PAN-Aadhaar linking: ಪ್ಯಾನ್ - ಆಧಾರ್ ಜೋಡಣೆ ಅವಧಿ 3 ತಿಂಗಳು ವಿಸ್ತರಣೆ; ಜೂ.30 ಈಗ ಹೊಸ ಡೆಡ್‌ಲೈನ್
Mar 28, 2023 03:52 PM IST
ಪ್ಯಾನ್ ಮತ್ತು ಆಧಾರ್ ಜೋಡಣೆಗೆ ನೀಡಲಾಗಿದ್ದ ಗಡುವು ಮತ್ತೆ ಮೂರು ತಿಂಗಳು ಮುಂದಕ್ಕೆ ಜೂ.30 ಕೊನೇ ದಿನ ಎಂದ ಕೇಂದ್ರ ಸರ್ಕಾರ
PAN-Aadhaar linking: ಕಾಯಿದೆಯ ಪ್ರಕಾರ 2023ರ ಏಪ್ರಿಲ್ 1 ರಿಂದ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಗಡುವನ್ನು ಅಂದರೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಉದ್ದೇಶದ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.
ತೆರಿಗೆದಾರರಿಗೆ ಹೆಚ್ಚಿನ ಸಮಯವನ್ನು ನೀಡಲು, ಪರ್ಮನೆಂಟ್ ಅಕೌಂಟ್ಟ ನಂಬರ್ (PAN) ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರವು ಮೂರು ತಿಂಗಳವರೆಗೆ ಜೂನ್ 30 ಕ್ಕೆ ವಿಸ್ತರಿಸಿದೆ.
ಈ ಹಿಂದೆ, ಜನರು ತಮ್ಮ ಆಧಾರ್ ಕಾರ್ಡ್ ಅನ್ನು ತಮ್ಮ ಪ್ಯಾನ್‌ಗೆ ಲಿಂಕ್ ಮಾಡಬೇಕು. ಆನ್‌ಲೈನ್‌ನಲ್ಲಿ ಮಾರ್ಚ್ 31 ರೊಳಗೆ 1000 ರೂಪಾಯಿ ಶುಲ್ಕ ಪಾವತಿಸಿ ಈ ಕೆಲಸ ಪೂರೈಸಬೇಕು ಅಥವಾ ಅವರ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ. ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಿತ್ತು.
"ಆದಾಯ ತೆರಿಗೆ ಕಾಯಿದೆ, 1961 ('ಆಕ್ಟ್') ನಿಬಂಧನೆಗಳ ಪ್ರಕಾರ, 2017ರ ಜುಲೈ 1 ರಂತೆ ಪ್ಯಾನ್ ಅನ್ನು, ನಿಗದಿಪಡಿಸಿದ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಜತೆಗೆ ಜೋಡಿಸಬೇಕು. ಇದನ್ನು 2023ರ ಮಾರ್ಚ್ 31ರ ಒಳಗೆ ನಿಗದಿತ ಶುಲ್ಕ ಪಾವತಿಸಿ ಮಾಡಬೇಕು. ಹಾಗೆ ಮಾಡಲು ವಿಫಲವಾದರೆ ಕಾಯಿದೆಯ ಪ್ರಕಾರ 2023ರ ಏಪ್ರಿಲ್ 1 ರಿಂದ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಗಡುವನ್ನು ಅಂದರೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಉದ್ದೇಶದ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ" ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ| ಆಧಾರ್-ಪ್ಯಾನ್ ಲಿಂಕ್ ಮಾಡದಿದ್ರೆ ಏನಾಗುತ್ತೆ?
ನಿಶ್ಚಿತ ಗಡುವಿನೊಳಗೆ ಪ್ಯಾನ್- ಆಧಾರ್ ಲಿಂಕ್ ಮಾಡದೇ ಇದ್ದರೆ…
ಪ್ಯಾನ್- ಆಧಾರ್ ಲಿಂಕ್ ಮಾಡುವುದಕ್ಕೆ ಈಗ ಗಡುವು ವಿಸ್ತರಿಸಲಾಗಿದ್ದು, ಜೂನ್ 30ರ ಒಳಗೆ ಅದನ್ನು ಪೂರೈಸಬೇಕಾಗಿದೆ. ಇದನ್ನು ಮಾಡಲು ವಿಫಲರಾದವರ ಪ್ಯಾನ್ 2023ರ ಜುಲೈ 1ರಿಂದ ನಿಷ್ಕ್ರಿಯವಾಗಲಿದೆ. ಇದರ ಪರಿಣಾಮ ಏನು?
1) ನಿಷ್ಕ್ರಿಯವಾಗಿರುವ ಪ್ಯಾನ್ ಜೋಡಿತ ಬ್ಯಾಂಕ್ ಖಾತೆಗಳಿಗೆ ರೀಫಂಡ್ ಸಿಗದು.
2) PAN ನಿಷ್ಕ್ರಿಯವಾಗಿರುವ ಸಮಯದಲ್ಲಿ ಅಂತಹ ಮರುಪಾವತಿಗೆ ಯಾವುದೇ ಬಡ್ಡಿಯನ್ನು ಸರ್ಕಾರವು ಪಾವತಿಸಲ್ಲ; ಮತ್ತು
3) ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದಂತೆ TDS ಮತ್ತು TCS ಅನ್ನು ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ/ಸಂಗ್ರಹಿಸಲಾಗುತ್ತದೆ.
ನಿಷ್ಕ್ರಿಯ ಪ್ಯಾನ್ ಅನ್ನು 1,000 ರೂಪಾಯಿ ಶುಲ್ಕ ಪಾವತಿಸಿದ ನಂತರ ನಿಗದಿತ ಪ್ರಾಧಿಕಾರಕ್ಕೆ ತಿಳಿಸಿ, ಆಧಾರ್ ಜೋಡಿಸಿದ ಬಳಿಕ 30 ದಿನಗಳಲ್ಲಿ ಮತ್ತೆ ಕಾರ್ಯಗತಗೊಳಿಸಬಹುದಾಗಿದೆ.
ಆಧಾರ್-ಪ್ಯಾನ್ ಲಿಂಕ್ ಮಾಡುವುದಕ್ಕೆ ಈ ಮೊದಲು ಇದೇ ಮಾರ್ಚ್ 31 ಕೊನೇ ದಿನವಾಗಿತ್ತು. ಕಳೆದ ವರ್ಷ ಮಾರ್ಚ್ 31ರ ತನಕ ಉಚಿತವಾಗಿತ್ತು. ಅಲ್ಲಿಂದೀಚೆಗೆ 1,000 ರೂಪಾಯಿ ಶುಲ್ಕ ಪಾವತಿಸಬೇಕೆಂಬ ನಿಯಮ ಚಾಲ್ತಿಯಲ್ಲಿದೆ. ಕಳೆದ ವರ್ಷ ಏಪ್ರಿಲ್ 1 ರಿಂದ, 500 ರೂಪಾಯಿ ಶುಲ್ಕ ವಿಧಿಸಲಾಗಿತ್ತು ಮತ್ತು ನಂತರ ಜುಲೈ 1 ರಿಂದ 1,000 ರೂಪಾಯಿ ಶುಲ್ಕ ಚಾಲ್ತಿಯಲ್ಲಿದೆ.
ವೋಟರ್ ಐಡಿ- ಆಧಾರ್ ಸಂಖ್ಯೆ ಜೋಡಣೆಗೆ ಡೆಡ್‌ಲೈನ್ ವಿಸ್ತರಣೆ
ವೋಟರ್ ಐಡಿ ಮತ್ತು ಆಧಾರ್ ಜೋಡಿಸುವುದಕ್ಕೆ ಇದ್ದ ಅಂತಿಮ ಗಡುವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಂತೆ, ಈ ವರ್ಷ ಏಪ್ರಿಲ್ 1ಕ್ಕೆ ಇದ್ದ ಕೊನೇ ದಿನ 2024ರ ಮಾರ್ಚ್ 31ರ ತನಕ ವಿಸ್ತರಣೆ ಆಗಿದೆ. ಮತದಾರರು ಈ ಅವಧಿಯನ್ನು ಸದುಪಯೋಗ ಮಾಡಿಕೊಂಡು ತಮ್ಮ ಮತದಾರರ ಚೀಟಿ ಮತ್ತು ಆಧಾರ್ ಜೋಡಿಸುವ ಕೆಲಸವನ್ನು ಮಾಡಬೇಕು ಎಂದು ಸರ್ಕಾರ ಕೇಳಿಕೊಂಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ