logo
ಕನ್ನಡ ಸುದ್ದಿ  /  ಜೀವನಶೈಲಿ  /  Time Management: ಆಫೀಸ್‌ನಲ್ಲಿ ಸಮಯದ ನಿರ್ವಹಣೆ ಹೇಗೆ? ಕರಿಯರ್‌ ಯಶಸ್ಸಿಗೆ ನೆರವಾಗುವ 10 ಟೈಂ ಮ್ಯಾನೇಜ್‌ಮೆಂಟ್‌ ಟಿಪ್ಸ್‌

Time Management: ಆಫೀಸ್‌ನಲ್ಲಿ ಸಮಯದ ನಿರ್ವಹಣೆ ಹೇಗೆ? ಕರಿಯರ್‌ ಯಶಸ್ಸಿಗೆ ನೆರವಾಗುವ 10 ಟೈಂ ಮ್ಯಾನೇಜ್‌ಮೆಂಟ್‌ ಟಿಪ್ಸ್‌

Praveen Chandra B HT Kannada

Jun 17, 2023 06:00 PM IST

google News

Time Management: ಆಫೀಸ್‌ನಲ್ಲಿ ಸಮಯದ ನಿರ್ವಹಣೆ ಹೇಗೆ? ಕರಿಯರ್‌ ಯಶಸ್ಸಿಗೆ ನೆರವಾಗುವ 10 ಟೈಂ ಮ್ಯಾನೇಜ್‌ಮೆಂಟ್‌ ಟಿಪ್ಸ್‌

    • Time Management Tips: ಉದ್ಯೋಗ ಸ್ಥಳದಲ್ಲಿ ಸಮಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಸರಿಯಾದ ಸಮಯಕ್ಕೆ ಕೆಲಸ ಮುಗಿಸಬಹುದು. ಜತೆಗೆ, ಉತ್ಪಾದಕತೆಯನ್ನೂ ಹೆಚ್ಚಿಸಬಹುದು.
Time Management: ಆಫೀಸ್‌ನಲ್ಲಿ ಸಮಯದ ನಿರ್ವಹಣೆ ಹೇಗೆ? ಕರಿಯರ್‌ ಯಶಸ್ಸಿಗೆ ನೆರವಾಗುವ 10 ಟೈಂ ಮ್ಯಾನೇಜ್‌ಮೆಂಟ್‌ ಟಿಪ್ಸ್‌
Time Management: ಆಫೀಸ್‌ನಲ್ಲಿ ಸಮಯದ ನಿರ್ವಹಣೆ ಹೇಗೆ? ಕರಿಯರ್‌ ಯಶಸ್ಸಿಗೆ ನೆರವಾಗುವ 10 ಟೈಂ ಮ್ಯಾನೇಜ್‌ಮೆಂಟ್‌ ಟಿಪ್ಸ್‌

ಪ್ರತಿ ಆಫೀಸ್‌ನಲ್ಲಿಯೂ ಉದ್ಯೋಗಿಗಳಿಗೆ ದಿನದ ಟಾರ್ಗೆಟ್‌ ಎಂದಿರುತ್ತದೆ. ಆದರೆ, ಟಾರ್ಗೆಟ್‌ ಮುಗಿಸಲು ನಿರ್ದಿಷ್ಟ ಸಮಯ ಸಾಕಾಗುತ್ತದೆ. ಹೀಗಿದ್ದರೂ ಬಹುತೇಕ ಸಂದರ್ಭದಲ್ಲಿ ಈ ಗುರಿ ಮುಟ್ಟಲಾಗುವುದಿಲ್ಲ. ಆಫೀಸ್‌ನಲ್ಲಿ ಟೈಮ್‌ ಮ್ಯಾನೇಜ್‌ಮೆಂಟ್‌ಗೆ ನೆರವಾಗುವ ಪ್ರಮುಖ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಏನಿದು ಸಮಯ?

ಯಾವುದಾದರೂ ವಿಷಯ ಅಥವಾ ಘಟನೆ ನಡೆಯುವ ಅವಧಿಗೆ ಸಮಯವೆಂದು ವ್ಯಾಖ್ಯಾನವಿದೆ. ಒಂದು ಗಡಿಯಾರದ ಸಮಯ. ಅದು ಎಲ್ಲರಿಗೂ ಒಂದೇ ರೀತಿ ಇರುತ್ತದೆ. ಮತ್ತೊಂದು ನಿಜವಾದ ಟೈಂ. ವಾಹನವನ್ನು ನಿರ್ಮಾಣ ಮಾಡುವ 2 ಗಂಟೆ ಅವಧಿಯು ನಿಮಗೆ ಒಂದು ವರ್ಷದಂತೆ ಭಾಸವಾಗಬಹುದು. ಮೊನ್ನೆ ನೆಲದಲ್ಲಿ ಹರಿದಾಡುತ್ತಿದ್ದ ಪುಟ್ಟ ಮಗು ಈಗ ಎದೆಯೆತ್ತರಕ್ಕೆ ಬೆಳೆದದ್ದೂ ಸಮಯ. ಇಲ್ಲಿ ಗಂಟೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದರೂ ನಮ್ಮ ಅನುಭವಕ್ಕೆ ಬರುವ ಸಮಯವೇ ಬೇರೆ.

ಆಫೀಸ್‌ನಲ್ಲಿ ಸಮಯದ ನಿರ್ವಹಣೆ

  1. ಕಚೇರಿಗೆ ಬಂದ ಮೊದಲ 30 ನಿಮಿಷವನ್ನು ನೀವು ಆ ದಿನವನ್ನು ಯೋಜಿಸಲು ವಿನಿಯೋಗಿಸಬಹುದು. ನಿಮ್ಮ ಸಮಯದ ಪ್ಲಾನ್‌ ಸರಿಯಾಗಿ ರೂಪಿಸದೆ ಕೆಲಸ ಆರಂಭಿಸಬೇಡಿ. ಶೆಡ್ಯೂಲ್‌ ಸಿದ್ಧವಾದ ನಂತರ ಅದೇ ಪ್ರಕಾರ ಕೆಲಸ ಮಾಡಿ.
  2. ಉದ್ಯೋಗದಲ್ಲಿ ಒಂದು ವಾರದಲ್ಲಿ ಮಾಡಬೇಕಾದ ನಿಮ್ಮ ಕಾರ್ಯಗಳು, ನಡೆಸಬೇಕಾದ ಮೀಟಿಂಗ್‌ಗಳು, ಚಟುವಟಿಕೆಗಳು ಇತ್ಯಾದಿಗಳ ವೇಳಾಪಟ್ಟಿ ರಚಿಸಿಕೊಳ್ಳಿ. ಯಾವ ದಿನ ಯಾವೆಲ್ಲ ಕೆಲಸ ಮಾಡಬೇಕು? ಬಿಡುವಿನ ವೇಳೆಯಲ್ಲಿ ಏನು ಮಾಡಬೇಕು? ಇತ್ಯಾದಿ ಟೈಟ್‌ ಶೆಡ್ಯೂಲ್‌ ಮಾಡಿರಿ ಮತ್ತು ಅದರಂತೆ ನಡೆಯಿರಿ.
  3. ಪ್ರತಿದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದರ ಕುರಿತು ಸ್ಪಷ್ಟತೆ ಇರಲಿ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಿ. ಸಮಯಕ್ಕೆ ಸರಿಯಾಗಿ ಹೊರಕ್ಕೆ ಹೋಗಿ. ಕೆಲಸ ಮತ್ತು ಬದುಕಿನ ನಡುವೆ ಸಮತೋಲನ ಇರಲಿ.
  4. ನೀವು ಕತ್ತೆಯಂತೆ ದುಡಿಯುತ್ತಿದ್ದರೆ ನಿಮಗೆ ಮತ್ತಷ್ಟು ಕೆಲಸದ ಹೊರೆ ಹೊರೆಸಬಹುದು. ಇಂತಹ ಸಮಯದಲ್ಲಿ ನೋ ಎನ್ನಲು ಕಲಿಯಿರಿ. ಯಾರಾದರೂ ತಮ್ಮ ಹೊರೆಯನ್ನು ನಿಮ್ಮ ತಲೆ ಮೇಲಿಡಲು ಕಾಯುತ್ತಿರುತ್ತಾರೆ. ಹೀಗಾಗಿ ಮುಲಾಜಿಲ್ಲದೆ ಇಲ್ಲ ಎನ್ನಲು ತಿಳಿದಿರಬೇಕು.
  5. ನೀವು ಮಾಡಬೇಕಾದ ಕೆಲಸ ಮಾಡಿ ಮುಗಿಸುವ ತನಕ ‘ಡು ನಾಟ್‌ ಡಿಸ್ಟರ್ಬ್‌’ ಎಂಬ ಬೋರ್ಡ್‌ ಅನ್ನು ಹಾಕಬಹುದು.
  6. ಫೋನ್‌ನಲ್ಲಿ ನೋಟಿಫಿಕೇಷನ್‌ ಸೌಂಡ್‌ಗಳನ್ನು ಮ್ಯೂಟ್‌ ಮಾಡಿಡಿ. ಫೇಸ್‌ಬುಕ್‌ ಇತ್ಯಾದಿ ಸೋಷಿಯಲ್‌ ಮೀಡಿಯಾ ಕಡೆಗೂ ನೀವು ಕೆಲಸದ ಸಮಯದಲ್ಲಿ ಗಮನ ಹರಿಸಬೇಡಿ.
  7. ನೀವು ಮಾಡುವ ಕೆಲಸವನ್ನು ಹೀಗೆ ವಿಂಗಡಿಸಿ. ಅಗತ್ಯ ಮತ್ತು ತುರ್ತು ಕೆಲಸಗಳು, ಅಗತ್ಯ ಮತ್ತು ತುರ್ತು ಅಲ್ಲದ್ದು, ತುರ್ತು ಆದರೆ, ತುಂಬಾ ಅಗತ್ಯವಲ್ಲದ್ದು ಎಂದು ವಿಂಗಡಿಸಿ ಕೆಲಸ ಮಾಡಿರಿ.
  8. ಮಧ್ಯಾಹ್ನದೊಳಗೆ ಮಾಡಿಮುಗಿಸಬೇಕಾದ ಮತ್ತು ಮಧ್ಯಾಹ್ನದ ನಂತರ ಮಾಡಬೇಕಾದ ಕೆಲಸವೆಂದು ನಿಮ್ಮ ಕೆಲಸವನ್ನು ವಿಂಗಡಿಸಿರಿ.
  9. ಸಮಯದ ನಿರ್ವಹಣೆಯಲ್ಲಿ ವ್ಯಾಯಾಮ, ಉತ್ತಮ ಆಹಾರ ಸೇವನೆ, ಆರೋಗ್ಯ ಇತ್ಯಾದಿಗಳ ಕುರಿತೂ ಕಾಳಜಿ ಇರಲಿ.
  10. ನೆನಪಿಡಿ ನಿಮ್ಮ ಜೀವನದಲ್ಲಿ ಕೆಲಸಕ್ಕೆ ಇಂತಿಷ್ಟು ಸಮಯ ಕೆಲಸಕ್ಕೆ, ರಿಲಾಕ್ಸ್‌ಗೆ ಇಂತಿಷ್ಟು ಸಮಯವೆಂದು ಇರಲಿ. ಇಲ್ಲವಾದರೆ ನಿಮ್ಮ ಜೀವನದ ಆಯಸ್ಸು ಮುಗಿದು ಹೋಗುವುದೇ ನಿಮಗೆ ತಿಳಿಯದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ