Miss Universe 2024: ತೊನ್ನು ಇದೆ ತೊಂದರೆಯಿಲ್ಲ, ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿ ಜಗತ್ತಿನ ಗಮನ ಸೆಳೆದ ಸುಂದರಿ
Nov 19, 2024 06:46 PM IST
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿ ಜಗತ್ತಿನ ಗಮನ ಸೆಳೆದ ಸುಂದರಿ
- Miss Universe 2024: ನವೆಂಬರ್ 17 ರಂದು ಮೆಕ್ಸಿಕೋ ನಗರದಲ್ಲಿ ನಡೆದ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಈಜಿಪ್ಟ್‌ನ ಲೋಜಿನಾ ಸಲಾಹ್ ಇತಿಹಾಸ ಸೃಷ್ಟಿಸಿದ್ದಾರೆ. ಕನ್ನಡದಲ್ಲಿ ತೊನ್ನು ಎಂದು ಕರೆಯಲ್ಪಡುವ ವಿತಲಿಗೋ (Vitiligo) ಚರ್ಮದ ರ ನಡುವೆಯೂ ಇವರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
Miss Universe 2024: ನವೆಂಬರ್ 17 ರಂದು ಮೆಕ್ಸಿಕೋ ನಗರದಲ್ಲಿ ನಡೆದ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಈಜಿಪ್ಟ್‌ನ ಲೋಜಿನಾ ಸಲಾಹ್ ಇತಿಹಾಸ ಸೃಷ್ಟಿಸಿದ್ದಾರೆ. ಕನ್ನಡದಲ್ಲಿ ತೊನ್ನು ಎಂದು ಕರೆಯಲ್ಪಡುವ ವಿಟಲಿಗೋ (Vitiligo) ಚರ್ಮದ ನಡುವೆಯೂ ಇವರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ವಿಶ್ವ ಸೌಂದರ್ಯ ಸ್ಪರ್ಧೆ ಎಂದರೆ ಬಾಹ್ಯ ಸೌಂದರ್ಯ ಮಾತ್ರವಲ್ಲ ಎಂಬ ಸೂಚನೆಯನ್ನು ಜಗತ್ತಿಗೆ ನೀಡಿದ್ದಾರೆ. ಈ ರೀತಿ ತೊನ್ನು ಇದ್ದವರು ಭಾಗವಹಿಸಿದ ಮೊದಲ ಮಿಸ್ ಯೂನಿವರ್ಸ್ ಸ್ಪರ್ಧೆ ಇದಾಗಿದೆ. ಮಿಸ್ ಯೂನಿವರ್ಸ್‌ನ 73 ವರ್ಷಗಳಲ್ಲಿ ಅಗ್ರ 30 ಅನ್ನು ತಲುಪಿದ ಈಜಿಪ್ತ್‌ನ ಮೊದಲ ಸ್ಪರ್ಧಿ ಇವರಾಗಿದ್ದಾರೆ.
ಮಿಸ್ ಯೂನಿವರ್ಸ್ 2024ರಲ್ಲಿ ನ್ಯಾಷನಲ್ ಕಾಸ್ಟ್ಯೂಮ್ ರೌಂಡ್‌ನಲ್ಲಿ ಸಲಾಹ್ ಕ್ಲಿಯೋಪಾತ್ರ ರೂಪದಲ್ಲಿ ಕಂಗೊಳಿಸಿದರು. ಸಿಮಿಯೋನ್ ಕ್ಯಾಯೆಟಾನೊ ವಿನ್ಯಾಸಗೊಳಿಸಿದ ತನ್ನ ಬೆಜ್ವೆಲ್ಡ್ ವೇಷಭೂಷಣದ ಚಿತ್ರಗಳನ್ನು ಇವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
"ನನ್ನ ರಾಷ್ಟ್ರೀಯ ವೇಷಭೂಷಣದ ಹೆಸರು 'ದಿ ರೈಸ್ ಫ್ರಮ್ ದಿ ಗೋರಿ' ಮತ್ತು ಇದು ನಾಯಕತ್ವದ ಪ್ರಬಲ ಪರಂಪರೆಯ ಪುನರಾಗಮನದ ಸಂಕೇತ. ಬಹಳ ಹಿಂದೆ ಮಹಿಳೆಯರು ಅಪ್ರತಿಮ ಶಕ್ತಿಯಿಂದ ಆಡಳಿತ ನಡೆಸುತ್ತಿದ್ದ ಕಾಲವಿತ್ತು. ಯೋಧರಾಗಿ, ರಾಣಿಯರಾಗಿ ಕಾರ್ಯನಿರ್ವಹಿಸಿದ್ದಾರೆ.. ಅವರು ಯಾವುದೇ ವ್ಯಕ್ತಿಗೆ ತಲೆಬಾಗುವುದಿಲ್ಲ. ಇವರೆಲ್ಲರ ಸಂಕೇತವೇ ಕ್ಲಿಯೋಪಾತ್ರ" ಎಂದು ಲೋಜಿನಾ ಸಲಾಹ್ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಇವರು ಇನ್‌ಸ್ಟಾಗ್ರಾಂನಲ್ಲಿ 1.8 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇವರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವುದು "ಸೌಂದರ್ಯ ಸ್ಪರ್ಧೆಗೆ ಹೊಸ ವ್ಯಾಖ್ಯಾನ ನೀಡಿದೆ" ಎಂದು ಅಭಿಮಾನಿಗಳು ಹೇಳಿದ್ದಾರೆ. "ಈ ಪ್ರಯಾಣದಲ್ಲಿ ನನ್ನ ಜತೆಗೆ ಇದ್ದವರಿಗೆ ಧನ್ಯವಾದಗಳು. ಇದು ಬಹಳಷ್ಟು ಅರ್ಥ ಹೊಂದಿದೆ. ! ದ್ವೇಷ ಮತ್ತು ತಾರತಮ್ಯದಿಂದ ಮುಕ್ತವಾದ ಜಗತ್ತನ್ನು ರೂಪಿಸುವುದನ್ನು ಮುಂದುವರಿಸೋಣ" ಎಂದು ಲೋಜಿನಾ ಸಲಾಹ್ ಹೇಳಿದ್ದಾರೆ.
73ನೇ ಮಿಸ್ ಯೂನಿವರ್ಸ್ ಸ್ಪರ್ಧೆಯು ಕೆಲವು ದಿನಗಳ ಹಿಂದೆ ಮೆಕ್ಸಿಕೊದಲ್ಲಿ ನಡೆಯಿತು. ಜಗತ್ತಿನ ವಿವಿಧೆಡೆಯ 125 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಲೋಜಿನಾ ಸಲಾಹ್ ಸ್ಪರ್ಧೆಯಲ್ಲಿ ಗೆಲುವು ಪಡೆಯಲಿಲ್ಲ. ಆದರೆ, ಜಗತ್ತು ಈಗ ಈಕೆಯ ಕುರಿತು ಮಾತನಾಡುತ್ತಿದೆ.
ವಿತಲಿಗೊ ಹೊಂದಿರುವ ಜನರು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಎಂದಿಗೂ ಸ್ಪರ್ಧಿಸಿರಲಿಲ್ಲ. ಆದರೆ ಇವರು ಆತ್ಮವಿಶ್ವಾಸದಿಂದ ಮುಂದೆ ಹೆಜ್ಜೆ ಇಟ್ಟಿದ್ದರು. ಈ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಲೋಕಿನಾ ಸಲಾಹ್ ಏಪ್ರಿಲ್ 21, 1990 ರಂದು ಈಜಿಪ್ಟ್‌ನಲ್ಲಿ ಜನಿಸಿದರು. ಕರಾವಳಿ ನಗರ ಅಲೆಕ್ಸಾಂಡ್ರಿಯಾದಲ್ಲಿ ಬೆಳೆದರು. ವಿಟಿಲಿಗೊವನ್ನು ಅರ್ಥಮಾಡಿಕೊಂಡು ಸೌಂದರ್ಯದ ಜಗತ್ತಿಗೆ ಕಾಲಿಟ್ಟರು. ಮೂರು ವರ್ಷಗಳ ಹಿಂದೆ ಲೋಕಿನಾ ತನ್ನ 10 ವರ್ಷದ ಮಗಳು ಆಮಿಯೊಂದಿಗೆ ದುಬೈಗೆ ತೆರಳಿದ್ದಾರೆ. ಮಹಿಳೆಯರ ಪರವಾಗಿ ಹೋರಾಟಗಾರ್ತಿಯಾಗಿ ಬಿಯಾಂಡ್ ದಿ ಸರ್ಫೇಸ್ ಚಳವಳಿಯನ್ನು ಪ್ರಾರಂಭಿಸಿದ್ದಾರೆ.
ತೊನ್ನು ಎಂದರೇನು?
ಇದಕ್ಕೆ ಕನ್ನಡದಲ್ಲಿ ತೊನ್ನು ಮತ್ತು ಇಂಗ್ಲಿಷ್‌ನಲ್ಲಿ ವಿತಿಲಿಗೊ ಎಂದು ಕರೆಯುತ್ತಾರೆ. ದೇಹದ ಚರ್ಮ ತಮ್ಮ ಬಣ್ಣ ಕಳೆದುಕೊಳ್ಳುವ ಒಂದು ಅನಾರೋಗ್ಯ ಸ್ಥಿತಿಯಾಗಿದೆ. ಚರ್ಮದ ವರ್ಣದ್ರವ್ಯ ಜೀವಕೋಶಗಳು ಸಾಯುವ ಅಥವಾ ಕಾರ್ಯನಿರ್ವಹಿಸಲು ಅಸಾಧ್ಯವಾದಾಗ ತೊನ್ನು ಎಂಬ ಸ್ಥಿತಿ ಉಂಟಾಗುತ್ತದೆ.