The Kerala Story: ದಿ ಕೇರಳ ಸ್ಟೋರಿ ಸಿನಿಮಾ ಕಪೋಲಕಲ್ಪಿತ, ಸಂಘ ಪರಿವಾರ ಪ್ರೇರಿತ, ಬಿಡುಗಡೆಗೆ ಅವಕಾಶ ನೀಡಬೇಡಿ ಎಂದ ಕಾಂಗ್ರೆಸ್
Aug 02, 2023 02:22 PM IST
The Kerala Story: ದಿ ಕೇರಳ ಸ್ಟೋರಿ ಸಿನಿಮಾ ಕಪೋಲಕಲ್ಪಿತ, ಸಂಘ ಪರಿವಾರ ಪ್ರೇರಿತ, ಬಿಡುಗಡೆಗೆ ಅವಕಾಶ ನೀಡಬೇಡಿ ಎಂದ ಕಾಂಗ್ರೆಸ್
ದಿ ಕೇರಳ ಸ್ಟೋರಿ (The Kerala Story) ಇದೇ ಮೇ 5ರಂದು ಬಿಡುಗಡೆಗೆ ಸಿದ್ಧವಾಗಿದೆ. ಸುದೀಪ್ತೊ ಸೇನ್ (Sudipto Sen) ನಿರ್ದೇಶನದ, ವಿಪುಲ್ ಶಾ ನಿರ್ಮಾಣದ (Vipul Amrutlal Shah) ಈ ಸಿನಿಮಾ ಬಿಡುಗಡೆಯಾಗಲು ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಪಕ್ಷವು ಕೇರಳ ಸರಕಾರವನ್ನು ಒತ್ತಾಯಿಸಿದೆ.
ಕೊಯಮತ್ತೂರು: ದಿ ಕೇರಳ ಸ್ಟೋರಿ (The Kerala Story) ಇದೇ ಮೇ 5ರಂದು ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಬಿಡುಗಡೆಯಾಗಲು ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಪಕ್ಷವು ಕೇರಳ ಸರಕಾರವನ್ನು ಒತ್ತಾಯಿಸಿದೆ. ಸುದೀಪ್ತೊ ಸೇನ್ (Sudipto Sen) ನಿರ್ದೇಶನದ, ವಿಪುಲ್ ಶಾ ನಿರ್ಮಾಣದ (Vipul Amrutlal Shah) ದಿ ಕೇರಳ ಸ್ಟೋರಿ ಸಿನಿಮಾವು ಸಂಪೂರ್ಣ ಸುಳ್ಳುಗಳಿಂದ ಕೂಡಿದ್ದು, ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸುವ ಉದ್ದೇಶವನ್ನು ಹೊಂದಿದೆ. ಹೀಗಾಗಿ, ಈ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಕೇರಳದಲ್ಲಿ ಈ ಸಿನಿಮಾ ಬಿಡುಗಡೆಯಾಗಬಾರದು ಎಂದು ಆಡಳಿತಾರೂಢ ಸಿಪಿಐ(ಎಂ)ನ ಯುವ ಘಟಕವಾದ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ) ಸರಕಾರವನ್ನು ಒತ್ತಾಯಿಸಿದೆ. "ದಿ ಕೇರಳ ಸ್ಟೋರಿಯು ಕೇರಳವನ್ನು ಮತ್ತು ಇಡೀ ಸಮುದಾಯವನ್ನು ಅವಮಾನಿಸಲು ಜನಪ್ರಿಯ ಚಿತ್ರಮಾಧ್ಯಮವನ್ನು ಬಳಸಿಕೊಳ್ಳುತ್ತಿದೆ" ಎಂದು ಟೀಕಿಸಿದೆ. ಎರಡು ತಿಂಗಳ ಹಿಂದೆ ದಿ ಕೇರಳ ಸ್ಟೋರಿಯ ಟ್ರೇಲರ್ ಬಿಡುಗಡೆಯಾಗಿತ್ತು. ಇದರ ವಿರುದ್ಧ ಕೇರಳ ರಾಜ್ಯದಲ್ಲಿ ಪ್ರತಿಭಟನೆಗಳೂ ನಡೆದಿದ್ದವು.
2016 ರಲ್ಲಿ ಉತ್ತರ ಕೇರಳದ 21 ಜನರು ನಾಪತ್ತೆಯಾಗಿರುವ ಘಟನೆಗೆ ಥಳಕು ಹಾಕಿಕೊಂಡಿದೆ. ನಾಪತ್ತೆಯಾಗಿರುವವರು ಸಿರಿಯಾ ಮತ್ತು ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಹಿಡಿತದ ಪ್ರದೇಶಗಳಿಗೆ ಹೋಗಿ ಅಲ್ಲಿ ಉಗ್ರ ಸಂಘಟನೆಗಳಿಗೆ ಸೇರಿರುವ ಕುರಿತು ಸಿನಿಮಾದಲ್ಲಿ ಹೇಳಲಾಗಿದೆ ಎನ್ನಲಾಗುತ್ತಿದೆ.
“ದಿ ಕೇರಳ ಸ್ಟೋರಿ ಚಿತ್ರವು ಸುಳ್ಳಿನ ಕಂತೆಯಾಗಿದೆ. ಸಂಪೂರ್ಣವಾಗಿ ಕಪೋಲಕಲ್ಪಿತವಾಗಿದೆ. 32,000 ಮಹಿಳೆಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಈ ಸಿನಿಮಾ ಹೇಳುತ್ತದೆ. ಇದರ ಕುರಿತು ಟ್ರೇಲರ್‌ನಲ್ಲಿ ಸಾಕಷ್ಟು ಸುಳಿವು ನೀಡಲಾಗಿದೆ. ಇದು ರಾಜ್ಯ ಮತ್ತು ಮುಸ್ಲಿಂ ಸಮುದಾಯದ ಮಾನಹಾನಿ ಮಾಡುವ ಉದ್ದೇಶ ಹೊಂದಿದೆ. ಇದರ ಹಿಂದೆ ಸಂಘಪರಿವಾರದ ಕೈವಾಡವಿದೆ" ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಹೇಳಿದ್ದಾರೆ.
"ಇದು ದ್ವೇಷ ಮತ್ತು ಧಾರ್ಮಿಕ ದ್ವೇಷದ ಬೀಜಗಳನ್ನು ಬಿತ್ತುವ ಕೆಟ್ಟ ಅಜೆಂಡಾದ ಭಾಗವಾಗಿ. ದೆ ಆದರೆ ಅಂತಹ ಶಕ್ತಿಗಳನ್ನು ಸೋಲಿಸಲು ಕೇರಳದ ಜನರು ಒಗ್ಗಟ್ಟಾಗಿ ನಿಲ್ಲುತ್ತಾರೆ" ಎಂದು ಅವರು ಹೇಳಿದ್ದಾರೆ.
ದಿ ಕೇರಳ ಸ್ಟೋರಿ ಚಿತ್ರವು ಕೇರಳ ರಾಜ್ಯವನ್ನು ಕೆಟ್ಟದಾಗಿ ಬಿಂಬಿಸುವ ಉದ್ದೇಶ ಹೊಂದಿದೆ ಎಂದು ಡಿವೈಎಫ್‌ಐ ಹೇಳಿದೆ. “ಸಂಘ ಪರಿವಾರವು ಕೇರಳ ರಾಜ್ಯವನ್ನು ಧಾರ್ಮಿಕ ಮತಾಂಧರು ಮತ್ತು ದೇಶ ವಿರೋಧಿ ಶಕ್ತಿಗಳು ತುಂಬಿರುವ ಕೇಂದ್ರವೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಇದು ಕೋಮು ಧ್ರುವೀಕರಣದ ಕುತಂತ್ರದ ಭಾಗವಾಗಿದೆ. ಆದರೆ ಕೇರಳದಂತಹ ರಾಜ್ಯದಲ್ಲಿ ಅವರ ಇಂತಹ ಕೆಲಸ ನಡೆಯದು. ಕೇರಳ ರಾಜ್ಯವು ಜಾತ್ಯತೀತತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ತೊಟ್ಟಿಲಾಗಿ ನಿಲ್ಲುತ್ತದೆ" ಎಂದು ಡಿವೈಎಫ್‌ಐ ಹೇಳಿಕೆ ಬಿಡುಗಡೆ ಮಾಡಿದೆ.
"ದಿ ಕೇರಳ ಸ್ಟೋರಿ ಸಿನಿಮಾವು ಇಡೀ ಮುಸ್ಲಿಂ ಸಮುದಾಯವನ್ನು ರಾಕ್ಷಸರಾಗಿ ಚಿತ್ರಿಸಿದೆ" ಎಂದು ಕಾಂಗ್ರೆಸ್‌ನ ಮಿತ್ರಪಕ್ಷವಾದ ಮುಸ್ಲಿಂ ಲೀಗ್ ಆರೋಪಿಸಿತ್ತು. ಈ ಸಿನಿಮಾದ ವಿರುದ್ಧ ಭಾರೀ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಲೀಗ್ ಈ ಹಿಂದೆಯೇ ಎಚ್ಚರಿಸಿತ್ತು.