logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karwar News: ಕಾರವಾರ ಸಮೀಪದ ಆಳ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ದೋಣಿ ರಕ್ಷಣೆ, ಹೀಗಿತ್ತು ಕಾರ್ಯಾಚರಣೆ Photos

Karwar News: ಕಾರವಾರ ಸಮೀಪದ ಆಳ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ದೋಣಿ ರಕ್ಷಣೆ, ಹೀಗಿತ್ತು ಕಾರ್ಯಾಚರಣೆ photos

Apr 16, 2024 05:58 PM IST

ಆಳ ಸಮುದ್ರದಲ್ಲಿ ಮೀನುಗಾರಿಕೆ ಸುಲಭವಲ್ಲ. ಯಂತ್ರ ಕೈಕೊಟ್ಟರೆ ಪರಿಸ್ಥಿತಿ ಕಠಿಣ. ಹೀಗೆಯೇ ಕಾರವಾರದ ಆಳ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರಿಕೆ ದೋಣಿ(Indian Fishing Boat) ಅನ್ನು ಕೋಸ್ಟ್‌ ಗಾರ್ಡ್(‌ INDIAN COAST GUARD) ರಕ್ಷಣೆ ಮಾಡಿದೆ. ಇದರ ಚಿತ್ರನೋಟ ಇಲ್ಲಿದೆ. 

  • ಆಳ ಸಮುದ್ರದಲ್ಲಿ ಮೀನುಗಾರಿಕೆ ಸುಲಭವಲ್ಲ. ಯಂತ್ರ ಕೈಕೊಟ್ಟರೆ ಪರಿಸ್ಥಿತಿ ಕಠಿಣ. ಹೀಗೆಯೇ ಕಾರವಾರದ ಆಳ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರಿಕೆ ದೋಣಿ(Indian Fishing Boat) ಅನ್ನು ಕೋಸ್ಟ್‌ ಗಾರ್ಡ್(‌ INDIAN COAST GUARD) ರಕ್ಷಣೆ ಮಾಡಿದೆ. ಇದರ ಚಿತ್ರನೋಟ ಇಲ್ಲಿದೆ. 
ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆ ದೋಣಿಗಳು ಆಳವಾದ ಸಮುದ್ರಕ್ಕೆ ಹೋಗುತ್ತಲೇ ಇರುತ್ತವೆ. ಮೀನುಗಾರಿಕೆ ಅವರ ಕಸುಬುದಾರಿಕೆಯೂ ಹೌದು. ಆಳಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕುವವರು ಅಧಿಕ. ಇವರನ್ನು ಕೋಸ್ಟ್‌ ಗಾರ್ಡ್‌( INDIAN COAST GUARD) ಕೂಡ ಕಾಯುತ್ತಲೇ ಇರುತ್ತದೆ.
(1 / 6)

 ಕಾರವಾರದಿಂದ ಹೊರಟ ಮೀನುಗಾರಿಕೆ ದೋಣಿಯು ಆಳ ಸಮುದ್ರದಲ್ಲಿ ಸಿಲುಕಿಕೊಂಡಿತ್ತು. ಕೋಸ್ಟ್‌ ಗಾರ್ಡ್ ಗೆ ಬಂದ ಕರೆ ಆಧರಿಸಿ ಸಿಬ್ಬಂದಿ ದೋಣಿ ಸಿಲುಕಿದ ಸ್ಥಳಕ್ಕೆ ತೆರಳಿದರು.
(2 / 6)

ಕಾರವಾರದಿಂದ ಸುಮಾರು  215  ನಾಟಿಕಲ್‌ ಮೈಲ್‌ ದೂರದಲ್ಲಿ ಮೀನುಗಾರಿಕೆ ದೋಣಿ ಸಿಲುಕಿ ಹಾಕಿಕೊಂಡಿತ್ತು. ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ವಿಶೇಷ ಹಡಗಿನಲ್ಲಿ ಸ್ಥಳಕ್ಕೆ ತೆರಳುವಲ್ಲಿ ಯಶಸ್ವಿಯಾಯಿತು.
(3 / 6)

ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಮೀನುಗಾರ ದೋಣಿಯ ಪರಿಸ್ಥಿತಿಯನ್ನು ಅವಲೋಕಿಸಿದರು. ಕೆಟ್ಟಿದ್ದ ಎಂಜಿನ್‌ ಅನ್ನು ಸರಿಪಡಿಸಲು ಪ್ರಯತ್ನಿಸಿದರು. ಆದರೆ ಅದು ಸೀಜ್‌ ಆಗಿ ಹೋಗಿದ್ದರಿಂದ ದುರಸ್ತಿ ಕಷ್ಟ ಎನ್ನುವ ಸಂದೇಶ ರವಾನಿಸಲಾಯಿತು.
(4 / 6)

ಮೇಲಾಧಿಕಾರಿಗಳ ಗಮನಕ್ಕೆ ತಂದು ಸಂಕಷ್ಟಕ್ಕೆ ಸಿಲುಕಿದ್ದ ಮೀನುಗಾರರ ದೋಣಿಯನ್ನು ಹಾಗೂ ಅದರೊಳಗೆ ಇದ್ದ ಮೀನುಗಾರರ ರಕ್ಷಣೆಗೆ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಮುಂದಾದರು.
(5 / 6)

ಕೊನೆಗೆ ಕಾರವಾರದಲ್ಲಿರುವ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಗಮನಕ್ಕೂ ಮೀನುಗಾರರು ಸಂಕಷ್ಟಕ್ಕೆ ಸಿಲುಕಿರುವ ವಿಷಯವನ್ನು ತಂದು ಕೋಸ್ಟ್‌ ಗಾರ್ಡ್‌ ವಾಹನವನ್ನು ಬಳಸಿಕೊಂಡು ಮೀನುಗಾರರ ದೋಣಿಯನ್ನು ಕಾರವಾರಕ್ಕೆ ಎಳೆದುಕೊಂಡು ತರಲಾಯಿತು. 
(6 / 6)

    ಹಂಚಿಕೊಳ್ಳಲು ಲೇಖನಗಳು