Face Wave: ಸಮುದ್ರದ ಅಲೆಯಲ್ಲಿ ಕಂಡ ಕ್ವೀನ್ ಎಲಿಜಬೆತ್ ಮುಖ?: ಪೃಥ್ವಿಯೇ ಕಣ್ತೆರೆದು ನೋಡಿದಾಗ...!
Mar 01, 2023 10:31 AM IST
ಮನುಷ್ಯಾಕೃತಿಯ ಅಲೆ
- ಇಂಗ್ಲೆಂಡ್‌ನ ಪ್ರಖ್ಯಾತ ಛಾಯಾಗ್ರಾಹಕ ಇಯಾನ್ ಸ್ಪ್ರೋಟ್ ಅವರು ಕ್ಲಿಕ್ಕಸಿದ ಫೋಟೋವೊಂದು ಇದೀಗ ಜಾಗತಿಕವಾಗಿ ಗಮನ ಸೆಳೆದಿದೆ. ಈ ಫೋಟೋದಲ್ಲಿ ಅಲೆಗಳಲ್ಲಿ ಮನುಷ್ಯಾಕೃತಿ ಮೂಡಿಬಂದಿದ್ದು, ಬಹುತೇಕ ಜನರು ಇದನ್ನು ಕ್ವೀನ್ ಎಲಿಜಬೆತ್ ಅವರ ಪ್ರತರೂಪ ಎಂದು ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಲಂಡನ್: ಇಂಗ್ಲೆಂಡ್ ಮಹಾರಾಣಿ ಕ್ವೀನ್ ಎಲಿಜಬೆತ್ ಕಾಲವಾಗಿ ಐದು ತಿಂಗಳುಗಳೇ ಗತಿಸಿವೆ. ಆದರೆ ಕ್ವೀನ್ ಎಲಿಜಬೆತ್ ಈಗಲೂ ಇಂಗ್ಲೆಂಡ್ ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ. ತಮ್ಮ ಮಹಾರಾಣಿಯನ್ನು ನೆನೆಯದೇ ಇಂಗ್ಲೆಂಡ್ ಜನರ ದಿನ ಶುರುವಾಗುವುದಿಲ್ಲ. ಅದೇ ರೀತಿ ಸಮುದ್ರದ ಅಲೆಯಲ್ಲಿ ಕಂಡ ಮನುಷ್ಯಾಕೃತಿಯನ್ನೂ ಇಂಗ್ಲೆಂಡ್ ಜನರು ಕ್ವೀನ್ ಎಲಿಜಬೆತ್ ಎಂದು ಕರೆದಿದ್ದಾರೆ.
ಹೌದು, ಇಂಗ್ಲೆಂಡ್‌ನ ಪ್ರಖ್ಯಾತ ಛಾಯಾಗ್ರಾಹಕ ಇಯಾನ್ ಸ್ಪ್ರೋಟ್ ಅವರು ಕ್ಲಿಕ್ಕಸಿದ ಫೋಟೋವೊಂದು ಇದೀಗ ಜಾಗತಿಕವಾಗಿ ಗಮನ ಸೆಳೆದಿದೆ. ಈ ಫೋಟೋದಲ್ಲಿ ಅಲೆಗಳಲ್ಲಿ ಮನುಷ್ಯಾಕೃತಿ ಮೂಡಿಬಂದಿದ್ದು, ಬಹುತೇಕ ಜನರು ಇದನ್ನು ಕ್ವೀನ್ ಎಲಿಜಬೆತ್ ಅವರ ಪ್ರತರೂಪ ಎಂದು ಹೇಳಿದ್ದಾರೆ.
ಇಂಗ್ಲೆಂಡ್‌ನ ಸಂಡರ್‌ಲ್ಯಾಂಡ್ ರೋಕರ್ ಪಿಯರ್‌ನಲ್ಲಿ ಛಾಯಾಗ್ರಾಹ ಇಯಾನ್ ಸ್ಪ್ರೋಟ್ ಅವರು, ಸತತ 12 ಗಂಟೆಗಳವರೆಗೆ ಛಾಯಾಗ್ರಹಣ ಕೈಗೊಂಡಿದ್ದರು. ಈ ವೇಳೆ ಕಡಲತೀರದಲ್ಲಿರುವ ಲೈಟ್‌ಹೌಸ್‌ಗೆ ಭಾರೀ ಗಾತ್ರದ ಅಲೆಯೊಂದು ಅಪ್ಪಳಿಸಿದೆ. ಈ ಅಲೆಯಲ್ಲಿ ಮನುಷ್ಯಾಕೃತಿ ಮೂಡಿಬಂದಿದ್ದು, ಮಹಿಳೆಯ ಮುಖದಂತೆ ಕಾಣುವ ಈ ಅಲೆಗೆ ಇಂಗ್ಲೆಂಡ್ ಜನ ಕ್ವೀನ್ ಎಲಿಜಬೆತ್ ಎಂದು ಕರೆದಿದ್ದಾರೆ.
ಉತ್ತರ ಟೈನೆಸೈಡ್ ನಿವಾಸಿಯಾಗಿರುವ 41 ವರ್ಷದ ಇಯಾನ್ ಸ್ಪ್ರೋಟ್, ಇದು ತಾವು ಸೆರೆಹಿಡಿದ ಅಪರೂಪದಲ್ಲೇ ಅಪರೂಪ ಚಿತ್ರ ಎಂದು ಬಣ್ಣಿಸಿದ್ದಾರೆ. ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಛಾಯಾಗ್ರಹಣದತ್ತ ಹೊರಳಿದ ಇಯಾನ್ ಸ್ಪ್ರೋಟ್, ತಮ್ಮ ಜೀವನ ಅದ್ಭುತ ಫೋಟೋವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಇಯಾನ್ ಸ್ಪ್ರೋಟ್, ಈ ಅಲೆಯನ್ನು 'ನೀರಿನ ದೇವತೆ' ಎಂದು ಕರೆದಿದ್ದಾರೆ. ಅಲ್ಲದೇ ನಮ್ಮೆಲ್ಲರ ಪ್ರೀತಿಯ ಕ್ವೀನ್ ಎಲಿಜಬೆತ್ ಇಂಗ್ಲೆಂಡ್ ಜನರನ್ನು ಆಶೀರ್ವದಿಸಲು ಅಲೆಗಳ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ಎಂದೂ ಇಯಾನ್ ಸ್ಪ್ರೋಟ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
'ಸಂಯೋಜನೆಯ ದೃಷ್ಟಿಯಿಂದ ಇದು ಅತ್ಯುತ್ತಮ ಚಿತ್ರವಲ್ಲ ಎಂದು ನಾನು ಒಪ್ಪುತ್ತೇನೆ. ಆದರೆ ಇದು ಖಂಡಿತವಾಗಿಯೂ ಮನಸ್ಸಿಗೆ ಸಂತೋಷ ಕೊಡುವ ಫೋಟೋ ಆಗಿದೆ. ನಿಸರ್ಗ ಅದೆಷ್ಟು ಸುಂದರ ಮತ್ತು ರೋಚಕವಾಗಿದೆ ಎಂಬುದಕ್ಕೆ ಈ ಮನುಷ್ಯಾಕೃತಿಯ ಅಲೆಯೇ ಸಾಕ್ಷಿ..' ಎಂದು ಇಯಾನ್ ಸ್ಪ್ರೋಟ್ ಈ ಫೋಟೋವನ್ನು ಬಣ್ಣಿಸಿದ್ದಾರೆ.
'ಲಾಕ್‌ಡೌನ್ ಸಮಯದಲ್ಲಿ ನನ್ನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನಾನು ಛಾಯಾಗ್ರಹಣಕ್ಕೆ ಮೊರೆ ಹೋದೆ. ಆದರೆ ಇಂತಹ ಅದ್ಭುತ ಚಿತ್ರವೊಂದನ್ನು ನಾನು ಸೆರೆಹಿಡಿಯತ್ತೇನೆ ಎಂದು ನಾನು ಖಂಡಿತವಾಗಿಯೂ ಊಹಿಸಿರಲಿಲ್ಲ..' ಎಂದು ಇಯಾನ್ ಸ್ಪ್ರೋಟ್ ಸಂತಸ ಹಂಚಿಕೊಂಡಿದ್ದಾರೆ.
'ಚಾಯಾಗ್ರಹಣ ನಿಜಕ್ಕೂ ನಿಮ್ಮ ಮನಸ್ಸನ್ನು ಬೇರೆಲ್ಲದರಿಂದ ದೂರವಿಡುತ್ತದೆ. ಈ ವೃತ್ತಿ ಪ್ರತಿ ದಿನವೂ ಒಂದು ಸವಾಲನ್ನು ಹೊತ್ತು ಬರುತ್ತದೆ. ಈ ವೃತ್ತಿ ನನ್ನ ಜೀವನವನ್ನು ಬದಲಾಯಿಸಿದೆ. ನಾನು ಈಗ ವಿಭಿನ್ನ ವ್ಯಕ್ತಿಯಾಗಿದ್ದೇನೆ..' ಎಂದು ಇಯಾನ್ ಸ್ಪ್ರೋಟ್ ಹೇಳಿದ್ದಾರೆ.
ಇಯಾನ್ ಸ್ಪ್ರೋಟ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರು ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಫೋಟೋಗೆ ಸಾಕಷ್ಟು ಲೈಕ್ಸ್‌ಗಳು ಬಂದಿದ್ದು, ಇದು ನಿಜಕ್ಕೂ ದೇವರ ಸೃಷ್ಟಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದಿನ ಪ್ರಮುಖ ಸುದ್ದಿ
Girl Friend Mummy: ನನ್ನ ಗರ್ಲ್‌ಫ್ರೆಂಡ್ ಅಂತಾ ಬ್ಯಾಗ್‌ನಲ್ಲಿ 800 ವರ್ಷಗಳಷ್ಟು ಹಳೆಯ ಮಮ್ಮಿ ಇಟ್ಕೊಂಡು ಓಡಾಡ್ತಿದ್ದ ಆಸಾಮಿ ಅರೆಸ್ಟ್!
ಪೆರುವಿನಲ್ಲಿ ವ್ಯಕ್ತೊಯೋರ್ವ ಕಳೆದ ಮೂವತ್ತು ವರ್ಷಗಳಿಂದ ಸುಮಾರು 800 ವರ್ಷಗಳಷ್ಟು ಹಳೆಯದಾದ ಮಮ್ಮಿಯನ್ನು ಬಚ್ಚಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಮಮ್ಮಿಯನ್ನು ಬಂಧಿತ ವ್ಯಕ್ತಿ ತನ್ನ ಗರ್ಲ್‌ಫ್ರೆಂಡ್ ಎಂದು ತಿಳಿದಿದ್ದ ಎಂದು ವಿಚಾರಣೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ
ವಿಭಾಗ