logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಚಿನ್‌, ಧೋನಿ ಅಲ್ಲ; ಕ್ರಿಕೆಟ್‌ನಲ್ಲಿ ಕೆಎಲ್‌ ರಾಹುಲ್‌ಗೆ ಆರ್‌ಸಿಬಿ ಮಾಜಿ ಆಟಗಾರ ಸ್ಫೂರ್ತಿಯಂತೆ

ಸಚಿನ್‌, ಧೋನಿ ಅಲ್ಲ; ಕ್ರಿಕೆಟ್‌ನಲ್ಲಿ ಕೆಎಲ್‌ ರಾಹುಲ್‌ಗೆ ಆರ್‌ಸಿಬಿ ಮಾಜಿ ಆಟಗಾರ ಸ್ಫೂರ್ತಿಯಂತೆ

Mar 01, 2024 04:03 PM IST

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಐದನೇ ಪಂದ್ಯದಿಂದ ಕನ್ನಡಿಗ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ. ಟೀಮ್‌ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿರುವ ರಾಹುಲ್‌, ಸದ್ಯ ಲಂಡನ್‌ನಲ್ಲಿದ್ದಾರೆ. ಈ ನಡುವೆ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕೆಎಲ್, ತಮಗೆ ಯಾರು ಸ್ಫೂರ್ತಿ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

  • ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಐದನೇ ಪಂದ್ಯದಿಂದ ಕನ್ನಡಿಗ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ. ಟೀಮ್‌ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿರುವ ರಾಹುಲ್‌, ಸದ್ಯ ಲಂಡನ್‌ನಲ್ಲಿದ್ದಾರೆ. ಈ ನಡುವೆ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕೆಎಲ್, ತಮಗೆ ಯಾರು ಸ್ಫೂರ್ತಿ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಜೀವನದಲ್ಲಿ ನಿಮಗೆ ಯಾರು ಸ್ಫೂರ್ತಿ ಎಂಬ ಪ್ರಶ್ನೆಯನ್ನು ರಾಹುಲ್‌ಗೆ ಕೇಳಲಾಯ್ತು. ಇದಕ್ಕೆ ಉತ್ತರಿಸಿದ ಅವರು, ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ಎಂಎಸ್ ಧೋನಿ ಅಥವಾ ವಿರಾಟ್ ಕೊಹ್ಲಿ ಹೆಸರು ಹೇಳಿಲ್ಲ. ಬದಲಾಗಿ ವಿದೇಶಿ ಆಟಗಾರನ್ನನು ತಮ್ಮ ಸ್ಫೂರ್ತಿ ಎಂದು ಹೇಳಿದ್ದಾರೆ. 
(1 / 6)
ಜೀವನದಲ್ಲಿ ನಿಮಗೆ ಯಾರು ಸ್ಫೂರ್ತಿ ಎಂಬ ಪ್ರಶ್ನೆಯನ್ನು ರಾಹುಲ್‌ಗೆ ಕೇಳಲಾಯ್ತು. ಇದಕ್ಕೆ ಉತ್ತರಿಸಿದ ಅವರು, ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ಎಂಎಸ್ ಧೋನಿ ಅಥವಾ ವಿರಾಟ್ ಕೊಹ್ಲಿ ಹೆಸರು ಹೇಳಿಲ್ಲ. ಬದಲಾಗಿ ವಿದೇಶಿ ಆಟಗಾರನ್ನನು ತಮ್ಮ ಸ್ಫೂರ್ತಿ ಎಂದು ಹೇಳಿದ್ದಾರೆ. (REUTERS)
ನನ್ನ ಜೀವನದಲ್ಲಿ ನನಗೆ ನನ್ನ ತಂದೆಯೇ ಸ್ಪೂರ್ತಿ ಎಂದು ರಾಹುಲ್‌ ಹೇಳಿದ್ದಾರೆ. ಆದರೆ, ಕ್ರಿಕೆಟ್‌ ವಿಷಯದಲ್ಲಿ ಎಬಿ ಡಿವಿಲಿಯರ್ಸ್‌ ನನಗೆ ಸ್ಪೂತಿ ಎಂದು ಅವರು ಹೇಳಿಕೊಂಡಿದ್ದಾರೆ.
(2 / 6)
ನನ್ನ ಜೀವನದಲ್ಲಿ ನನಗೆ ನನ್ನ ತಂದೆಯೇ ಸ್ಪೂರ್ತಿ ಎಂದು ರಾಹುಲ್‌ ಹೇಳಿದ್ದಾರೆ. ಆದರೆ, ಕ್ರಿಕೆಟ್‌ ವಿಷಯದಲ್ಲಿ ಎಬಿ ಡಿವಿಲಿಯರ್ಸ್‌ ನನಗೆ ಸ್ಪೂತಿ ಎಂದು ಅವರು ಹೇಳಿಕೊಂಡಿದ್ದಾರೆ.(HT_PRINT)
ಕ್ರಿಕೆಟ್ ವಿಚಾರದಲ್ಲಿ, ನಾನು ಎಬಿ ಡಿವಿಲಿಯರ್ಸ್‌ನಿಂದ ತುಂಬಾ ಸ್ಫೂರ್ತಿ ಪಡೆದಿದ್ದೇನೆ" ಎಂದು ರಾಹುಲ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
(3 / 6)
ಕ್ರಿಕೆಟ್ ವಿಚಾರದಲ್ಲಿ, ನಾನು ಎಬಿ ಡಿವಿಲಿಯರ್ಸ್‌ನಿಂದ ತುಂಬಾ ಸ್ಫೂರ್ತಿ ಪಡೆದಿದ್ದೇನೆ" ಎಂದು ರಾಹುಲ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.(Surjeet Yadav)
ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. 31 ವರ್ಷದ ಭಾರತೀಯ ಕ್ರಿಕೆಟಿಗನು ಆರ್‌ಸಿಬಿಯ ಮಾಜಿ ಆಟಗಾರ ಹಾಗೂ ದಕ್ಷಿಣ ಆಫ್ರಿಕಾದ ಲೆಜೆಂಡ್ ಹೆಸರನ್ನು ಹೇಳಿದ್ದಾರೆ.
(4 / 6)
ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. 31 ವರ್ಷದ ಭಾರತೀಯ ಕ್ರಿಕೆಟಿಗನು ಆರ್‌ಸಿಬಿಯ ಮಾಜಿ ಆಟಗಾರ ಹಾಗೂ ದಕ್ಷಿಣ ಆಫ್ರಿಕಾದ ಲೆಜೆಂಡ್ ಹೆಸರನ್ನು ಹೇಳಿದ್ದಾರೆ.(ANI)
ಈ ಹಿಂದೆ ಆರ್‌ಸಿಬಿ ಜೊತೆಗೂ ಐಪಿಎಲ್‌ನಲ್ಲಿ ಆಡಿದ್ದ ರಾಹುಲ್, ಎಬಿಡಿ ಜೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ಪಡೆದಿದ್ದರು. ಐಪಿಎಲ್‌ನ 2013 ಮತ್ತು 2016ರ ಆವೃತ್ತಿಯಲ್ಲಿ ಅವರು ಬೆಂಗಳೂರು ತಂಡದ ಪರ ಆಡಿದ್ದರು.
(5 / 6)
ಈ ಹಿಂದೆ ಆರ್‌ಸಿಬಿ ಜೊತೆಗೂ ಐಪಿಎಲ್‌ನಲ್ಲಿ ಆಡಿದ್ದ ರಾಹುಲ್, ಎಬಿಡಿ ಜೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ಪಡೆದಿದ್ದರು. ಐಪಿಎಲ್‌ನ 2013 ಮತ್ತು 2016ರ ಆವೃತ್ತಿಯಲ್ಲಿ ಅವರು ಬೆಂಗಳೂರು ತಂಡದ ಪರ ಆಡಿದ್ದರು.(REUTERS)
ಸದ್ಯ ಕೆಲವು ದಿನಗಳಿಂದ ಮೈದಾನದಿಂದ ಹೊರಗುಳಿದಿರುವ ರಾಹುಲ್, ಐಪಿಎಲ್ ವೇಳೆಗೆ ಮೈದಾನಕ್ಕಿಳಿಯುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್‌ ತಂಡದ ನಾಯಕನಾಗಿದ್ದಾರೆ.
(6 / 6)
ಸದ್ಯ ಕೆಲವು ದಿನಗಳಿಂದ ಮೈದಾನದಿಂದ ಹೊರಗುಳಿದಿರುವ ರಾಹುಲ್, ಐಪಿಎಲ್ ವೇಳೆಗೆ ಮೈದಾನಕ್ಕಿಳಿಯುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್‌ ತಂಡದ ನಾಯಕನಾಗಿದ್ದಾರೆ.(PTI)

    ಹಂಚಿಕೊಳ್ಳಲು ಲೇಖನಗಳು