logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Virat Kohli: ವಿರಾಟ್ ನಿವ್ವಳ ಆದಾಯದಲ್ಲಿ ಮತ್ತಷ್ಟು ಏರಿಕೆ; ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಗಳಿಕೆ

Virat Kohli: ವಿರಾಟ್ ನಿವ್ವಳ ಆದಾಯದಲ್ಲಿ ಮತ್ತಷ್ಟು ಏರಿಕೆ; ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಗಳಿಕೆ

Jan 09, 2024 08:12 PM IST

Virat Kohli Net worth: ಜಾಗತಿಕವಾಗಿ ಹೆಚ್ಚು ಪ್ರಚಲಿತದಲ್ಲಿರುವ ಕ್ರಿಕೆಟಿಗನೆಂದರೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ. ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್ಸ್ ಸಂಪಾದಿಸಿರುವ ಕ್ರಿಕೆಟಿಗ ಕಿಂಗ್‌ ಕೊಹ್ಲಿ. ವಿರಾಟ್‌ ಅವರ ಒಟ್ಟು ಆಸ್ತಿ ಮೌಲ್ಯ ಹಾಗೂ ಅವರ ವಾರ್ಷಿಕ ಸಂಪಾದನೆಯ ಮೌಲ್ಯ ಕೇಳಿ ನೆಟ್ಟಿಗರು ಬೆರಗಾಗಿದ್ದಾರೆ.

  • Virat Kohli Net worth: ಜಾಗತಿಕವಾಗಿ ಹೆಚ್ಚು ಪ್ರಚಲಿತದಲ್ಲಿರುವ ಕ್ರಿಕೆಟಿಗನೆಂದರೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ. ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್ಸ್ ಸಂಪಾದಿಸಿರುವ ಕ್ರಿಕೆಟಿಗ ಕಿಂಗ್‌ ಕೊಹ್ಲಿ. ವಿರಾಟ್‌ ಅವರ ಒಟ್ಟು ಆಸ್ತಿ ಮೌಲ್ಯ ಹಾಗೂ ಅವರ ವಾರ್ಷಿಕ ಸಂಪಾದನೆಯ ಮೌಲ್ಯ ಕೇಳಿ ನೆಟ್ಟಿಗರು ಬೆರಗಾಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 253 ಮಿಲಿಯನ್ ಫಾಲೋವರ್‌ಗಳನ್ನು ಕೊಹ್ಲಿ ಗಳಿಸಿದ್ದಾರೆ. ಇದು ಭಾರತ ತಂಡದ ಹಾಲಿ ನಾಯಕ ರೋಹಿತ್ ಶರ್ಮಾಗಿಂತ 224 ಮಿಲಿಯನ್ ಹೆಚ್ಚು. 
(1 / 7)

ಬೆಂಗಳೂರು ಮೂಲದ ಟ್ರೇಡಿಂಗ್ ಮತ್ತು ಹೂಡಿಕೆ ಕಂಪನಿ ಸ್ಟಾಕ್‌ಗ್ರೋ (StockGro) ಹಂಚಿಕೊಂಡ ಮಾಹಿತಿ ಪ್ರಕಾರ, ಕೊಹ್ಲಿಯ ಆದಾಯ ಹಾಗೂ ಆಸ್ತಿಯ ನಿವ್ವಳ ಮೌಲ್ಯ 1050 ಕೋಟಿ ರೂಪಾಯಿ. ಅಂದರೆ, ಜಗತ್ತಿನಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಅಥ್ಲೀಟ್‌ ಕೊಹ್ಲಿ. ಕ್ರಿಕೆಟ್, ಸಾಮಾಜಿಕ ಮಾಧ್ಯಮದ ಮೂಲಕ ಬರುವ ಆದಾಯ, ವೈಯಕ್ತಿಕ ಆಸ್ತಿ ಮತ್ತು ಇತರ ಉದ್ಯಮಗಳಿಂದ ಬರುವ ಕೊಹ್ಲಿಯ ಆದಾಯವನ್ನು ವರ್ಗೀಕರಿಸಲಾಗಿದೆ.
(2 / 7)

ಕೊಹ್ಲಿ ‘ಎ+’ ವಿಭಾಗದಲ್ಲಿ ಸ್ಥಾನ ಪಡೆದಿರುವ ಕಾರಣ ಬಿಸಿಸಿಐ ಜೊತೆಗೆ 7 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಪ್ರಕಾರ ಅವರ ಪಂದ್ಯದ ಶುಲ್ಕವನ್ನು ಗಮನಿಸಿದರೆ, ಕೊಹ್ಲಿ ಪ್ರತಿ ಟೆಸ್ಟ್ ಪಂದ್ಯದಿಂದ 15 ಲಕ್ಷ, ಏಕದಿನಕ್ಕೆ ತಲಾ 6 ಲಕ್ಷ ಹಾಗೂ ಪ್ರತಿ ಟಿ20 ಪಂದ್ಯದಿಂದ 3 ಲಕ್ಷ ರೂಪಾಯಿ ಗಳಿಸುತ್ತಾರೆ.
(3 / 7)

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಕೊಹ್ಲಿ, ಫ್ರಾಂಚೈಸಿಯಿಂದ ವಾರ್ಷಿಕ 15 ಕೋಟಿ ರೂಪಾಯಿ ಪಡೆಯುತ್ತಾರೆ.
(4 / 7)

ಕೊಹ್ಲಿ ಅನೇಕ ಬ್ರಾಂಡ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಅಲ್ಲದೆ ಬ್ಲೂ ಟ್ರೈಬ್, ಯುನಿವರ್ಸಲ್ ಸ್ಪೋರ್ಟ್ಸ್‌ಬಿಜ್, ಎಂಪಿಎಲ್ ಮತ್ತು ಸ್ಪೋರ್ಟ್ಸ್ ಕಾನ್ವೊ ಮುಂತಾದ ಅನೇಕ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಒಟ್ಟಾರೆ  ಅವರು 18ಕ್ಕೂ ಹೆಚ್ಚು ಬ್ರಾಂಡ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ.
(5 / 7)

ಪ್ರತಿ ಜಾಹೀರಾತಿನ ಚಿತ್ರೀಕರಣಕ್ಕಾಗಿ ವಾರ್ಷಿಕವಾಗಿ 7.50ರಿಂದ 10 ಕೋಟಿ ಬೇಡಿಕೆ ಇಡುತ್ತಾರೆ. ಇದು ಬಾಲಿವುಡ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿರುವ ಯಾವುದೇ ಪ್ರಸಿದ್ಧ ವ್ಯಕ್ತಿಗಳು ಪಡೆಯುವ ಅತಿ ಹೆಚ್ಚ ಮೊತ್ತ ಎಂದು ವರದಿಯಾಗಿದೆ. ಒಟ್ಟಾರೆ ವಿವಿಧ ಬ್ರ್ಯಾಂಡ್‌ಗಳಿಗೆ ಸಂಬಂಧೀಸಿದ ಒಪ್ಪಂದಗಳಿಂದ ಸುಮಾರು 175 ಕೋಟಿ ರೂಪಾಯಿಗಳನ್ನು ಕೊಹ್ಲಿ ಪಡೆಯುತ್ತದೆ.
(6 / 7)

ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಕೊಹ್ಲಿ ಮಾಡುವ ಪ್ರತಿ ಪೋಸ್ಟ್‌ಗೆ ಕ್ರಮವಾಗಿ 8.9 ಕೋಟಿ ಮತ್ತು 2.5 ಕೋಟಿ ರೂಪಾಯಿ ಶುಲ್ಕ ವಿಧಿಸುತ್ತಾರೆ. ಕೊಹ್ಲಿ ಮುಂಬೈನಲ್ಲಿ 34 ಕೋಟಿ ಮೌಲ್ಯದ ಮತ್ತು ಗುರ್‌ಗಾಂವ್‌ನಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಮನೆ ಹೊಂದಿದ್ದಾರೆ.
(7 / 7)

    ಹಂಚಿಕೊಳ್ಳಲು ಲೇಖನಗಳು