logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Virat Kohli Record: 500ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ಬರೆದ ವಿರಾಟ್ ಕೊಹ್ಲಿ; ಸಚಿನ್, ಪಾಂಟಿಂಗ್ ಸಾಲಿಗೂ ಸೇರಿದ ಕಿಂಗ್

Virat Kohli Record: 500ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ಬರೆದ ವಿರಾಟ್ ಕೊಹ್ಲಿ; ಸಚಿನ್, ಪಾಂಟಿಂಗ್ ಸಾಲಿಗೂ ಸೇರಿದ ಕಿಂಗ್

Jan 09, 2024 07:47 PM IST

Virat Kohli: ತನ್ನ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆ ಮೂಲಕ ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ. ಹಾಗಾದರೆ ಯಾವುದು ಆ ದಾಖಲೆಗಳು ಎಂಬುದನ್ನು ಈ ಮುಂದೆ ನೋಡೋಣ.

  • Virat Kohli: ತನ್ನ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆ ಮೂಲಕ ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ. ಹಾಗಾದರೆ ಯಾವುದು ಆ ದಾಖಲೆಗಳು ಎಂಬುದನ್ನು ಈ ಮುಂದೆ ನೋಡೋಣ.
ವೆಸ್ಟ್ ಇಂಡೀಸ್ ಎದುರಿನ 2ನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದೆ. ಪರಿಣಾಮ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್​ ಗಳಿಸಿದೆ.
(1 / 9)
ವೆಸ್ಟ್ ಇಂಡೀಸ್ ಎದುರಿನ 2ನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದೆ. ಪರಿಣಾಮ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್​ ಗಳಿಸಿದೆ.(AP)
ಆರಂಭಿಕರಾದ ಯಶಸ್ವಿ ಜೈಸ್ವಾಲ್ (57) ಮತ್ತು ರೋಹಿತ್​ ಶರ್ಮಾ (80) ತಲಾ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ, ಈ ಜೋಡಿ 139 ರನ್​ಗಳ ಜೊತೆಯಾಟವಾಡಿದೆ.
(2 / 9)
ಆರಂಭಿಕರಾದ ಯಶಸ್ವಿ ಜೈಸ್ವಾಲ್ (57) ಮತ್ತು ರೋಹಿತ್​ ಶರ್ಮಾ (80) ತಲಾ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ, ಈ ಜೋಡಿ 139 ರನ್​ಗಳ ಜೊತೆಯಾಟವಾಡಿದೆ.(AFP)
ವಿರಾಟ್ ಕೊಹ್ಲಿಗೆ ಇದು 500ನೇ ಅಂತಾರಾಷ್ಟ್ರೀಯ ಪಂದ್ಯ. ಈ ಸ್ಮರಣೀಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್​ ಅವರ ಸಾಲಿಗೂ ಸೇರಿದ್ದಾರೆ. 
(3 / 9)
ವಿರಾಟ್ ಕೊಹ್ಲಿಗೆ ಇದು 500ನೇ ಅಂತಾರಾಷ್ಟ್ರೀಯ ಪಂದ್ಯ. ಈ ಸ್ಮರಣೀಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್​ ಅವರ ಸಾಲಿಗೂ ಸೇರಿದ್ದಾರೆ. (AP)
ಸದ್ಯ ಅಜೇಯ 87 ರನ್​ ಸಿಡಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 5ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
(4 / 9)
ಸದ್ಯ ಅಜೇಯ 87 ರನ್​ ಸಿಡಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 5ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.(AP)
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದವರ ಪೈಕಿ ಸಚಿನ್ ತೆಂಡೂಲ್ಕರ್​ 13,492 ರನ್​ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಮಹೇಲಾ ಜಯವರ್ಧನೆ 9509 ರನ್, ಜಾಕ್ ಕಾಲಿಸ್ 9033 ರನ್, ಬ್ರಿಯಾನ್ ಲಾರಾ 7535 ರನ್​ ಗಳಿಸಿ ಕ್ರಮವಾಗಿ 2, 3, 4ನೇ ಸ್ಥಾನದಲ್ಲಿದ್ದಾರೆ. ಸದ್ಯ ಕೊಹ್ಲಿ7097 ರನ್ ಗಳಿಸಿ 5ನೇ ಸ್ಥಾನಕ್ಕೆ ಏರಿದ್ದಾರೆ.
(5 / 9)
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದವರ ಪೈಕಿ ಸಚಿನ್ ತೆಂಡೂಲ್ಕರ್​ 13,492 ರನ್​ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಮಹೇಲಾ ಜಯವರ್ಧನೆ 9509 ರನ್, ಜಾಕ್ ಕಾಲಿಸ್ 9033 ರನ್, ಬ್ರಿಯಾನ್ ಲಾರಾ 7535 ರನ್​ ಗಳಿಸಿ ಕ್ರಮವಾಗಿ 2, 3, 4ನೇ ಸ್ಥಾನದಲ್ಲಿದ್ದಾರೆ. ಸದ್ಯ ಕೊಹ್ಲಿ7097 ರನ್ ಗಳಿಸಿ 5ನೇ ಸ್ಥಾನಕ್ಕೆ ಏರಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್​ನ 500ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಸಚಿನ್, ಪಾಟಿಂಗ್​ ಸೇರಿದಂತೆ ಹಲವರು 500ನೇ ಪಂದ್ಯದಲ್ಲಿ  ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.
(6 / 9)
ಅಂತಾರಾಷ್ಟ್ರೀಯ ಕ್ರಿಕೆಟ್​ನ 500ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಸಚಿನ್, ಪಾಟಿಂಗ್​ ಸೇರಿದಂತೆ ಹಲವರು 500ನೇ ಪಂದ್ಯದಲ್ಲಿ  ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.
ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೂರು ಫಾರ್ಮೆಟ್​ ಸೇರಿ ಅಧಿಕ ರನ್​ ಗಳಿಸಿದ ಟಾಪ್​-5 ಎಲೈಟ್​ ಪಟ್ಟಿಗೂ ಕೊಹ್ಲಿ ಸೇರಿದ್ದಾರೆ. ಸಚಿನ್, ರಿಕಿ ಪಾಂಟಿಂಗ್, ಸೇರಿದಂತೆ ದಿಗ್ಗಜರ ನಂತರ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5 ನೇ ಆಟಗಾರ ಎನಿಸಿಕೊಂಡಿದ್ದಾರೆ.
(7 / 9)
ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೂರು ಫಾರ್ಮೆಟ್​ ಸೇರಿ ಅಧಿಕ ರನ್​ ಗಳಿಸಿದ ಟಾಪ್​-5 ಎಲೈಟ್​ ಪಟ್ಟಿಗೂ ಕೊಹ್ಲಿ ಸೇರಿದ್ದಾರೆ. ಸಚಿನ್, ರಿಕಿ ಪಾಂಟಿಂಗ್, ಸೇರಿದಂತೆ ದಿಗ್ಗಜರ ನಂತರ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5 ನೇ ಆಟಗಾರ ಎನಿಸಿಕೊಂಡಿದ್ದಾರೆ.(BCCI)
ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದವರಲ್ಲಿ   ಸಚಿನ್ 34357 ರನ್​ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕುಮಾರ್ ಸಂಗಕ್ಕಾರ 28016 ರನ್, ರಿಕಿ ಪಾಂಟಿಂಗ್ 27483 ರನ್​, ಜಯವರ್ಧನೆ 25957 ರನ್​ ಗಳಿಸಿ ಕ್ರಮವಾಗಿ 2, 3, 4ನೇ ಸ್ಥಾನದಲ್ಲಿದ್ದಾರೆ. ಸದ್ಯ 5ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 25548 ರನ್​ ಗಳಿಸಿದ್ದಾರೆ (ಮೊದಲ ದಿನದಾಟದ ಅಂತ್ಯಕ್ಕೆ ವರದಿಯಾದ ವಿವರ). ಆ ಮೂಲಕ ದಿಗ್ಗಜ ಜಾಕ್ ಕಾಲಿಸ್ ದಾಖಲೆ ಮುರಿದು ಮುಂದೆ ಸಾಗಿದ್ದಾರೆ. 25,534 ರನ್ ಗಳಿಸಿದ್ದ ಕಾಲಿಸ್​​ರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.
(8 / 9)
ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದವರಲ್ಲಿ   ಸಚಿನ್ 34357 ರನ್​ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕುಮಾರ್ ಸಂಗಕ್ಕಾರ 28016 ರನ್, ರಿಕಿ ಪಾಂಟಿಂಗ್ 27483 ರನ್​, ಜಯವರ್ಧನೆ 25957 ರನ್​ ಗಳಿಸಿ ಕ್ರಮವಾಗಿ 2, 3, 4ನೇ ಸ್ಥಾನದಲ್ಲಿದ್ದಾರೆ. ಸದ್ಯ 5ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 25548 ರನ್​ ಗಳಿಸಿದ್ದಾರೆ (ಮೊದಲ ದಿನದಾಟದ ಅಂತ್ಯಕ್ಕೆ ವರದಿಯಾದ ವಿವರ). ಆ ಮೂಲಕ ದಿಗ್ಗಜ ಜಾಕ್ ಕಾಲಿಸ್ ದಾಖಲೆ ಮುರಿದು ಮುಂದೆ ಸಾಗಿದ್ದಾರೆ. 25,534 ರನ್ ಗಳಿಸಿದ್ದ ಕಾಲಿಸ್​​ರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.(ICC)
ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಟೂರ್ನಿಯಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳಿಸಿದ ಮತ್ತು 2000 ರನ್ ದಾಟಿದ 2ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ರೋಹಿತ್​ ಶರ್ಮಾ ಈ ದಾಖಲೆ ಬರೆದ ಮೊದಲ ಆಟಗಾರ.
(9 / 9)
ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಟೂರ್ನಿಯಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳಿಸಿದ ಮತ್ತು 2000 ರನ್ ದಾಟಿದ 2ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ರೋಹಿತ್​ ಶರ್ಮಾ ಈ ದಾಖಲೆ ಬರೆದ ಮೊದಲ ಆಟಗಾರ.

    ಹಂಚಿಕೊಳ್ಳಲು ಲೇಖನಗಳು