logo
ಕನ್ನಡ ಸುದ್ದಿ  /  Photo Gallery  /  Turkey-syria Earthquake Deaths To Top 50,000: Un Relief Chief's Dire Prediction

Turkey Earthquake: ಭೂಕಂಪಕ್ಕೆ 28,000ಕ್ಕೂ ಹೆಚ್ಚು ಮಂದಿ ಬಲಿ... ಸಾವಿನ ಸಂಖ್ಯೆ 50,000 ದಾಟಲಿದೆ ಎಂದ ವಿಶ್ವಸಂಸ್ಥೆ

Feb 12, 2023 09:35 AM IST

ಭೂಕಂಪದಿಂದ ಟರ್ಕಿ ಹಾಗೂ ಸಿರಿಯಾ ದೇಶಗಳು ಅಸ್ತವ್ಯಸ್ತವಾಗಿದೆ. ಇಲ್ಲಿಯವರೆಗೆ 28,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಟರ್ಕಿಗೆ ಭೇಟಿ ನೀಡಿರುವ ವಿಶ್ವಸಂಸ್ಥೆಯ (ಯುಎನ್) ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್‌ ಅವರು, ಸಾವಿನ ಸಂಖ್ಯೆ 50,000 ಗಡಿ ದಾಟುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

  • ಭೂಕಂಪದಿಂದ ಟರ್ಕಿ ಹಾಗೂ ಸಿರಿಯಾ ದೇಶಗಳು ಅಸ್ತವ್ಯಸ್ತವಾಗಿದೆ. ಇಲ್ಲಿಯವರೆಗೆ 28,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಟರ್ಕಿಗೆ ಭೇಟಿ ನೀಡಿರುವ ವಿಶ್ವಸಂಸ್ಥೆಯ (ಯುಎನ್) ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್‌ ಅವರು, ಸಾವಿನ ಸಂಖ್ಯೆ 50,000 ಗಡಿ ದಾಟುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 28,000 ದಾಟಿದ್ದು, 80 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಅಧಿಕೃತ ಅಂಕಿಅಂಶಗಳ ಪ್ರಕಾರ, ಟರ್ಕಿಯಲ್ಲಿ 24,617 ಮತ್ತು ಸಿರಿಯಾದಲ್ಲಿ 3,575 ಜನರು ಪ್ರಾಣ ಕಳೆದುಕೊಂಡಿದ್ದಾರೆ. 
(1 / 8)
ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 28,000 ದಾಟಿದ್ದು, 80 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಅಧಿಕೃತ ಅಂಕಿಅಂಶಗಳ ಪ್ರಕಾರ, ಟರ್ಕಿಯಲ್ಲಿ 24,617 ಮತ್ತು ಸಿರಿಯಾದಲ್ಲಿ 3,575 ಜನರು ಪ್ರಾಣ ಕಳೆದುಕೊಂಡಿದ್ದಾರೆ. (REUTERS)
ಮೈಕೊರೆಯುವ ಚಳಿಯ ನಡುವೆಯೂ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಮತ್ತು ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯಕರ್ತರು ಪರದಾಡುತ್ತಿದ್ದಾರೆ.   
(2 / 8)
ಮೈಕೊರೆಯುವ ಚಳಿಯ ನಡುವೆಯೂ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಮತ್ತು ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯಕರ್ತರು ಪರದಾಡುತ್ತಿದ್ದಾರೆ.   (REUTERS)
ಪರಿಸ್ಥಿತಿ ಪರಿಶೀಲಿಸಲು ಟರ್ಕಿಗೆ ಆಗಮಿಸಿರುವ ವಿಶ್ವಸಂಸ್ಥೆಯ (ಯುಎನ್) ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್‌ ಅವರು, ಸಾವಿನ ಸಂಖ್ಯೆ 50,000 ಗಡಿ ದಾಟುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. 
(3 / 8)
ಪರಿಸ್ಥಿತಿ ಪರಿಶೀಲಿಸಲು ಟರ್ಕಿಗೆ ಆಗಮಿಸಿರುವ ವಿಶ್ವಸಂಸ್ಥೆಯ (ಯುಎನ್) ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್‌ ಅವರು, ಸಾವಿನ ಸಂಖ್ಯೆ 50,000 ಗಡಿ ದಾಟುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. (REUTERS)
"ನಾವು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ನಿಖರವಾಗಿ ಅಂದಾಜು ಮಾಡುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ ಸಾವಿನ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಅಥವಾ ಅದಕ್ಕಿಂತಲೂ ಹೆಚ್ಚಾಗುತ್ತದೆ" ಎಂದು ಮಾರ್ಟಿನ್ ಗ್ರಿಫಿತ್ಸ್‌ ಹೇಳಿದ್ದಾರೆ. 
(4 / 8)
"ನಾವು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ನಿಖರವಾಗಿ ಅಂದಾಜು ಮಾಡುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ ಸಾವಿನ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಅಥವಾ ಅದಕ್ಕಿಂತಲೂ ಹೆಚ್ಚಾಗುತ್ತದೆ" ಎಂದು ಮಾರ್ಟಿನ್ ಗ್ರಿಫಿತ್ಸ್‌ ಹೇಳಿದ್ದಾರೆ. (REUTERS)
"ಶೀಘ್ರದಲ್ಲೇ, ರಕ್ಷಣಾ ಸಿಬ್ಬಂದಿಗಳು ಮಾನವೀಯ ನೆರವು ಏಜೆನ್ಸಿಗಳಿಗೆ ದಾರಿ ಮಾಡಿಕೊಡುತ್ತಾರೆ. ಮುಂದಿನ ತಿಂಗಳುಗಳಲ್ಲಿ ಪೀಡಿತರನ್ನು ನೋಡಿಕೊಳ್ಳುವುದು ಅವರ ಕೆಲಸವಾಗಲಿದೆ." ಎಂದು ಅವರು ಹೇಳಿದರು. 
(5 / 8)
"ಶೀಘ್ರದಲ್ಲೇ, ರಕ್ಷಣಾ ಸಿಬ್ಬಂದಿಗಳು ಮಾನವೀಯ ನೆರವು ಏಜೆನ್ಸಿಗಳಿಗೆ ದಾರಿ ಮಾಡಿಕೊಡುತ್ತಾರೆ. ಮುಂದಿನ ತಿಂಗಳುಗಳಲ್ಲಿ ಪೀಡಿತರನ್ನು ನೋಡಿಕೊಳ್ಳುವುದು ಅವರ ಕೆಲಸವಾಗಲಿದೆ." ಎಂದು ಅವರು ಹೇಳಿದರು. (AP)
ಭೂಕಂಪದಿಂದಾಗಿ, ಟರ್ಕಿ ಮತ್ತು ಸಿರಿಯಾ ಸೇರಿದತೆ 2.6 ಕೋಟಿ ಜನರು ತೊಂದರೆಗೀಡಾಗಿದ್ದು, ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ.   
(6 / 8)
ಭೂಕಂಪದಿಂದಾಗಿ, ಟರ್ಕಿ ಮತ್ತು ಸಿರಿಯಾ ಸೇರಿದತೆ 2.6 ಕೋಟಿ ಜನರು ತೊಂದರೆಗೀಡಾಗಿದ್ದು, ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ.   (REUTERS)
ಈಗಾಗಲೇ ಭಾರತವು ರಕ್ಷಣಾ ತಂಡ ಹಾಗೂ ಪರಿಹಾರ ಸಾಮಗ್ರಿಗಳನ್ನು ನ್ನ ವಾಯುಸೇನೆಯ ವಿಮಾನಗಳ ಮೂಲಕ ಟರ್ಕಿಗೆ ಕಳುಹಿಸಿದೆ. ಇದೀಗ ಕಳೆದ ರಾತ್ರಿ ಮತ್ತೊಂದು IAF C-17 ವಿಮಾನವು ಸಿರಿಯಾ ಮತ್ತು ಟರ್ಕಿಗೆ ಪರಿಹಾರ ಸಾಮಗ್ರಿ ಮತ್ತು ತುರ್ತು ಸಲಕರಣೆಗಳನ್ನು ಹೊತ್ತೊಯ್ದಿದೆ. 
(7 / 8)
ಈಗಾಗಲೇ ಭಾರತವು ರಕ್ಷಣಾ ತಂಡ ಹಾಗೂ ಪರಿಹಾರ ಸಾಮಗ್ರಿಗಳನ್ನು ನ್ನ ವಾಯುಸೇನೆಯ ವಿಮಾನಗಳ ಮೂಲಕ ಟರ್ಕಿಗೆ ಕಳುಹಿಸಿದೆ. ಇದೀಗ ಕಳೆದ ರಾತ್ರಿ ಮತ್ತೊಂದು IAF C-17 ವಿಮಾನವು ಸಿರಿಯಾ ಮತ್ತು ಟರ್ಕಿಗೆ ಪರಿಹಾರ ಸಾಮಗ್ರಿ ಮತ್ತು ತುರ್ತು ಸಲಕರಣೆಗಳನ್ನು ಹೊತ್ತೊಯ್ದಿದೆ. 
ತಮ್ಮವರನ್ನು ಕಳೆದುಕೊಂಡು ಬದುಕುಳಿದವರ ಆಕ್ರಂದನ ಮುಗಿಲು ಮುಟ್ಟಿದೆ. 
(8 / 8)
ತಮ್ಮವರನ್ನು ಕಳೆದುಕೊಂಡು ಬದುಕುಳಿದವರ ಆಕ್ರಂದನ ಮುಗಿಲು ಮುಟ್ಟಿದೆ. 

    ಹಂಚಿಕೊಳ್ಳಲು ಲೇಖನಗಳು