logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tax Heaven: ಅತಿಧನಿಕರ ಟ್ಯಾಕ್ಸ್‌ಹೆವನ್‌ ಸಿಂಗಾಪುರ; 1.6 ಲಕ್ಷ ಕೋಟಿ ಡಾಲರ್‌ನಿಂದ 5.4 ಲಕ್ಷ ಕೋಟಿ ಡಾಲರ್‌ಗೆ ಏರಿಕೆ- ಭಾರತೀಯರದ್ದೆಷ್ಟು?

Tax heaven: ಅತಿಧನಿಕರ ಟ್ಯಾಕ್ಸ್‌ಹೆವನ್‌ ಸಿಂಗಾಪುರ; 1.6 ಲಕ್ಷ ಕೋಟಿ ಡಾಲರ್‌ನಿಂದ 5.4 ಲಕ್ಷ ಕೋಟಿ ಡಾಲರ್‌ಗೆ ಏರಿಕೆ- ಭಾರತೀಯರದ್ದೆಷ್ಟು?

HT Kannada Desk HT Kannada

Feb 07, 2023 11:58 AM IST

ಸಾಂಕೇತಿಕ ಚಿತ್ರ

  • Tax heaven: ಹತ್ತೇ ಹತ್ತು ವರ್ಷ. 2012ರಿಂದ 2021ರ ಅವಧಿ. ಸಿಂಗಾಪುರದ ಸಂಪತ್ತು ನಿರ್ವಹಣೆಯಲ್ಲಿ ಅಗಾಧ ಬೆಳವಣಿಗೆ. 2012ರಲ್ಲಿ 1.6 ಲಕ್ಷ ಕೋಟಿ ಸಿಂಗಾಪುರ ಡಾಲರ್‌ ( 99.74 ಲಕ್ಷ ಕೋಟಿ ರೂಪಾಯಿ) ಇದ್ದದ್ದು 2021ರ ವೇಳೆಗೆ 5.4 ಲಕ್ಷ ಕೋಟಿ ಸಿಂಗಾಪುರ ಡಾಲರ್‌ (336.64 ಲಕ್ಷ ಕೋಟಿ ರೂಪಾಯಿ) ಆಗಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (unsplash)

ಅತಿಧನಿಕರ ಪಾಲಿಗೆ ಸಿಂಗಾಪುರ ಈಗ ಹೊಸ ಟ್ಯಾಕ್ಸ್‌ಹೆವನ್‌. ಹೇಗೆ ಅಂತೀರಾ? ಇದೊಂದು ವರದಿ ಗಮನಿಸಿ. ಹತ್ತೇ ಹತ್ತು ವರ್ಷ. 2012ರಿಂದ 2021ರ ಅವಧಿ. ಸಿಂಗಾಪುರದ ಸಂಪತ್ತು ನಿರ್ವಹಣೆಯಲ್ಲಿ ಅಗಾಧ ಬೆಳವಣಿಗೆ. 2012ರಲ್ಲಿ 1.6 ಲಕ್ಷ ಕೋಟಿ ಸಿಂಗಾಪುರ ಡಾಲರ್‌ ( 99.74 ಲಕ್ಷ ಕೋಟಿ ರೂಪಾಯಿ) ಇದ್ದದ್ದು 2021ರ ವೇಳೆಗೆ 5.4 ಲಕ್ಷ ಕೋಟಿ ಸಿಂಗಾಪುರ ಡಾಲರ್‌ (336.64 ಲಕ್ಷ ಕೋಟಿ ರೂಪಾಯಿ) ಆಗಿದೆ.

ಟ್ರೆಂಡಿಂಗ್​ ಸುದ್ದಿ

ಪೂರ್ವದವರು ಚೀನೀಯರಂತೆ: ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ ವಿವಾದ, ಕಾಂಗ್ರೆಸ್ ನಾಯಕನ 5 ಹಳೆಯ ವಿವಾದಗಳಿವು

Gold Rate Today: ತಾಪಮಾನ ಏರಿಕೆಯಂತೆ ಹೆಚ್ಚುತ್ತಿದೆ ಚಿನ್ನ, ಬೆಳ್ಳಿ ದರ; ಇಂದು ಬೆಳ್ಳಿ ಕೆಜಿಗೆ 1500ರೂ ಹೆಚ್ಚಳ

Haryana politics: ಹರಿಯಾಣದಲ್ಲಿ ಮೂವರು ಪಕ್ಷೇತರ ಶಾಸಕರ ಬೆಂಬಲ ವಾಪಾಸ್‌, ಬಿಜೆಪಿ ಸರ್ಕಾರಕ್ಕೆ ಸಂಕಷ್ಟ, ಸದಸ್ಯ ಬಲ ಎಷ್ಟಿದೆ

ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

ಇದು ಸಿಂಗಾಪುರದ ಸೆಂಟ್ರಲ್‌ ಬ್ಯಾಂಕ್‌, ಮಾನಿಟರಿ ಅಥಾರಿಟಿ ಆಫ್‌ ಸಿಂಗಾಪುರದ ದತ್ತಾಂಶಗಳಲ್ಲಿ ಪ್ರಕಟವಾಗಿರುವ ವಿವರ.

ಎಎನ್‌ಐನ ಲೀ ಕಾಹ್‌ ವ್ಹೈ ಅವರ ವರದಿ ಪ್ರಕಾರ, ಸಿಂಗಾಪುರವು ಇತ್ತೀಚಿನ ವರ್ಷಗಳಲ್ಲಿ ಸಂಪತ್ತು ನಿರ್ವಹಣಾ ಕೇಂದ್ರವಾಗಿ ಪ್ರಚಂಡ ಬೆಳವಣಿಗೆಯನ್ನು ಕಂಡಿದೆ. ದೇಶವು ಕೋವಿಡ್‌ ನಿರ್ಬಂಧಗಳನ್ನು ಸರಾಗಗೊಳಿಸಿದ ನಂತರ, ತೆರಿಗೆ ಸ್ನೇಹಿ ಆಡಳಿತ ಮತ್ತು ತುಲನಾತ್ಮಕವಾಗಿ ಸುರಕ್ಷಿತ ವಾತಾವರಣ ಸೃಷ್ಟಿಸಿದೆ. ಇದು ಶ್ರೀಮಂತ ವಿದೇಶಿಯರ ಗಮನವನ್ನು ಸೆಳೆದಿದೆ. ಅವರು ತಮ್ಮ ಸಂಪತ್ತನ್ನು ಶೇಖರಿಸಿಡಲು ಈ ದೇಶವನ್ನೇ ಆಯ್ಕೆ ಮಾಡತೊಡಗಿರುವುದರ ಫಲ ಇದು.

ಇನ್ನು 2021ರ ಒಂದೇ ವರ್ಷ ಅಂದರೆ ಕಳೆದ ವರ್ಷದ ದತ್ತಾಂಶದ ಪ್ರಕಾರ ಈ ಸಂಪತ್ತು ಶೇಕಡ 16 ಏರಿಕೆಯಾಗಿದೆ. ಇದರಲ್ಲಿ ಮುಕ್ಕಾಲು ಭಾಗ ಸಿಂಗಾಪುರದ ಹೊರಗಿನಿಂದ ಬಂದ ಸಂಪತ್ತು. ಅದರಲ್ಲೂ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳಿಂದ ಕೇವಲ ಮೂರನೇ ಒಂದು ಭಾಗದಷ್ಟು ಕಡಿಮೆ. ವಾಸ್ತವವಾಗಿ, ಕೆಲವರು ಸಿಂಗಾಪುರವನ್ನು ಪೂರ್ವದ ಸ್ವಿಟ್ಜರ್ಲೆಂಡ್ ಎಂದು ಕರೆಯುತ್ತಾರೆ.

ಇತ್ತೀಚೆಗೆ, ಕುಟುಂಬ ಕಚೇರಿ (family office)ಗಳನ್ನು ಸ್ಥಾಪಿಸುವ ಪ್ರವೃತ್ತಿಯು ಬೆಳೆಯುತ್ತಿದೆ ಮತ್ತು ಕೋವಿಡ್‌ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ವೇಗಗೊಂಡಿದೆ. ಸಿಂಗಾಪುರವು ಈ ಮಾರುಕಟ್ಟೆಯ ದೊಡ್ಡ ಭಾಗವನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕುಟುಂಬ ಕಚೇರಿಗಳು ಎಂದರೆ ಅವು, ಸಂಪತ್ತು ಮತ್ತು ಅತಿ ಶ್ರೀಮಂತರ ಹೂಡಿಕೆಗಳನ್ನು ನಿರ್ವಹಿಸಲು ಸ್ಥಾಪಿಸಲಾಗುವ ಖಾಸಗಿ ಕಂಪನಿಗಳಾಗಿವೆ.

ಈ ಕುಟುಂಬ ಕಚೇರಿಗಳನ್ನು ಸಾಮಾನ್ಯವಾಗಿ ಶ್ರೀಮಂತ ಕುಟುಂಬಗಳು ಅಥವಾ ವ್ಯಕ್ತಿಗಳ ಹಣಕಾಸು ಮತ್ತು ಹೂಡಿಕೆ ಅಗತ್ಯಗಳನ್ನು ನಿರ್ವಹಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಹಣಕಾಸಿನ ಪರಿಹಾರ, ಬಜೆಟ್, ವಿಮೆ, ದತ್ತಿ ನೀಡುವಿಕೆ, ಸಂಪತ್ತು ವರ್ಗಾವಣೆ ಮತ್ತು ಉತ್ತರಾಧಿಕಾರ ಯೋಜನೆ ಮತ್ತು ತೆರಿಗೆ ಸೇವೆಗಳನ್ನು ಒದಗಿಸುವುದು ಇವುಗಳ ಕೆಲಸ.

ಕುಟುಂಬದ ಕಚೇರಿಗಳು ಸಾಂಪ್ರದಾಯಿಕ ಸಂಪತ್ತು ನಿರ್ವಹಣೆಯಿಂದ ಭಿನ್ನವಾಗಿರುತ್ತವೆ. ಅವರು ಶ್ರೀಮಂತ ವ್ಯಕ್ತಿ ಅಥವಾ ಕುಟುಂಬದ ಹಣಕಾಸು ಮತ್ತು ಹೂಡಿಕೆಯ ಅಗತ್ಯಗಳನ್ನು ನಿರ್ವಹಿಸುವುದಕ್ಕೆ ಅಗತ್ಯವಾದ ಸಂಪೂರ್ಣ ಪರಿಹಾರವನ್ನು ಒದಗಿಸುತ್ತವೆ.

ಸಿಂಗಾಪುರದಲ್ಲಿ 2020 ರಿಂದ 2021 ರ ನಡುವೆ ಸ್ಥಾಪಿಸಲಾದ ಕುಟುಂಬ ಕಚೇರಿಗಳ ಸಂಖ್ಯೆ 400 ರಿಂದ 700 ಕ್ಕೆ ಏರಿದೆ. ಸದ್ಯಕ್ಕೆ 2022ರ ಯಾವುದೇ ಡೇಟಾ ಲಭ್ಯವಿಲ್ಲ. ಆದರೆ ಈ ಪ್ರವೃತ್ತಿಯು ಬೆಳೆಯುತ್ತಲೇ ಇದೆ ಎಂಬುದನ್ನು ಉಪಾಖ್ಯಾನ ಪುರಾವೆಗಳು ಸೂಚಿಸುತ್ತವೆ.

ಕುಟುಂಬ ಕಚೇರಿಗಳನ್ನು ಸ್ಥಾಪಿಸಲು ಸಹಾಯ ಮಾಡುವ ವಕೀಲ ಚುಂಗ್ ಟಿಂಗ್ ಫೈ ಅವರು 2022ರ ಕೊನೆಯ ಭಾಗದಲ್ಲಿ ರಾಯಿಟರ್ಸ್‌ಗೆ ಹೇಳಿರುವ ಪ್ರಕಾರ, ವಾರಕ್ಕೆ ಒಬ್ಬರು ಈ ಕುಟುಂಬ ಕಚೇರಿ ಸ್ಥಾಪಿಸುವ ವಿಚಾರ ಕೇಳುತ್ತಿದ್ದಾರೆ. ಇದರ ಮೌಲ್ಯ ಕನಿಷ್ಠ 20 ದಶಲಕ್ಷ ಅಮೆರಿಕನ್‌ ಡಾಲರ್‌ ಇದೆ. ಆದರೆ ಈ ವರ್ಷ ಜನವರಿಯಲ್ಲಿ ಹೂಡಿಕೆ ಮಾಡುವುದಕ್ಕೆ ವಾರಕ್ಕೆ ಎರಡು ವಿಚಾರಣೆ ಬಂದಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಕಟವಾಗಿರುವ ಬ್ಲೂಮ್‌ಬರ್ಗ್ ವರದಿ ಪ್ರಕಾರ, 2022 ರ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 10ನೇ ಶ್ರೀಮಂತ ವ್ಯಕ್ತಿ ಭಾರತದ ಶತಕೋಟ್ಯಧಿಪತಿ ಮುಕೇಶ್ ಅಂಬಾನಿ ಸಿಂಗಾಪುರದಲ್ಲಿ ಕುಟುಂಬ ಕಚೇರಿಯನ್ನು ಸ್ಥಾಪಿಸುತ್ತಿದ್ದಾರೆ. ಬಿಲಿಯನೇರ್ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಈ ಕಚೇರಿಯನ್ನು ಸ್ಥಾಪಿಸಲಿದೆ. ಸಿಂಗಾಪುರದಲ್ಲಿ ಕುಟುಂಬ ಕಚೇರಿಯನ್ನು ತೆರೆಯುವುದರಿಂದ ಅಂಬಾನಿ ತಮ್ಮ ಚಿಲ್ಲರೆ ವ್ಯಾಪಾರವನ್ನು ಜಾಗತಿಕವಾಗಿ ಪರಿವರ್ತಿಸುವ ಹೆಚ್ಚಿನ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದು ವಿದೇಶದಲ್ಲಿ ಆಸ್ತಿಯನ್ನು ಖರೀದಿಸಲು ಸಹಾಯ ಮಾಡುತ್ತದೆ.

ಇವರಷ್ಟೆ ಅಲ್ಲ, ಇನ್ನೂ ಹಲವು ಶ್ರೀಮಂತ ಉದ್ಯಮಿಗಳು ಇದೇ ಕೆಲಸ ಮಾಡುತ್ತಿವೆ. ಬ್ರಿಟನ್‌, ಚೀನಾ, ಮಲೇಷ್ಯಾ, ಜಪಾನ್‌ನ ಉದ್ಯಮಿಗಳೂ ಇದನ್ನೆ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು