logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Stocks To Buy Or Sell: ಈ ದಿನ ಖರೀದಿಗೆ ಲಾಭದಾಯಕವೆನಿಸುವ 5 ಷೇರುಗಳಿವು; ಚಾಯ್ಸ್ ಬ್ರೋಕಿಂಗ್‌ನ ಸುಮೀತ್ ಬಗಾಡಿಯಾ ಶಿಫಾರಸು

Stocks to buy or sell: ಈ ದಿನ ಖರೀದಿಗೆ ಲಾಭದಾಯಕವೆನಿಸುವ 5 ಷೇರುಗಳಿವು; ಚಾಯ್ಸ್ ಬ್ರೋಕಿಂಗ್‌ನ ಸುಮೀತ್ ಬಗಾಡಿಯಾ ಶಿಫಾರಸು

Umesh Kumar S HT Kannada

Jul 31, 2024 09:54 AM IST

google News

ಇಂದು ಷೇರು ಮಾರುಕಟ್ಟೆ: ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅವರು ಇಂದು ಐದು ಬ್ರೇಕ್‌ಔಟ್ ಷೇರುಗಳನ್ನು ಖರೀದಿಸಲು ಸೂಚಿಸಿದ್ದಾರೆ.

  • 5 Breakout Stocks Today: ಷೇರುಪೇಟೆಯಲ್ಲಿ ಈ ದಿನ ಖರೀದಿಗೆ ಲಾಭದಾಯಕವೆನಿಸುವ 5 ಷೇರುಗಳಿವು. ಇಂಡೋ ಬೋರಾಕ್ಸ್ & ಕೆಮಿಕಲ್ಸ್, ಪುದುಂಜಿ ಪೇಪರ್ ಪ್ರಾಡಕ್ಟ್ಸ್, ಡಿಸಿಎಕ್ಸ್ ಸಿಸ್ಟಮ್ಸ್, ಪಿಒಸಿಎಲ್ ಎಂಟರ್‌ಪ್ರೈಸಸ್‌ ಮತ್ತು ರಾಣೆ ಹೋಲ್ಡಿಂಗ್ಸ್ ಷೇರುಗಳನ್ನು ಖರೀದಿಸಬಹುದು ಎಂದು ಚಾಯ್ಸ್ ಬ್ರೋಕಿಂಗ್‌ನ ಸುಮೀತ್ ಬಗಾಡಿಯಾ ಶಿಫಾರಸು ಮಾಡಿದ್ದಾರೆ. ವಿವರ ಇಲ್ಲಿದೆ.

ಇಂದು ಷೇರು ಮಾರುಕಟ್ಟೆ: ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅವರು ಇಂದು ಐದು ಬ್ರೇಕ್‌ಔಟ್ ಷೇರುಗಳನ್ನು ಖರೀದಿಸಲು ಸೂಚಿಸಿದ್ದಾರೆ.
ಇಂದು ಷೇರು ಮಾರುಕಟ್ಟೆ: ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅವರು ಇಂದು ಐದು ಬ್ರೇಕ್‌ಔಟ್ ಷೇರುಗಳನ್ನು ಖರೀದಿಸಲು ಸೂಚಿಸಿದ್ದಾರೆ. (Live Mint/ Canva)

ನವದೆಹಲಿ/ ಮುಂಬಯಿ: ಜಾಗತಿಕವಾಗಿ ಸಕಾರಾತ್ಮಕ ಮಾರುಕಟ್ಟೆ ವಿದ್ಯಮಾನಗಳಿದ್ದು, ಭಾರತೀಯ ಷೇರುಪೇಟೆ ಇಂದು (ಜುಲೈ 31) ಏರಿಕೆಯೊಂದಿಗೆ ವಹಿವಾಟು ಶುರುಮಾಡುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಖರೀದಿ ಅಥವಾ ಮಾರಾಟದ ಷೇರುಗಳ (Stocks to buy or sell) ವಿಚಾರ ಗಮನಿಸುವುದು ಸಹಜ. ಷೇರುಪೇಟೆಯ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಹಿಂದಿನ ಸೆಷನ್‌ನಲ್ಲಿ ದಿನದ ವಹಿವಾಟಿನ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಸ್ವಲ್ಪ ಇಳಿಕೆ ದಾಖಲಿಸಿದ್ದವು.

ಅಂದರೆ, ಮಂಗಳವಾರ (ಜುಲೈ 30)ದ ವಹಿವಾಟಿನ ಕೊನೆಗೆ ಬಿಎಸ್‌ಇ ಸೆನ್ಸೆಕ್ಸ್ 34.74 ಪಾಯಿಂಟ್ ಅಥವಾ 0.04% ನಷ್ಟು ಕುಸಿದು 79,441.45 ಕ್ಕೆ ಕೊನೆಗೊಂಡರೆ, ಎನ್‌ಎಸ್‌ಇ ನಿಫ್ಟಿ50 ಸೂಚ್ಯಂಕವು 18.10 ಪಾಯಿಂಟ್ ಅಥವಾ 0.07% ಕುಸಿದು 24,123.85 ಕ್ಕೆ ತಲುಪಿದೆ.

ನಿಫ್ಟಿ50 ಸೂಚ್ಯಂಕವು 24,000 ರಿಂದ 24,250 ಶ್ರೇಣಿಯಲ್ಲಿ ಇರುವುದರಿಂದ ಮಾರುಕಟ್ಟೆಯು ಅಸ್ಥಿರವಾಗಿರಬಹುದು. ನಿಫ್ಟಿ50 ಸೂಚ್ಯಂಕವು 24,200 ಮಟ್ಟಕ್ಕಿಂತ ಮೇಲಿದ್ದರೆ, ಅದು 24,500 ಮತ್ತು 24,600 ಮಟ್ಟಗಳ ತನಕ ಏರಬಹುದು. ಇದಕ್ಕೆ ವಿರುದ್ಧವಾಗಿ, 24,000 ಮತ್ತು 23,800 ಮಟ್ಟಗಳು ತಕ್ಷಣದ ಬೆಂಬಲವಾಗಿ ಕಾರ್ಯನಿರ್ವಹಿಸುತ್ತವೆ ಎಂದು ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ.

ಈ ದಿನದ ಖರೀದಿಗೆ ಲಾಭದಾಯಕ ಷೇರುಗಳು (Breakout Stocks)

ಷೇರು ಮಾರುಕಟ್ಟೆ ಪಕ್ಕಕ್ಕೆ ಉಳಿದಿದ್ದರೂ, ಕೆಲವು ಷೇರುಗಳು ತಮ್ಮ ತಾಂತ್ರಿಕ ಚಾರ್ಟ್‌ಗಳಲ್ಲಿ ಯೋಗ್ಯವಾದ ಬ್ರೇಕ್ ಔಟ್ ಅನ್ನು ತೋರಿಸಿವೆ. ಈ ಬೆಲೆ ಏರಿಕೆಯನ್ನು ಯೋಗ್ಯ ಲಾಭದ ಖರೀದಿ ಅವಕಾಶವಾಗಿ ಬಳಸಬಹುದು.

ಚಾಯ್ಸ್ ಬ್ರೋಕಿಂಗ್ ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅವರು ಈ ರೀತಿಯ ಐದು ಬ್ರೇಕ್ಔಟ್ ಸ್ಟಾಕ್‌ಗಳನ್ನು ಗುರುತಿಸಿದ್ದು, ಅವುಗಳನ್ನು ಖರೀದಿಸಬಹುದು ಎಂಬ ಸಲಹೆಯನ್ನು ನೀಡಿದ್ದಾರೆ. ಅವರು ಮಂಗಳವಾರ ಬ್ರೇಕ್‌ಔಟ್ ತೋರಿಸಿದ ಐದು ಷೇರುಗಳನ್ನು ತೋರಿಸಿದ್ದು, ಮೌಲ್ಯ ಕುಸಿದಿರುವ ಕಾರಣ ಇದು ಖರೀದಿಸಬಹುದಾದ ಷೇರುಗಳು ಎಂದಿದ್ದಾರೆ.

ಇಂಡೋ ಬೋರಾಕ್ಸ್ & ಕೆಮಿಕಲ್ಸ್, ಪುದುಂಜಿ ಪೇಪರ್ ಪ್ರಾಡಕ್ಟ್ಸ್, ಡಿಸಿಎಕ್ಸ್ ಸಿಸ್ಟಮ್ಸ್, ಪಿಒಸಿಎಲ್ ಎಂಟರ್‌ಪ್ರೈಸಸ್‌ ಮತ್ತು ರಾಣೆ ಹೋಲ್ಡಿಂಗ್ಸ್ ಎಂಬ 5 ಷೇರುಗಳನ್ನು ಖರೀದಿಸಲು ಸುಮೀತ್ ಬಗಾಡಿಯಾ ಶಿಫಾರಸು ಮಾಡಿದ್ದಾರೆ.

ಬ್ರೇಕ್ಔಟ್ ಷೇರುಗಳು (Breakout Stocks) ಎಂದರೇನು?: ಷೇರುಗಳು ​​ತಮ್ಮ ಬೆಂಬಲ ಅಥವಾ ಪ್ರತಿರೋಧದ ಮಟ್ಟವನ್ನು ಮೀರಿ ಚಲಿಸುವ ವಿದ್ಯಮಾನಕ್ಕೆ ಬ್ರೇಕ್‌ಔಟ್ ಎನ್ನುತ್ತಾರೆ. ಇಂತಹ ಷೇರುಗಳನ್ನು ಬ್ರೇಕ್‌ಔಟ್ ಷೇರುಗಳು ಎನ್ನುತ್ತಾರೆ. ತಾಂತ್ರಿಕ ವಿಶ್ಲೇಷಣೆಯಲ್ಲಿ ಪ್ರಮುಖ ಪರಿಕಲ್ಪನೆ ಇದಾಗಿದ್ದು, ಬ್ರೇಕ್‌ಔಟ್‌ಗಳು ಷೇರು ಮೌಲ್ಯದ ಮಹತ್ವದ ಚಲನೆಯನ್ನು ಸೂಚಿಸುತ್ತವೆ.

ಇಂದು ಖರೀದಿಸಬಹುದಾದ ಷೇರುಗಳು

1] ಇಂಡೋ ಬೋರಾಕ್ಸ್ & ಕೆಮಿಕಲ್ಸ್ | 202.25 ರೂಪಾಯಿಗೆ ಖರೀದಿ | ಏರಿಕೆ ಗುರಿ: 215 ರೂಪಾಯಿ | ನಷ್ಟತಡೆ ಮಟ್ಟ 195 ರೂಪಾಯಿ

2] ಪುದುಂಜಿ ಪೇಪರ್ ಪ್ರಾಡಕ್ಟ್ಸ್ | 132.35 ರೂ.ಗೆ ಖರೀದಿ | ಏರಿಕೆ ಗುರಿ: 139 ರೂ.| ನಷ್ಟತಡೆ ಮಟ್ಟ: 128 ರೂ.

3] ಡಿಸಿಎಕ್ಸ್ ಸಿಸ್ಟಮ್ಸ್ | 430.15 ರೂ.ಗೆ ಖರೀದಿ | ಏರಿಕೆ ಗುರಿ: 450 ರೂ. | ನಷ್ಟತಡೆ ಮಟ್ಟ: 415 ರೂ.

4] ಪಿಒಸಿಎಲ್ ಎಂಟರ್ಪ್ರೈಸಸ್ | 952.75 ರೂ.ಗೆ ಖರೀದಿ | ಏರಿಕೆ ಗುರಿ: 1,000 ರೂ. | ನಷ್ಟತಡೆ ಮಟ್ಟ: 915 ರೂ.

5] ರಾಣೆ ಹೋಲ್ಡಿಂಗ್ಸ್ | 1,810.75 ರೂ.ಗೆ ಖರೀದಿ | ಏರಿಕೆ ಗುರಿ: 1,900 ರೂ.| ನಷ್ಟತಡೆ ಮಟ್ಟ: 1,745 ರೂ

3 ಷೇರುಗಳನ್ನು ಇಂಟ್ರಾಡೇಗೆ ಗಮನಿಸಿ; ಪಿಎಲ್‌ಟಿ‌ಆರ್‌ ಉಪಾಧ್ಯಕ್ಷೆ ವೈಶಾಲಿ ಪರೇಖ್‌ ಸಲಹೆ

ಮಿಶ್ರ ಜಾಗತಿಕ ವಿದ್ಯಮಾನಗಳ ನಡುವೆ ಹೂಡಿಕೆದಾರರು ಲಾಭದ ಮೇಲೆ ಮಾರಾಟವನ್ನು ಮುಂದುವರೆಸಿದ ಕಾರಣ ದೇಶೀಯ ಷೇರು ಸೂಚ್ಯಂಕಗಳಾದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಹಿಂದಿನ ಸೆಷನ್‌ನಲ್ಲಿ ಸ್ಥಿರವಾದವು. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಟಾಟಾ ಮೋಟಾರ್ಸ್‌ನಲ್ಲಿನ ಮೌಲ್ಯ-ಖರೀದಿಯಂತೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಏತನ್ಮಧ್ಯೆ, ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ವಿಭಾಗಗಳು ತಮ್ಮ ಹೆಚ್ಚಿನ ಮೌಲ್ಯಮಾಪನಗಳ ಬಗ್ಗೆ ಕಳವಳಗಳ ಹೊರತಾಗಿಯೂ ಬೆಂಚ್‌ಮಾರ್ಕ್‌ಗಳನ್ನು ಮೀರಿಸುವುದನ್ನು ಮುಂದುವರೆಸಿರುವುದನ್ನು ಗಮನಿಸಬಹುದು ಎಂದು ಪ್ರಭುದಾಸ್ ಲೀಲಾಧರ್ ಟೆಕ್ನಿಕಲ್ ರೀಸರ್ಚ್‌ನ ಉಪಾಧ್ಯಕ್ಷರಾಗಿರುವ ವೈಶಾಲಿ ಪರೇಖ್‌ ವಿವರಿಸಿದ್ದಾರೆ.

ಹೂಡಿಕೆದಾರರು ಖರೀದಿಸಬಹುದಾದ ಷೇರುಗಳಿಗೆ ಸಂಬಂಧಿಸಿದಂತೆ, ವೈಶಾಲಿ ಪರೇಖ್ ಅವರು ಇಂದಿನ ಮೂರು ಇಂಟ್ರಾಡೇ ಸ್ಟಾಕ್‌ಗಳನ್ನು (ಜಿಎನ್‌ಎಫ್‌ಸಿ, ಜೆಎಸ್‌ಡಬ್ಲ್ಯು ಎನರ್ಜಿ ಮತ್ತು ಟಾಟಾ ಸ್ಟೀಲ್) ಶಿಫಾರಸು ಮಾಡಿದ್ದಾರೆ.

ಗಮನಿಸಿ: ಮೇಲಿರುವ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವಿಶ್ಲೇಷಕರು ಅಥವಾ ಬ್ರೋಕಿಂಗ್ ಕಂಪನಿಗಳ ವೈಯಕ್ತಿಕವಾಗಿದ್ದು, ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್ ತಾಣದ್ದಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ಮಾಡುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಪರಿಶೀಲಿಸಬೇಕು ಎಂದು ನಾವು ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ