logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Crazy Cricket Record: ನಂಬಲಾಗದ ದಾಖಲೆ, 1 ಎಸೆತದಲ್ಲಿ ಬಂದಿತ್ತು 286 ರನ್; ಕ್ರಿಕೆಟ್ ಇತಿಹಾಸದಲ್ಲಿ ನಡೆದಿತ್ತು ಅಚ್ಚರಿಯ ಸಂಗತಿ!

Crazy Cricket Record: ನಂಬಲಾಗದ ದಾಖಲೆ, 1 ಎಸೆತದಲ್ಲಿ ಬಂದಿತ್ತು 286 ರನ್; ಕ್ರಿಕೆಟ್ ಇತಿಹಾಸದಲ್ಲಿ ನಡೆದಿತ್ತು ಅಚ್ಚರಿಯ ಸಂಗತಿ!

May 10, 2023 07:00 AM IST

ಜಂಟಲ್​​ಮನ್​ ಗೇಮ್​ ಕ್ರಿಕೆಟ್​​​, ವಿಶ್ವ ಪ್ರಸಿದ್ಧಿ ಪಡೆದಿದೆ. ಮನರಂಜನೆ ಹೆಚ್ಚಿಸಿದೆ. ಹೊಡಿಬಡಿ ಆಟದ ಮೂಲಕ ರಂಗು ಹೆಚ್ಚಿಸಿದೆ. ದಾಖಲೆಗಳನ್ನು ಸೃಷ್ಟಿಸುವುದು, ಅವುಗಳನ್ನು ಮುರಿಯುವುದು ಸಾಮಾನ್ಯ. ಆದರೆ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಸಂಗತಿಯೊಂದು ನಡೆದಿರುವುದು ನಿಮಗೆ ಗೊತ್ತಾ? ಕ್ರಿಕೆಟ್​ನಲ್ಲಿ ನಂಬಲಾಗದ ದಾಖಲೆಯೊಂದು ನಿರ್ಮಾಣವಾಗಿದೆ.

  • ಜಂಟಲ್​​ಮನ್​ ಗೇಮ್​ ಕ್ರಿಕೆಟ್​​​, ವಿಶ್ವ ಪ್ರಸಿದ್ಧಿ ಪಡೆದಿದೆ. ಮನರಂಜನೆ ಹೆಚ್ಚಿಸಿದೆ. ಹೊಡಿಬಡಿ ಆಟದ ಮೂಲಕ ರಂಗು ಹೆಚ್ಚಿಸಿದೆ. ದಾಖಲೆಗಳನ್ನು ಸೃಷ್ಟಿಸುವುದು, ಅವುಗಳನ್ನು ಮುರಿಯುವುದು ಸಾಮಾನ್ಯ. ಆದರೆ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಸಂಗತಿಯೊಂದು ನಡೆದಿರುವುದು ನಿಮಗೆ ಗೊತ್ತಾ? ಕ್ರಿಕೆಟ್​ನಲ್ಲಿ ನಂಬಲಾಗದ ದಾಖಲೆಯೊಂದು ನಿರ್ಮಾಣವಾಗಿದೆ.
ಇದು ಆರು ಎಸೆತಗಳಲ್ಲಿ 6 ಸಿಕ್ಸರ್​, ಆರು ಬಾಲ್​​ಗಳಿಗೆ 4 ಬೌಂಡರಿ ಸಿಡಿಸುವ ಯುಗ. ಒಂದು ಓವರ್​​ಗೆ 37 ರನ್​ ಕೊಟ್ಟವರೂ ಇದ್ದಾರೆ, ಒಂದು ಎಸೆತಕ್ಕೆ 19 ರನ್​ ನೀಡಿದವರೂ ಇದ್ದಾರೆ. ಯಾವತ್ತಾದರೂ ಒಂದು ಎಸೆತಕ್ಕೆ 286 ರನ್​ ಕೊಟ್ಟಿದ್ದನ್ನೂ ನೀವು ಯಾವತ್ತಾದರೂ ನೋಡಿದ್ದೀರಾ? ಈ ಸುದ್ದಿ ಕೇಳಿ ನಗು ಬರಬಹುದು. ಆದರೆ ಅಚ್ಚರಿ ಎನಿಸಿದರೂ ಸತ್ಯ.
(1 / 6)

ಹೌದು..! ಇಂತಹದ್ದೊಂದು ಘಟನೆ ಕ್ರಿಕೆಟ್ ರಂಗದಲ್ಲಿ ನಡೆದಿದೆ. ಈ ಘಟನೆ ಜರುಗಿದ್ದು, ಜನವರಿ 15, 1894ರಲ್ಲಿ. ಪಶ್ಚಿಮ ಆಸ್ಟ್ರೇಲಿಯಾ ಮತ್ತು ವಿಕ್ಟೋರಿಯಾ ತಂಡಗಳ ನಡುವೆ ನಡೆದ ಸ್ಕ್ರಾಚ್ ಇಲೆವನ್ ಪಂದ್ಯದಲ್ಲಿ ಒಂದು ಎಸೆತಕ್ಕೆ 286 ರನ್​ ಹರಿದು ಬಂದಿದ್ದವು.
(2 / 6)

ಆದರೆ ಹೇಗೆ ಒಂದು ಎಸೆತಕ್ಕೆ 286 ರನ್​ ಬರಲು ಸಾಧ್ಯ ಎಂಬ ಪ್ರಶ್ನೆ ನಿಮಗೆ ಕಾಡಬಹುದು. ಒಂದು ಎಸೆತಕ್ಕೆ 6, 4, 3 ರನ್​ ಕೆಲವೊಮ್ಮೆ 2 ರನ್​ ಗಳಿಸುವುದೂ ಕಷ್ಟ. ಅಂತಹದರಲ್ಲಿ ಇಷ್ಟೊಂದು ರನ್ ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿವುದು ಸಹಜ. ಅದಕ್ಕೆ ಉತ್ತರ ಹೀಗಿದೆ.
(3 / 6)

ಸ್ಕ್ರಾಚ್ ಇಲೆವನ್ ಪಂದ್ಯದಲ್ಲಿ ವಿಕ್ಟೋರಿಯಾ ತಂಡವು ಬ್ಯಾಟಿಂಗ್ ಮಾಡುತ್ತದೆ. ಈ ಪಂದ್ಯದ ವೇಳೆ ಎದುರಾಳಿ ಎಸೆದ ಚೆಂಡು ಮೈದಾನದ ಒಳಗಿದ್ದ ಜರಾಹ್ ಎಂಬ ಮರದ ಕೊಂಬೆಯಲ್ಲಿ ಸಿಲುಕಿಕೊಂಡಿತ್ತು. ಮರದಲ್ಲಿ ಸಿಲುಕಿದ್ದ ಚೆಂಡನ್ನು ತೆಗೆದುಕೊಳ್ಳಲು ಫೀಲ್ಡಿಂಗ್​ ನಡೆಸ್ತಿದ್ದ ಆಟಗಾರರು, ಹರಸಾಹಸವೇ ಪಟ್ಟರು.
(4 / 6)

ಈ ಸಂದರ್ಭದಲ್ಲಿ ರನ್​​ ಗಳಿಸುವ ಧಾವಂತದಲ್ಲಿ ತಂಡದ ಬ್ಯಾಟ್ಸ್​​​ಮನ್​ಗಳು ಬರೋಬ್ಬರಿ ಗಳಿಸಿದ್ದು, 286 ರನ್. ಆದರೆ ಇದಕ್ಕೆ ಅಂಪೈರ್​​​ಗಳು ಮಾನ್ಯತೆ ನೀಡಲಿಲ್ಲ ಎಂಬುದು ತಿಳಿದು ಬಂದಿದೆ. ಆದರೆ, ಕೆಲವು ವರದಿಗಳಲ್ಲಿ ಇದಕ್ಕೆ ಮಾನ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
(5 / 6)

ಈ ಘಟನೆ ನಿಜವಾಗಿ ನಡೆದಿದೆ ಎಂಬುದನ್ನು ನಂಬಲೇಬೇಕು. ಲಂಡನ್ ಮೂಲದ ಇಂಗ್ಲೀಷ್ ಭಾಷೆಯಲ್ಲಿ ಪ್ರಕಟವಾಗುವ ಪಾಲ್ ಮಾಲ್ ಗ್ಯಾಜೆಟ್-1865ರಲ್ಲಿ ಈ ಕುರಿತು ವರದಿಯಾಗಿತ್ತು. ಈ ಪಂದ್ಯದಲ್ಲಿ ವಿಕ್ಟೋರಿಯಾ ಗೆದ್ದಿತ್ತು. ಆದರೆ ಇದು ಸತ್ಯವೋ, ಸುಳ್ಳೋ ಎಂಬುದು ಈವರೆಗೂ ತಿಳಿದು ಬಂದಿಲ್ಲ.
(6 / 6)

    ಹಂಚಿಕೊಳ್ಳಲು ಲೇಖನಗಳು