logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ Vs ಇಂಗ್ಲೆಂಡ್‌ 5ನೇ ಟೆಸ್ಟ್;‌ ಧರ್ಮಶಾಲಾ ಟೆಸ್ಟ್‌ ಪಂದ್ಯದ ಸ್ವಾರಸ್ಯಕರ ಅಂಶಗಳಿವು

ಭಾರತ vs ಇಂಗ್ಲೆಂಡ್‌ 5ನೇ ಟೆಸ್ಟ್;‌ ಧರ್ಮಶಾಲಾ ಟೆಸ್ಟ್‌ ಪಂದ್ಯದ ಸ್ವಾರಸ್ಯಕರ ಅಂಶಗಳಿವು

Mar 06, 2024 05:36 PM IST

ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕಾಗಿ ರೋಹಿತ್ ಶರ್ಮಾ ನೇತೃತ್ವದ ಟೀಮ್‌ ಇಂಡಿಯಾ ಮತ್ತು ಬೆನ್‌ ಸ್ಟೋಕ್ಸ್‌ ನೇತೃತ್ವದ ಆಂಗ್ಲ ಪಡೆಯು ಧರ್ಮಶಾಲಾದಲ್ಲಿ ಅಂತಿಮ ಹಂತದ ಅಭ್ಯಾಸ ನಡೆಸಿವೆ. ಸರಣಿಯ ನಿರ್ಣಾಯಕ ಪಂದ್ಯಕ್ಕೂ ಮುನ್ನ ಕೆಲವೊಂದು ಸ್ವಾರಸ್ಯಕರ ಅಂಶಗಳನ್ನು ತಿಳಿಯೋಣ.

  • ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕಾಗಿ ರೋಹಿತ್ ಶರ್ಮಾ ನೇತೃತ್ವದ ಟೀಮ್‌ ಇಂಡಿಯಾ ಮತ್ತು ಬೆನ್‌ ಸ್ಟೋಕ್ಸ್‌ ನೇತೃತ್ವದ ಆಂಗ್ಲ ಪಡೆಯು ಧರ್ಮಶಾಲಾದಲ್ಲಿ ಅಂತಿಮ ಹಂತದ ಅಭ್ಯಾಸ ನಡೆಸಿವೆ. ಸರಣಿಯ ನಿರ್ಣಾಯಕ ಪಂದ್ಯಕ್ಕೂ ಮುನ್ನ ಕೆಲವೊಂದು ಸ್ವಾರಸ್ಯಕರ ಅಂಶಗಳನ್ನು ತಿಳಿಯೋಣ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತದ ಆಟಗಾರರು ಅಭ್ಯಾಸದಲ್ಲಿ ಭಾಗವ ಹಿಸುತ್ತಿರುವುದನ್ನು ನೋಡಬಹುದು. ಇದು ಭಾರತದ ಅತ್ಯಂತ ಸುಂದರ ಕ್ರೀಡಾಂಗಣ.
(1 / 8)
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತದ ಆಟಗಾರರು ಅಭ್ಯಾಸದಲ್ಲಿ ಭಾಗವ ಹಿಸುತ್ತಿರುವುದನ್ನು ನೋಡಬಹುದು. ಇದು ಭಾರತದ ಅತ್ಯಂತ ಸುಂದರ ಕ್ರೀಡಾಂಗಣ.(AFP)
ಅಭ್ಯಾಸದ ವೇಳೆ ಶುಬ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಹೀಗೆ ಕಾಣಿಸಿಕೊಂಡರು. ಈ ಇಬ್ಬರು ಇಂಗ್ಲೆಂಡ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 
(2 / 8)
ಅಭ್ಯಾಸದ ವೇಳೆ ಶುಬ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಹೀಗೆ ಕಾಣಿಸಿಕೊಂಡರು. ಈ ಇಬ್ಬರು ಇಂಗ್ಲೆಂಡ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. (PTI)
ರವಿಚಂದ್ರನ್ ಅಶ್ವಿನ್ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆಡಲಿದ್ದಾರೆ. ಹೀಗಾಗಿ ಅಶ್ವಿನ್‌ ಪಾಲಿಗೆ ಈ ಪಂದ್ಯ ಮಹತ್ವದ್ದು. ಅಶ್ವಿನ್‌ ಸರಣಿಯಲ್ಲಿ ಈವರೆಗೆ ಒಟ್ಟು 17 ವಿಕೆಟ್‌ ಕಬಳಿಸಿದ್ದಾರೆ. ಇವರೊಂದಿಗೆ ಬುಮ್ರಾ ಹಾಗೂ ಜಡೇಜಾ ಕೂಡಾ 17 ವಿಕೆಟ್‌ ಪಡೆದಿರುವುದು ವಿಶೇಷ.
(3 / 8)
ರವಿಚಂದ್ರನ್ ಅಶ್ವಿನ್ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆಡಲಿದ್ದಾರೆ. ಹೀಗಾಗಿ ಅಶ್ವಿನ್‌ ಪಾಲಿಗೆ ಈ ಪಂದ್ಯ ಮಹತ್ವದ್ದು. ಅಶ್ವಿನ್‌ ಸರಣಿಯಲ್ಲಿ ಈವರೆಗೆ ಒಟ್ಟು 17 ವಿಕೆಟ್‌ ಕಬಳಿಸಿದ್ದಾರೆ. ಇವರೊಂದಿಗೆ ಬುಮ್ರಾ ಹಾಗೂ ಜಡೇಜಾ ಕೂಡಾ 17 ವಿಕೆಟ್‌ ಪಡೆದಿರುವುದು ವಿಶೇಷ.(AFP)
ಶುಭ್ಮನ್ ಗಿಲ್ ಮತ್ತು ಕುಲ್ದೀಪ್ ಯಾದವ್ ಅಭ್ಯಾಸ ಅವಧಿಯಲ್ಲಿ ಭಾಗವಹಿಸಿದರು. ಜಸ್ಪ್ರೀತ್ ಬುಮ್ರಾ ತಂಡ ಸೇರಿಕೊಂಡಿದ್ದು, ಅವರಿಗೆ ಸ್ಥಾನ ನೀಡಲು ಕುಲ್ದೀಪ್ ತಂಡದಿಂದ ಹೊರಬೀಳಬಹುದು.
(4 / 8)
ಶುಭ್ಮನ್ ಗಿಲ್ ಮತ್ತು ಕುಲ್ದೀಪ್ ಯಾದವ್ ಅಭ್ಯಾಸ ಅವಧಿಯಲ್ಲಿ ಭಾಗವಹಿಸಿದರು. ಜಸ್ಪ್ರೀತ್ ಬುಮ್ರಾ ತಂಡ ಸೇರಿಕೊಂಡಿದ್ದು, ಅವರಿಗೆ ಸ್ಥಾನ ನೀಡಲು ಕುಲ್ದೀಪ್ ತಂಡದಿಂದ ಹೊರಬೀಳಬಹುದು.(AFP)
ಟೀಮ್ ಇಂಡಿಯಾದ ಕಟ್ಟಾ ಅಭಿಮಾನಿ ಸುಧೀರ್ ಕುಮಾರ್ ಚೌಧರಿ ಅವರು, ಭಾರತ ತಂಡದ ಅಭ್ಯಾಸದ ವೇಳೆ ರಾಷ್ಟ್ರಧ್ವಜವನ್ನು ಬೀಸಿ ಗಮನ ಸೆಳೆದರು.
(5 / 8)
ಟೀಮ್ ಇಂಡಿಯಾದ ಕಟ್ಟಾ ಅಭಿಮಾನಿ ಸುಧೀರ್ ಕುಮಾರ್ ಚೌಧರಿ ಅವರು, ಭಾರತ ತಂಡದ ಅಭ್ಯಾಸದ ವೇಳೆ ರಾಷ್ಟ್ರಧ್ವಜವನ್ನು ಬೀಸಿ ಗಮನ ಸೆಳೆದರು.(AFP)
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಧರ್ಮಶಾಲಾ ಪಿಚ್ ಪರಿಶೀಲಿಸಿದರು. ಇವರಿಬ್ಬರ ನಾಯಕತ್ವದಲ್ಲಿ ಇಂಗ್ಲೆಂಡ್‌ ತಂಡವು ಇದೇ ಮೊದಲ ಬಾರಿಗೆ ಟೆಸ್ಟ್‌ ಸರಣಿ ಸೋತಿದೆ.
(6 / 8)
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಧರ್ಮಶಾಲಾ ಪಿಚ್ ಪರಿಶೀಲಿಸಿದರು. ಇವರಿಬ್ಬರ ನಾಯಕತ್ವದಲ್ಲಿ ಇಂಗ್ಲೆಂಡ್‌ ತಂಡವು ಇದೇ ಮೊದಲ ಬಾರಿಗೆ ಟೆಸ್ಟ್‌ ಸರಣಿ ಸೋತಿದೆ.(AFP)
2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ಆಡಿದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತ್ತು. ಎಂಟು ವಿಕೆಟ್‌ಗಳಿಂದ ಭಾರತ ಆಸೀಸ್‌ ತಂಡವನ್ನು ಮಣಿಸಿತ್ತು. ಇಲ್ಲಿ ಈವರೆಗೆ ನಡೆದಿರುವುದು ಏಕೈಕ ಟೆಸ್ಟ್‌ ಪಂದ್ಯ. ಇಂಗ್ಲೆಂಡ್ ತಂಡ ಇಲ್ಲಿ ಯಾವುದೇ ಟೆಸ್ಟ್ ಪಂದ್ಯ ಆಡಿಲ್ಲ. ಆದರೆ, ಏಕದಿನ ವಿಶ್ವಕಪ್ 2023ರಲ್ಲಿ ಇಂಗ್ಲೆಂಡ್‌ ಇಲ್ಲಿ ಆಡಿದ ಅನುಭವ ಹೊಂದಿದೆ.
(7 / 8)
2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ಆಡಿದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತ್ತು. ಎಂಟು ವಿಕೆಟ್‌ಗಳಿಂದ ಭಾರತ ಆಸೀಸ್‌ ತಂಡವನ್ನು ಮಣಿಸಿತ್ತು. ಇಲ್ಲಿ ಈವರೆಗೆ ನಡೆದಿರುವುದು ಏಕೈಕ ಟೆಸ್ಟ್‌ ಪಂದ್ಯ. ಇಂಗ್ಲೆಂಡ್ ತಂಡ ಇಲ್ಲಿ ಯಾವುದೇ ಟೆಸ್ಟ್ ಪಂದ್ಯ ಆಡಿಲ್ಲ. ಆದರೆ, ಏಕದಿನ ವಿಶ್ವಕಪ್ 2023ರಲ್ಲಿ ಇಂಗ್ಲೆಂಡ್‌ ಇಲ್ಲಿ ಆಡಿದ ಅನುಭವ ಹೊಂದಿದೆ.(REUTERS)
ಧರ್ಮಶಾಲಾ ಮೈದಾನವು ಭಾರತದ ಅತ್ಯಂತ ಸುಂದರ ಕ್ರೀಡಾಂಗಣ ಎಂಬ ಹೆಸರು ಪಡೆದಿದೆ. ಧೌಲಾಧರ್ ಹಿಮ ಪರ್ವತದ ಸಮೀಪದಲ್ಲಿರುವ ಕ್ರೀಡಾಂಗಣದ ರಮಣೀಯ ನೋಟವು ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗುತ್ತದೆ. ಇದು ವಿಶ್ವದ ಅತ್ಯಂತ ಸುಂದರ ಕ್ರಿಕೆಟ್‌ ಮೈದಾನಗಳಲ್ಲಿ ಒಂದು.
(8 / 8)
ಧರ್ಮಶಾಲಾ ಮೈದಾನವು ಭಾರತದ ಅತ್ಯಂತ ಸುಂದರ ಕ್ರೀಡಾಂಗಣ ಎಂಬ ಹೆಸರು ಪಡೆದಿದೆ. ಧೌಲಾಧರ್ ಹಿಮ ಪರ್ವತದ ಸಮೀಪದಲ್ಲಿರುವ ಕ್ರೀಡಾಂಗಣದ ರಮಣೀಯ ನೋಟವು ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗುತ್ತದೆ. ಇದು ವಿಶ್ವದ ಅತ್ಯಂತ ಸುಂದರ ಕ್ರಿಕೆಟ್‌ ಮೈದಾನಗಳಲ್ಲಿ ಒಂದು.(AFP)

    ಹಂಚಿಕೊಳ್ಳಲು ಲೇಖನಗಳು