logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Top Youtubers India: ಕೈತುಂಬಾ ಹಣ ಗಳಿಸೋ ಭಾರತದ 10 ಅಗ್ರ ಶ್ರೀಮಂತ ಯೂಟ್ಯೂಬರ್‌ಗಳಿವರು, ವರ್ಷಕ್ಕೆ 10 ಕೋಟಿ ರೂವರೆಗೆ ಆದಾಯ!

Top YouTubers India: ಕೈತುಂಬಾ ಹಣ ಗಳಿಸೋ ಭಾರತದ 10 ಅಗ್ರ ಶ್ರೀಮಂತ ಯೂಟ್ಯೂಬರ್‌ಗಳಿವರು, ವರ್ಷಕ್ಕೆ 10 ಕೋಟಿ ರೂವರೆಗೆ ಆದಾಯ!

Praveen Chandra B HT Kannada

Jun 16, 2023 07:00 AM IST

google News

Top YouTubers India: ಕೈತುಂಬಾ ಹಣ ಗಳಿಸೋ ಭಾರತದ 10 ಅಗ್ರ ಶ್ರೀಮಂತ ಯೂಟ್ಯೂಬರ್‌ಗಳಿವರು, ವರ್ಷಕ್ಕೆ 10 ಕೋಟಿ ರೂವರೆಗೆ ಆದಾಯ!

    • ಯೂಟ್ಯೂಬ್‌ ಚಾನೆಲ್‌ (Youtube Channel) ಮೂಲಕ ಎಷ್ಟು ಹಣ (Earn Money) ಗಳಿಸಬಹುದು? . ಕೆಲವರು ತಿಂಗಳಿಗೆ 100 ಡಾಲರ್‌ ಪಡೆಯಲು ಕಷ್ಟಪಡುತ್ತಿರಬಹುದು. ಆದರೆ, ಭಾರತದಲ್ಲಿ ಯೂಟ್ಯೂಬ್‌ ಮೂಲಕ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುವವರು ಇದ್ದಾರೆ. ಅಂತಹ ಹತ್ತು ಅಗ್ರ ಶ್ರೀಮತ ಯೂಟ್ಯೂಬರ್‌ಗಳ ಮಾಹಿತಿ ಇಲ್ಲಿದೆ.
Top YouTubers India: ಕೈತುಂಬಾ ಹಣ ಗಳಿಸೋ ಭಾರತದ 10 ಅಗ್ರ ಶ್ರೀಮಂತ ಯೂಟ್ಯೂಬರ್‌ಗಳಿವರು, ವರ್ಷಕ್ಕೆ 10 ಕೋಟಿ ರೂವರೆಗೆ ಆದಾಯ!
Top YouTubers India: ಕೈತುಂಬಾ ಹಣ ಗಳಿಸೋ ಭಾರತದ 10 ಅಗ್ರ ಶ್ರೀಮಂತ ಯೂಟ್ಯೂಬರ್‌ಗಳಿವರು, ವರ್ಷಕ್ಕೆ 10 ಕೋಟಿ ರೂವರೆಗೆ ಆದಾಯ!

ಭಾರತದ ಯುವ ಜನತೆ ಯೂಟ್ಯೂಬ್‌, ರೀಲ್ಸ್‌ ಮೂಲಕ ಫೇಮಸ್‌ ಆಗಿ ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಕರ್ನಾಟಕದಲ್ಲಿ ಡಾ. ಬ್ರೋ, ಅನ್‌ಬಾಕ್ಸ್‌ ಕರ್ನಾಟಕ, ಫ್ಲೈಯಿಂಗ್‌ ಪಾಸ್‌ಪೋರ್ಟ್‌, ವ್ಲೋಗ್‌ ಇನ್‌ ಕನ್ನಡ, ಕಲಾ ಮಾಧ್ಯಮ, ಸತೀಶ್‌ ಈರೇಗೌಡ, ಡಿಆಂಡ್‌ಟಿ ವ್ಲಾಗ್ಸ್‌, ಮೀಡಿಯಾ ಮಾಸ್ಟರ್‌, ದೇಶಿ ವಿದೇಶಿ ಕನ್ನಡ ವ್ಲಾಗ್ಸ್‌, ಲಿಖಿತ್‌ ಶೆಟ್ಟಿ ವ್ಲಾಗ್ಸ್‌ ಸೇರಿದಂತೆ ಹಲವು ಯೂಟ್ಯೂಬ್‌ ಚಾನೆಲ್‌ಗಳು ತುಂಬಾ ಫೇಮಸ್‌ ಆಗಿವೆ. ಬಹುತೇಕರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಒಟ್ಟಾರೆ, ಭಾರತದಲ್ಲಿ ನೋಡಿದರೆ ಯೂಟ್ಯೂಬ್‌ ಮೂಲಕವೇ ಕೋಟಿ ಕೋಟಿ ಹಣ ಸಂಪಾದಿಸುವವರು ಇದ್ದಾರೆ. ಇಲ್ಲಿಯವರೆಗೆ ಅಂದರೆ 2022ರ ಅಂಕಿಅಂಶಗಳು ಮತ್ತು ಇತ್ತೀಚಿನ ವರದಿಗಳ ಪ್ರಕಾರ 2023ರಲ್ಲಿ ಭಾರತದಲ್ಲಿ ಅತ್ಯಧಿಕ ಹಣ ಸಂಪಾದನೆ ಮಾಡುವ ಹತ್ತು ಶ್ರೀಮಂತ ಯೂಟ್ಯೂಬರ್‌ಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ಯೂಟ್ಯೂಬ್‌, ಇನ್‌ಸ್ಟಾಗ್ರಾಂ ರೀಲ್ಸ್‌ ಚಾನೆಲ್‌ ಮೂಲಕ ಹಣ ಸಂಪಾದಿಸಬೇಕಾದರೆ ಮೊದಲಿಗೆ ನೀವು ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಿರಿ, ನಿಮ್ಮ ಆಸಕ್ತಿಗಳೇನು? ಇತ್ಯಾದಿಗಳನ್ನು ತಿಳಿದುಕೊಳ್ಳಬೇಕು. ಈಗಾಗಲೇ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಇನ್‌ಸ್ಟಾಗ್ರಾಂ ರೀಲ್ಸ್‌ ಸ್ಟಾರ್‌ ಆಗಿ ಕೈತುಂಬಾ ಹಣ ಸಂಪಾದನೆ ಮಾಡಲು ಬಯಸುವವರಿಗೆ ಮಾರ್ಗದರ್ಶಿ ಲೇಖನ ಪ್ರಕಟಿಸಿದೆ. ಅದನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ. ಇದೇ ರೀತಿ, ಇನ್ನೂ ಯೂಟ್ಯೂಬ್‌ ಚಾನೆಲ್‌ ಮಾಡದೆ ಯೂಟ್ಯೂಬ್‌ನಲ್ಲಿ ಕೈತುಂಬಾ ಕನಸು ಇರುವವರಿಗೆ ಯೂಟ್ಯೂಬ್‌ ಚಾನೆಲ್‌ ಕ್ರಿಯೆಟ್‌ ಮಾಡುವುದು ಹೇಗೆ ಎಂಬ ಸ್ಟೆಪ್‌ ಟು ಸ್ಟೆಪ್‌ ಗೈಡನ್ನೂ ಎಚ್‌ಟಿ ಕನ್ನಡ ಪ್ರಕಟಿಸಿದೆ. ಅದನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಭಾರತದಲ್ಲಿ ಯೂಟ್ಯೂಬ್‌ ಮೂಲಕ ಅತ್ಯಧಿಕ ಗಳಿಕೆ ಮಾಡುವ ಅಗ್ರ 10 ಸಾಧಕರು

1. ಕ್ಯಾರಿ ಮಿನತಿ(Carry Minati): ಇವರ ಮೂಲ ಹೆಸರು ಅಜೆಯ್‌ ನಗರ್‌. ಭಾರತದ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರು. 23 ವರ್ಷದ ಇವರು ತನ್ನ 10ನೇ ವಯಸ್ಸಿಗೆ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದರು. ಗೇಮ್ಸ್‌ ಕಂಟೆಂಟ್‌ ಇತ್ಯಾದಿ ನೀಡುವ ಇವರ CarryisLive ಚಾನೆಲ್‌ ತುಂಬಾ ಫೇಮಸ್‌. 36.9 ಸಬ್‌ಸ್ಕ್ರೈಬರ್‌ ಹೊಂದಿದ್ದಾರೆ. ವಾರ್ಷಿಕ ಆದಾಯ 4 ದಶಲಕ್ಷ ಡಾಲರ್‌.

2. ಎರಡನೇ ಸ್ಥಾನವನ್ನು ಭಾರತದ ಮ್ಯೂಸಿಕ್‌ ಕಂಪೋಸರ್‌ ಮತ್ತು ಸಿಂಗರ್‌ ಅಮಿತ್‌ ಭಂದಾನ ಪಡೆದಿದ್ದಾರೆ. 2012ರಲ್ಲಿ ಚಾನೆಲ್‌ ಆರಂಭಿಸಿದ್ದರು. 26 ದಶಲಕ್ಷ ಚಂದಾದಾರರನ್ನು ಹೊಂದಿದ್ದಾರೆ. 2019ರಲ್ಲಿ 4.5 ದಶಲಕ್ಷ ಡಾಲರ್‌ ಗಳಿಸಿದ್ದರು. ಸದ್ಯ ಇದಕ್ಕಿಂತಲೂ ಹಲವು ಪಟ್ಟು ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

3. ಭುವನ್‌ ಬಾಮ್‌: ಇವರು ಕೂಡ ದೇಶದ ಪ್ರಮುಖ ಜನಪ್ರಿಯ ಯೂಟ್ಯೂಬರ್‌. 2015ರಲ್ಲಿ ಚಾನೆಲ್‌ ಆರಂಭಿಸಿದ್ದರು. ವಾರ್ಷಿಕ ಆದಾಯ 4 ಮಿಲಿಯನ್‌ ಡಾಲರ್‌. ಕಾಮಿಟಿ ಸ್ಕೆಚ್‌, ಹಲವು ಕ್ಯಾರೆಕ್ಟರ್‌ಗಳಲ್ಲಿ ನಟಿಸುವ ಇವರ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

4. ಆಶೀಶ್‌ ಚಂಚಲಾನಿಯೂ ಭಾರತದ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರು. Ashish Chanchlani Vines ಎಂಬ ಚಾನೆಲ್‌ ಅನ್ನು 2014ರಲ್ಲಿ ಆರಂಭಿಸಿದ್ದರು. 20 ಮಿಲಿಯನ್‌ ಡಾಲರ್‌ ನಿವ್ವಳ ಸಂಪತ್ತು ಹೊಂದಿದ್ದಾರೆ.

5. ಗೌರವ್‌ ಚೌಧರಿ ಅವರು ಭಾರತದ ಇನ್ನೊಬ್ಬ ಶ್ರೀಮಂತ ಯೂಟ್ಯೂಬರ್‌. Technical Guruji ಚಾನೆಲ್‌ಗೆ 5 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರಿದ್ದಾರೆ. ಹಲವು ಪ್ರಮುಖ ಬ್ರಾಂಡ್‌ಗಳ ಜತೆ ಕೆಲಸ ಮಾಡಿದ್ದಾರೆ. 2015ರಲ್ಲಿ ಚಾನೆಲ್‌ ಆರಂಭಿಸಿದ್ದರು. ನಾಲ್ಕು ವರ್ಷದಲ್ಲಿಯೇ ಭಾರತದ ಪ್ರಮುಖ ಟೆಕ್‌ ರಿವ್ಯೂವರ್‌ ಆಗಿ ಹೊರಹೊಮ್ಮಿದ್ದಾರೆ.

6. ಹರ್ಷ್‌ ಬನ್ನಿವಾಲ್‌ ಅವರು 2.2 ಮಿಲಿಯನ್‌ ಡಾಲರ್‌ ಸಂಪತ್ತು ಗಳಿಸುವ ಯೂಟ್ಯೂಬರ್‌. ಇವರು 2015ರಲ್ಲಿ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದರು. 2019ರಲ್ಲಿ ಇವರಿಗೆ ಯೂಟ್ಯೂಬ್‌ Entertainer of The Year ಪ್ರಶಸ್ತಿ ನೀಡಿತ್ತು.

7. ಎಮಿವೇ ಬಂಟಾಯಿ (Emiway Bantai) ಭಾರತದ ರಾಪರ್‌. ಯೂಟ್ಯೂಬ್‌ನಲ್ಲಿ ಇವರ ರಾಪ್‌ ಹಾಡುಗಳಿಗೆ ಸಾಕಷ್ಟು ಬೇಡಿಕೆಯಿದೆ. ಇವರು ನೆಟ್‌ ವರ್ತ್‌ 2.5 ಮಿಲಿಯನ್‌ ಡಾಲರ್‌.

8. ನಿಶಾ ಮಧುಲಿಕಾ: ಇವರು 4.47 ಮಿಲಿಯನ್‌ ನಿವ್ವಳ ಸಂಪತ್ತನ್ನು ಯೂಟ್ಯೂಬ್‌ ಮೂಲಕ ಗಳಿಸುತ್ತಿದ್ದಾರೆ. ಇವರು ಅಡುಗೆ ಚಾನೆಲ್‌ ಹೊಂದಿದ್ದು, ನಿಶಾ ಮಧುಮಿಕಾ ಎಂಬ ಚಾನೆಲ್‌ 10 ಮಿಲಿಯನ್‌ ಸಬ್‌ಸ್ಕ್ರಿಪ್ಷನ್‌ ಹೊಂದಿದೆ. ವಾರ್ಷಿಕ 1 ದಶಲಕ್ಷ ಡಾಲರ್‌ಗಿಂತಲೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

9. ವಿದ್ಯಾ ವೋಕ್ಸ್‌: ಇವರು ಕೂಡ ಭಾರತದ ಶ್ರೀಮಂತ ಯೂಟ್ಯೂಬರ್‌. 1.3 ದಶಲಕ್ಷ ಡಾಲರ್‌ ಆದಾಯ ಗಳಿಸುತ್ತಿದಾರೆ. ಇವರು ಹಾಡುಗಾರ್ತಿ, ಬರಹಗಾರ್ತಿ. VidyaVox ಎನ್ನುವುದು ಇವರ ಚಾನೆಲ್‌.

10. ಸಂದೀಪ್‌ ಮಹೇಶ್ವರಿ ಕೂಡ ಭಾರತದ ಶ್ರೀಮಂತ ಯೂಟ್ಯೂಬರ್‌. ಇವರು ಮೋಟಿವೇಷನಲ್‌ ಸ್ಪೀಕರ್‌, ತರಬೇತುದಾರ ಮತ್ತು ಬಿಸ್ನೆಸ್‌ಮೆನ್‌. ಇವರು ಫೋರ್ಬ್ಸ್‌ನಿಂದ ಬೆಸದ್ಟ್‌ ಮೋಟಿವೇಷನಲ್‌ ಸ್ಪೀಕರ್‌ ಎಂಬ ಪ್ರಶಸ್ತಿ ಪಡೆದಿದ್ದಾರೆ. ಇವರ ಆದಾಯ 2.8 ಮಿಲಿಯನ್‌ ಡಾಲರ್‌.

(ಇಂಟರ್‌ನೆಟ್‌ ವರದಿಗಳನ್ನು ಆಧರಿಸಿದ ಬರಹ).

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ