಯ ಅಪಹರಣ ಪ್ರಕರಣ ಈಗ ಮತ್ತೆ ಸುದ್ದಿಯಲ್ಲಿದೆ. ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ ಅಪಹರಣಕಾರರಲ್ಲಿ ಒಬ್ಬ ಎಂಬುದನ್ನು ರುಬೈಯಾ ಸಯೀದ್‌ ಶುಕ್ರವಾರ ಗುರುತಿಸಿದ್ದಾರೆ.

ಯಾಸಿನ್‌ ಮಲಿಕ್‌
ಯಾಸಿನ್‌ ಮಲಿಕ್‌ (HT_PRINT)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ದಿವಂಗತ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯಾ ಸಯೀದ್ ಅವರನ್ನು ಅಪಹರಿಸಿದವರಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಕೂಡ ಸೇರಿದ್ದಾರೆ. ವಿಶೇಷ ಸಿಬಿಐ ಕೋರ್ಟ್‌ನಲ್ಲಿ ರುಬೈಯಾ ಸಯೀದ್ ಅವರು ಶುಕ್ರವಾರ ನೀಡಿದ ಹೇಳಿಕೆಯಲ್ಲಿ ತನ್ನ ಅಪಹರಣಕಾರರನ್ನು ಗುರುತಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರುಬೈಯಾ ಸಯೀದ್ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಸಹೋದರಿ. ರುಬೈಯಾ ಸಯೀದ್‌ರನ್ನು 1989ರ ಡಿಸೆಂಬರ್ 8 ರಂದು ಅಪಹರಿಸಲಾಗಿತ್ತು. ಐವರು ಭಯೋತ್ಪಾದಕರನ್ನು ಬಿಡುಗಡೆಗೊಳಿಸಿದ ನಂತರ ರುಬೈಯಾ ಸಯೀದ್ ಅವರನ್ನು ಡಿಸೆಂಬರ್ 13 ರಂದು ಬಿಡುಗಡೆ ಮಾಡಲಾಯಿತು.

ಈ ಅಪಹರಣ ಪ್ರಕರಣದ ತನಿಖೆಯನ್ನು 1990ರ ದಶಕದ ಆರಂಭದಲ್ಲಿ ಸಿಬಿಐ ವಹಿಸಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ರುಬೈಯಾ ಸಯೀದ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಇದೇ ಮೊದಲ ಬಾರಿಗೆ ತಿಳಿಸಲಾಗಿದೆ. ರುಬೈಯಾ ಸಯೀದ್ ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಸಯೀದ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಹಾಜರುಪಡಿಸಿತು.

ಕೃತ್ಯ ನಡೆದು 31 ವರ್ಷಗಳ ನಂತರ ಕಳೆದ ವರ್ಷ ಜನವರಿಯಲ್ಲಿ ನ್ಯಾಯಾಲಯವು ಯಾಸಿನ್ ಮಲಿಕ್ ಮತ್ತು ಇತರ ಒಂಬತ್ತು ಜನರ ವಿರುದ್ಧ ದೋಷಾರೋಪ ರೂಪಿಸಿತು. ಮಾಧ್ಯಮ ವರದಿಗಳ ಪ್ರಕಾರ, ಈಗ ಈ ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವನ್ನು ಆಗಸ್ಟ್ 23 ರಂದು ನಿಗದಿಪಡಿಸಲಾಗಿದೆ. ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಯಾಸಿನ್ ಮಲಿಕ್‌ಗೆ ಇತ್ತೀಚೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಎರಡರಲ್ಲಿ ಜೀವಾವಧಿ, 5 ರಲ್ಲಿ 10 ವರ್ಷ ಸೆರೆವಾಸ

ಜಮ್ಮು- ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಎರಡು ಪ್ರಕರಣಗಳಲ್ಲಿ ಜೀವಾವಧಿ ಮತ್ತು ಐದು ಪ್ರಕರಣಗಳಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ ಮತ್ತು ಗರಿಷ್ಠ ಶಿಕ್ಷೆಯು ಜೀವಾವಧಿ ಶಿಕ್ಷೆಯಾಗಿದೆ. ಈ ಮೂಲಕ ತೌಮರ್ ಯಾಸಿನ್ ಮಲಿಕ್ ಜೈಲು ಪಾಲಾಗಬೇಕಾಗುತ್ತದೆ. ಯಾಸಿನ್ ಮಲಿಕ್ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು, ಭಯೋತ್ಪಾದನೆ ನಿಧಿ, ಭಯೋತ್ಪಾದನೆ ಪಿತೂರಿ ಮತ್ತು ಭಾರತದ ವಿರುದ್ಧ ಯುದ್ಧ ನಡೆಸುವುದು ಮುಂತಾದ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮರಣದಂಡನೆಗೆ ಒತ್ತಾಯ

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸಬೇಕೆಂದು ನ್ಯಾಷನಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿ (ಎನ್‌ಐಎ) ಒತ್ತಾಯಿಸಿತ್ತು. ಯಾಸಿನ್ ಮಲಿಕ್ ಮಾಡಿದ ಅಪರಾಧಗಳನ್ನು ಪರಿಗಣಿಸಿ, ಮಲಿಕ್‌ಗೆ ಮರಣದಂಡನೆಗಿಂತ ಕಡಿಮೆ ಶಿಕ್ಷೆಯನ್ನು ನೀಡಬಾರದು ಎಂದು ಎನ್‌ಐಎ ಹೇಳಿದೆ. ಪ್ರಕರಣದ ವಿಚಾರಣೆ ವೇಳೆ ಸ್ವತಃ ಯಾಸಿನ್ ಮಲಿಕ್ ತನ್ನ ಅಪರಾಧವನ್ನು ಒಪ್ಪಿಕೊಂಡು ವಕೀಲರನ್ನು ಹಿಂದಿರುಗಿಸಿದ್ದರು.

ಟೆರರ್‌ ಫಂಡಿಂಗ್‌ ಹಿನ್ನೆಲೆ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 1987ರ ಚುನಾವಣೆಯಲ್ಲಿ ಮಲಿಕ್, ಸಲಾವುದ್ದೀನ್ ಎಂಬಾತನ ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡಿದ್ದ. ವಂಚನೆ ಮೂಲಕ ಚುನಾವಣೆಯನ್ನು ಹಾಳು ಮಾಡಿ, ಈ ಪ್ರದೇಶದಲ್ಲಿ ದಂಗೆ ಸೃಷ್ಟಿಯಾಗಲು ಕಾರಣನಾದ ಆರೋಪ ಈತನ ಮೇಲಿತ್ತು. ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯು 1980ರ ದಶಕದ ಅಂತ್ಯದಲ್ಲಿ ಕಣಿವೆ ನಾಡಿನಲ್ಲಿ ದಂಗೆಯನ್ನು ಮುನ್ನಡೆಸಿದವು. 1990ರ ದಶಕದ ಮಧ್ಯಭಾಗದಲ್ಲಿ ಹಿಂಸಾಚಾರ ನಿಂತ ಬಳಿಕ ಮಲಿಕ್‌ನನ್ನು ಜೈಲಿಗೆ ಅಟ್ಟಲಾಯಿತು.

ಅನಾರೋಗ್ಯ ಪೀಡಿತ ಮಲಿಕ್‌

ಮಹಾಪಧಮನಿಯ ಕವಾಟದ ಬದಲಾವಣೆಗೆ ಒಳಗಾಗಿದ್ದ ಮಲಿಕ್, ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ. 1990ರಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಈತ, ಐದನೇ ಮಹಡಿಯ ಕಿಟಕಿಯಿಂದ ಜಿಗಿದಿದ್ದ. ಹೀಗಾಗಿ ಒಂದು ಕಿವಿಯ ಶ್ರವಣ ಶಕ್ತಿ ಕಳೆದುಕೊಂಡು, ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ.

ಟಿ20 ವರ್ಲ್ಡ್‌ಕಪ್ 2024

ವಿಭಾಗ