logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಯನಾಡು ಭೂಕುಸಿತ ಸ್ಥಳದ ರಕ್ಷಣಾ ಕಾರ್ಯಕರ್ತರು ಒಲಿಂಪಿಕ್ ಪದಕ ವಿಜೇತರಿಗೆ ಕಡಿಮೆ ಇಲ್ಲ; ಮೈ ನಡುಗಿಸುವ ವೈರಲ್‌ ವಿಡಿಯೋ

ವಯನಾಡು ಭೂಕುಸಿತ ಸ್ಥಳದ ರಕ್ಷಣಾ ಕಾರ್ಯಕರ್ತರು ಒಲಿಂಪಿಕ್ ಪದಕ ವಿಜೇತರಿಗೆ ಕಡಿಮೆ ಇಲ್ಲ; ಮೈ ನಡುಗಿಸುವ ವೈರಲ್‌ ವಿಡಿಯೋ

Umesh Kumar S HT Kannada

Jul 31, 2024 04:14 PM IST

google News

ವಯನಾಡು ಭೂಕುಸಿತ ಸ್ಥಳದ ರಕ್ಷಣಾ ಕಾರ್ಯಕರ್ತರು ಒಲಿಂಪಿಕ್ ಪದಕ ವಿಜೇತರಿಗೆ ಕಡಿಮೆ ಇಲ್ಲ; ಮೈ ನಡುಗಿಸುವ ವೈರಲ್‌ ವಿಡಿಯೋದ ಚಿತ್ರಗಳು.

  • Wayanad Landslides: ಕೇರಳದ ವಯನಾಡು ಭೂಕುಸಿತ ಸುತ್ತಮುತ್ತಲಿನ ಪ್ರದೇಶದಲ್ಲಿ ತಲ್ಲಣ ಸೃಷ್ಟಿಸಿದೆ. ಮೈ ನಡುಗಿಸುವ ವೈರಲ್‌ ವಿಡಿಯೋಗಳು ಜನಮನ ಸೆಳೆದಿದ್ದು, ವಯನಾಡು ಭೂಕುಸಿತ ಸ್ಥಳದ ರಕ್ಷಣಾ ಕಾರ್ಯಕರ್ತರು ಒಲಿಂಪಿಕ್ ಪದಕ ವಿಜೇತರಿಗೆ ಕಡಿಮೆ ಇಲ್ಲ ಎಂಬ ಪ್ರಶಂಸೆ ವ್ಯಕ್ತವಾಗಿದೆ. ಇಲ್ಲಿವೆ ಕೆಲವು ವಿಡಿಯೋಸ್.

ವಯನಾಡು ಭೂಕುಸಿತ ಸ್ಥಳದ ರಕ್ಷಣಾ ಕಾರ್ಯಕರ್ತರು ಒಲಿಂಪಿಕ್ ಪದಕ ವಿಜೇತರಿಗೆ ಕಡಿಮೆ ಇಲ್ಲ; ಮೈ ನಡುಗಿಸುವ ವೈರಲ್‌ ವಿಡಿಯೋದ ಚಿತ್ರಗಳು.
ವಯನಾಡು ಭೂಕುಸಿತ ಸ್ಥಳದ ರಕ್ಷಣಾ ಕಾರ್ಯಕರ್ತರು ಒಲಿಂಪಿಕ್ ಪದಕ ವಿಜೇತರಿಗೆ ಕಡಿಮೆ ಇಲ್ಲ; ಮೈ ನಡುಗಿಸುವ ವೈರಲ್‌ ವಿಡಿಯೋದ ಚಿತ್ರಗಳು. (Reuters/ PRODefRjsthn)

ಕಾಸರಗೋಡು: ಉತ್ತರ ಕೇರಳದ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳವಾರ (ಜುಲೈ 30) ನಸುಕಿನ ವೇಳೆ ಸಂಭವಿಸಿದ ವಯನಾಡು ಭೂಕುಸಿತದ ಬಳಿಕ ರಕ್ಷಣಾ ಕಾರ್ಯಾಚರಣೆ ಚುರುಕಾಗಿ ಸಾಗಿದೆ. ಅಲ್ಲಿ ರಕ್ಷಣಾ ಮತ್ತು ಪರಿಹಾರ ತಂಡದ ಸದಸ್ಯರು ಇತರರ ಜೀವ ಉಳಿಸುವುದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅನೇಕ ವೈರಲ್ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆಯುತ್ತಿವೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ವಯನಾಡು ಭೂಕುಸಿತ ಪ್ರದೇಶದಲ್ಲಿ ಕೆಸರು ತುಂಬಿದ್ದು, ಹತ್ತಾಳೆತ್ತರದ ಪ್ರವಾಹ ಪರಿಸ್ಥಿತಿ ಇರುವಾಗ ರಕ್ಷಣಾ ಸಿಬ್ಬಂದಿ ಹಗ್ಗ ಕಟ್ಟಿಕೊಂಡು ಪ್ರವಾಹಕ್ಕೆ ಸಿಲುಕಿದವರ ಪ್ರಾಣ ರಕ್ಷಣೆಯಲ್ಲಿ ತೊಡಗಿರುವ ದೃಶ್ಯಗಳು ಮೈಯಲ್ಲಿ ನಡುಕ ಹುಟ್ಟಿಸುವಂತೆ ಇದೆ. ವಯನಾಡು ಭೂಕುಸಿತದಲ್ಲಿ ಇದುವರೆಗೆ 150ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದಲ್ಲದೆ, 180 ಕ್ಕೂ ಹೆಚ್ಚು ಜನ ನಾಪತ್ತೆಯಾಗಿರುವ ಶಂಕೆ ಇದೆ.

ಭಾರತೀಯ ಸೇನೆೆ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್‌ ಒಳಗೊಂಡ ರಕ್ಷಣಾ ತಂಡಗಳು ಪ್ರತಿಕೂಲ ಹವಾಮಾನದ ನಡುವೆ ಬದುಕಿ ಉಳಿದವರ ಪತ್ತೆಗಾಗಿ ಶೋಧ ನಡೆಸುತ್ತಿವೆ. ಸಂತ್ರಸ್ತರಿಗೆ ನೆರವಾಗುವ ಕೆಲಸವನ್ನೂ ಸರ್ಕಾರ ಮಾಡುತ್ತಿದೆ.

ಮೈ ನಡುಗಿಸುವಂತಹ ರಕ್ಷಣಾ ಕಾರ್ಯದ ವಿಡಿಯೋ; ಒಲಿಂಪಿಕ್ ಪದಕ ವಿಜೇತರಿಗೆ ಕಡಿಮೆ ಇಲ್ಲದ ಸಾಹಸ

"ನೆಲ ಕುಸಿದಾಗ, ನಿಜವಾದ ಶಕ್ತಿ ನಮ್ಮನ್ನು ಮೇಲಕ್ಕೆತ್ತುತ್ತದೆ. ತಮ್ಮ ಬೆನ್ನಿನ ಮೇಲೆ ಭರವಸೆಯನ್ನು ಹೊತ್ತಿರುವ ಮದ್ರಾಸ್ ಟೆರಿಯರ್ಸ್ ನ ಧೈರ್ಯಶಾಲಿ ಸೈನಿಕರಿಗೆ ನಮಸ್ಕರಿಸುತ್ತೇನೆ. ವಯನಾಡ್ನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪ್ರಯತ್ನಗಳನ್ನು ಕೇರಳ ಶ್ಲಾಘಿಸುತ್ತದೆ" ಎಂದು ಕೇರಳದ ರಕ್ಷಣಾ ಪಿಆರ್‌ಒನ ಅಧಿಕೃತ ಎಕ್ಸ್ ಹ್ಯಾಂಡಲ್ ಪೋಸ್ಟ್ ಮಾಡಿದ್ದು, ಕರ್ತವ್ಯದಲ್ಲಿರುವ ಮದ್ರಾಸ್ ಟೆರಿಯರ್ಸ್ ರಕ್ಷಣಾ ಸಿಬ್ಬಂದಿಯ ಫೋಟೋಗಳನ್ನು ಹಂಚಿಕೊಂಡಿದೆ.

ಮಂಗಳವಾರ (ಜುಲೈ 30) ನಸುಕಿನ 2 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದೆ ಮತ್ತು ಮುಂದಿನದು ಮುಂಜಾನೆ 4:30 ರ ಸುಮಾರಿಗೆ ಸಂಭವಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ರಕ್ಷಣಾ ತಂಡ

ಕೇರಳದ ವಯನಾಡಿನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಿ ಕನಿಷ್ಠ 36 ಜನರು ಸಾವನ್ನಪ್ಪಿದ ನಂತರ ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು, ಸೇನೆಯ ಹಲವು ಅಂಕಣಗಳು ಮತ್ತು ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್‌ಗಳು ಕೇರಳದ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವು.

“ಹೆಚ್ಚುವರಿಯಾಗಿ, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನ ತಂಡ ಅಲ್ಲಿಗೆ ಬರಬೇಕಿತ್ತು...ಸ್ಥಳೀಯ ಪೊಲೀಸ್ ಮತ್ತು ತುರ್ತು ಪ್ರತಿಕ್ರಿಯೆ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಇನ್ನೂ ಮೂರು ಎನ್‌ಡಿಆರ್‌ಎಫ್ ತಂಡಗಳು ಅಲ್ಲಿಗೆ ತೆರಳಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಗೆ ತಿಳಿಸಿದರು.

ಸಂತ್ರಸ್ತರಿಗೆ ಸಹಾಯ ಮಾಡಲು ಕೇಂದ್ರ ಗೃಹ ಸಚಿವಾಲಯ ಮತ್ತು ಕೇರಳ ಸರ್ಕಾರವು ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಅವರು ಹೇಳಿದರು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇರಳಕ್ಕೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

“ಸೇನೆಯಿಂದ ಇನ್ನೂ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಭಾರತೀಯ ನೌಕಾಪಡೆಯ ಐಎನ್‌ಎಸ್ ಝಮೊರಿನ್ ಕೂಡ ನೆರವು ನೀಡುತ್ತಿತ್ತು. ಸರ್ಕಾರ ಹಗಲಿರುಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ, ಕೇಂದ್ರ ಗೃಹ ಸಚಿವಾಲಯದ ಇಬ್ಬರು ಅಧಿಕಾರಿಗಳು ಸಮಯೋಚಿತ ಮತ್ತು ಪರಿಣಾಮಕಾರಿ ಪರಿಹಾರ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಈ ಪ್ರಯತ್ನಗಳ ಸಮನ್ವಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ" ಎಂದು ಸಚಿವ ರೈ ಹೇಳಿದರು.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ