ಒಂದು ದೇಶ ಒಂದು ಚುನಾವಣೆ ಎಂದರೇನು, ಯಾಕಿಷ್ಟು ಮಹತ್ವ, ಏಕಕಾಲದ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ 9 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಒಂದು ದೇಶ ಒಂದು ಚುನಾವಣೆ ಎಂದರೇನು, ಯಾಕಿಷ್ಟು ಮಹತ್ವ, ಏಕಕಾಲದ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ 9 ಮುಖ್ಯ ಅಂಶಗಳು

ಒಂದು ದೇಶ ಒಂದು ಚುನಾವಣೆ ಎಂದರೇನು, ಯಾಕಿಷ್ಟು ಮಹತ್ವ, ಏಕಕಾಲದ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ 9 ಮುಖ್ಯ ಅಂಶಗಳು

One Nation One Election: ಭಾರತದಲ್ಲಿ ಸದ್ಯ ಒಂದು ದೇಶ ಒಂದು ಚುನಾವಣೆ ವಿಚಾರ ಹೆಚ್ಚು ಚರ್ಚೆಯಲ್ಲಿದೆ. ಒಂದು ದೇಶ ಒಂದು ಚುನಾವಣೆ ಎಂದರೇನು, ಯಾಕಿಷ್ಟು ಮಹತ್ವ, ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ 9 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಒಂದು ದೇಶ ಒಂದು ಚುನಾವಣೆ ಎಂದರೇನು, ಯಾಕಿಷ್ಟು ಮಹತ್ವ, ಏಕಕಾಲದ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ 9 ಮುಖ್ಯ ಅಂಶಗಳು
ಒಂದು ದೇಶ ಒಂದು ಚುನಾವಣೆ ಎಂದರೇನು, ಯಾಕಿಷ್ಟು ಮಹತ್ವ, ಏಕಕಾಲದ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ 9 ಮುಖ್ಯ ಅಂಶಗಳು (HT News )

One Nation One Election: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸುತ್ತಿದೆ. “ಸಂವಿಧಾನ (ನೂರಾ ಇಪ್ಪತ್ತೊಂಬತ್ತನೇ ತಿದ್ದುಪಡಿ) ಮಸೂದೆ 2024” ಎಂದು ಉಭಯ ಸದನಗಳ ಜಂಟಿ ಸಮಿತಿಗೆ ರವಾನಿಸಲ್ಪಟ್ಟಿತ್ತು ಎಂದು ಪಿಟಿಐ ವರದಿ ಮಾಡಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಲೋಕ ಸಭೆಯಲ್ಲಿ ಈ ಮಸೂದೆ ಮಂಡಿಸಲಿದ್ದಾರೆ. ಸಂಸತ್ತಿನ ಸಮಿತಿಗೆ ಶಿಫಾರಸು ಮಾಡುವ ಸಾಧ್ಯತೆಯಿರುವ ಮಸೂದೆಗಳ ಕುರಿತು ವ್ಯಾಪಕ ಸಮಾಲೋಚನೆ ನಡೆಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ ಎಂದು ಹೇಳಲಾಗಿದೆ. ಈ ಸಮಿತಿಯ ಮೂಲಕ ವಿವಿಧ ರಾಜ್ಯಗಳ ವಿಧಾನಸಭೆಗಳ ಸ್ಪೀಕರ್‌ಗಳನ್ನು ಸಂಪರ್ಕಿಸಿ, ಅವರ ಅಭಿಪ್ರಾಯಗಳನ್ನೂ ಸಂಗ್ರಹಿಸಿ ಮುಂದುವರಿಯಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ‘ಒಂದು ದೇಶ, ಒಂದು ಚುನಾವಣೆ’ ಯೋಜನೆ ನಿಖರವಾಗಿ ಏನು? ಅದಕ್ಕೆ ಯಾಕಿಷ್ಟು ಮಹತ್ವ?, ಒಂದು ರಾಷ್ಟ್ರ ಒಂದು ಚುನಾವಣೆಯ ಪ್ರಸ್ತಾವನೆಯ 9 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಒಂದು ದೇಶ ಒಂದು ಚುನಾವಣೆ; 9 ಮುಖ್ಯ ಅಂಶಗಳು

1) ಒಂದು ದೇಶ ಒಂದು ಚುನಾವಣೆ ಜಾರಿಗೊಳಿಸುವುದಕ್ಕೆ ಅಧ್ಯಯನ ನಡೆಸಲು ರಚಿಸಲಾದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯ ಸಮಿತಿಯು ಪ್ರತಿ ವರ್ಷ ಆಗಾಗ್ಗೆ ಚುನಾವಣೆಗಳನ್ನು ನಡೆಸುವುದು ಆರ್ಥಿಕತೆ, ರಾಜಕೀಯ ಮತ್ತು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರತಿಪಾದಿಸಿದೆ. ಅದನ್ನು ನಿಭಾಯಿಸಲು ಏಕಕಾಲಕ್ಕೆ ಚುನಾವಣೆ ನಡೆಸುವುದನ್ನು ಮರುಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದೆ.

2) ಮೊದಲ ಹಂತದ ಯೋಜನೆಯ ಪ್ರಕಾರ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣಾ ದಿನಾಂಕಗಳನ್ನು ಹೊಂದಿಸುವುದಾಗಿದೆ. ತರುವಾಯ, ಪುರಸಭೆ ಮತ್ತು ಪಂಚಾಯತ್ ಚುನಾವಣೆಗಳನ್ನು ಇವುಗಳೊಂದಿಗೆ ಜೋಡಿಸುವ ಯೋಜನೆ ಇದ್ದು, ಅದನ್ನು ಮುಂದಿನ ಹಂತದ ಯೋಜನೆಯಲ್ಲಿ 100 ದಿನಗಳ ಅವಧಿಯಲ್ಲಿ ಮಾಡಬಹುದು ಎಂದು ಸಮಿತಿ ಶಿಫಾರಸಿನಲ್ಲಿ ಹೇಳಿದೆ.

3) ಸಾರ್ವತ್ರಿಕ ಚುನಾವಣೆಯ ನಂತರ, ರಾಷ್ಟ್ರಪತಿಯವರು ಲೋಕಸಭೆಯು ಸೇರುವ ದಿನಾಂಕವನ್ನು 'ನೇಮಿತ ದಿನಾಂಕ' ಎಂದು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಬಹುದು. ಇದು ನಿರಂತರ ಚುನಾವಣಾ ಹೊಂದಿಕೆಯನ್ನು ಖಚಿತಪಡಿಸುತ್ತದೆ.

4) ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಹೊಂದಿಕೆಯಾಗುವಂತೆ ಹೊಸದಾಗಿ ರಚನೆಯಾದ ರಾಜ್ಯ ವಿಧಾನಸಭೆಗಳು ಕಡಿಮೆ ಅವಧಿಯನ್ನು ಹೊಂದಿರುತ್ತವೆ ಎಂದು ಶಿಫಾರಸು ವರದಿ ವಿವರಿಸಿದೆ.

5) ಈ ಸುಧಾರಣೆಗಳ ಯಶಸ್ವಿ ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಖಚಿತಪಡಿಸಿಕೊಳ್ಳಲು ಅನುಷ್ಠಾನದ ಗುಂಪನ್ನು ಸ್ಥಾಪನೆ ಮಾಡಬೇಕು ಎಂದು ಕೋವಿಂದ್ ಸಮಿತಿಯು ಶಿಫಾರಸು ಮಾಡಿದೆ.

6) ಪಂಚಾಯತ್ ಮತ್ತು ಪುರಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಸಂವಿಧಾನದಲ್ಲಿ 324ಎ ವಿಧಿಯನ್ನು ಸೇರಿಸಬೇಕು ಎಂದು ಶಿಫಾರಸಿನಲ್ಲಿ ಪ್ರಸ್ತಾಪಿಸಲಾಗಿದೆ. ಎಲ್ಲ ಚುನಾವಣೆಗಳಿಗೆ ಏಕೀಕೃತ ಮತದಾರರ ಪಟ್ಟಿ ಮತ್ತು ಫೋಟೋ ಗುರುತಿನ ಚೀಟಿಯನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ 325 ನೇ ವಿಧಿಗೆ ತಿದ್ದುಪಡಿಯನ್ನು ತರಬೇಕಾದ ಅಗತ್ಯವನ್ನು ಸಮಿತಿಯು ಪ್ರಸ್ತಾಪಿಸಿದೆ. ಆದರೆ ಈ ತಿದ್ದುಪಡಿಗೆ ರಾಜ್ಯಗಳಿಂದ ಅನುಮೋದನೆ ಅಗತ್ಯವಿರುತ್ತದೆ.

7) ಅತಂತ್ರ ಸದನ ಅಥವಾ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ, ಹೊಸ ಚುನಾವಣೆಗಳನ್ನು ಘೋಷಿಸಲಾಗುವುದು. ಆದರೆ, ಹೊಸದಾಗಿ ಆಯ್ಕೆಯಾದ ಸದನದ ಅವಧಿಯು ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೆ ಮಾತ್ರ ಇರುತ್ತದೆ.

8) ಅತಂತ್ರ ಸದನ ಅಥವಾ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಹೊಸ ಚುನಾವಣೆಗೆ ಸಮಿತಿಯು ಪ್ರತಿಪಾದಿಸಿದೆ. ಹೊಸದಾಗಿ ಚುನಾಯಿತ ಲೋಕಸಭೆಯು ಹಿಂದಿನ ಅವಧಿಯ ಉಳಿದ ಅವಧಿಯನ್ನು ಪೂರೈಸುತ್ತದೆ. ಆದರೆ ಲೋಕಸಭೆಯ ಅವಧಿ ಮುಗಿಯುವವರೆಗೆ ರಾಜ್ಯ ಅಸೆಂಬ್ಲಿಗಳು ಮುಂದುವರಿಯುತ್ತವೆಯೇ ಹೊರತು ಮೊದಲೇ ವಿಸರ್ಜನೆಯಾಗುವುದಿಲ್ಲ.

9) ಸಮರ್ಥ ಚುನಾವಣಾ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಇವಿಎಂಗಳು ಮತ್ತು ವಿವಿಪ್ಯಾಟ್‌ಗಳಂತಹ ಅಗತ್ಯ ಉಪಕರಣಗಳ ಖರೀದಿಗೆ ಪೂರ್ವಭಾವಿಯಾಗಿ ಯೋಜಿಸಲು ಚುನಾವಣಾ ಆಯೋಗಕ್ಕೆ ಸೂಚಿಸುವುದಕ್ಕೆ ಸಮಿತಿ ಶಿಫಾರಸು ಮಾಡಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.