Girl Friend Mummy: ನನ್ನ ಗರ್ಲ್‌ಫ್ರೆಂಡ್ ಅಂತಾ ಬ್ಯಾಗ್‌ನಲ್ಲಿ 800 ವರ್ಷಗಳಷ್ಟು ಹಳೆಯ ಮಮ್ಮಿ ಇಟ್ಕೊಂಡು ಓಡಾಡ್ತಿದ್ದ ಆಸಾಮಿ ಅರೆಸ್ಟ್!
Mar 01, 2023 08:44 AM IST
ಸಂರಕ್ಷಿತ ಮಮ್ಮಿ
- ಪೆರುವಿನಲ್ಲಿ ವ್ಯಕ್ತೊಯೋರ್ವ ಕಳೆದ ಮೂವತ್ತು ವರ್ಷಗಳಿಂದ ಸುಮಾರು 800 ವರ್ಷಗಳಷ್ಟು ಹಳೆಯದಾದ ಮಮ್ಮಿಯನ್ನು ಬಚ್ಚಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಮಮ್ಮಿಯನ್ನು ಬಂಧಿತ ವ್ಯಕ್ತಿ ತನ್ನ ಗರ್ಲ್‌ಫ್ರೆಂಡ್ ಎಂದು ತಿಳಿದಿದ್ದ ಎಂದು ವಿಚಾರಣೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಲಿಮಾ: ಪೆರುವಿನಲ್ಲಿ ಪೋಲಿಸರು 600 ರಿಂದ 800 ವರ್ಷಗಳ ನಡುವಿನ ರಕ್ಷಿತ ಮಮ್ಮಿಯೊಂದನ್ನು ರಕ್ಷಿಸಿದ್ದು, ಕಳೆದ ಮೂರು ದಶಕಗಳಿಂದ ಈ ಮಮ್ಮಿಯನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಫುಡ್ ಡೆಲಿವರಿ ವ್ಯಕ್ತೊಯೋರ್ವನನ್ನು ಬಂಧಿಸಿದ್ದಾರೆ. ಈ ಮಮ್ಮಿಯನ್ನು ಬಂಧಿತ ವ್ಯಕ್ತಿ ಆಹಾರವನ್ನು ವಿತರಿಸಲು ಬಳಸುತ್ತುದ್ದ ಐಸೊಥರ್ಮಲ್ ಬ್ಯಾಗ್‌ನಲ್ಲಿ ಸಂರಕ್ಷಿಸಿ ಇಟ್ಡಿದ್ದ ಎನ್ನಲಾಗಿದೆ.
ಪೆರುವಿನ 26 ವರ್ಷದ ಜೂಲಿಯೊ ಸೀಸರ್ ಬರ್ಮೆಜೊ ಬಂಧಿತ ವ್ಯಕ್ತಿಯಾಗಿದ್ದು, ಈ ಮಮ್ಮಿಗೆ ಆತ "ಜುವಾನಿಟಾ" ಎಂದು ಹೆಸರಿಟ್ಟಿದ್ದಲ್ಲೇ, ಅದನ್ನು ತನ್ನ "ಆಧ್ಯಾತ್ಮಿಕ ಗೆಳತಿ" ಎಂದು ಕರೆದಿದ್ದಾನೆ. ಜುವಾನಿಟಾ ನನ್ನ ಜೊತೆ ನನ್ನ ಮನೆಯಲ್ಲೇ ಇರುತ್ತಾಳೆ. ನಾನು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ. ಆಕೆ ನನ್ನ ಜೊತೆಯೇ ಮಲಗುತ್ತಾಳೆ ಎಂದು ಬರ್ಮೆಜೊ ತನಿಖೆ ವೇಳೆ ಪೊಲೀಸರಿಗೆ ಹೇಳಿದ್ದಾನೆ.
ಸುಮಾರು 30 ವರ್ಷಗಳ ಹಿಂದೆ ಬರ್ಮೆಜೊ ತಂದೆ ಈ ಮಮ್ಮಿಯನ್ನು ಮನೆಗೆ ತಂದಿದ್ದರು. ಅಂದಿನಿಂದ ಈ ಮಮ್ಮಿ ಜೊತೆ ಅನೋನ್ಯ ಸಂಬಂಧ ಹೊಂದಿರುವ ಬರ್ಮೆಜೊ, ಸರ್ಕಾರ ಇದನ್ನು ವಶಪಡಿಸಿಕೊಳ್ಳಬಹುದು ಎಂಬ ಭಯದಿಂದ, ಮೂರು ದಶಕಗಳಿಂದ ಅದನ್ನು ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಮ್ಮಿಯೊಂದಿಗೆ ಬರ್ಮೆಜೊ ವಿಚಿತ್ರವಾದ ಅನುಬಂಧವನ್ನು ಹೊಂದಿದ್ದಾನೆ. ಅದನ್ನು ಆತ ತನ್ನ ಆಧಾತ್ಮಿಕ ಗೆಳತಿ ಎಂದು ತಿಳಿದಿದ್ದಾನೆ. ಅಲ್ಲದೇ ನಿತ್ಯವೂ ಈ ಮಮ್ಮಿ ಜೊತೆಗೆ ಆತ ಮಲಗುತ್ತಾನೆ. ಬರ್ಮೆಜೊ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿರುವ ಸಾಧ್ಯತೆಯೂ ಇದೆ ಎಂದು ವಿಚಾರಣೆ ನಡೆಸುತ್ತಿರುವ ಪೊಲೀಸರು ಅಂದಾಜಿಸಿದ್ದಾರೆ.
ಸಂಸ್ಕೃತಿ ಸಚಿವಾಲಯದ ಪ್ರಕಾರ, ಹಿಸ್ಪಾನಿಕ್ ಪೂರ್ವದ ಅವಶೇಷವು ರಕ್ಷಿತ ಮಮ್ಮಿಯು ವಯಸ್ಕ ಪುರುಷ ವ್ಯಕ್ತಿಯದ್ದಾಗಿದ್ದು, ಬಹುಶಃ ಪುನೋದ ಪೂರ್ವ ಪ್ರದೇಶದಲ್ಲಿ ಪತ್ತೆಯಾಗಿದೆ. ಲಿಮಾದಿಂದ ಆಗ್ನೇಯಕ್ಕೆ ಸುಮಾರು 1,300 ಕಿಲೋಮೀಟರ್ ದೂರದಲ್ಲಿರುವ, ಪೆರುವಿಯನ್ ಆಂಡಿಸ್‌ನಲ್ಲಿ ಪುನೋ ಪ್ರದೇಶ ಬರುತ್ತದೆ.
"ಇದು ಜುವಾನಿಟಾ ಅಲ್ಲ, ಇದು ಜುವಾನ್" ಎಂದು ಸಂಸ್ಕೃತಿ ಸಚಿವಾಲಯದ ತಜ್ಞರು ದೃಢಪಡಿಸಿದ್ದು, ಮಮ್ಮಿ ಕನಿಷ್ಠ 45 ವರ್ಷ ವಯಸ್ಸಿನ ವ್ಯಕ್ತಿಯದ್ದಾಗಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಈ ಮಮ್ಮಿ ಸುಮಾರು 800 ವರ್ಷಗಳಷ್ಟು ಹಳೆಯದು ಎಂದು ಪುರಾತತ್ವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಶನಿವಾರದಂದು ಪುನೊ ನಗರದ ಉದ್ಯಾನವನದಲ್ಲಿ ಗಸ್ತು ತಿರುಗುತ್ತಿದ್ದಾಗ, ಬರ್ಮೆಜೊ ಅವರ ಬ್ಯಾಗ್‌ನಲ್ಲಿ ಪೊಲೀಸರು ಅವಶೇಷಗಳನ್ನು ಪತ್ತೆ ಮಾಡಿದ್ದರು. ಕೂಡಲೇ ಬರ್ಮೆಜೊನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಆತನ ಬಳಿ 800 ವರ್ಷಗಳಷ್ಟು ಹಳೆಯ ಮಮ್ಮಿ ಇರುವುದನ್ನು ಗುರುತಿಸಿದರು.
ಆರಂಭದಲ್ಲಿ ಬರ್ಮೆಜೊ ಈ ಮಮ್ಮಿಯನ್ನು ಮಾರಾಟ ಮಾಡಲು ಮುಂದಾಗಿದ್ದ ಎಂದು ಪೊಲೀಸರು ತಿಳಿದ್ದರಾದರೂ, ವಿಚಾರಣೆ ಬಳಿಕ
ಅದನ್ನು ಆತ ಕೇವಲ ತನ್ನ ಸ್ನೇಹಿತರಿಗೆ ತೋರಿಸಲು ತಂದಿದ್ದ ಎಂಬುದು ದೃಢಪಟ್ಟಿದೆ. ಸದ್ಯ ಪೆರುವಿನ ಸಂಸ್ಕೃತಿ ಸಚಿವಾಲಯವು ಈ ಮಮ್ಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಪೊಲೀಸರು ಬರ್ಮೆಜೊನ ವಿಚಾರಣೆಯನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಪೆರು ಪುರಾತತ್ತ್ವಶಾಸ್ತ್ರದ ಸ್ಥಳಗಳು ಮತ್ತು ವಸ್ತುಗಳಿಂದ ಸಮೃದ್ಧವಾಗಿದೆ. ಕುಸ್ಕೋ ಬಳಿ 15ನೇ ಶತಮಾನದಲ್ಲಿ ನಿರ್ಮಿಸಲಾದ ಮಾಚು ಪಿಚುದ ಇಂಕಾ ಸಿಟಾಡೆಲ್ ವಿಶ್ವದ ಮೂಲೆ ಮೂಲೆಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುಯತ್ತಿದೆ.
ಸಂಬಂಧಿತ ಸುದ್ದಿ
Golden Tongue Mummy: ಚಿನ್ನದ ನಾಲಿಗೆಯ ಮಮ್ಮಿ ಪತ್ತೆ: ಈಜಿಪ್ಟ್ ರಹಸ್ಯಗಳನ್ನು ಕೇಳಿ ತಲೆ ತಿರುಗುತ್ತೆ..!
ಈಜಿಪ್ಟ್‌ನಲ್ಲಿ ಮಮ್ಮಿಗಳು ಪತ್ತೆಯಾಗುವುದು ಸರ್ವೇಸಾಮಾನ್ಯವಾದ ವಿಚಾರ. ಈಜಿಪ್ಟ್ ನೆಲವನ್ನು ಅಗೆದಷ್ಟೂ ಪ್ರಾಚೀನ ಮಮ್ಮಿಗಳು ಸಿಗುತ್ತಲೇ ಇರುತ್ತವೆ. ಇತ್ತೀಚಿನ ಅಧ್ಯಯನದಲ್ಲೂ ವಿಶಿಷ್ಟ ಮಮ್ಮಿಗಳು ಪತ್ತೆಯಾಗಿದ್ದು, ಪತ್ತೆಯಾಗಿರುವ ಎಲ್ಲಾ ಮಮ್ಮಿಗಳು ಚಿನ್ನದ ನಾಲಿಗೆಯನ್ನು ಹೊಂದಿವೆ ಎಂದು ವರದಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ