logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Madhya Pradesh: ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 6 ಅಂಶಗಳು

Madhya Pradesh: ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 6 ಅಂಶಗಳು

Dec 03, 2023 03:31 PM IST

ಹಿಂದಿ ಭಾಷಿಕ ಪ್ರದೇಶದ ದೊಡ್ಡ ರಾಜ್ಯವಾಗಿರುವ ಮಧ್ಯ ಪ್ರದೇಶದಲ್ಲಿ ಬಿಜೆಪಿ ನಿಚ್ಚಳ ಬಹುಮಾತದತ್ತ ದೃಢವಾದ ಹೆಜ್ಜೆ ಇಡುತ್ತಿದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಹಿನ್ನಡೆಗೆ, ಬಿಜೆಪಿ ಮುನ್ನಡೆಗೆ ಕಾರಣವಾದ ಅಂಶಗಳಿವು.

  • ಹಿಂದಿ ಭಾಷಿಕ ಪ್ರದೇಶದ ದೊಡ್ಡ ರಾಜ್ಯವಾಗಿರುವ ಮಧ್ಯ ಪ್ರದೇಶದಲ್ಲಿ ಬಿಜೆಪಿ ನಿಚ್ಚಳ ಬಹುಮಾತದತ್ತ ದೃಢವಾದ ಹೆಜ್ಜೆ ಇಡುತ್ತಿದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಹಿನ್ನಡೆಗೆ, ಬಿಜೆಪಿ ಮುನ್ನಡೆಗೆ ಕಾರಣವಾದ ಅಂಶಗಳಿವು.
ಮೋದಿ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರದಲ್ಲಿರಿಸಿ ಪ್ರಚಾರ ತಂತ್ರವನ್ನು ಬಿಜೆಪಿ ಹೆಣೆಯಿತು. ಮೋದಿ ಅವರು ಮಧ್ಯ ಪ್ರದೇಶದಲ್ಲಿ ನಡೆಸಿದ 14 ಪ್ರಚಾರ ಸಭೆಗಳು ಜನರ ಮನಗೆಲ್ಲಲು ಸಫಲವಾದವು.
(1 / 6)

ಕೊಡುಗೆಗಳ ಘೋಷಣೆ: ಮಧ್ಯ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಘೋಷಿಸಿದ ಲಾಡ್ಲಿ ಬೆಹ್ನಾ ಮತ್ತು ಕಿಸಾನ್ ಸಮ್ಮಾನ್ ನಿಧಿ ಕಾರ್ಯಕ್ರಮಗಳು ಜನರ ಗಮನ ಗೆದ್ದವು. ಈ ಯೋಜನೆಗಳ ಫಲಾನುಭವಿಗಳು ಕ್ರಮವಾಗಿ  ₹ 1,250 ಮತ್ತು  ₹ 10,000 ನಗದನ್ನು ಚುನಾವಣೆಯ ತಿಂಗಳು ಅಂದರೆ ನವೆಂಬರ್‌ನಲ್ಲಿ ಸ್ವೀಕರಿಸಿದ್ದರು.
(2 / 6)

ಮಹಿಳೆಯರ ಬೆಂಬಲ: ವಿವಿಧ ಜಾತಿ, ಧರ್ಮವನ್ನು ಲೆಕ್ಕಿಸದೇ ಮಹಿಳೆಯರು ಒಂದು ದೊಡ್ಡ ಸಮುದಾಯ ಎನ್ನುವಂತೆ ವರ್ತಿಸಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಕೈಬಲಪಡಿಸಲು ನಿರ್ಧರಿಸಿದ್ದನ್ನು ಹಲವು ಸಮೀಕ್ಷೆಗಳು ಪ್ರಸ್ತಾಪಿಸಿದ್ದವು. ಫಲಿತಾಂಶವೂ ಇದೇ ಅಂಶವನ್ನು ಪುಷ್ಟೀಕರಿಸಿದೆ.
(3 / 6)

ಡಬಲ್ ಎಂಜಿನ್ ಭರವಸೆ: ಕರ್ನಾಟಕದ ವಿಧಾನಸಭಾ ಚುನಾವಣೆ ನೀಡಿದ್ದಂತೆ ಮಧ್ಯ ಪ್ರದೇಶದಲ್ಲಿಯೂ ಬಿಜೆಪಿ ಡಬಲ್ ಎಂಜಿನ್ ಅಭಿವೃದ್ಧಿಯ ಭರವಸೆ ನೀಡಿತು. ಅಲ್ಲಿನ ಜನರು ಅದನ್ನು ನಂಬಿದರು ಎನ್ನುವುದನ್ನು ಫಲಿತಾಂಶದ ಸಂಖ್ಯೆಗಳು ತೋರಿಸುತ್ತಿವೆ.
(4 / 6)

ಕೈಕೊಟ್ಟ ಸೋಷಿಯಲ್ ಮೀಡಿಯಾ: ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಬಲ ಪ್ರಚಾರ ನಡೆಸಿತು. ಆದರೆ ಮನೆಮನೆ ಪ್ರಚಾರ ಮತ್ತು ಬಹಿರಂಗ ಪ್ರಚಾರ ಸಭೆಗಳನ್ನು ಸಾಮಾಜಿಕ ಮಾಧ್ಯಮಗಳ ಪ್ರಚಾರದೊಂದಿಗೆ ಬೆಸೆಯುವ ತಂತ್ರಗಾರಿಕೆ ಹೆಣೆಯುವಲ್ಲಿ ವಿಫಲವಾಯಿತು.
(5 / 6)

ಫಲಿಸಿದ ತಂತ್ರಗಾರಿಕೆ: ಬಿಜೆಪಿಯು 'ಚುನಾವಣಾ ಚಾಣಕ್ಯ' ಎಂದೇ ಹೆಸರುವಾಸಿಯಾಗಿರುವ ಅಮಿತ್‌ ಶಾ ನೇತೃತ್ವದಲ್ಲಿ ಪ್ರಚಾರ ತಂತ್ರ ಹೆಣೆಯಿತು. ಚುನಾವಣೆ ಘೋಷಣೆಯಾಗುವ ಒಂದೂವರೆ ವರ್ಷ ಮೊದಲೇ ಸಿದ್ಧತೆಗಳು ಆರಂಭವಾಗಿತ್ತು. ಆಡಳಿತ ವಿರೋಧಿ ಅಲೆಯನ್ನು ಸಂಭಾಳಿಸುವಲ್ಲಿ ಈ ಕಾರ್ಯತಂತ್ರ ನೆರವಾಯಿತು.
(6 / 6)

    ಹಂಚಿಕೊಳ್ಳಲು ಲೇಖನಗಳು