logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid Situation In India: ಕೋವಿಡ್‌ ಭೀತಿ: ರಾಜ್ಯಗಳಿಗೆ ಕೇಂದ್ರದ 'ಸೂಚನೆ': ಎಲ್ಲ 'ಸಿದ್ಧತೆ''ಗೆ ಅನುಮೋದನೆ..!

Covid Situation in India: ಕೋವಿಡ್‌ ಭೀತಿ: ರಾಜ್ಯಗಳಿಗೆ ಕೇಂದ್ರದ 'ಸೂಚನೆ': ಎಲ್ಲ 'ಸಿದ್ಧತೆ''ಗೆ ಅನುಮೋದನೆ..!

HT Kannada Desk HT Kannada

Dec 25, 2022 02:42 PM IST

ಸಾಂದರ್ಭಿಕ ಚಿತ್ರ

    • ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಇದೇ ಮಂಗಳವಾರ(ಡಿ.27) ದೇಶದ ಎಲ್ಲಾ ರಾಜ್ಯಗಳಲ್ಲಿರುವ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಅಣಕು ಕಾರ್ಯಾಚರಣೆಯು, ಹಾಸಿಗೆಗಳ ಲಭ್ಯತೆ, ಮಾನವ ಸಂಪನ್ಮೂಲ, ಲಾಜಿಸ್ಟಿಕ್ಸ್ ಮತ್ತು ವೈದ್ಯಕೀಯ ಆಮ್ಲಜನಕದ ಪೂರೈಕೆ ಸರಪಳಿಯ ಮೇಲೆ ಕೇಂದ್ರೀಕೃತವಾಗಿರಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (AFP)

ನವದೆಹಲಿ: ನೆರೆಯ ಚೀನಾದಲ್ಲಿ ಕೋವಿಡ್‌ ರೂಪಾಂತರ ತಳಿಯ ಆರ್ಭಟ ಜೋರಾಗಿರುವ ಬೆನ್ನಲ್ಲೇ, ಭಾರತದಲ್ಲಿ ಈ ರೂಪಾಂತರ ತಳಿಯ ಸಂಭಾವ್ಯ ದಾಳಿಯನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿರುವ ಕೇಂದ್ರ ಸರ್ಕಾರ, ಆಸ್ಪತ್ರೆಯಲ್ಲಿ ಅಣಕು ಕಾರ್ಯಾಚರಣೆಗಳಿಗೆ ಚಾಲನೆ ನೀಡುವಂತೆ ಸೂಚನೆ ನೀಡಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಇದೇ ಮಂಗಳವಾರ(ಡಿ.27) ದೇಶದ ಎಲ್ಲಾ ರಾಜ್ಯಗಳಲ್ಲಿರುವ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಅಣಕು ಕಾರ್ಯಾಚರಣೆಯು, ಹಾಸಿಗೆಗಳ ಲಭ್ಯತೆ, ಮಾನವ ಸಂಪನ್ಮೂಲ, ಲಾಜಿಸ್ಟಿಕ್ಸ್ ಮತ್ತು ವೈದ್ಯಕೀಯ ಆಮ್ಲಜನಕದ ಪೂರೈಕೆ ಸರಪಳಿಯ ಮೇಲೆ ಕೇಂದ್ರೀಕೃತವಾಗಿರಲಿದೆ.

ಕೋವಿಡ್ ಪ್ರಕರಣಗಳ ಹಿಂದಿನ ಸ್ಪೈಕ್‌ಗಳು, ವಿಶೇಷವಾಗಿ ಎರಡನೇ ಅಲೆಯು ಆರೋಗ್ಯ ಮೂಲಸೌಕರ್ಯ ಕ್ಷೇತ್ರದ ಅಸಮರ್ಥತೆಯನ್ನು ಎತ್ತಿ ತೋರಿಸಿತ್ತು. ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ, ರೋಗಿಗಳು ಉಸಿರಾಡಲು ಹೆಣಗಾಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಈ ಹಿನ್ನೆಲೆಯಲ್ಲಿ ಈ ಬಾರಿಯ ಸಂಭಾವ್ಯ ಕೋವಿಡ್‌ ರೂಪಾಂತರ ತಳಿಯ ದಾಳಿಯನ್ನು ಎದುರಿಸಲು, ಅಗತ್ಯ ಪೂರ್ವ ಸಿದ್ಧತೆಗೆ ಕೇಂದ್ರ ಸರ್ಕಾರ ಮೊರೆ ಹೋಗಿದೆ.

ಈ ಕುರುತು ನಿನ್ನೆ(ಡಿ.೨೪-ಶನಿವಾರ) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಗತ್ಯ ಆರೋಗ್ಯ ಕ್ರಮಗಳು ಜಾರಿಯಲ್ಲಿರುವುದು ಅಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಆದ್ದರಿಂದ 27ನೇ ಡಿಸೆಂಬರ್ 2022(ಮಂಗಳವಾರ) ರಂದು, ದೇಶಾದ್ಯಂತ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಅಣಕು ಡ್ರಿಲ್ ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ನೀಡಿದೆ.

ಆರೋಗ್ಯ ಕಾರ್ಯದರ್ಶಿಯು ಅಣಕು ಡ್ರಿಲ್‌ಗಳ ಪ್ರಮುಖ ಕೇಂದ್ರೀಕೃತ ಪ್ರದೇಶಗಳನ್ನು ಪಟ್ಟಿ ಮಾಡಿದ್ದು, ಐಸೋಲೇಷನ್ ಮತ್ತು ಹಾಸಿಗೆಗಳ ಲಭ್ಯತೆ ಪಟ್ಟಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ..

"ಆರೋಗ್ಯ ಸೌಲಭ್ಯಗಳ ಭೌಗೋಳಿಕವಾಗಿ ಪ್ರಾತಿನಿಧಿಕ ಲಭ್ಯತೆ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದೆ. ಹಾಸಿಗೆ ಸಾಮರ್ಥ್ಯಗಳು, ಐಸೋಲೇಷನ್‌ ವಾರ್ಡ್‌ಗಳು ಆಮ್ಲಜನಕ-ಬೆಂಬಲಿತ ಪ್ರತ್ಯೇಕ ಹಾಸಿಗೆಗಳು, ICU ಹಾಸಿಗೆಗಳು ಮತ್ತು ವೆಂಟಿಲೇಟರ್-ಬೆಂಬಲಿತ ಹಾಸಿಗೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು.." ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇಂದಿನ ಪ್ರಮುಖ ಸುದ್ದಿಗಳು

Bird flu: ಕೇರಳದಲ್ಲಿ ಹಕ್ಕಿ ಜ್ವರ, 6 ಸಾವಿರಕ್ಕೂ ಹೆಚ್ಚು ಹಕ್ಕಿಗಳ ಹತ್ಯೆ, ಕೊರೊನಾಂತಕದ ನಡುವೆ ಹಕ್ಕಿ ಜ್ವರದ ಭೀತಿ

ಒಂದೆಡೆ ವಿವಿಧ ದೇಶಗಳಲ್ಲಿ ಹೆಚ್ಚಾಗಿರುವ ಕೊರೊನಾ ಸಾಂಕ್ರಾಮಿಕವು ಭಾರತಕ್ಕೆ ಆತಂಕ ತಂದಿದೆ. ಹಲವು ನಿಯಮಗಳು, ಮಾರ್ಗಸೂಚಿಗಳನ್ನು ಸರಕಾರ ಪ್ರಕಟಿಸುತ್ತಿದೆ. ಗಾಯದ ಮೇಲೆ ಬರೆ ಎಂಬಂತೆ ಇದೀಗ ಕೇರಳದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಕೇರಳದ ಕೊಟ್ಟಾಯಂನಲ್ಲಿ ಹಲವು ದಿನಗಳಿಂದ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಕೊಲ್ಲಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Kamal Haasan in Bharat Jodo Yatra: ರಾಹುಲ್‌ ಗಾಂಧಿ ಕೈ ಕೈ ಹಿಡಿದು ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾದ ಕಮಲ್‌ ಹಾಸನ್..‌ PHOTOS

ದೆಹಲಿಯಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯಲ್ಲಿ ಕಮಲ್‌ ಹಾಸನ್‌ ಭಾಗಿ. ರಾಹುಲ್‌ ಗಾಂಧಿ ಕೈ ಹಿಡಿದು ಬೃಹತ್‌ ರ್ಯಾಲಿಗೆ ಸಾಥ್‌ ನೀಡಿದ ತಮಿಳು ಸೂಪರ್‌ಸ್ಟಾರ್‌. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ