logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Points Table: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಡ್ರಾ; ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕಿಳಿದ ಭಾರತ, ಅಗ್ರಸ್ಥಾನದಲ್ಲಿ ಪಾಕಿಸ್ತಾನ

WTC points Table: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಡ್ರಾ; ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕಿಳಿದ ಭಾರತ, ಅಗ್ರಸ್ಥಾನದಲ್ಲಿ ಪಾಕಿಸ್ತಾನ

Jan 09, 2024 07:44 PM IST

India vs West Indies 2nd Test: ಡಬ್ಲ್ಯೂಟಿಸಿ 2023-25ರ ಆವೃತ್ತಿಯ ಚೊಚ್ಚಲ ಸರಣಿಯನ್ನು ಭಾರತ ಗೆದ್ದಿದೆ. ವೆಸ್ಟ್ ಇಂಡೀಸ್ ವಿರುದ್ಧ 1-0 ಅಂತರದಿಂದ ಸರಣಿ ವಶಪಡಿಸಿಕೊಂಡ ಭಾರತ ಪ್ರಸ್ತುತ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ ಎಂಬುದನ್ನು ಇಲ್ಲಿ ನೋಡೋಣ.

  • India vs West Indies 2nd Test: ಡಬ್ಲ್ಯೂಟಿಸಿ 2023-25ರ ಆವೃತ್ತಿಯ ಚೊಚ್ಚಲ ಸರಣಿಯನ್ನು ಭಾರತ ಗೆದ್ದಿದೆ. ವೆಸ್ಟ್ ಇಂಡೀಸ್ ವಿರುದ್ಧ 1-0 ಅಂತರದಿಂದ ಸರಣಿ ವಶಪಡಿಸಿಕೊಂಡ ಭಾರತ ಪ್ರಸ್ತುತ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ ಎಂಬುದನ್ನು ಇಲ್ಲಿ ನೋಡೋಣ.
ಮಳೆಯಿಂದಾಗಿ ವಿಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ನ ಅಂತಿಮ ದಿನದಾಟ ನಡೆಯಲಿಲ್ಲ. ಹೀಗಾಗಿ ಪಂದ್ಯವು ಡ್ರಾದೊಂದಿಗೆ ಅಂತ್ಯವಾಯ್ತು. ಇದು ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತದ ಅಗ್ರಸ್ಥಾನದ ಆಸೆಗೂ ತಣ್ಣೀರೆರಚಿತು.
(1 / 6)
ಮಳೆಯಿಂದಾಗಿ ವಿಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ನ ಅಂತಿಮ ದಿನದಾಟ ನಡೆಯಲಿಲ್ಲ. ಹೀಗಾಗಿ ಪಂದ್ಯವು ಡ್ರಾದೊಂದಿಗೆ ಅಂತ್ಯವಾಯ್ತು. ಇದು ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತದ ಅಗ್ರಸ್ಥಾನದ ಆಸೆಗೂ ತಣ್ಣೀರೆರಚಿತು.(BCCI Twitter)
ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೆ ತಲಾ ನಾಲ್ಕು ಅಂಕಗಳನ್ನು ಹಂಚಲಾಗಿದೆ. ಒಂದು ವೇಳೆ ಭಾರತ ಪಂದ್ಯ ಗೆದ್ದಿದ್ದರೆ 12 ಅಂಕಗಳು ಸಿಗುತ್ತಿತ್ತು. ಆಗ ಅಗ್ರಸ್ಥಾನದಲ್ಲೇ ಉಳಿಯುತ್ತಿತ್ತು.
(2 / 6)
ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೆ ತಲಾ ನಾಲ್ಕು ಅಂಕಗಳನ್ನು ಹಂಚಲಾಗಿದೆ. ಒಂದು ವೇಳೆ ಭಾರತ ಪಂದ್ಯ ಗೆದ್ದಿದ್ದರೆ 12 ಅಂಕಗಳು ಸಿಗುತ್ತಿತ್ತು. ಆಗ ಅಗ್ರಸ್ಥಾನದಲ್ಲೇ ಉಳಿಯುತ್ತಿತ್ತು.(BCCI Twitter)
ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾವು ಈಗ ಪಾಕಿಸ್ತಾನಕ್ಕಿಂತ ಕೆಳಗಿಳಿದಿದೆ. ಅತ್ತ ಶ್ರೀಲಂಕಾ ವಿರುದ್ಧ ಪಾಕಿಸ್ತಾನವು ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದಿದೆ. ಹೀಗಾಗಿ ನೂರು ಪಿಸಿಟಿಯೊಂದಿಗೆ ಪಾಕ್‌ ಮೊದಲ ಸ್ಥಾನದಲ್ಲಿದೆ. ಅತ್ತ ಆಶಸ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.
(3 / 6)
ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾವು ಈಗ ಪಾಕಿಸ್ತಾನಕ್ಕಿಂತ ಕೆಳಗಿಳಿದಿದೆ. ಅತ್ತ ಶ್ರೀಲಂಕಾ ವಿರುದ್ಧ ಪಾಕಿಸ್ತಾನವು ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದಿದೆ. ಹೀಗಾಗಿ ನೂರು ಪಿಸಿಟಿಯೊಂದಿಗೆ ಪಾಕ್‌ ಮೊದಲ ಸ್ಥಾನದಲ್ಲಿದೆ. ಅತ್ತ ಆಶಸ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.(AP)
2023/25ರ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಭಾರತವು ತನ್ನ ಮುಂದಿನ ಸರಣಿಯನ್ನು ಬರೋಬ್ಬರಿ ಐದು ತಿಂಗಳ ನಂತರ ಆಡಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.
(4 / 6)
2023/25ರ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಭಾರತವು ತನ್ನ ಮುಂದಿನ ಸರಣಿಯನ್ನು ಬರೋಬ್ಬರಿ ಐದು ತಿಂಗಳ ನಂತರ ಆಡಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.(AP)
ಸರಣಿಯು ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿದ್ದು, ಎರಡನೇ ಪಂದ್ಯ ಜನವರಿ 3ರಂದು ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ
(5 / 6)
ಸರಣಿಯು ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿದ್ದು, ಎರಡನೇ ಪಂದ್ಯ ಜನವರಿ 3ರಂದು ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ(AFP)
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ಭಾರತ 16 ಅಂಕಗಳನ್ನು ಸಂಪಾದಿಸಿದ್ದು, ಶೇಕಡಾ 66 ಪಿಸಿಟಿಯೊಂದಿಗೆ ಸರಣಿ ಮುಗಿದಿದೆ. ಹೀಗಾಗಿ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ. ಶ್ರೀಲಂಕಾ ವಿರುದ್ಧ ಗೆದ್ದ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ.
(6 / 6)
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ಭಾರತ 16 ಅಂಕಗಳನ್ನು ಸಂಪಾದಿಸಿದ್ದು, ಶೇಕಡಾ 66 ಪಿಸಿಟಿಯೊಂದಿಗೆ ಸರಣಿ ಮುಗಿದಿದೆ. ಹೀಗಾಗಿ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ. ಶ್ರೀಲಂಕಾ ವಿರುದ್ಧ ಗೆದ್ದ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ.(bcci)

    ಹಂಚಿಕೊಳ್ಳಲು ಲೇಖನಗಳು