logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Union Budget 2023: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳ ಸಂಕ್ಷಿಪ್ತ ನೋಟ: ತಪ್ಪಿದ್ದೇಗೆ ಆದಾಯ ತೆರಿಗೆ ಮಿತಿಯ ಕಾಟ?

Union Budget 2023: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳ ಸಂಕ್ಷಿಪ್ತ ನೋಟ: ತಪ್ಪಿದ್ದೇಗೆ ಆದಾಯ ತೆರಿಗೆ ಮಿತಿಯ ಕಾಟ?

Feb 01, 2023 05:27 PM IST

Union Budget 2023-24: ಏಪ್ರಿಲ್ 1, 2023 ರಿಂದ ಪ್ರಾರಂಭವಾಗುವ 2023-24 ರ ಆರ್ಥಿಕ ವರ್ಷಕ್ಕೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ವಿನಾಯಿತಿಯಿಂದ ಹಿಡಿದು ಕ್ಯಾಪೆಕ್ಸ್ ಒತ್ತಡದವರೆಗೆ ಜನಸಾಮಾನ್ಯರಿಗೆ ಹಲವು ರೀತಿಯ ಸಮಾಧಾನವನ್ನು ಘೋಷಿಸಿದ್ದಾರೆ. ಈ ಬಾರಿಯ ಬಜೆಟ್‌ನ ಪ್ರಮುಖ ಅಂಶಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ.

  • Union Budget 2023-24: ಏಪ್ರಿಲ್ 1, 2023 ರಿಂದ ಪ್ರಾರಂಭವಾಗುವ 2023-24 ರ ಆರ್ಥಿಕ ವರ್ಷಕ್ಕೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ವಿನಾಯಿತಿಯಿಂದ ಹಿಡಿದು ಕ್ಯಾಪೆಕ್ಸ್ ಒತ್ತಡದವರೆಗೆ ಜನಸಾಮಾನ್ಯರಿಗೆ ಹಲವು ರೀತಿಯ ಸಮಾಧಾನವನ್ನು ಘೋಷಿಸಿದ್ದಾರೆ. ಈ ಬಾರಿಯ ಬಜೆಟ್‌ನ ಪ್ರಮುಖ ಅಂಶಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಿದರು. 2023-24ರಲ್ಲಿ ಬಂಡವಾಳ ವೆಚ್ಚವನ್ನು ಶೇ.33 ರಿಂದ 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಅವರು ತಮ್ಮ ಭಾಷಣದಲ್ಲಿ ಘೋಷಿಸಿದರು, ಇದು ಜಿಡಿಪಿಯ ಶೇಕಡಾ 3.3 ಆಗಿರುತ್ತದೆ.
(1 / 8)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಿದರು. 2023-24ರಲ್ಲಿ ಬಂಡವಾಳ ವೆಚ್ಚವನ್ನು ಶೇ.33 ರಿಂದ 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಅವರು ತಮ್ಮ ಭಾಷಣದಲ್ಲಿ ಘೋಷಿಸಿದರು, ಇದು ಜಿಡಿಪಿಯ ಶೇಕಡಾ 3.3 ಆಗಿರುತ್ತದೆ.(ANI)
ಒಟ್ಟಾರೆ ಖರ್ಚು ಜಿಡಿಪಿಯ ಶೇಕಡಾ 3.3 ಆಗಿರುತ್ತದೆ, ಇದು 2019-20 ರಲ್ಲಿ ಮಾಡಿದ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು. ಗಣನೀಯ ಹೆಚ್ಚಳದೊಂದಿಗೆ, ಬೆಳವಣಿಗೆಯ ಸಾಮರ್ಥ್ಯವನ್ನು ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳಿಗೆ ಇದು ಕೇಂದ್ರವಾಗಿದೆ, ಖಾಸಗಿ ಹೂಡಿಕೆಗಳಲ್ಲಿ ಹೆಚ್ಚಿನ ಉತ್ತೇಜನ ನೀಡುವುದು ನಮ್ಮ ಸರ್ಕಾರದ ಗುರಿ ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
(2 / 8)
ಒಟ್ಟಾರೆ ಖರ್ಚು ಜಿಡಿಪಿಯ ಶೇಕಡಾ 3.3 ಆಗಿರುತ್ತದೆ, ಇದು 2019-20 ರಲ್ಲಿ ಮಾಡಿದ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು. ಗಣನೀಯ ಹೆಚ್ಚಳದೊಂದಿಗೆ, ಬೆಳವಣಿಗೆಯ ಸಾಮರ್ಥ್ಯವನ್ನು ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳಿಗೆ ಇದು ಕೇಂದ್ರವಾಗಿದೆ, ಖಾಸಗಿ ಹೂಡಿಕೆಗಳಲ್ಲಿ ಹೆಚ್ಚಿನ ಉತ್ತೇಜನ ನೀಡುವುದು ನಮ್ಮ ಸರ್ಕಾರದ ಗುರಿ ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.(ANI)
ಕೃಷಿ ಕ್ಷೇತ್ರಕ್ಕೆ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡುವ ಮೂಲಕ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ.
(3 / 8)
ಕೃಷಿ ಕ್ಷೇತ್ರಕ್ಕೆ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡುವ ಮೂಲಕ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ.(ANI)
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು  ₹ 5 ಲಕ್ಷದಿಂದ  ₹ 7 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದು, ಹೊಸ ತೆರಿಗೆ ಪದ್ಧತಿಯು ಈಗ ಡೀಫಾಲ್ಟ್ ತೆರಿಗೆ ಪದ್ಧತಿಯಾಗಲಿದೆ ಎಂದು ಹೇಳಿದ್ದಾರೆ.
(4 / 8)
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದು, ಹೊಸ ತೆರಿಗೆ ಪದ್ಧತಿಯು ಈಗ ಡೀಫಾಲ್ಟ್ ತೆರಿಗೆ ಪದ್ಧತಿಯಾಗಲಿದೆ ಎಂದು ಹೇಳಿದ್ದಾರೆ.(REUTERS)
ತೆರಿಗೆ ಸ್ಲ್ಯಾಬ್‌ಗಳ ಸಂಖ್ಯೆಯನ್ನು 5 ಕ್ಕೆ ಇಳಿಸುವ ಮೂಲಕ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು  ₹ 3 ಲಕ್ಷಕ್ಕೆ ಹೆಚ್ಚಿಸುವ ಮೂಲಕ, ತೆರಿಗೆ ರಚನೆಯನ್ನು ಬದಲಾಯಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು.
(5 / 8)
ತೆರಿಗೆ ಸ್ಲ್ಯಾಬ್‌ಗಳ ಸಂಖ್ಯೆಯನ್ನು 5 ಕ್ಕೆ ಇಳಿಸುವ ಮೂಲಕ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು ₹ 3 ಲಕ್ಷಕ್ಕೆ ಹೆಚ್ಚಿಸುವ ಮೂಲಕ, ತೆರಿಗೆ ರಚನೆಯನ್ನು ಬದಲಾಯಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು.(ANI)
ಮೊಬೈಲ್ ಫೋನ್ ತಯಾರಿಕೆಗಾಗಿ ಕೆಲವು ಇನ್‌ಪುಟ್‌ಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕದಲ್ಲಿ ಕಡಿತ ಇರುತ್ತದೆ.
(6 / 8)
ಮೊಬೈಲ್ ಫೋನ್ ತಯಾರಿಕೆಗಾಗಿ ಕೆಲವು ಇನ್‌ಪುಟ್‌ಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕದಲ್ಲಿ ಕಡಿತ ಇರುತ್ತದೆ.(ANI)
ನಿರ್ಮಲಾ ಸೀತಾರಾಮನ್ ಅವರು 2023-24ರಲ್ಲಿ ರೈಲ್ವೆ ಇಲಾಖೆಗೆ 2.4 ಟ್ರಿಲಿಯನ್ ರೂಪಾಯಿ ಬಂಡವಾಳ ಹೂಡಿಕೆಯನ್ನು ಘೋಷಣೆ ಮಾಡಿದ್ದಾರೆ.
(7 / 8)
ನಿರ್ಮಲಾ ಸೀತಾರಾಮನ್ ಅವರು 2023-24ರಲ್ಲಿ ರೈಲ್ವೆ ಇಲಾಖೆಗೆ 2.4 ಟ್ರಿಲಿಯನ್ ರೂಪಾಯಿ ಬಂಡವಾಳ ಹೂಡಿಕೆಯನ್ನು ಘೋಷಣೆ ಮಾಡಿದ್ದಾರೆ.(ANI)
ಸರ್ಕಾರವು ಜಿಡಿಪಿಯ ಯ ಶೇ.2ಕ್ಕಿಂತ ಹೆಚ್ಚು ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.
(8 / 8)
ಸರ್ಕಾರವು ಜಿಡಿಪಿಯ ಯ ಶೇ.2ಕ್ಕಿಂತ ಹೆಚ್ಚು ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.(ANI)

    ಹಂಚಿಕೊಳ್ಳಲು ಲೇಖನಗಳು