logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಸ್ಟ್ರೇಲಿಯಾ ಮಾಧ್ಯಮಗಳ ಜತೆಗಿನ ವಿರಾಟ್ ಕೊಹ್ಲಿ-ರವೀಂದ್ರ ಜಡೇಜಾ ವಿವಾದಕ್ಕೆ ಮೈಂಡ್ ಗೇಮ್ ಲೇಬಲ್ ಅಂಟಿಸಿದ ಸೈಮನ್ ಕ್ಯಾಟಿಚ್

ಆಸ್ಟ್ರೇಲಿಯಾ ಮಾಧ್ಯಮಗಳ ಜತೆಗಿನ ವಿರಾಟ್ ಕೊಹ್ಲಿ-ರವೀಂದ್ರ ಜಡೇಜಾ ವಿವಾದಕ್ಕೆ ಮೈಂಡ್ ಗೇಮ್ ಲೇಬಲ್ ಅಂಟಿಸಿದ ಸೈಮನ್ ಕ್ಯಾಟಿಚ್

Dec 23, 2024 08:45 AM IST

Simon Katich: ಆಸ್ಟ್ರೇಲಿಯಾ ಮಾಧ್ಯಮಗಳೊಂದಿಗಿನ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ವಿವಾದಗಳ ಕುರಿತು ಮಾಜಿ ಕ್ರಿಕೆಟಿಗ ಸೈಮನ್ ಕಾಟಿಚ್ ಪ್ರತಿಕ್ರಿಯಿಸಿ, ಇದೆಲ್ಲಾ ಮೈಂಡ್ ಗೇಮ್ ಎಂದು ಹೇಳಿದ್ದಾರೆ. 

  • Simon Katich: ಆಸ್ಟ್ರೇಲಿಯಾ ಮಾಧ್ಯಮಗಳೊಂದಿಗಿನ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ವಿವಾದಗಳ ಕುರಿತು ಮಾಜಿ ಕ್ರಿಕೆಟಿಗ ಸೈಮನ್ ಕಾಟಿಚ್ ಪ್ರತಿಕ್ರಿಯಿಸಿ, ಇದೆಲ್ಲಾ ಮೈಂಡ್ ಗೇಮ್ ಎಂದು ಹೇಳಿದ್ದಾರೆ. 
ಭಾರತದ ರೌಂಡರ್ ರವೀಂದ್ರ ಜಡೇಜಾ ಶನಿವಾರ (ಡಿಸೆಂಬರ್​ 21) ಮಾಧ್ಯಮದ ಜೊತೆ ಇಂಗ್ಲೀಷ್​​ನಲ್ಲಿ ಮಾತನಾಡದೆ ಹಿಂದಿಯಲ್ಲಿ ಉತ್ತರಿಸದೇ ಇರುವುದು ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಇಂಗ್ಲಿಷ್​​ನಲ್ಲಿ ಉತ್ತರಿಸಲಿಲ್ಲ. ಹಾಗೆಯೇ ಇಂಗ್ಲೀಷ್​ನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕೆ ಅವಕಾಶ ನೀಡಲಿಲ್ಲ ಎಂದು ಅಲ್ಲಿನ ಮಾಧ್ಯಮಗಳು ಆರೋಪಿಸಿವೆ.
(1 / 9)

ಇದರ ನಂತರ ರವೀಂದ್ರ ಜಡೇಜಾ ತಮ್ಮ ತಂಡದ ಬಸ್​​ನೊಂದಿಗೆ ಬೇಗನೇ ತೆರಳಬೇಕಿದ್ದ ಕಾರಣ ಅವರು ಸುದ್ದಿಗಾರರೊಂದಿಗೆ ಹೆಚ್ಚು ಹೊತ್ತು ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಭಾರತೀಯ ಮಾಧ್ಯಮ ವ್ಯವಸ್ಥಾಪಕರು ತಿಳಿಸಿದ್ದರು. ಆದರೆ, ಆಸೀಸ್ ಮೀಡಿಯಾ, ಭಾರತೀಯ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ಜಡೇಜಾ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದರು.
(2 / 9)
ಇದರ ನಂತರ ರವೀಂದ್ರ ಜಡೇಜಾ ತಮ್ಮ ತಂಡದ ಬಸ್​​ನೊಂದಿಗೆ ಬೇಗನೇ ತೆರಳಬೇಕಿದ್ದ ಕಾರಣ ಅವರು ಸುದ್ದಿಗಾರರೊಂದಿಗೆ ಹೆಚ್ಚು ಹೊತ್ತು ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಭಾರತೀಯ ಮಾಧ್ಯಮ ವ್ಯವಸ್ಥಾಪಕರು ತಿಳಿಸಿದ್ದರು. ಆದರೆ, ಆಸೀಸ್ ಮೀಡಿಯಾ, ಭಾರತೀಯ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ಜಡೇಜಾ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದರು.(AFP)
ಇದಕ್ಕೂ ಮುನ್ನ ಮೆಲ್ಬೋರ್ನ್​​ ವಿಮಾನ ನಿಲ್ದಾಣದಲ್ಲಿ ತಮ್ಮ ಅನುಮತಿ ಇಲ್ಲದೆ ತಮ್ಮ ಮಕ್ಕಳ ವಿಡಿಯೋ ಚಿತ್ರೀಕರಿಸುತ್ತಿದ್ದ ಮಾಧ್ಯಮದವರೊಂದಿಗೆ ವಿರಾಟ್ ಕೊಹ್ಲಿ ವಾಗ್ವಾದ ನಡೆಸಿದ್ದರು. ಚಾನೆಲ್ 7 ಸುದ್ದಿಗಾರ್ತಿಯನ್ನು ತರಾಟೆ ತೆಗೆದುಕೊಂಡಿದ್ದರು. ಇದು ಕೂಡ ದೊಡ್ಡ ಮಟ್ದಲ್ಲಿ ಸುದ್ದಿಯಾಗಿತ್ತು. ಭಾರತದ ಮಾಜಿ ನಾಯಕ ಆಸ್ಟ್ರೇಲಿಯಾದ ಮಾಧ್ಯಮಗಳನ್ನು ಖಂಡಿಸಿದ್ದರು.
(3 / 9)
ಇದಕ್ಕೂ ಮುನ್ನ ಮೆಲ್ಬೋರ್ನ್​​ ವಿಮಾನ ನಿಲ್ದಾಣದಲ್ಲಿ ತಮ್ಮ ಅನುಮತಿ ಇಲ್ಲದೆ ತಮ್ಮ ಮಕ್ಕಳ ವಿಡಿಯೋ ಚಿತ್ರೀಕರಿಸುತ್ತಿದ್ದ ಮಾಧ್ಯಮದವರೊಂದಿಗೆ ವಿರಾಟ್ ಕೊಹ್ಲಿ ವಾಗ್ವಾದ ನಡೆಸಿದ್ದರು. ಚಾನೆಲ್ 7 ಸುದ್ದಿಗಾರ್ತಿಯನ್ನು ತರಾಟೆ ತೆಗೆದುಕೊಂಡಿದ್ದರು. ಇದು ಕೂಡ ದೊಡ್ಡ ಮಟ್ದಲ್ಲಿ ಸುದ್ದಿಯಾಗಿತ್ತು. ಭಾರತದ ಮಾಜಿ ನಾಯಕ ಆಸ್ಟ್ರೇಲಿಯಾದ ಮಾಧ್ಯಮಗಳನ್ನು ಖಂಡಿಸಿದ್ದರು.(PTI)
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಸೈಮನ್ ಕ್ಯಾಟಿಚ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಆರ್​​ಸಿಬಿ ಜೊತೆಗೆ ಕೆಲಸ ಮಾಡಿದ್ದ ಕ್ಯಾಟಿಚ್, ರವೀಂದ್ರ ಜಡೇಜಾ ನಡೆ ಟೀಕಿಸಿದ್ದಾರೆ. ಅಲ್ಲದೆ, ಇದು ಟೀಮ್ ಇಂಡಿಯಾ ಮೈಂಡ್ ಗೇಮ್ ಆಡಲು ಪ್ರಯತ್ನ ನಡೆಸುತ್ತಿದೆ. ಭಾರತೀಯ ಆಟಗಾರರು ಈ ಸರಣಿಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಸರಿಯಾಗಿ ವರ್ತಿಸಬೇಕು ಎಂದು ಹೇಳಿದ್ದಾರೆ.
(4 / 9)

ಆಟವನ್ನು ಉತ್ತೇಜಿಸಲು ಮತ್ತು ಪ್ರಚಾರ ಮಾಡಲು ಪತ್ರಕರ್ತರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ, ಭಾರತೀಯರು ಈಗ ಏನು ಯೋಚಿಸುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ, ಅದು ಅವರ ಸಮಸ್ಯೆ ಎಂದು ಹೇಳಿದ್ದಾರೆ. ಉದ್ದೇಶಪೂರ್ವಕವಾಗಿ ಹೀಗೆ ವರ್ತಿಸುತ್ತಿದ್ದಾರಾ ಎಂದು ಕ್ಯಾಟಿಚ್ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾಟಿಚ್​ ಚಾನೆಲ್ 7 ನಿರೂಪಕರಾಗಿ ಕೆಲಸ ಮಾಡುತ್ತಿದ್ದು, ಈ ಎರಡು ವಿವಾದಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
(5 / 9)

ಜಡೇಜಾ ಪತ್ರಿಕಾಗೋಷ್ಠಿಯ ನಂತರ ಮತ್ತೊಬ್ಬ ವೇಗಿ ಆಕಾಶ್ ದೀಪ್ ಅವರ ಮೇಲೂ ಇದೇ ರೀತಿಯ ಆರೋಪ ಮಾಡಲಾಯಿತು. ಆದರೂ ಅವರು ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲೇ ಮಾತನಾಡಲು ಆರಾಮದಾಯಕ ಎಂದು ಹೇಳಿದ್ದಾರೆ.
(6 / 9)
ಜಡೇಜಾ ಪತ್ರಿಕಾಗೋಷ್ಠಿಯ ನಂತರ ಮತ್ತೊಬ್ಬ ವೇಗಿ ಆಕಾಶ್ ದೀಪ್ ಅವರ ಮೇಲೂ ಇದೇ ರೀತಿಯ ಆರೋಪ ಮಾಡಲಾಯಿತು. ಆದರೂ ಅವರು ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲೇ ಮಾತನಾಡಲು ಆರಾಮದಾಯಕ ಎಂದು ಹೇಳಿದ್ದಾರೆ.(AP)
ವರದಿ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾದ ಮಾಧ್ಯಮಗಳು ಭಾನುವಾರ ಪರಸ್ಪರ ಟಿ20 ಪಂದ್ಯ ಆಡಬೇಕಿತ್ತು, ಆದರೆ ಭಾರತೀಯ ಮಾಧ್ಯಮ ವ್ಯವಸ್ಥಾಪಕರು ಹೊರಬಂದ ನಂತರ ಅದನ್ನು ರದ್ದುಗೊಳಿಸಲಾಯಿತು.
(7 / 9)
ವರದಿ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾದ ಮಾಧ್ಯಮಗಳು ಭಾನುವಾರ ಪರಸ್ಪರ ಟಿ20 ಪಂದ್ಯ ಆಡಬೇಕಿತ್ತು, ಆದರೆ ಭಾರತೀಯ ಮಾಧ್ಯಮ ವ್ಯವಸ್ಥಾಪಕರು ಹೊರಬಂದ ನಂತರ ಅದನ್ನು ರದ್ದುಗೊಳಿಸಲಾಯಿತು.(AP)
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್​ ಪಂದ್ಯ ಡಿಸೆಂಬರ್​ 26ರಿಂದ ಆರಂಭವಾಗಲಿದೆ. ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಸರಣಿಯಲ್ಲಿ ಮುನ್ನಡೆ ಸಾಧಿಸುವುದರ ಜೊತೆಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಸರಣಿ ಗೆಲ್ಲುವುದು ಉಭಯ ತಂಡಗಳಿಗೂ ಅಗತ್ಯ. ಪ್ರಸ್ತುತ 3 ಪಂದ್ಯಗಳು ಮುಗಿದಿದ್ದು, 1-1ರಲ್ಲಿ ಸಮಬಲ ಸಾಧಿಸಿದೆ.
(8 / 9)
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್​ ಪಂದ್ಯ ಡಿಸೆಂಬರ್​ 26ರಿಂದ ಆರಂಭವಾಗಲಿದೆ. ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಸರಣಿಯಲ್ಲಿ ಮುನ್ನಡೆ ಸಾಧಿಸುವುದರ ಜೊತೆಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಸರಣಿ ಗೆಲ್ಲುವುದು ಉಭಯ ತಂಡಗಳಿಗೂ ಅಗತ್ಯ. ಪ್ರಸ್ತುತ 3 ಪಂದ್ಯಗಳು ಮುಗಿದಿದ್ದು, 1-1ರಲ್ಲಿ ಸಮಬಲ ಸಾಧಿಸಿದೆ.(AFP)
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್​ ಪಂದ್ಯ ಡಿಸೆಂಬರ್​ 26ರಿಂದ ಆರಂಭವಾಗಲಿದೆ. ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಸರಣಿಯಲ್ಲಿ ಮುನ್ನಡೆ ಸಾಧಿಸುವುದರ ಜೊತೆಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಸರಣಿ ಗೆಲ್ಲುವುದು ಉಭಯ ತಂಡಗಳಿಗೂ ಅಗತ್ಯ. ಪ್ರಸ್ತುತ 3 ಪಂದ್ಯಗಳು ಮುಗಿದಿದ್ದು, 1-1ರಲ್ಲಿ ಸಮಬಲ ಸಾಧಿಸಿದೆ.
(9 / 9)

    ಹಂಚಿಕೊಳ್ಳಲು ಲೇಖನಗಳು