logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ind Vs Wi: ವಿಂಡೀಸ್ ವಿರುದ್ಧ ಅಬ್ಬರಿಸಿದ ಭಾರತ; ರೋಹಿತ್, ಜೈಸ್ವಾಲ್, ಕೊಹ್ಲಿ ಸೊಗಸಾದ ಆಟ; ಪಂದ್ಯದ ಪೂರ್ಣ ಚಿತ್ರಣವನ್ನು ಚಿತ್ರಗಳಲ್ಲಿ ನೋಡಿ

IND vs WI: ವಿಂಡೀಸ್ ವಿರುದ್ಧ ಅಬ್ಬರಿಸಿದ ಭಾರತ; ರೋಹಿತ್, ಜೈಸ್ವಾಲ್, ಕೊಹ್ಲಿ ಸೊಗಸಾದ ಆಟ; ಪಂದ್ಯದ ಪೂರ್ಣ ಚಿತ್ರಣವನ್ನು ಚಿತ್ರಗಳಲ್ಲಿ ನೋಡಿ

Jul 21, 2023 12:25 PM IST

India vs West Indies 2nd Test Day 1: ವೆಸ್ಟ್ ಇಂಡೀಸ್ ಎದುರಿನ 2ನೇ ಟೆಸ್ಟ್​ನ ಮೊದಲ ದಿನದಾಟದಲ್ಲಿ ವಿರಾಟ್ ಕೊಹ್ಲಿ 87 ರನ್ ಗಳಿಸಿ ಅಜೇಯರಾಗಿ ಉಳಿದರು. ರವೀಂದ್ರ ಜಡೇಜಾ ಅಜೇಯ 36 ರನ್ ಗಳಿಸಿದರು. ಅವರ ಜೊತೆಯಾಟವು ಭಾರತದ 4 ವಿಕೆಟ್​ ನಷ್ಟಕ್ಕೆ 288 ರನ್ ಗಳಿಸಿ ಗಮನಾರ್ಹ ಮೊತ್ತ ಕಲೆ ಹಾಕಿದೆ.

India vs West Indies 2nd Test Day 1: ವೆಸ್ಟ್ ಇಂಡೀಸ್ ಎದುರಿನ 2ನೇ ಟೆಸ್ಟ್​ನ ಮೊದಲ ದಿನದಾಟದಲ್ಲಿ ವಿರಾಟ್ ಕೊಹ್ಲಿ 87 ರನ್ ಗಳಿಸಿ ಅಜೇಯರಾಗಿ ಉಳಿದರು. ರವೀಂದ್ರ ಜಡೇಜಾ ಅಜೇಯ 36 ರನ್ ಗಳಿಸಿದರು. ಅವರ ಜೊತೆಯಾಟವು ಭಾರತದ 4 ವಿಕೆಟ್​ ನಷ್ಟಕ್ಕೆ 288 ರನ್ ಗಳಿಸಿ ಗಮನಾರ್ಹ ಮೊತ್ತ ಕಲೆ ಹಾಕಿದೆ.
ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯವು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐತಿಹಾಸಿಕ 100ನೇ ಟೆಸ್ಟ್ ಪಂದ್ಯವಾಗಿದೆ. ಹಾಗಾಗಿ ಅದರ ಸ್ಮರಣಾರ್ಥ ವಿಂಡೀಸ್ ಲೆಜೆಂಡರಿ ಕ್ರಿಕೆಟಿಗ ಬ್ರಿಯಾನ್ ಲಾರಾ, ಅವರು ಭಾರತೀಯ ನಾಯಕ ರೋಹಿತ್ ಶರ್ಮಾ ಅವರಿಗೆ ಸ್ಮರಣಾರ್ಥ ಫಲಕ ನೀಡಿದರು.
(1 / 16)
ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯವು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐತಿಹಾಸಿಕ 100ನೇ ಟೆಸ್ಟ್ ಪಂದ್ಯವಾಗಿದೆ. ಹಾಗಾಗಿ ಅದರ ಸ್ಮರಣಾರ್ಥ ವಿಂಡೀಸ್ ಲೆಜೆಂಡರಿ ಕ್ರಿಕೆಟಿಗ ಬ್ರಿಯಾನ್ ಲಾರಾ, ಅವರು ಭಾರತೀಯ ನಾಯಕ ರೋಹಿತ್ ಶರ್ಮಾ ಅವರಿಗೆ ಸ್ಮರಣಾರ್ಥ ಫಲಕ ನೀಡಿದರು.(BCCI Twitter)
ಯಶಸ್ವಿ ಜೈಸ್ವಾಲ್​ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 74 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 57 ರನ್ ಚಚ್ಚಿದರು.
(2 / 16)
ಯಶಸ್ವಿ ಜೈಸ್ವಾಲ್​ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 74 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 57 ರನ್ ಚಚ್ಚಿದರು.(BCCI Twitter)
ಅರ್ಧಶತಕ ಸಿಡಿಸಿ ಮಿನುಗುತ್ತಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದಾಗ ಸಂಭ್ರಮಿಸಿದ ವೆಸ್ಟ್​ ಇಂಡೀಸ್ ವೇಗಿ ಜೇಸನ್ ಹೋಲ್ಡರ್​. ಆ ಮೂಲಕ ಆರಂಭಿಕರ ಜೊತೆಯಾಟವನ್ನು (139) ಮುರಿದರು.
(3 / 16)
ಅರ್ಧಶತಕ ಸಿಡಿಸಿ ಮಿನುಗುತ್ತಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದಾಗ ಸಂಭ್ರಮಿಸಿದ ವೆಸ್ಟ್​ ಇಂಡೀಸ್ ವೇಗಿ ಜೇಸನ್ ಹೋಲ್ಡರ್​. ಆ ಮೂಲಕ ಆರಂಭಿಕರ ಜೊತೆಯಾಟವನ್ನು (139) ಮುರಿದರು.(AFP)
ಎರಡನೇ ಟೆಸ್ಟ್​ ಪಂದ್ಯದಲ್ಲೂ ಶುಭ್ಮನ್ ಗಿಲ್​ ನಿರಾಸೆ ಮೂಡಿಸಿದರು. ಕೇವಲ 10 ರನ್ ಗಳಿಸಿ ಔಟಾದರು. ಕೆಮರ್​ ರೋಚ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.
(4 / 16)
ಎರಡನೇ ಟೆಸ್ಟ್​ ಪಂದ್ಯದಲ್ಲೂ ಶುಭ್ಮನ್ ಗಿಲ್​ ನಿರಾಸೆ ಮೂಡಿಸಿದರು. ಕೇವಲ 10 ರನ್ ಗಳಿಸಿ ಔಟಾದರು. ಕೆಮರ್​ ರೋಚ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.(AP)
ಶುಭ್ಮನ್ ಗಿಲ್ ವಿಕೆಟ್ ಪಡೆದ ನಂತರ ಕೆಮರ್​ ರೋಚ್ ಸಂಭ್ರಮಿಸಿದ ಪರಿ ಇದು.
(5 / 16)
ಶುಭ್ಮನ್ ಗಿಲ್ ವಿಕೆಟ್ ಪಡೆದ ನಂತರ ಕೆಮರ್​ ರೋಚ್ ಸಂಭ್ರಮಿಸಿದ ಪರಿ ಇದು.(AP)
ರೋಹಿತ್​ ಶರ್ಮಾ ಅವರು 80 ರನ್​ ಸಿಡಿಸಿದರು. ಆದರೆ ಜೋಮೆಲ್ ವಾರಿಕನ್ ಬೌಲಿಂಗ್​ನಲ್ಲಿ ಔಟಾದರು.
(6 / 16)
ರೋಹಿತ್​ ಶರ್ಮಾ ಅವರು 80 ರನ್​ ಸಿಡಿಸಿದರು. ಆದರೆ ಜೋಮೆಲ್ ವಾರಿಕನ್ ಬೌಲಿಂಗ್​ನಲ್ಲಿ ಔಟಾದರು.(AFP)
ರೋಹಿತ್​ ಶರ್ಮಾ ಕ್ಲೀನ್ ಬೌಲ್ಡ್​ ಮಾಡಿದರು. ವಿಕೆಟ್ ಕೀಪರ್​ ಜೋಷುವಾ ಡಿ ಸಿಲ್ವಾ ಸಂಭ್ರಮಿಸಿದರು.
(7 / 16)
ರೋಹಿತ್​ ಶರ್ಮಾ ಕ್ಲೀನ್ ಬೌಲ್ಡ್​ ಮಾಡಿದರು. ವಿಕೆಟ್ ಕೀಪರ್​ ಜೋಷುವಾ ಡಿ ಸಿಲ್ವಾ ಸಂಭ್ರಮಿಸಿದರು.(AFP)
ಜೊಮೆಲ್ ವಾರಿಕನ್ ಅವರ ಬೌಲಿಂಗ್​ನಲ್ಲಿ ರೋಹಿತ್​ ಶರ್ಮಾ ಔಟಾದಾಗ ವೆಸ್ಟ್ ಇಂಡೀಸ್​ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣಗಳು.
(8 / 16)
ಜೊಮೆಲ್ ವಾರಿಕನ್ ಅವರ ಬೌಲಿಂಗ್​ನಲ್ಲಿ ರೋಹಿತ್​ ಶರ್ಮಾ ಔಟಾದಾಗ ವೆಸ್ಟ್ ಇಂಡೀಸ್​ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣಗಳು.(AP)
ಶಾನನ್ ಗೇಬ್ರಿಯಲ್​ ಬೌಲಿಂಗ್​ನಲ್ಲಿ ಅಜಿಂಕ್ಯ ರಹಾನೆ ಕ್ಲೀನ್​ ಬೋಲ್ಡ್ ಆದ ಕ್ಷಣ.
(9 / 16)
ಶಾನನ್ ಗೇಬ್ರಿಯಲ್​ ಬೌಲಿಂಗ್​ನಲ್ಲಿ ಅಜಿಂಕ್ಯ ರಹಾನೆ ಕ್ಲೀನ್​ ಬೋಲ್ಡ್ ಆದ ಕ್ಷಣ.(AFP)
ಟೀಮ್ ಇಂಡಿಯಾ ವೈಸ್ ಕ್ಯಾಪ್ಟನ್ ರಹಾನೆ ವಿಕೆಟ್​ ಕಬಳಿಸಿದಾಗ ಶಾನನ್ ಗೇಬ್ರಿಯಲ್​ ಸಂಭ್ರಮಿಸಿದ ರೋಚಕ ಕ್ಷಣ.
(10 / 16)
ಟೀಮ್ ಇಂಡಿಯಾ ವೈಸ್ ಕ್ಯಾಪ್ಟನ್ ರಹಾನೆ ವಿಕೆಟ್​ ಕಬಳಿಸಿದಾಗ ಶಾನನ್ ಗೇಬ್ರಿಯಲ್​ ಸಂಭ್ರಮಿಸಿದ ರೋಚಕ ಕ್ಷಣ.(AFP)
ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದಂದು ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿ ಅವರು 100 ರನ್​ಗಳ ಜೊತೆಯಾಟ ಆಡಿದರು.
(11 / 16)
ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದಂದು ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿ ಅವರು 100 ರನ್​ಗಳ ಜೊತೆಯಾಟ ಆಡಿದರು.(AFP)
ರವೀಂದ್ರ ಜಡೇಜಾ ಅವರು ಅಜೇಯ 36 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
(12 / 16)
ರವೀಂದ್ರ ಜಡೇಜಾ ಅವರು ಅಜೇಯ 36 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.(AFP)
ಜೆರ್ಮೈನ್ ಬ್ಲಾಕ್‌ವುಡ್‌ ಅವರೊಂದಿಗೆ ಕೊಹ್ಲಿ ಹಾಸ್ಯ ಮಾಡಿದ ಸಂದರ್ಭ.
(13 / 16)
ಜೆರ್ಮೈನ್ ಬ್ಲಾಕ್‌ವುಡ್‌ ಅವರೊಂದಿಗೆ ಕೊಹ್ಲಿ ಹಾಸ್ಯ ಮಾಡಿದ ಸಂದರ್ಭ.(AP)
ವಿರಾಟ್​ ಕೊಹ್ಲಿ ಬ್ಯಾಟಿಂಗ್ ವೈಖರಿ.
(14 / 16)
ವಿರಾಟ್​ ಕೊಹ್ಲಿ ಬ್ಯಾಟಿಂಗ್ ವೈಖರಿ.(AP)
ವಿರಾಟ್ ಕೊಹ್ಲಿ ರನ್​ಗಾಗಿ ಓಡಿದ ಸಂದರ್ಭದಲ್ಲಿ ಡೈವ್ ಹೊಡೆದ ಕ್ಷಣ.
(15 / 16)
ವಿರಾಟ್ ಕೊಹ್ಲಿ ರನ್​ಗಾಗಿ ಓಡಿದ ಸಂದರ್ಭದಲ್ಲಿ ಡೈವ್ ಹೊಡೆದ ಕ್ಷಣ.(AP)
ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ 2ನೇ ದಿನದಾಟದಕ್ಕೂ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
(16 / 16)
ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ 2ನೇ ದಿನದಾಟದಕ್ಕೂ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು