Instagram Reels: ಇನ್‌ಸ್ಟಾಗ್ರಾಂ ಸ್ಟಾರ್‌ ಆಗೋದು ಹೇಗೆ? ವಯಸ್ಸಿನ ಹಂಗಿಲ್ಲದೆ ರೀಲ್ಸ್‌ ಮಾಡಿ ಹಣ ಸಂಪಾದಿಸಿ, ಇಲ್ಲಿದೆ ಸೂಪರ್‌ ಟಿಪ್ಸ್‌-tech news how to instagram influencer at any age facebook instagram reels social media tips and tricks in kannada pcp ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Instagram Reels: ಇನ್‌ಸ್ಟಾಗ್ರಾಂ ಸ್ಟಾರ್‌ ಆಗೋದು ಹೇಗೆ? ವಯಸ್ಸಿನ ಹಂಗಿಲ್ಲದೆ ರೀಲ್ಸ್‌ ಮಾಡಿ ಹಣ ಸಂಪಾದಿಸಿ, ಇಲ್ಲಿದೆ ಸೂಪರ್‌ ಟಿಪ್ಸ್‌

Instagram Reels: ಇನ್‌ಸ್ಟಾಗ್ರಾಂ ಸ್ಟಾರ್‌ ಆಗೋದು ಹೇಗೆ? ವಯಸ್ಸಿನ ಹಂಗಿಲ್ಲದೆ ರೀಲ್ಸ್‌ ಮಾಡಿ ಹಣ ಸಂಪಾದಿಸಿ, ಇಲ್ಲಿದೆ ಸೂಪರ್‌ ಟಿಪ್ಸ್‌

Instagram Reels: ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಂ ರೀಲ್ಸ್‌ ಎನ್ನುವುದು ವಯಸ್ಸಿನ ಹಂಗಿಲ್ಲದೆ ಹೆಸರು ಮತ್ತು ಹಣ ಗಳಿಕೆಗೆ ನೆರವಾಗುತ್ತಿದೆ. ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ (Instagram Influencer) ಆಗಿ ಹೆಸರು, ಖ್ಯಾತಿ ಗಳಿಸಲು ಬಳಸುವವರು ಈ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ.

Instagram Reels: ಇನ್‌ಸ್ಟಾಗ್ರಾಂ ಸ್ಟಾರ್‌ ಆಗೋದು ಹೇಗೆ? ವಯಸ್ಸಿನ ಹಂಗಿಲ್ಲದೆ ರೀಲ್ಸ್‌ ಮಾಡಿ ಹಣ ಸಂಪಾದಿಸಿ, ಇಲ್ಲಿದೆ ಸೂಪರ್‌ ಟಿಪ್ಸ್‌
Instagram Reels: ಇನ್‌ಸ್ಟಾಗ್ರಾಂ ಸ್ಟಾರ್‌ ಆಗೋದು ಹೇಗೆ? ವಯಸ್ಸಿನ ಹಂಗಿಲ್ಲದೆ ರೀಲ್ಸ್‌ ಮಾಡಿ ಹಣ ಸಂಪಾದಿಸಿ, ಇಲ್ಲಿದೆ ಸೂಪರ್‌ ಟಿಪ್ಸ್‌

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ತೆರೆದರೆ ಸಾಕು ರೀಲ್ಸ್‌ಗಳದ್ದೇ ಸಾಮ್ರಾಜ್ಯ. ಬೇಡಬೇಡವೆಂದರೂ ನೋಡಿಸಿಕೊಂಡು ಹೋಗುವ ಈ ಚಿಕಿಣಿ ವಿಡಿಯೋಗಳಲ್ಲಿ ಕೆಲವರು ಅತೀವ ಇಷ್ಟವಾಗಿ ಬಿಡುತ್ತಾರೆ. ಮತ್ತೆಮತ್ತೆ ಅವರ ವಿಡಿಯೋ ನೋಡಬೇಕೆನಿಸುತ್ತದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಂ ಜಗತ್ತಿನಲ್ಲಿ ಹಲವು ಜನರು ಫೇಮಸ್‌ ಆಗಿದ್ದಾರೆ. ನಗು, ಅಳು, ಭಾವನಾತ್ಮಕವಾಗಿ ತಟ್ಟುವ, ಖುಷಿಕೊಡುವ, ಕೋಪತರಿಸುವ ಈ ರೀಲ್ಸ್‌ ಜಗತ್ತಿಗೆ ಯಾರು ಬೇಕಾದರೂ ಎಂಟ್ರಿ ಕೊಡಬಹುದು. ಇಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್‌ ಒಂದು ಉದಾಹರಣೆಯಷ್ಟೇ. ಯೂಟ್ಯೂಬ್‌ ರೀಲ್ಸ್‌ಗೂ ಇದು ಅನ್ವಯವಾಗಬಹುದು. ಪುಟ್ಟ ಮಕ್ಕಳು ಮಾತ್ರವಲ್ಲದೆ ಹಿರಿಯರೂ ಈ ರೀಲ್ಸ್‌ ಜಗತ್ತಿನಲ್ಲಿ ಮಿಂಚಿದ್ದಾರೆ. ಇಲ್ಲಿ ಯಾರಲ್ಲಿ ವಿಶೇಷ, ವಿನೂತನ, ವಿಚಿತ್ರ ಪ್ರತಿಭೆ ಇರುತ್ತಾರೋ ಅವರು ಫೇಮಸ್‌ ಆಗುತ್ತಾರೆ. ಈ ರೀತಿ ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗೋದು ಸುಲಭವಲ್ಲ. ಅದರ ಹಿಂದೆ ಸಾಕಷ್ಟು ಪ್ರಯತ್ನ, ಹತಾಶೆ ಇರುತ್ತದೆ. ಎಲ್ಲರಿಗೂ ಯಶಸ್ಸು ಒಂದೇ ರಾತ್ರಿ ಬಂದಿರುವುದಿಲ್ಲ. ಕೆಲವರು ಮಾತ್ರ ರಾತ್ರಿ ಬೆಳಗಾಗುವುದರೊಳಗೆ ಫೇಮಸ್‌ ಆಗಿರಬಹುದು. ಆದರೆ, ಬಹುತೇಕರು ಸೋಷಿಯಲ್‌ ಮೀಡಿಯಾ ಇನ್‌ಫ್ಯೂಯೆನ್ಸರ್‌ ಆಗಲು ಸತತ ಪ್ರಯತ್ನ ಮಾಡಿರುತ್ತಾರೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಇಂದಿನ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಹೌಟು ಗೈಡ್‌ನಲ್ಲಿ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ ಆಗುವುದು ಹೇಗೆ ಎಂದು ತಿಳಿದುಕೊಳ್ಳೋಣ.

ರೀಲ್ಸ್‌ ಮೂಲಕ ಹಣ ಗಳಿಕೆ

ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಸಾಕಷ್ಟು ಜನರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಲಕ್ಷಲಕ್ಷದಲ್ಲಿ ಫಾಲೋವರ್ಸ್‌ ಇದ್ದರೆ ಪ್ರಮೋಷನ್‌ ಇತ್ಯಾದಿಗಳಿಂದ ಆದಾಯ ದೊರಕುತ್ತದೆ. ನೀವು ಗಮನಿಸಿರಬಹುದು, ಇಂತಹ ಇನ್‌ಫ್ಲೂಯೆನ್ಸರ್‌ಗಳ ಖಾತೆಯಲ್ಲಿ ಡಿಎಂ ಪಾರ್‌ ಪ್ರಮೋಷನ್‌ ಇತ್ಯಾದಿ ಸಂದೇಶ ಇರುತ್ತದೆ. ಕೆಲವರು ಈಗ ರೀಲ್ಸ್‌ ಅನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಬೇರೆ ಉದ್ಯೋಗದಲ್ಲಿದ್ದುಕೊಂಡು ಹೆಚ್ಚುವರಿ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ರೀಲ್ಸ್‌ ಮೂಲಕ ಹಣ ಗಳಿಸಬೇಕೆಂದರೆ ನೀವು ರೀಲ್ಸ್‌ ಜಗತ್ತಿನಲ್ಲಿ ಜನಪ್ರಿಯತೆ ಪಡೆಯಬೇಕು.

ಯಾವ ವಿಷಯದಲ್ಲಿ ರೀಲ್ಸ್‌ ಮಾಡುವಿರಿ? ವಿಡಿಯೋ ಐಡಿಯಾ ಮಾಡಿ

ನಿಮ್ಮ ವೀಕ್ಷಕರಿಗೆ ನೀಡುವ ವಿಡಿಯೋದಲ್ಲಿ ಏನು ಕಂಟೆಂಟ್‌ ಇರಬೇಕು ಎಂದು ಯೋಚಿಸಿ. ಆ ಕಂಟೆಂಟ್‌ ನೀಡಲು ನಿಮ್ಮ ಸಾಮರ್ಥ್ಯ, ಆಸಕ್ತಿ ಪರಿಶೀಲಿಸಿ. ಪ್ರತಿಯೊಬ್ಬರಲ್ಲಿಯೂ ವಿಶೇಷ ಪ್ರತಿಭೆ ಇರುತ್ತದೆ. ನಿಮ್ಮಲ್ಲಿರುವ ಅಂತಹ ಪ್ರತಿಭೆಯನ್ನು ಹುಡುಕಿ. ಅಂದರೆ, ಸ್ಪೂರ್ತಿದಾಯಕ ವಿಡಿಯೋ ಮಾಡುವಿರ? ಹಾಸ್ಯ ವಿಡಿಯೋ ಮಾಡುವಿರಾ? ಯುವ ತಲೆಮಾರಿಗೆ ಮಾರ್ಗದರ್ಶಿ ವಿಡಿಯೋ ಮಾಡುವಿರಾ? ಯೋಚಿಸಿ. ನಿಮಗೆ ಯಾವುದರಲ್ಲಿ ಹೆಚ್ಚು ವಿಡಿಯೋ ಕಂಟೆಂಟ್‌ ನೀಡಬಹುದು ಎಂದೆನಿಸುತ್ತದೆಯೋ ಅದರಲ್ಲಿ ಮುಂದುವರೆಯಿರಿ. ನಿಮ್ಮ ಅಕೌಂಟ್‌ ಮಾಹಿತಿಯನ್ನು ರೀಲ್ಸ್‌ ಮಾರ್ಕೆಟ್‌ಪ್ಲೇಸ್‌ಗಳಲ್ಲಿ ಪ್ರಮೋಟ್‌ ಮಾಡಿ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸ್ಪಾನ್ಸರ್‌ಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ.

ನಿಮ್ಮ ಅಸ್ತಿತ್ವ ತೋರಿಸಿ

ಎಲ್ಲಾ ವಯೋಮಾನದ ಕ್ರಿಯೆಟರ್‌ಗಳ ಜತೆ ಕನೆಕ್ಟ್‌ ಆಗಿ ಮತ್ತು ಸಹಭಾಗಿತ್ವ ಮಾಡಿಕೊಳ್ಳಿ. ಇತರರ ರೀಲ್ಸ್‌ಗೆ ಕಾಮೆಂಟ್‌ ಮಾಡುತ್ತ, ಸಹಭಾಗಿತ್ವ ಮಾಡುತ್ತ, ಜಂಟಿ ಪೋಸ್ಟ್‌ಗಳನ್ನು (ನಿಮ್ಮ ವಿಡಿಯೋದಲ್ಲಿ ಇತರೆ ಕ್ರಿಯೆಟರ್‌ಗಳೂ ಭಾಗಿಯಾಗುವಂತಹ) ಮಾಡಿ. ಇದರಿಂದ ನಿಮ್ಮ ಬಳಗ ವಿಸ್ತರಿಸಿಕೊಳ್ಳಲು, ಫಾಲೋವರ್ಸ್‌ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಾಯೋಜಕರನ್ನು ಸೆಳೆಯಿರಿ

ನಿಮಗೆ ನಿಜಕ್ಕೂ ಇಷ್ಟವಾದ ವಸ್ತುಗಳನ್ನು, ಉತ್ಪನ್ನಗಳನ್ನು ವಿಡಿಯೋದಲ್ಲಿ ತೋರಿಸಿ. ಆಯಾ ಬ್ರ್ಯಾಂಡ್‌ಗಳಿಗೆ ಟ್ಯಾಗ್‌ ಮಾಡಿ. ಇದರಿಂದ ಆ ಕಂಪನಿ ಮುಂದಿನ ದಿನಗಳಲ್ಲಿ ಪ್ರಮೋಷನ್‌ಗಾಗಿ ನಿಮ್ಮನ್ನು ಸಂಪರ್ಕಿಸಬಹುದು. ವಿವಿಧ ಬ್ರ್ಯಾಂಡ್‌ಗಳಿಗೆ ಇಮೇಲ್‌, ಸಂದೇಶಗಳನ್ನು ಕಳುಹಿಸಿ. ಈ ರೀತಿ ಸಂದೇಶಗಳನ್ನು ಕಳುಹಿಸುವಾಗ ನಿಮ್ಮ ವಿಶೇಷ ಲಕ್ಷಣಗಳು, ಟ್ಯಾಲೆಂಟ್‌ ಬಗ್ಗೆ ತಿಳಿಸಿ. ಇದರಿಂದ ಅವರು ನಿಮ್ಮನ್ನು ಸೋಷಿಯಲ್‌ ಮೀಡಿಯಾ ರಾಯಭಾರಿಯಾಗಿಯೂ ಮಾಡಿಕೊಳ್ಳಬಹುದು.

ಮೊದಲ ಪಾಲುದಾರರು

ನಿಮಗೆ ಮೊದಲ ಬಾರಿಗೆ ಯಾವುದಾದರೂ ಪಾಟ್ನರ್‌ಷಿಪ್‌ ದೊರಕಿದಾಗ ಅದನ್ನು ಅದ್ಭುತವಾಗಿ ರಚಿಸಿ. ಈ ಪಾಟ್ನರ್‌ಶಿಪ್‌ ಮೂಲಕ ನಿಮಗೆ ಹಣ ದೊರಕಬಹುದು ಅಥವಾ ಉಚಿತ ಉತ್ಪನ್ನಗಳು ದೊರಕಬಹುದು. ಬೆಸ್ಟ್‌ ಎನಿಸುವಂತಹ ವಿಡಿಯೋ ನೀಡಿ. ಯಾರಿಗಾದರೂ ಯಾವುದಾದರೂ ಕಂಪನಿ ಸ್ಪಾನ್ಸರ್‌ಷಿಪ್‌ ನೀಡುವಾಗ ಆ ಕಂಪನಿಯು ನಿಮ್ಮ ಹಿಂದಿನ ಸ್ಪಾನ್ಸರ್‌ಷಿಪ್‌ ವಿಡಿಯೋಗಳ ಗುಣಮಟ್ಟವನ್ನು ಪರಿಶೀಲಿಸುತ್ತದೆ.

ವಂಚಕರಿಂದ ದೂರವಿರಿ

ಈ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗಲು ಬಯಸುವವರನ್ನು ವಂಚಿಸುವ ಜಾಲವು ಸಕ್ರಿಯವಾಗಿರುತ್ತದೆ. ವಿವಿಧ ಕಂಪನಿಗಳ ಹೆಸರಿನಲ್ಲಿ ಸ್ಪಾನ್ಸರ್‌ ಮಾಡಲು ಅವರು ಕೇಳಬಹುದು. ಯಾರು ವೃತ್ತಿಪರವಾಗಿ ವರ್ತಿಸುವುದಿಲ್ಲವೋ, ಯಾರು ಸ್ಪೆಲ್ಲಿಂಗ್‌ ತಪ್ಪುಗಳೊಂದಿಗೆ ಸಂದೇಶ ಕಳುಹಿಸುತ್ತಾರೋ ಅವರು ಸ್ಪ್ಯಾಮರ್‌ಗಳೆಂದು ತಿಳಿಯಿರಿ. ಈ ರೀತಿ ಪಾಲುದಾರಿಕೆ ಮಾಡಿಕೊಳ್ಳುವ ಮೊದಲು ಪಾಲುದಾರರಾಗಿ ಆಗಮಿಸಿರುವವರ ಕುರಿತು ಕೊಂಚವಾದರೂ ರಿಸರ್ಚ್‌ ಮಾಡಿ. ಶುಭವಾಗಲಿ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.