logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆರ್ಥಿಕ ಸಮೀಕ್ಷೆ 2024 ಪ್ರಕಟ; ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.5 ರಿಂದ 7, ಒಳನೋಟ, ಮುನ್ನೋಟಕ್ಕೆ 5 ಮುಖ್ಯ ಅಂಶಗಳು

ಆರ್ಥಿಕ ಸಮೀಕ್ಷೆ 2024 ಪ್ರಕಟ; ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.5 ರಿಂದ 7, ಒಳನೋಟ, ಮುನ್ನೋಟಕ್ಕೆ 5 ಮುಖ್ಯ ಅಂಶಗಳು

Umesh Kumar S HT Kannada

Jul 22, 2024 02:25 PM IST

google News

ಆರ್ಥಿಕ ಸಮೀಕ್ಷೆ 2024 ಪ್ರಕಟವಾಗಿದ್ದು, ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.5 ರಿಂದ 7 ಎಂದು ಅಂದಾಜಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಸಮೀಕ್ಷೆ ಮಂಡಿಸಿದರು.

  • ಕೇಂದ್ರ ಬಜೆಟ್‌ 2024 25 ರ ಮಂಡನೆಗೆ ಮುನ್ನಾದಿನವಾದ ಇಂದು ಆರ್ಥಿಕ ಸಮೀಕ್ಷೆ 2023 24 ಸಂಸತ್‌ನಲ್ಲಿ ಮಂಡನೆಯಾಗಿದೆ. ಇದರ ಪ್ರಕಾರ, ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.5 ರಿಂದ 7 ಇರಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಸಮೀಕ್ಷೆ ಮಂಡಿಸಿದರು. ಇದರ ಒಳನೋಟ, ಮುನ್ನೋಟಕ್ಕೆ 5 ಮುಖ್ಯ ಅಂಶಗಳು ಹೀಗಿವೆ.

ಆರ್ಥಿಕ ಸಮೀಕ್ಷೆ 2024 ಪ್ರಕಟವಾಗಿದ್ದು, ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.5 ರಿಂದ 7 ಎಂದು ಅಂದಾಜಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಸಮೀಕ್ಷೆ ಮಂಡಿಸಿದರು.
ಆರ್ಥಿಕ ಸಮೀಕ್ಷೆ 2024 ಪ್ರಕಟವಾಗಿದ್ದು, ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.5 ರಿಂದ 7 ಎಂದು ಅಂದಾಜಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಸಮೀಕ್ಷೆ ಮಂಡಿಸಿದರು. (PTI)

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದು (ಜುಲೈ 22) ಆರಂಭವಾಗಿದೆ. ಮೊದಲ ದಿನ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಸಮೀಕ್ಷೆ 2023 -24 (Economic Survey 2023 -24) ಅನ್ನು ಮಂಡಿಸಿದ್ದು, 2024-25 ರ ಆರ್ಥಿಕ ವರ್ಷದಲ್ಲಿ ಭಾರತದ ನೈಜ ಜಿಡಿಪಿ 6.5 ಮತ್ತು 7 ರಷ್ಟು ಬೆಳೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ನಾಳೆ (ಜುಲೈ 23) ಕೇಂದ್ರ ಬಜೆಟ್ 2024 25 (Union Budget 2024 25) ಮಂಡನೆಯಾಗುತ್ತಿದ್ದು, ಅದಕ್ಕೆ ಒಂದು ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆ ಮಂಡನೆಯಾಗಿದೆ. ಸಮೀಕ್ಷೆಯಲ್ಲಿ ಉಲ್ಲೇಖಿಸಿರುವ ಜಿಡಿಪಿ ಬೆಳವಣಿಗೆಯು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಸ್‌) ಅಂದಾಜಿಸಿದ ಶೇಕಡ 7ರ ಬೆಳವಣಿಗೆಗೆ ಹೊಂದಿಕೆಯಾಗುತ್ತಿರುವುದು ಗಮನಸೆಳೆದಿದೆ.

"ಭಾರತದ ನೈಜ ಜಿಡಿಪಿಯು ಕಳೆದ ಹಣಕಾಸು ವರ್ಷ (FY24)ದಲ್ಲಿ ಶೇಕಡ 8.2 ರಷ್ಟು ಬೆಳವಣಿಗೆ ದಾಖಲಿಸಿದೆ. ಸತತ ಮೂರನೇ ವರ್ಷಕ್ಕೆ ಶೇಕಡ 7 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿರುವ ಭಾರತದ ಅರ್ಥ ವ್ಯವಸ್ಥೆಯು ಸ್ಥಿರ ಬಳಕೆ ಬೇಡಿಕೆ ಮತ್ತು ಸ್ಥಿರವಾಗಿ ಹೂಡಿಕೆಯ ಬೇಡಿಕೆಯಿಂದ ಪ್ರೇರಿತವಾಗಿದೆ" ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ.

ಆರ್ಥಿಕ ಸಮೀಕ್ಷೆ 2023 -24; ಭಾರತೀಯ ಆರ್ಥಿಕತೆಯ ವಾರ್ಷಿಕ ವರದಿಯ 5 ಪ್ರಮುಖ ಮುಖ್ಯಾಂಶ

1) ಚೇತರಿಕೆಯ ಹಾದಿಯಲ್ಲಿದೆ ಭಾರತದ ಅರ್ಥ ವ್ಯವಸ್ಥೆ; ಜಾಗತಿಕ ಸವಾಲುಗಳ ನಡುವೆ ಭಾರತೀಯ ಆರ್ಥಿಕತೆಯು ಪ್ರಬಲವಾಗಿದೆ. ಆರ್ಥಿಕತೆಯು ಸತತ ಮೂರನೇ ವರ್ಷಕ್ಕೆ ಶೇಕಡ 7 ಕ್ಕಿಂತ ಹೆಚ್ಚು ಬೆಳವಣಿಗೆ ದಾಖಲಿಸಿತು.

2) ನಿರುದ್ಯೋಗ ಪ್ರಮಾಣ ಶೇಕಡ 3.2ಕ್ಕೆ; ಭಾರತೀಯ ಕಾರ್ಮಿಕ ಮಾರುಕಟ್ಟೆಯ ಸೂಚಕಗಳು ಕಳೆದ ಆರು ವರ್ಷಗಳಲ್ಲಿ ಸುಧಾರಿಸಿದೆ, ನಿರುದ್ಯೋಗ ದರವು 2022-23 ರಲ್ಲಿ ಶೇಕಡಾ 3.2 ಕ್ಕೆ ಇಳಿಕೆಯಾಗಿದೆ. ಹೆಚ್ಚುತ್ತಿರುವ ಉದ್ಯೋಗಿಗಳನ್ನು ಪೂರೈಸಲು ಅಥವಾ ಅವರಿಗೆ ಕೆಲಸ ಒದಗಿಸಲು ಭಾರತೀಯ ಆರ್ಥಿಕತೆಯು ಕೃಷಿಯೇತರ ವಲಯದಲ್ಲಿ 2030 ರವರೆಗೆ ವಾರ್ಷಿಕವಾಗಿ ಸುಮಾರು 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ.

3) ಅಮೃತ ಕಾಲಕ್ಕೆ ಬೆಳವಣಿಗೆಯ ತಂತ್ರ: ಅಮೃತ ಕಾಲಕ್ಕಾಗಿ ಸರ್ಕಾರವು ತನ್ನ ಬೆಳವಣಿಗೆಯ ಕಾರ್ಯತಂತ್ರವನ್ನು ಆರ್ಥಿಕ ಸಮೀಕ್ಷೆಯಲ್ಲಿ ಅನಾವರಣಗೊಳಿಸಿದೆ. ಆರ್ಥಿಕ ಪ್ರಗತಿ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಆರು ನಿರ್ಣಾಯಕ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದು, ಎಂಎಸ್‌ಎಂಇಗಳನ್ನು ವಿಸ್ತರಿಸುವುದು, ಬೆಳವಣಿಗೆಯ ಎಂಜಿನ್‌ ಆಗಿ ಕೃಷಿ, ಹಸಿರು ಪರಿವರ್ತನೆಯ ಹಣಕಾಸು, ಶಿಕ್ಷಣ-ಉದ್ಯೋಗದ ಅಂತರ ನಿವಾರಣೆ, ರಾಜ್ಯದ ಸಾಮರ್ಥ್ಯ ನಿರ್ಮಿಸುವುದು, ನಿರ್ವಹಿಸುವುದರ ಕಡೆಗೆ ಗಮನಹರಿಸುವುದು.

4) ಆಹಾರ ಹಣದುಬ್ಬರವೇ ಕಳವಳಕಾರಿ; ಆಹಾರ ಹಣದುಬ್ಬರವು ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ಕಾಳಜಿಯಾಗಿದೆ. ಭಾರತದಲ್ಲಿ, ಹವಾಮಾನ ವೈಪರೀತ್ಯಗಳು, ಖಾಲಿಯಾದ ಜಲಾಶಯಗಳು ಮತ್ತು ಬೆಳೆ ಹಾನಿಯಿಂದಾಗಿ ಕೃಷಿ ವಲಯವು ಸವಾಲುಗಳನ್ನು ಎದುರಿಸಿತು. ಇದು ಕೃಷಿ ಉತ್ಪಾದನೆ ಮತ್ತು ಆಹಾರ ಬೆಲೆಗಳ ಮೇಲೆ ಪರಿಣಾಮ ಬೀರಿತು. ಪರಿಣಾಮವಾಗಿ, ಆಹಾರ ಹಣದುಬ್ಬರವು 2023 ರಲ್ಲಿ 6.6 ಶೇಕಡಾ ಮತ್ತು 2024 ರಲ್ಲಿ 7.5 ಶೇಕಡಾಕ್ಕೆ ಏರಿತು.

5) ಕೃಷಿ ಕ್ಷೇತ್ರದ ಬೆಳವಣಿಗೆ ಶೇಕಡ 4.8; ಕೃಷಿ ವಲಯವು ಕಳೆದ ಐದು ವರ್ಷಗಳಲ್ಲಿ ಸ್ಥಿರ ಬೆಲೆಯಲ್ಲಿ ಶೇಕಡ 4.18 ರ ಸರಾಸರಿ ವಾರ್ಷಿಕ ಬೆಳವಣಿಗೆಯ ದರವನ್ನು ದಾಖಲಿಸಿದೆ. 2023-24 ರ ತಾತ್ಕಾಲಿಕ ಅಂದಾಜಿನ ಪ್ರಕಾರ, ಕೃಷಿ ಕ್ಷೇತ್ರದ ಬೆಳವಣಿಗೆ ದರವು ಸ್ಥಿರ ಬೆಲೆಗಳಲ್ಲಿ 1.4 ಶೇಕಡ ಇತ್ತು.

ಇದಕ್ಕೂ ಮೊದಲು, 2024-25 ರ ಮಧ್ಯಂತರ ಬಜೆಟ್‌ಗೆ ಕೆಲವೇ ದಿನಗಳ ಮೊದಲು ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದ ವರದಿಯನ್ನು ಫೆಬ್ರವರಿ 1 ರಂದು ಮಂಡಿಸಲಾಯಿತು. ಅದರಲ್ಲಿ ಪ್ರಸಕ್ತ ಹಣಕಾಸು ವರ್ಷ (FY25) ಕ್ಕೆ ಶೇಕಡ 7 ದಷ್ಟು GDP ಬೆಳವಣಿಗೆಯ ದರವನ್ನು ಅಂದಾಜು ಮಾಡಿದೆ. ಜೂನ್‌ನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬೆಳವಣಿಗೆಯನ್ನು ಸರಿಹೊಂದಿಸಿತು. FY25 ಕ್ಕೆ 7 ಪ್ರತಿಶತದಿಂದ 7.2 ಕ್ಕೆ ಮುನ್ಸೂಚನೆ. ಕಳೆದ ಮೂರು ವರ್ಷಗಳಲ್ಲಿ, ದೇಶದ ಬೆಳವಣಿಗೆ ದರವು ಸತತವಾಗಿ 7 ಶೇಕಡಾವನ್ನು ಮೀರಿದೆ.

(ಸುದ್ದಿ ಅಪ್ಡೇಟ್ ಆಗ್ತಾ ಇದೆ)

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ತಾಜಾ ವಿದ್ಯಮಾನ ಮತ್ತು ಬಜೆಟ್‌ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ