logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Whatsapp Tips: ಸಂದೇಶ ಕಳುಹಿಸಿದವರಿಗೆ ಗೊತ್ತಾಗದಂತೆ ವಾಟ್ಸಪ್‌ ಮೆಸೇಜ್‌ ಓದುವುದು ಹೇಗೆ? ಈ ಮೂರು ವಿಧಾನ ಟ್ರೈ ಮಾಡಿ ನೋಡಿ

WhatsApp Tips: ಸಂದೇಶ ಕಳುಹಿಸಿದವರಿಗೆ ಗೊತ್ತಾಗದಂತೆ ವಾಟ್ಸಪ್‌ ಮೆಸೇಜ್‌ ಓದುವುದು ಹೇಗೆ? ಈ ಮೂರು ವಿಧಾನ ಟ್ರೈ ಮಾಡಿ ನೋಡಿ

Praveen Chandra B HT Kannada

Jun 19, 2023 03:14 PM IST

google News

WhatsApp Tips: ಸಂದೇಶ ಕಳುಹಿಸಿದವರಿಗೆ ಗೊತ್ತಾಗದಂತೆ ವಾಟ್ಸಪ್‌ ಮೆಸೇಜ್‌ ಓದುವುದು ಹೇಗೆ? ಈ ಮೂರು ವಿಧಾನ ಟ್ರೈ ಮಾಡಿ ನೋಡಿ

    • Whatsapp Tips and Tricks: ವಾಟ್ಸಪ್‌ನಲ್ಲಿ ಇತರರು ಕಳುಹಿಸಿದ ಸಂದೇಶಗಳನ್ನು ಸೀಕ್ರೇಟ್‌ ಆಗಿ ಓದಬೇಕೆಂದು ಸಾಕಷ್ಟು ಜನರು ಬಯಸುತ್ತಾರೆ. ಸೆಂಡರ್‌ಗೆ ಗೊತ್ತಾಗದಂತೆ ಅವರು ಕಳುಹಿಸಿದ ಸಂದೇಶವನ್ನು ಓದಲು ಬಯಸುವವರು ಈ ಮೂರು ವಿಧಾನಗಳನ್ನು ಪರಿಶೀಲಿಸಬಹುದು.
WhatsApp Tips: ಸಂದೇಶ ಕಳುಹಿಸಿದವರಿಗೆ ಗೊತ್ತಾಗದಂತೆ ವಾಟ್ಸಪ್‌ ಮೆಸೇಜ್‌ ಓದುವುದು ಹೇಗೆ? ಈ ಮೂರು ವಿಧಾನ ಟ್ರೈ ಮಾಡಿ ನೋಡಿ
WhatsApp Tips: ಸಂದೇಶ ಕಳುಹಿಸಿದವರಿಗೆ ಗೊತ್ತಾಗದಂತೆ ವಾಟ್ಸಪ್‌ ಮೆಸೇಜ್‌ ಓದುವುದು ಹೇಗೆ? ಈ ಮೂರು ವಿಧಾನ ಟ್ರೈ ಮಾಡಿ ನೋಡಿ (MINT_PRINT)

ಪ್ರತಿದಿನ ಮೊಬೈಲ್‌ ತೆರೆದರೆ ಓದಲು ಪುರುಷೋತ್ತು ಇಲ್ಲದ್ದಷ್ಟು ವಾಟ್ಸಪ್‌ ಮೆಸೆಜ್‌ಗಳು ಇರುತ್ತವೆ. ಓದಲು ಸಮಯ ಇದ್ದರೂ ಅದಕ್ಕೆ ಪ್ರತಿಕ್ರಿಯಿಸಲು ಸಮಯ ಇರುವುದಿಲ್ಲ. ಓದಿ ಪ್ರತಿಕ್ರಿಯೆ ನೀಡದೆ ಇದ್ದರೆ ಸಂದೇಶ ಕಳುಹಿಸಿದವರು ಅನ್ಯಥ ಭಾವಿಸಬಹುದು. ಕೆಲವೊಂದು ಸಂದೇಶಗಳನ್ನು ಓದದೇ ಮೌನವಾಗಿರುವುದು ಲಾಭದಾಯಕವಾಗಿರುತ್ತದೆ. ಹೀಗಿದ್ದರೂ ಏನು ಸಂದೇಶ ಕಳುಹಿಸಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಈ ಲೇಖನದಲ್ಲಿ ಸೆಂಡರ್‌ಗೆ ತಿಳಿಯದಂತೆ ಅವರು ಕಳುಹಿಸಿದ ಸಂದೇಶ ಓದುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಏಕೆ ಸೆಂಡರ್‌ಗೆ ತಿಳಿಯಬಾರದು?

ಕೆಲವರು ಆಫೀಸ್‌ ಬಾಸ್‌ ವಿಷಯದಲ್ಲಿ ಈ ರೀತಿ ವರ್ತಿಸಬಹುದು. ಬಾಸ್‌ ಏನಾದರೂ ಕೆಲಸ ಹೇಳಿರಬಹುದು. ಮೆಸೆಜ್‌ ನೋಡಿದರೆ ಓಕೆ ಮಾಡುವೆ ಎನ್ನಬೇಕಾಗುತ್ತದೆ. ಮೆಸೆಜ್‌ ನೋಡದೆ ಇದ್ದರೆ ಏನು ಕಳುಹಿಸಿದ್ದಾರೆ ಎಂಬ ಕುತೂಹಲ ಇರುತ್ತದೆ. ಇಂತಹ ವಿವಿಧ ಪರಿಸ್ಥಿತಿಗಳಲ್ಲಿ ಕೆಲವರಿಗೆ ತಾವು ಸಂದೇಶ ಓದಿರುವುದು ಸೆಂಡರ್‌ಗೆ ತಿಳಿಯಬಾರದು ಎಂದುಕೊಳ್ಳುತ್ತಾರೆ.

ರೀಡ್‌ ರಿಸಿಪ್ಟ್‌ ಆಫ್‌ ಮಾಡಿ

ರೀಡ್‌ ರಿಸಿಪ್ಟ್ಸ್‌ (Read Receipts) ಆಯ್ಕೆಯನ್ನು ಕ್ಲಿಕ್‌ ಮಾಡುವ ಮೂಲಕ ಕಳುಹಿಸಿದವರ ಸಂದೇಶವನ್ನು ಅವರಿಗೆ ತಿಳಿಯದಂತೆ ನೋಡಬಹುದು. ಇದನ್ನು ಹೇಗೆ ಮಾಡುವುದು ಎಂದು ತಿಳಿಯೋಣ.

  1. ಮೊದಲಿಗೆ ವಾಟ್ಸಪ್‌ ಸೆಟ್ಟಿಂಗ್‌ ಕ್ಲಿಕ್‌ ಮಾಡಿ
  2. ಅಕೌಂಟ್‌ ಕ್ಲಿಕ್‌ ಮಾಡಿ. ಪ್ರೈವೇಸಿ ಕ್ಲಿಕ್‌ ಮಾಡಿ
  3. ಅಲ್ಲಿ ರೀಡ್‌ ರಿಸಿಪ್ಟ್‌ ಆಯ್ಕೆಯನ್ನು ಡಿಸೇಬಲ್‌ ಮಾಡಿ. ನೆನಪಿಡಿ ಈ ಆಯ್ಕೆ ಕ್ಲಿಕ್‌ ಮಾಡಿದ ಬಳಿಕ ಇತರರು ನಿಮ್ಮ ಸಂದೇಶ ಓದಿರುವುದು ನಿಮಗೆ ತಿಳಿಯುವುದಿಲ್ಲ.

ವಾಟ್ಸಪ್‌ ವಿಜೆಟ್‌ ಬಳಸಿ

ಸೆಂಡರ್‌ ಕಳುಹಿಸಿದ ಸಂದೇಶ ಓದಿರುವುದು ತಿಳಿಯದಂತೆ ಮಾಡಲು ಇನ್ನೊಂದು ಆಯ್ಕೆ ಇದೆ. ಅದಕ್ಕಾಗಿ ಈ ಹಂತ ಅನುಸರಿಸಿ.

  1. ನಿಮ್ಮ ಮೊಬೈಲ್‌ನ ಹೋಮ್‌ ಸ್ಕ್ರೀನ್‌ನಲ್ಲಿ ಖಾಲಿ ಸ್ಥಳವನ್ನು ದೀರ್ಘಕಾಲ ಪ್ರೆಸ್‌ ಮಾಡಿ.
  2. ಅಲ್ಲಿ ವಿಜೆಟ್ಸ್‌ ಅಥವಾ ಪ್ಲಸ್‌ ಬಟನ್‌ ಕಾಣಿಸುತ್ತದೆ.
  3. ಅಲ್ಲಿ ವಾಟ್ಸಪ್‌ ವಿಜೆಟ್‌ ಕಾಣಿಸಬಹುದು. ಅದನ್ನು ಡ್ರಾಗ್‌ ಮಾಡಿ ಆ ಸ್ಥಳಕ್ಕೆ ಎಳೆಯಿರಿ.
  4. ಅಗತ್ಯಬಿದ್ದರೆ ವಿಜೆಟ್‌ ಗಾತ್ರ ಬದಲಿಸಿ.
  5. ಇಲ್ಲಿ ಓದಿದರೆ ಸೆಂಡರ್‌ಗೆ ತಿಳಿಯುವುದಿಲ್ಲ.

ಏರೋಪ್ಲೇನ್‌ ಮೋಡ್‌ ಬಳಸಿ

ಈ ಮೇಲಿನ ಎರಡು ವಿಧಾನ ಹೊರತುಪಡಿಸಿ ಇನ್ನೊಂದು ವಿಧಾನವಿದೆ. ಇದನ್ನು ಬಹುತೇಕರು ಬಳಸಿರಬಹುದು. ಮೊದಲು ಮೊಬೈಲ್‌ನಲ್ಲಿ ಏರೋಪ್ಲೇನ್‌ ಮೋಡ್‌ ಬಳಸಿ. ಬಳಿಕ ವಾಟ್ಸಪ್‌ ಆನ್‌ ಮಾಡಿ ಬೇಕಾದ ಸಂದೇಶ ಓದಿ. ಬಳಿಕ ವಾಟ್ಸಪ್‌ನಿಂದ ಹೊರಕ್ಕೆ ಬನ್ನಿ. ಮತ್ತೆ ಏರೋಪ್ಲೇನ್‌ ಮೋಡ್‌ ಆಫ್‌ ಮಾಡಿ.

ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸುವುದು ಹೇಗೆ?

ದೈನಂದಿನ ಕೆಲಸ ಕಾರ್ಯಗಳಲ್ಲಿ ಕೀಬೋರ್ಡ್‌ನಿಂದ ಕೈ ತೆಗೆಯದೆ, ಮೌಸ್‌ ಬಳಸದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸಿದರೆ ಕೆಲಸ ವೇಗಗೊಳ್ಳುತ್ತದೆ. ಇದರಿಂದ ನಮ್ಮ ಕೈ ಬೆರಳಿಗೂ ತುಸು ಆರಾಮವೆನಿಸುತ್ತದೆ. ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸಬೇಕಾದರೆ ನೀವು ಕೆಲವು ಶಾರ್ಟ್‌ಕಟ್‌ಗಳನ್ನು ತಿಳಿದಿರಬೇಕು. ಒಮ್ಮೆ ನೀವು ಈ ಶಾರ್ಟ್‌ಕಟ್‌ಗಳನ್ನು ಬಳಸಲು ಆರಂಭಿಸಿದರೆ ಮತ್ತೆ ನಿಮ್ಮ ಕೆಲಸ ಸರಾಗವಾಗುತ್ತದೆ. ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸಲು ತಿಳಿಯಬೇಕಾದರೆ ಇಲ್ಲಿ ಕ್ಲಿಕ್‌ ಮಾಡಿ ಓದಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ