logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ; ವಿಪಕ್ಷಗಳ ವಿರೋಧ

ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ; ವಿಪಕ್ಷಗಳ ವಿರೋಧ

Umesh Kumar S HT Kannada

Dec 17, 2024 02:34 PM IST

google News

ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಂಡಿಸಿದರು. (ವಿಡಿಯೋದಿಂದ ತೆಗೆದ ಚಿತ್ರ)

  • One Nation One Election bill: ಭಾರತದಲ್ಲಿ ಏಕಕಾಲದಲ್ಲಿ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆ ಹಾಗೂ ಅದರೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಹೊಂದಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಂಡಿಸಿದರು.

ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಂಡಿಸಿದರು. (ವಿಡಿಯೋದಿಂದ ತೆಗೆದ ಚಿತ್ರ)
ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಂಡಿಸಿದರು. (ವಿಡಿಯೋದಿಂದ ತೆಗೆದ ಚಿತ್ರ) (LM)

One Nation One Election bill: ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಮಹತ್ವಾಕಾಂಕ್ಷೆಯ ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಇಂದು (ಡಿಸೆಂಬರ್ 17) ಮಂಡನೆಯಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕಕಾಲದ ಚುನಾವಣೆ ನಡೆಸುವುದಕ್ಕೆ ಪ್ರಯತ್ನಿಸುತ್ತಿದ್ದು, ಕೇಂದ್ರ ಕಾನೂನು ಸಚಿವ ಲೋಕಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಮಂಗಳವಾರ ಮಂಡಿಸಿದರು. ಸಂಸತ್‌ನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಲೋಕಸಭೆಯಲ್ಲಿ ಈ ಮಸೂದೆ ಬಗ್ಗೆ ಚರ್ಚೆ ನಡೆದ ಬಳಿಕ ಅನುಮೋದನೆ ಪಡೆಯಲಿದೆ ಅಥವಾ ಸಂಸದೀಯ ಸಮಿತಿಗೆ ಹೆಚ್ಚಿನ ಅಧ್ಯಯನಕ್ಕೆ ಒಪ್ಪಿಸುವ ಸಾಧ್ಯತೆಯೂ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಕಳೆದ ವಾರ ಎರಡು ಮಹತ್ವದ ಮಸೂದೆಗಳಿಗೆ ಅಂದರೆ ಸಂವಿಧಾನ (ಒಂದು ನೂರಾ 29ನೇ ತಿದ್ದುಪಡಿ) ಮಸೂದೆ 2024 ಮತ್ತು ಕೇಂದ್ರಾಡಳಿತ ಕಾನೂನು (ತಿದ್ದುಪಡಿ) ಮಸೂದೆ 2024 ಮಂಡಿಸುವುದಕ್ಕೆ ಅನುಮೋದನೆ ನೀಡಿತ್ತು.

ಒಂದು ದೇಶ ಒಂದು ಚುನಾವಣೆ; ವಿಧೇಯಕಕ್ಕೆ ವಿಪಕ್ಷ ವಿರೋಧ

ಸಂವಿಧಾನ (ಒಂದು ನೂರಾ 29ನೇ ತಿದ್ದುಪಡಿ) ಮಸೂದೆ 2024 ಮತ್ತು ಕೇಂದ್ರಾಡಳಿತ ಕಾನೂನು (ತಿದ್ದುಪಡಿ) ಮಸೂದೆ 2024 ಈ ಎರಡೂ ವಿಧೇಯಕಗಳನ್ನು ಕೇಂದ್ರ ಸರ್ಕಾರ ಮಂಡಿಸಿದ ಕೂಡಲೇ ವಿರೋಧ ಪಕ್ಷದ ಸದಸ್ಯರು ತಮ್ಮ ಆಕ್ಷೇಪಗಳನ್ನು ದಾಖಲಿಸಿದರು.

“ಒಂದು ರಾಷ್ಟ್ರ, ಒಂದು ಚುನಾವಣೆಗಾಗಿ ಉದ್ದೇಶಿಸಲಾದ ಈ ಮಸೂದೆಗಳನ್ನು ನಾವು ವಿರೋಧಿಸುತ್ತೇವೆ. ಈ ಮಸೂದೆಗಳು ಸಂವಿಧಾನದ ಮೂಲ ರಚನೆಯ ಮೇಲೆ ಮತ್ತು ಪ್ರಜಾಪ್ರಭುತ್ವದ ಮೇಲಿನ ಆಕ್ರಮಣವಾಗಿದೆ. ಇದು ಶಾಸಕಾಂಗ ಸಾಮರ್ಥ್ಯವನ್ನು ಹೊಂದಿಲ್ಲ. ರಾಜ್ಯ ಶಾಸಕಾಂಗಗಳ ಅವಧಿಯನ್ನು ಲೋಕಸಭೆಯ ಅವಧಿಗೆ ಒಳಪಡಿಸಲಾಗುವುದಿಲ್ಲ. ಸಂವಿಧಾನದ ಮೂಲ ರಚನೆಯ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು, ಈ ಮಸೂದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಆಗ್ರಹಿಸಿದರು.

ಸಂವಿಧಾನ (ಒಂದು ನೂರಾ 29ನೇ ತಿದ್ದುಪಡಿ) ಮಸೂದೆ 2024 ರಲ್ಲಿ ಏನಿದೆ

ಡಿಸೆಂಬರ್ 13 ರ ರಾತ್ರಿ ಪ್ರಕಟವಾದ ಸಂವಿಧಾನದ (ನೂರಾ ಇಪ್ಪತ್ತೊಂಬತ್ತನೇ ತಿದ್ದುಪಡಿ) ಮಸೂದೆ, 2024 ರ ಪ್ರತಿಯ ಪ್ರಕಾರ, ಲೋಕಸಭೆ ಅಥವಾ ಯಾವುದೇ ರಾಜ್ಯ ಅಸೆಂಬ್ಲಿಯು ಅದರ ಪೂರ್ಣಾವಧಿ, ಮಧ್ಯಂತರ ಚುನಾವಣೆಯ ಅಂತ್ಯದ ಮೊದಲು ವಿಸರ್ಜನೆಯಾದರೆ ಅದರ ಐದು ವರ್ಷಗಳ ಅವಧಿಯ ಉಳಿದ ಅವಧಿಯನ್ನು ಪೂರ್ಣಗೊಳಿಸಲು ಆ ಶಾಸಕಾಂಗಕ್ಕೆ ಮಾತ್ರ ನಡೆಯಲಿದೆ.

ಅನುಚ್ಛೇದ 82(A) (ಜನರ ಸದನ ಮತ್ತು ಎಲ್ಲಾ ಶಾಸನ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು) ಸೇರಿಸಲು ಮತ್ತು ವಿಧಿ 83 (ಸಂಸತ್ತಿನ ಸದನಗಳ ಅವಧಿ), 172 ಮತ್ತು 327 (ಶಾಸಕಾಂಗ ಚುನಾವಣೆಗಳಿಗೆ ಸಂಬಂಧಿಸಿ ನಿಬಂಧನೆಗಳನ್ನು ಮಾಡಲು ಸಂಸತ್ತಿನ ಅಧಿಕಾರವನ್ನು ತಿದ್ದುಪಡಿ ಮಾಡುವುದನ್ನು ಸೂಚಿಸುತ್ತದೆ) ಎಂಬ ಅಂಶ ವಿಧೇಯಕದಲ್ಲಿದೆ. ಮಸೂದೆಯ ಪ್ರಕಾರ, "ನೇಮಕ ದಿನಾಂಕ" 2029 ರ ಲೋಕಸಭೆ ಚುನಾವಣೆಯ ನಂತರದಲ್ಲಿ ಇರುತ್ತದೆ. 2034 ರಲ್ಲಿ ಏಕಕಾಲ ಚುನಾವಣೆಗಳು ಪ್ರಾರಂಭವಾಗಲಿವೆ. ತಿದ್ದುಪಡಿಯ ನಿಬಂಧನೆಗಳು "ನೇಮಕವಾದ ದಿನಾಂಕ" ದಂದು ಜಾರಿಗೆ ಬರುತ್ತವೆ ಎಂದು ಹೇಳುತ್ತಿದ್ದು, ಇದನ್ನು ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಯ ಮೊದಲ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಸೂಚಿಸುತ್ತಾರೆ. ಲೋಕಸಭೆ ಅಧಿಕಾರಾವಧಿಯು ನಿಗದಿತ ದಿನಾಂಕದಿಂದ ಐದು ವರ್ಷಗಳಾಗಿರುತ್ತದೆ. ಈ ನಿಗದಿತ ದಿನಾಂಕದ ನಂತರ ಚುನಾಯಿತವಾದ ಎಲ್ಲ ಶಾಸಕಾಂಗ ಸಭೆಗಳ ಅಧಿಕಾರಾವಧಿಯು ಲೋಕಸಭೆಯ ಅಧಿಕಾರಾವಧಿಯೊಂದಿಗೆ ಕೊನೆಗೊಳ್ಳುತ್ತದೆ ಎಂಬುದನ್ನು ಅದು ನಿರ್ದಿಷ್ಟಪಡಿಸುತ್ತದೆ.

ಒಂದು ದೇಶ ಒಂದು ಚುನಾವಣೆ ಪ್ರಸ್ತಾಪವು ಭಾರತೀಯ ಜನತಾ ಪಕ್ಷದ 2024 ರ ಚುನಾವಣಾ ಪ್ರಣಾಳಿಕೆಯ ಭಾಗವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವನ್ನು ಹೊಂದಿದೆ. ಆದರೆ ಇದು ಪ್ರಜಾಪ್ರಭುತ್ವದ ಹೊಣೆಗಾರಿಕೆಯನ್ನು ಘಾಸಿಗೊಳಿಸುತ್ತದೆ ಎಂದು ಆರೋಪಿಸಿ ರಾಜಕೀಯ ಪಕ್ಷಗಳು ಮತ್ತು ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ