logo
ಕನ್ನಡ ಸುದ್ದಿ  /  ಜೀವನಶೈಲಿ  /  Tech Tips: ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸುವುದು ಹೇಗೆ? ಈ 22 ಕಂಪ್ಯೂಟರ್‌ ಕೀಬೋರ್ಡ್‌ ಶಾರ್ಟ್‌ಕಟ್‌ ಬಳಸಿ

Tech Tips: ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸುವುದು ಹೇಗೆ? ಈ 22 ಕಂಪ್ಯೂಟರ್‌ ಕೀಬೋರ್ಡ್‌ ಶಾರ್ಟ್‌ಕಟ್‌ ಬಳಸಿ

Praveen Chandra B HT Kannada

Jun 17, 2023 07:00 AM IST

google News

Tech Tips: ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸುವುದು ಹೇಗೆ? ಈ ಕಂಪ್ಯೂಟರ್‌ ಕೀಬೋರ್ಡ್‌ ಶಾರ್ಟ್‌ಕಟ್‌ ಬಳಸಿ

    • Use Your Computer Without a Mouse: ದೈನಂದಿನ ಕೆಲಸ ಕಾರ್ಯಗಳಲ್ಲಿ ಕೀಬೋರ್ಡ್‌ನಿಂದ ಕೈ ತೆಗೆಯದೆ, ಮೌಸ್‌ ಬಳಸದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸಿದರೆ ಕೆಲಸ ವೇಗಗೊಳ್ಳುತ್ತದೆ. ಇದರಿಂದ ನಮ್ಮ ಕೈ ಬೆರಳಿಗೂ ತುಸು ಆರಾಮವೆನಿಸುತ್ತದೆ. ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸಬೇಕಾದರೆ ನೀವು ಕೆಲವು ಶಾರ್ಟ್‌ಕಟ್‌ಗಳನ್ನು ತಿಳಿದಿರಬೇಕು.
Tech Tips: ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸುವುದು ಹೇಗೆ? ಈ ಕಂಪ್ಯೂಟರ್‌ ಕೀಬೋರ್ಡ್‌ ಶಾರ್ಟ್‌ಕಟ್‌ ಬಳಸಿ
Tech Tips: ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸುವುದು ಹೇಗೆ? ಈ ಕಂಪ್ಯೂಟರ್‌ ಕೀಬೋರ್ಡ್‌ ಶಾರ್ಟ್‌ಕಟ್‌ ಬಳಸಿ

ದೈನಂದಿನ ಕೆಲಸ ಕಾರ್ಯಗಳಲ್ಲಿ ಕೀಬೋರ್ಡ್‌ನಿಂದ ಕೈ ತೆಗೆಯದೆ, ಮೌಸ್‌ ಬಳಸದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸಿದರೆ ಕೆಲಸ ವೇಗಗೊಳ್ಳುತ್ತದೆ. ಇದರಿಂದ ನಮ್ಮ ಕೈ ಬೆರಳಿಗೂ ತುಸು ಆರಾಮವೆನಿಸುತ್ತದೆ. ಮೌಸ್‌ ಇಲ್ಲದೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸಬೇಕಾದರೆ ನೀವು ಕೆಲವು ಶಾರ್ಟ್‌ಕಟ್‌ಗಳನ್ನು ತಿಳಿದಿರಬೇಕು. ಒಮ್ಮೆ ನೀವು ಈ ಶಾರ್ಟ್‌ಕಟ್‌ಗಳನ್ನು ಬಳಸಲು ಆರಂಭಿಸಿದರೆ ಮತ್ತೆ ನಿಮ್ಮ ಕೆಲಸ ಸರಾಗವಾಗುತ್ತದೆ.

ಮೌಸ್‌ ಇಲ್ಲದೆ ಕಂಪ್ಯೂಟರ್‌ ಬಳಕೆ ಹೇಗೆ?

  1. ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಮೊದಲು ಸ್ಟಾರ್ಟ್‌ಗೆ ಹೋಗಿ. ಅಲ್ಲಿ ಕಂಟ್ರೋಲ್‌ ಪ್ಯಾನೆಲ್‌ ತೆರೆಯಿರಿ. ಅಲ್ಲಿ ‘ಈಸಿ ಆಫ್‌ ಆ್ಯಕ್ಸೆಸ್‌’ ಎಂಬ ಆಯ್ಕೆಯನ್ನು ಸಕ್ರೀಯಗೊಳಿಸಿ. ಮೌಸ್‌ ಇಲ್ಲದೆ ಕಂಪ್ಯೂಟರ್‌ ಬಳಸಲು ಇದು ಅತ್ಯಂತ ಪ್ರಮುಖವಾದ ಹೆಜ್ಜೆಯಾಗಿದೆ. ಇಲ್ಲಿಂದ ಮುಂದೆ ನಿಮ್ಮ ಕೀಬೋರ್ಡ್‌ನ ಕೀಲಿಗಳೇ ಮೌಸ್‌ನ ಹಲವು ಕಾರ್ಯಗಳನ್ನು ಮಾಡುತ್ತದೆ.
  2. ಹೆಲ್ಪ್‌ ಅಥವಾ ಸಹಾಯಕ್ಕಾಗಿ ಎಫ್‌1 ಬಳಸಿರಿ.
  3. ವಿಂಡೋ ಬಟನ್‌ ಕ್ಲಿಕ್‌ ಮಾಡಿದರೆ ಸ್ಟಾರ್ಟ್‌ ಮೆನು ತೆರೆದುಕೊಳ್ಳುತ್ತದೆ.
  4. ಈಗಾಗಲೇ ತೆರೆದಿಟ್ಟಿರುವ ಯಾವುದಾದರೂ ಪ್ರೋಗ್ರಾಂ ಬಳಸಲು ಮೌಸ್‌ನಲ್ಲಿ ಹುಡುಕಾಟ ನಡೆಸುವ ಅಗತ್ಯವಿಲ್ಲ. ಆಲ್ಟ್‌ ಮತ್ತು ಟ್ಯಾಬ್‌ ಬಟನ್‌ ಬಳಸಿದರೆ ಈ ಕಾರ್ಯವಾಗುತ್ತದೆ.
  5. ಯಾವುದಾದರೂ ಪ್ರೋಗ್ರಾಂನಿಂದ ಹೊರಹೋಗಲು ಬಯಸಿದರೆ ಕೀಬೋರ್ಡ್‌ನಲ್ಲಿರುವ ಆಲ್ಟ್‌ ಮತ್ತು ಎಫ್‌4 ಬಳಸಿ.
  6. ಟೈಪ್‌ ಮಾಡುವಾಗ ಕಾಪಿ ಮಾಡಲು ಕಂಟ್ರೋಲ್‌ ಸಿ, ಕಟ್‌ ಮಾಡಲು ಕಂಟ್ರೋಲ್‌ ಸಿ, ಪೇಸ್ಟ್‌ ಮಾಡಲು ಕಂಟ್ರೋಲ್‌ ವಿ, ಅಂಡೂ ಮಾಡಲು ಕಂಟ್ರೋಲ್‌ ಝಡ್‌ ಬಳಸಿ.
  7. ಡಿಲೀಟ್‌ ಮಾಡಲು ಶಿಫ್ಟ್‌ ಮತ್ತು ಡಿಲೀಟ್‌ ಜೊತೆಯಾಗಿ ಬಳಕೆ ಮಾಡಿ.
  8. ವಿಂಡೋಸ್‌ ಕೀ ಮತ್ತು ಎಲ್‌ ಅನ್ನು ಪ್ರೆಸ್‌ ಮಾಡಿದರೆ ಕಂಪ್ಯೂಟರ್‌ ಲಾಕ್‌ ಆಗುತ್ತದೆ.
  9. ಯಾವುದಾದರೂ ಪದ, ಅಕ್ಷರ, ವಾಕ್ಯವನ್ನು ದಪ್ಪಾಕ್ಷರ ಅಥವಾ ಬೋಲ್ಡ್‌ ಮಾಡಲು ಕಂಟ್ರೋಲ್‌ ಬಿ, ಅಂಡರ್‌ಲೈನ್‌ ಹಾಕಲು ಕಂಟ್ರೋಲ್‌ ಯು, ಇಟಾಲಿಕ್‌ ಫಾಂಟ್‌ ಬಳಸಲು ಕಂಟ್ರೋಲ್‌ ಐ, ಕೆಲವು ವರ್ಡ್‌ಗಳನ್ನು ಸ್ಕಿಪ್‌ ಮಾಡಲು ಅಥವಾ ಮುಂದಕ್ಕೆ ಹೋಗಲು ಬಾಣದ ಗುರುತುಗಳನ್ನು ಬಳಸಿರಿ. ಇದನ್ನು ಬಹುತೇಕರು ಬಳಸುತ್ತಿರಬಹುದು.
  10. ಹೆಸರು ಬದಲಾಯಿಸಲು(ರಿನೇಮ್‌) ಎಫ್‌2, ಎಲ್ಲಾ ಫೈಲ್‌ಗಳನ್ನು ಏನಾದರೂ ಸರ್ಚ್‌ ಮಾಡಲು ಎಫ್‌3 ಬಳಸಿರಿ.
  11. ಆಯ್ಕೆ ಮಾಡಿರುವ ಆಬ್ಜೆಕ್ಟ್ ಅನ್ನು ತೆರೆಯಲು ಆಲ್ಟ್‌ ಹಿಡಿದು ಎಂಟರ್‌ ಪ್ರೆಸ್‌ ಮಾಡಿರಿ. ಆಗ ಓಪನ್‌ ಆಗುತ್ತದೆ.
  12. ಎಂಎಸ್‌ ವರ್ಡ್‌ ಇತ್ಯಾದಿಗಳಲ್ಲಿ ಕೆಲಸ ಮಾಡುವಾಗ ನೀವು ಯಾವುದಾದರೂ ವರ್ಡ್‌ ಫೈಲ್‌ಗಳನ್ನು ತೆರೆದಿದ್ದರೆ ಅದರ ಮೇಲ್ಬಾಗದಲ್ಲಿರುವ ಫೈಲ್‌ ಆಯ್ಕೆಗೆ ಮೌಸ್‌ ಇಲ್ಲದೆ ಹೋಗುವುದು ಹೇಗೆ ಎಂದುಕೊಳ್ಳಬಹುದು. ಎಫ್‌10 ಬಳಸಿದರೆ ಫೈಲ್‌ ಕ್ಲಿಕ್‌ ಆಗುತ್ತದೆ. ನಂತರ ಏರೋ ಬಾಣದ ಮಾರ್ಕ್‌ ಬಳಸಿ ನಿಮಗೆ ಬೇಕಾದ ಆಯ್ಕೆಯನ್ನು ಕ್ಲಿಕ್‌ ಮಾಡಬಹುದಾಗಿದೆ.
  13. ಶಿಫ್ಟ್‌ ಮತ್ತು ಎಫ್‌10 ಕ್ಲಿಕ್‌ ಮಾಡಿದರೆ ಶಾರ್ಟ್‌ಕಟ್‌ ಮೆನು ತೆರೆದುಕೊಳ್ಳುತ್ತದೆ. ಮೌಸ್‌ನಲ್ಲಿಯಾದರೆ ರೈಟ್‌ ಕ್ಲಿಕ್‌ ಮಾಡಬೇಕು. ಎಫ್‌10 ಕ್ಲಿಕ್‌ ಮಾಡಿ ಸುಲಭವಾಗಿ ಶಾರ್ಟ್‌ಕಟ್‌ ಪ್ರವೇಶಿಸಬಹಹುದು.
  14. ಆಲ್ಟ್‌ ಮತ್ತು ಎಫ್‌4 ಕ್ಲಿಕ್‌ ಮಾಡಿದರೆ ಈಗ ತೆರೆದಿರುವ ವಿಂಡೋ ಕ್ಲೋಸ್‌ ಆಗುತ್ತದೆ.
  15. ಇದೇ ರೀತಿ ಕಂಟ್ರೋಲ್‌ ಮತ್ತು ಎಫ್‌4 ಬಟನ್‌ ಒತ್ತಿದರೆ ಹಲವು ಡಾಕ್ಯುಮೆಂಟ್‌ ವಿಂಡೋಗಳು ಒಮ್ಮೆಲೇ ಕ್ಲೋಸ್‌ ಆಗುತ್ತದೆ.
  16. ವಿಂಡೋಸ್‌ ಮತ್ತು ಆರ್‌: ಡೈಲಾಗ್‌ ಬಾಕ್ಸ್‌ ತೆರೆದುಕೊಳ್ಳುತ್ತದೆ.
  17. ವಿಂಡೋಸ್‌ ಮತ್ತು ಎಂ: ಎಲ್ಲವು ಮಿನಿಮೈಝ್‌ ಆಗುತ್ತದೆ. ಅಂದರೆ ತೆರೆದಿರುವ ಪುಟಗಳು ಮುಚ್ಚಿಕೊಳ್ಳುತ್ತವೆ.
  18. ಶಿಫ್ಟ್‌ ಮತ್ತು ವಿಂಡೋಸ್‌ ಮತ್ತು ಎಂ: ಮಿನಿಮೈಸ್‌ ಮಾಡಿರುವುದೆಲ್ಲ ಅಂಡೂ ಆಗುತ್ತದೆ.
  19. ವಿಂಡೋಸ್‌ ಮತ್ತು ಎಲ್‌: ವಿಂಡೋಸ್‌ ಲಾಗ್‌ ಆಫ್‌ ಆಗುತ್ತದೆ.
  20. ವಿಂಡೋಸ್‌ ಮತ್ತು ಪಿ: ಪ್ರಿಂಟ್‌ ಮ್ಯಾನೇಜರ್‌ ತೆರೆದುಕೊಳ್ಳುತ್ತದೆ.
  21. ವಿಂಡೋಸ್‌ ಮತ್ತು ಸಿ: ಕಂಟ್ರೋಲ್‌ ಪ್ಯಾನೇಲ್‌ ತೆರೆದುಕೊಳ್ಳುತ್ತದೆ.
  22. ವಿಂಡೋಸ್‌ ಮತ್ತು ಎಸ್‌: ಕ್ಯಾಫ್ಸ್‌ ಲಾಕ್‌ ಅನ್ನು ಆನ್‌ ಅಥವಾ ಆಫ್‌ ಮಾಡಲು ಬಳಕೆ ಮಾಡಬಹುದು.

ಇಂತಹ ಶಾರ್ಟ್‌ಕಟ್‌ಗಳನ್ನು ಬಳಸುವ ಮೂಲಕ ಮೌಸ್‌ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇವೆಲ್ಲವನ್ನೂ ಒಂದೇ ದಿನ ಕಲಿತುಕೊಳ್ಳಬೇಕೆಂದಿಲ್ಲ. ದಿನಕ್ಕೆ ಕೆಲವು ಶಾರ್ಟ್‌ಕಟ್‌ಗಳನ್ನು ರೂಡಿಸಿಕೊಂಡರೆ ಮುಂದೊಂದು ದಿನ ನಿಮಗೆ ಮೌಸೇ ಬೇಕಾಗುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ