logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shikha Pandey Life Story: ಓದಿದ್ದು ಇಂಜಿನಿಯರಿಂಗ್, ಏರ್‌ಫೋರ್ಸ್​​​​ನಲ್ಲಿ ಉದ್ಯೋಗಿ, ಆಗಿದ್ದು ಕ್ರಿಕೆಟರ್: ಶಿಖಾ ಪಾಂಡೆ ಲೈಫ್ ಸ್ಟೋರಿ

Shikha Pandey Life Story: ಓದಿದ್ದು ಇಂಜಿನಿಯರಿಂಗ್, ಏರ್‌ಫೋರ್ಸ್​​​​ನಲ್ಲಿ ಉದ್ಯೋಗಿ, ಆಗಿದ್ದು ಕ್ರಿಕೆಟರ್: ಶಿಖಾ ಪಾಂಡೆ ಲೈಫ್ ಸ್ಟೋರಿ

Jun 30, 2023 01:49 PM IST

Shikha Pandey: ಶಿಖಾ ಪಾಂಡೆ ಭಾರತ ಮಹಿಳಾ ತಂಡದ ಬೌಲಿಂಗ್ ಆಲ್​ರೌಂಡರ್. ಇವರ ಕ್ರಿಕೆಟ್​ ಜರ್ನಿ ತುಂಬಾ ರೋಚಕವಾಗಿದ್ದು, ಸಾವಿರಾರು ಯುವ ಆಟಗಾರ್ತಿಯರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಕುತೂಹಲಕಾರಿ ಜೀವನದ ಕುರಿತು ಈ ಮುಂದೆ ನೋಡೋಣ.

  • Shikha Pandey: ಶಿಖಾ ಪಾಂಡೆ ಭಾರತ ಮಹಿಳಾ ತಂಡದ ಬೌಲಿಂಗ್ ಆಲ್​ರೌಂಡರ್. ಇವರ ಕ್ರಿಕೆಟ್​ ಜರ್ನಿ ತುಂಬಾ ರೋಚಕವಾಗಿದ್ದು, ಸಾವಿರಾರು ಯುವ ಆಟಗಾರ್ತಿಯರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಕುತೂಹಲಕಾರಿ ಜೀವನದ ಕುರಿತು ಈ ಮುಂದೆ ನೋಡೋಣ.
ಭಾರತ ಮಹಿಳಾ ತಂಡದ ಪ್ರಮುಖ ಬೌಲರ್​ ಆಗಿದ್ದ ಶಿಖಾ ಪಾಂಡೆ, ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿ ಆಗಿದ್ದ ಶಿಖಾ, ಸಿಬಿಎಸ್‌ಇ ಟಾಪರ್ ಆಗಿದ್ದರು. ಅಷ್ಟೇ ಅಲ್ಲದೆ, ಇಂಜಿನಿಯರಿಂಗ್ ಪದವೀದರೆಯಾಗಿದ್ದ ಆಟಗಾರ್ತಿ, ಏರ್‌ಫೋರ್ಸ್​​​​ನಲ್ಲೂ ಉದ್ಯೋಗ ಪಡೆದಿದ್ದರು ಎಂಬುದು ವಿಶೇಷ.
(1 / 11)

ಎಷ್ಟೋ ಮಂದಿ ಏರ್​​ಪೋರ್ಸ್​​ನಲ್ಲಿ ಕೆಲಸ ಸಿಕ್ಕರೆ ಸಾಕಪ್ಪ ಎನ್ನುವವರು ಇರುವವರ ನಡುವೆ, ಮಧ್ಯಮ ಬೌಲಿಂಗ್​ ಆಟಗಾರ್ತಿ, ಏರ್​ಪೋರ್ಸ್​​​ನಲ್ಲಿ ಒಂದೊಳ್ಳೆ ಕೆಲಸ ಪಡೆದಿದ್ದರು. ಕೈ ತುಂಬಾ ಸಂಬಳ ದೊರೆತರೂ ಏರ್​ಪೋರ್ಸ್​​ನಲ್ಲಿ ಹುದ್ದೆ ತೊರೆದ ಆಟಗಾರ್ತಿ ಹೆಜ್ಜೆ ಹಾಕಿದ್ದು ವೃತ್ತಿಪರ ಕ್ರಿಕೆಟ್​​ನತ್ತ.
(2 / 11)

ತೆಲಂಗಾಣ ರಾಜ್ಯದ ಸಣ್ಣ ಹಳ್ಳಿ ರಾಮಗುಂಡಂ (ಪ್ರಸ್ತುತ ಆಂಧ್ರಕ್ಕೆ ಸೇರಿದೆ) ಎಂಬಲ್ಲಿ ಹುಟ್ಟಿದ ಶಿಖಾ ಪಾಂಡೆ, ವಿದ್ಯಾಭ್ಯಾಸದಲ್ಲಿ ತುಂಬಾ ಪ್ರವೀಣೆಯಾಗಿದ್ದರು. ಓದಿನಲ್ಲಿ ಆಕೆಯನ್ನು ಹಿಂದಿಕ್ಕುವವರೇ ಇರಲಿಲ್ಲ. ಮತ್ತೊಂದು ವಿಶೇಷ ಅಂದರೆ, 10ನೇ ತರಗತಿಯ ಸಿಎಬಿಎಸ್​​​ಇ ಎಕ್ಸಾಮ್​​ನಲ್ಲಿ ಟಾಪರ್ ಆಗಿದ್ದರು.
(3 / 11)

ಹುಟ್ಟಿದ್ದು ಆಂಧ್ರದಲ್ಲಿಯಾದರೂ, ನೆಲೆಸಿರುವುದು ಗೋವಾದಲ್ಲಿ. ಸಿಬಿಎಸ್‌ಇ ಎಕ್ಸಾಮ್​​ನಲ್ಲಿ ಟಾಪರ್ ಆದ ಬೆನ್ನಲ್ಲೇ  ವಿದ್ಯಾಭ್ಯಾಸದ ಕಡೆ ಒಲವು ತೋರಿಸಿದ್ದರು. ಆದರೆ, ಅದಾಗಲೇ ಕ್ರಿಕೆಟ್​​ ಮೇಲೆ ಹೆಚ್ಚು ಪ್ರೀತಿ ಹೊಂದಿದ್ದ ಶಿಖಾ, ಓದಿನ ಕಡೆ ಗಮನ ಹರಿಸಿದ ಪರಿಣಾಮ ಕ್ರಿಕೆಟ್​​ ಮೇಲೆ ಕೊಂಚ ಇಳಿಮುಖವಾಗುತ್ತಾ ಸಾಗಿತು.
(4 / 11)

ಆದರೆ, ಅವರು ಗೋವಾ ಕಾಲೇಜಿನಲ್ಲಿ ಇಂಜಿನಿಯರಿಂಗ್​ ಪದವಿ ಓದುತ್ತಿದ್ದಾಗ ಕ್ರಿಕೆಟ್​ನತ್ತ ಫೋಕಸ್​ ಮಾಡಿದರು. ಬೆಳಿಗ್ಗೆ ವ್ಯಾಸಾಂಗ ಮಾಡುತ್ತಿದ್ದರೆ, ಸಂಜೆಯ ಸಮಯದಲ್ಲಿ ಕ್ರಿಕೆಟ್​ ಪ್ರಾಕ್ಟೀಸ್​ ಮಾಡುತ್ತಿದ್ದರು.
(5 / 11)

ಇಂಜಿನಿಯರಿಂಗ್‌ ಮುಗಿಸುತ್ತಿದ್ದಂತೆ ಕ್ಯಾಂಪಸ್‌ ಸೆಲೆಕ್ಷನ್ ವೇಳೆ ಮೂರು ಕಂಪನಿಗಳು ದೊಡ್ಡ ಆಫರ್‌ ನೀಡಿದ್ದವು. ಉತ್ತಮ ಸಂಬಳದ ಆಫರ್‌ ನೀಡಿದ್ದವು. ಆದರೆ ಶಿಖಾ ತಿರಸ್ಕರಿಸಿದರು. ಬಳಿಕ ಕ್ರಿಕೆಟ್‌ನತ್ತ ಗಮನ ಹರಿಸಿದರು.
(6 / 11)

ಇದರ ಬೆನ್ನಲ್ಲೇ 2011ರಲ್ಲಿ ಶಿಖಾ ಇಂಡಿಯನ್‌ ಏರ್‌ಫೋರ್ಸ್​​ನಲ್ಲಿ ಕೆಲಸ ಆರಂಭಿಸಿದರು. ಆದರೆ ಇದಾದ ಒಂದು ವರ್ಷದಲ್ಲೇ ಏರ್‌ ಟ್ರಾಫಿಕ್ ಕಂಟ್ರೋಲರ್ ಆಗಿ ಪ್ರಮೋಷನ್​ ಪಡೆದರು. ಆದರೆ, ಅವರ ಸೆಳೆತ ಇದ್ದದ್ದು ಕ್ರಿಕೆಟ್​ನತ್ತ.
(7 / 11)

ಬಳಿಕ ಕ್ರಿಕೆಟ್‌ ಕಡೆ ಗಮನ ಹರಿಸಿದರ ಶಿಖಾ, 2014ರಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡದ ಪರ ಪದಾರ್ಪಣೆ ಮಾಡಿದರು. ಈ ಮೂಲಕ ದಿಲೀಪ್ ಸರ್‌ದೇಸಾಯಿ ಬಳಿಕ ಭಾರತ ಪ್ರತಿನಿಧಿಸಿದ ಮೊದಲ ಗೋವಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಶಿಖಾ ಪಾತ್ರರಾಗಿದ್ದಾರೆ.
(8 / 11)

2014ರಲ್ಲೇ ಭಾರತ ಪರ ಟೆಸ್ಟ್, ಏಕದಿನ ಹಾಗೂ ಟಿ20ಗೆ ಪದಾರ್ಪಣೆ ಮಾಡಿ ಮಿಂಚಿದ ಶಿಖಾ ಪಾಂಡೆಗೆ ವಾಯುಪಡೆಯಿಂದ ಮತ್ತೊಂದು ಮತ್ತೊಂದು ಗೌರವ ಲಭಿಸಿತು. 2020ರ T20 ವಿಶ್ವಕಪ್​ನಲ್ಲಿ ಭಾರತ ತಂಡ ಪ್ರತಿನಿಧಿಸಿದ ಪಾಂಡೆಗೆ ಭಾರತೀಯ ವಾಯುಪಡೆಯಲ್ಲಿ ಸ್ಕ್ವಾಡ್ರನ್ ಲೀಡರ್ ರ‍್ಯಾಂಕ್‌ ನೀಡಿ ಗೌರವಿಸಲಾಗಿತ್ತು.
(9 / 11)

ಅತ್ಯುತ್ತಮ ಜ್ಞಾನ ಹೊಂದಿದ್ದ ಪರಿಣಾಮ ಶಿಖಾ ಪಾಂಡೆ ಅವರನ್ನು 'ಶಿಖಿಪೀಡಿಯಾ' ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತು.
(10 / 11)

55 ಏಕದಿನಗಳಲ್ಲಿ 512 ರನ್ ಗಳಿಸಿದ್ದು, 75 ವಿಕೆಟ್ ಪಡೆದಿದ್ದಾರೆ. 3 ಟೆಸ್ಟ್​ ಪಂದ್ಯಗಳಲ್ಲಿ 55 ರನ್​ ಸಿಡಿಸಿದ್ದು, 4 ವಿಕೆಟ್​ ಪಡೆದಿದ್ದಾರೆ. 62 ಟಿ20ಗಳ ಪೈಕಿ 208 ರನ್​ ಕಲೆ ಹಾಕುವುದರ ಜೊತೆಗೆ 43 ವಿಕೆಟ್​ ಉರುಳಿಸಿದ್ದಾರೆ.
(11 / 11)

    ಹಂಚಿಕೊಳ್ಳಲು ಲೇಖನಗಳು