logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Old, Rich, Opinionated And Dangerous: ನಾಲ್ಕೇ ನಾಲ್ಕು ಪದಗಳಲ್ಲಿ ಜಾರ್ಜ್‌ ಸೊರೊಸ್‌ಗೆ ಜಾಡಿಸಿದ ವಿದೇಶಾಂಗ ಸಚಿವ ಜೈಶಂಕರ್‌

Old, rich, opinionated and dangerous: ನಾಲ್ಕೇ ನಾಲ್ಕು ಪದಗಳಲ್ಲಿ ಜಾರ್ಜ್‌ ಸೊರೊಸ್‌ಗೆ ಜಾಡಿಸಿದ ವಿದೇಶಾಂಗ ಸಚಿವ ಜೈಶಂಕರ್‌

Praveen Chandra B HT Kannada

Feb 18, 2023 12:05 PM IST

google News

ಡಾ. ಎಸ್‌. ಜೈಶಂಕರ್‌ (ಸಂಗ್ರಹ ಚಿತ್ರ)

    • "ವಯಸ್ಸಾದ, ಶ್ರೀಮಂತ, ಅಭಿಪ್ರಾಯ ಮತ್ತು ಅಪಾಯಕಾರಿ (Old, rich, opinionated and dangerous) ಎಂಬ ನಾಲ್ಕು ಪದಗಳ ಮೂಲಕ ಚಾರ್ಜ್‌ ಸೊರೊಸ್‌ಗೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar)  ಜಾಡಿಸಿದ್ದಾರೆ.
ಡಾ. ಎಸ್‌. ಜೈಶಂಕರ್‌ (ಸಂಗ್ರಹ ಚಿತ್ರ)
ಡಾ. ಎಸ್‌. ಜೈಶಂಕರ್‌ (ಸಂಗ್ರಹ ಚಿತ್ರ) (ANI)

ನವದೆಹಲಿ: ಭಾರತದ ಪ್ರಜಾಪ್ರಭುತ್ವದ ಕುರಿತು ಟೀಕೆ ಮಾಡಿರುವ ಶತಕೋಟ್ಯಧಿಪತಿ ಜಾರ್ಜ್‌ ಸೋರಸ್‌ಗೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ನಾಲ್ಕೇ ನಾಲ್ಕು ಪದಗಳಲ್ಲಿ ಸರಿಯಾಗಿ ಜಾಡಿಸಿದ್ದಾರೆ. "ವಯಸ್ಸಾದ, ಶ್ರೀಮಂತ, ಅಭಿಪ್ರಾಯ ಮತ್ತು ಅಪಾಯಕಾರಿ (Old, rich, opinionated and dangerous) ಎಂಬ ನಾಲ್ಕು ಪದಗಳ ಮೂಲಕ ಚಾರ್ಜ್‌ ಸೋರಸ್‌ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆ ಫಲಿತಾಂಶಗಳು ತಮ್ಮ ಇಚ್ಛೆಯಂತೆ ಇಲ್ಲದೆ ಇರುವಂತಹ ಸಮದರ್ಭದಲ್ಲಿ ಸೊರೊಸ್‌ನಂತವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸಲು ಆರಂಭಿಸುತ್ತಾರೆ ಎಂದು ಜೈಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದೇಶಾಂಗ ಸಚಿವರಾದ ಜೈಶಂಕರ್‌ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಕೆಲವು ವರ್ಷಗಳ ಹಿಂದೆ ಭಾರತದ ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ನಾವು ಕಸಿದುಕೊಳ್ಳಲು ಯೋಜಿಸಿದ್ದೇವೆ ಎಂದು ಅವರು ಆರೋಪಿಸಿದ್ದರು. ಅದು ಸಂಭವಿಸಲಿಲ್ಲ. ಅದು ಹಾಸ್ಪಾಸ್ಪದ ಹೇಳಿಕೆಯಾಗಿತ್ತು. ಇದರ ಅರ್ಥ ಏನೆಂದು ನೀವೇ ಅರ್ಥ ಮಾಡಿಕೊಳ್ಳಬೇಕು. ಶ್ರೀಯುತ ಸೊರೊಸ್‌ ಅವರು ನ್ಯೂಯಾರ್ಕ್‌ನಲ್ಲಿ ಕುಳಿತಿರುವ ವಯಸ್ಸಾದ, ಶ್ರೀಮಂತ, ಅಭಿಪ್ರಾಯದ ವ್ಯಕ್ತಿಯಾಗಿ ನನಗೆ ಕಾಣಿಸುತ್ತಾರೆ. ಅವರು ತಮ್ಮ ದೃಷ್ಟಿಕೋನಗಳ ರೀತಿಯೇ ಜಗತ್ತು ನಡೆಯಬೇಕು ಎಂದು ಈಗಲೂ ಬಯಸುತ್ತಿದ್ದಾರೆ" ಎಂದು ಜೈಶಂಕರ್‌ ಹೇಳಿದ್ದಾರೆ.

"ವಯಸ್ಸಾದ, ಶ್ರೀಮಂತ ಮತ್ತು ಅಭಿಪ್ರಾಯ ಮಾತ್ರ ಆಗಿದ್ದರೆ ನಾನು ಅವರ ಮಾತನ್ನು ಕಡೆಗಣಿಸಬಹುದಿತ್ತು. ಆದರೆ, ಆತ ವಯಸ್ಸಾದ, ಶ್ರೀಮಂತ, ಅಭಿಪ್ರಾಯ ಮತ್ತು ಅಪಾಯಕಾರಿ (ಅಪಾಯಕಾರಿ ಅಭಿಪ್ರಾಯ ಹೊಂದಿರುವ ಹಿರಿಯ ಶ್ರೀಮಂತ) ಆಗಿದ್ದಾನೆ. ಇಂತಹ ಜನರು ಜನಾಭಿಪ್ರಾಯ ಮೂಡಿಸಲು ಹೂಡಿಕೆ ಮಾಡಿದಾಗ ಏನಾಗುತ್ತದೆ?ʼ ಎಂದು ಅವರು ಪ್ರಶ್ನಿಸಿದ್ದಾರೆ.

92 ವರ್ಷದ ಜಾರ್ಜ್ ಸೊರೊಸ್ ಅವರು ಗುರುವಾರ 2023ರ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಷಣ ಮಾಡುವಾಗ, ಗೌತಮ್ ಅದಾನಿ ಅವರ ವ್ಯವಹಾರದ ತೊಂದರೆಗಳಿಂದ ಪ್ರಧಾನಿ ಮೋದಿ ದುರ್ಬಲರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಕಂಪನಿಗಳು ಯುಎಸ್ ಮೂಲದ ಸಣ್ಣ ಮಾರಾಟಗಾರರ ನಂತರ ಭಾರಿ ಷೇರು ಮಾರುಕಟ್ಟೆ ಸೋಲನ್ನು ಎದುರಿಸುತ್ತಿವೆ. ಹಿಂಡೆನ್‌ಬರ್ಗ್ ವರದಿಯು ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುಜ್ಜೀವನಕ್ಕೆ ಬಾಗಿಲು ತೆರೆಯುತ್ತದೆ ಎಂದಿದ್ದರು.

ಜಾರ್ಜ್‌ ಸೊರೋಸ್‌ ಹೇಳಿಕೆಯನ್ನು ಬಿಜೆಪಿ, ಕಾಂಗ್ರೆಸ್‌ ಟೀಕಿಸಿವೆ. ಪ್ರಧಾನಿ ಮೋದಿ ಹಾಗೂ ಭಾರತದ ಮೇಲೆ ನಿರಂತರ ದಾಳಿ ಮಾಡುತ್ತಿರುವ ವಿದೇಶಿ ಶಕ್ತಿಗಳ ವಿರುದ್ಧ ಭಾರತೀಯರು ಒಗ್ಗಟ್ಟಾಗಿ ಪ್ರತಿಕ್ರಿಯಿಸಬೇಕಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

"ಜಾರ್ಜ್‌ ಸೊರೊಸ್ ವಿಶೇಷವಾಗಿ ಪ್ರಧಾನಿ ಮೋದಿಯಂತಹ ನಾಯಕರನ್ನು ಗುರಿಯಾಗಿಸಲು, ಒಂದು ಶತಕೋಟಿ ಡಾಲರ್‌ಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಭಾರತೀಯರ ಮನದಲ್ಲಿ ನೆಲೆಸಿದ್ದು, ಎಷ್ಟೇ ಷಡ್ಯಂತ್ರ ನಡೆಸಿದರೂ ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಸ್ಮೃತಿ ಇರಾನಿ ಹೇಳಿದರು.

ನಮ್ಮ ದೇಶದ ಆಂತರಿಕ ವಿಚಾರಗಳಿಗೂ ಜಾರ್ಜ್‌ ಸೊರೊಸ್‌ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ. ಈ ಕುರಿತು ವಿಸ್ತೃತ ವರದಿ ಇಲ್ಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ