Chanakya Niti: ಪತ್ನಿಯ ಈ 3 ಅಭ್ಯಾಸಗಳಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ; ಸಂತೋಷ, ನೆಮ್ಮದಿ ಇರುವುದಿಲ್ಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Chanakya Niti: ಪತ್ನಿಯ ಈ 3 ಅಭ್ಯಾಸಗಳಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ; ಸಂತೋಷ, ನೆಮ್ಮದಿ ಇರುವುದಿಲ್ಲ

Chanakya Niti: ಪತ್ನಿಯ ಈ 3 ಅಭ್ಯಾಸಗಳಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ; ಸಂತೋಷ, ನೆಮ್ಮದಿ ಇರುವುದಿಲ್ಲ

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯನು ತನ್ನ ನೀತಿಗಳಲ್ಲಿ ವೈವಾಹಿಕ ಜೀವನದ ಬಗ್ಗೆ ವಿವರವಾಗಿ ಮಾತನಾಡಿದ್ದಾನೆ. ಇಡೀ ಕುಟುಂಬದ ಅವನತಿಗೆ ಕಾರಣವಾಗುವ ಪತ್ನಿಯ ಅಭ್ಯಾಸಗಳನ್ನು ಸಹ ಉಲ್ಲೇಖಿಸಿದ್ದಾರೆ. ಪತ್ನಿಯಲ್ಲಿ ಈ 3 ಅಭ್ಯಾಸಗಳು ಕುಟುಂಬದಲ್ಲಿನ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಕುಟುಂಬದಲ್ಲಿ ಸಂತೋಷ, ನೆಮ್ಮದಿ ನೆಲೆಸಲು ಹೆಂಡತಿಗೆ ಪ್ರಮುಖವಾಗಿ 3 ಅಭ್ಯಾಸಗಳು ಇರಬಾರದು ಎಂದು ಚಾಣಕ್ಯರು ಹೇಳಿದ್ದಾರೆ.
ಕುಟುಂಬದಲ್ಲಿ ಸಂತೋಷ, ನೆಮ್ಮದಿ ನೆಲೆಸಲು ಹೆಂಡತಿಗೆ ಪ್ರಮುಖವಾಗಿ 3 ಅಭ್ಯಾಸಗಳು ಇರಬಾರದು ಎಂದು ಚಾಣಕ್ಯರು ಹೇಳಿದ್ದಾರೆ.

'ಅವಳು ಮಹಿಳೆ - ಏನು ಬೇಕಾದರೂ ಮಾಡಬಹುದು', ಬಾಲಿವುಡ್ ನ ಈ ಪ್ರಸಿದ್ಧ ಸಿನಿಮಾ ಡೈಲಾಗ್ ಮನರಂಜನೆಗಾಗಿ ಮಾಡಿರಬಹುದು, ಆದರೆ ಈ ಸಂಭಾಷಣೆ ನಿಜ ಜೀವನದಲ್ಲಿಯೂ ತುಂಬಾ ಪ್ರಾಯೋಗಿಕವಾಗಿದೆ. ಜೀವನದ ಇತರ ಕ್ಷೇತ್ರಗಳ ಹೊರತಾಗಿ ನಾವು ಮನೆಯ ಬಗ್ಗೆ ಮಾತನಾಡಿದರೆ, ಮಹಿಳೆ ತನ್ನ ಕುಟುಂಬದ ಸಂತೋಷದ ಬೀಗದ ಕೈ ಆಗಿರುತ್ತಾಳೆ. ಆಕೆ ಬಯಸಿದರೆ ತನ್ನ ಕುಟುಂಬವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾಳೆ. ಆಕೆ ಮನಸು ಮಾಡಿದರೆ ಕುಟುಂಬವನ್ನು ವಿನಾಶಕ್ಕೂ ದೂಡಬಹುದು. ಚಾಣಕ್ಯನು ತನ್ನ ನೀತಿಗಳಲ್ಲಿ ಮಹಿಳೆಯರ ಕೆಲವು ಅಭ್ಯಾಸಗಳ ಬಗ್ಗೆ ಉಳ್ಲೇಖಿಸಿದ್ದಾರೆ. ಮಹಿಳೆಯ ಕೆಲವು ಅಭ್ಯಾಸಗಳು ಪತಿ ಮತ್ತು ಇಡೀ ಕುಟುಂಬದ ನಾಶಕ್ಕೆ ಕಾರಣವಾಗುತ್ತದೆ. ಕುಟುಂಬದ ಆಧಾರ ಸ್ತಂಭವಾಗಿರುವ ಮಹಿಳೆಯರಲ್ಲಿ ಯಾವೆಲ್ಲಾ ಅಭ್ಯಾಸಗಳು ಇರಬಾರದು ಎಂಬುದನ್ನು ತಿಳಿಯೋಣ.

ಪ್ರತಿ ವಿಷಯದಲ್ಲೂ ಕೋಪಗೊಳ್ಳುವುದು

ಯಾವುದೇ ಮನುಷ್ಯನ ವಿನಾಶಕ್ಕೆ ಮಹಿಳೆಯ ಈ ಅಭ್ಯಾಸ ಕಾರಣವಾಗುತ್ತದೆ. ಏಕೆಂದರೆ ಇದು ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಶಕ್ತಿಯೂ ಕೊನೆಗೊಳ್ಳುವ ಪ್ರವೃತ್ತಿಯಾಗಿದೆ. ಸ್ವಲ್ಪ ಕೋಪಗೊಳ್ಳುವುದು ಸಾಮಾನ್ಯ, ಆದರೆ ಸಣ್ಣ ವಿಷಯಗಳಿಗೆ ತುಂಬಾ ಕೋಪಗೊಳ್ಳುವುದು ಯಾವುದೇ ಅರ್ಥದಲ್ಲಿ ಸರಿಯಲ್ಲ. ಸಣ್ಣ ವಿಷಯಗಳಿಗೆ ಕೋಪಗೊಳ್ಳುವ ಜನರ ಕುಟುಂಬದ ವಾತಾವರಣವು ಯಾವಾಗಲೂ ಕೆಟ್ಟದಾಗಿರುತ್ತದೆ. ಮನೆಯ ಮಹಿಳೆಯರು ಕೋಪಗೊಳ್ಳಲು, ಕಿರುಚಲು ಪ್ರಾರಂಭಿಸಿದಾಗ, ಮನೆಯಲ್ಲಿ ಯಾವಾಗಲೂ ನಕಾರಾತ್ಮಕ ಶಕ್ತಿ ಇರುತ್ತದೆ, ಅದು ಕುಟುಂಬದ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

ತಮ್ಮ ಮಾತಿನ ಮೇಲೆ ನಿಯಂತ್ರಣವಿಲ್ಲದಿರುವುದು

ಯೋಚಿಸದೆ ಮಾತನಾಡುವ, ತಮ್ಮ ಮಾತಿನ ಮೇಲೆ ನಿಯಂತ್ರಣವಿಲ್ಲದ ಮಹಿಳೆಯರು, ಅವರು ಕುಟುಂಬಕ್ಕೆ ಸಮಸ್ಯೆಗಳನ್ನು ಸೃಷ್ಟಿಸಲು ಸಹ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಮಾತಿನ ವೇಳೆ ನಿಂದನಾತ್ಮಕ ಪದಗಳನ್ನು ಬಳಸುತ್ತಾರೆ. ಇಂತಹ ಮಹಿಳೆಯರಿಂದಾಗಿ ಮಕ್ಕಳು ಸಹ ತಪ್ಪು ಮೌಲ್ಯಗಳನ್ನು ಪಡೆಯುತ್ತಾರೆ. ಇದಲ್ಲದೆ, ಸಂಭಾಷಣೆಯಲ್ಲಿ ಕಠಿಣ ಪದಗಳನ್ನು ಬಳಸುವ ಮಹಿಳೆಯರು ಎಂದಿಗೂ ಯಾರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ನಡವಳಿಕೆಯಿಂದಾಗಿ, ಕುಟುಂಬದಲ್ಲಿ ಪ್ರೀತಿ ಮತ್ತು ಗೌರವದ ಕೊರತೆ ಇರುತ್ತದೆ.

ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುದು

ಸಣ್ಣ ವಿಷಯಗಳಿಗೆ ದೊಡ್ಡ ವಿಷಯವನ್ನು ಮಾಡುವ ಮೂಲಕ ಕುಟುಂಬದ ವಾತಾವರಣವನ್ನು ಹಾಳುಮಾಡುತ್ತಾರೆ. ಇಂತಹ ಮಹಿಳೆಯರ ಕಾರಣದಿಂದಾಗಿ, ಕುಟುಂಬವು ಎಂದಿಗೂ ಬೆಳೆಯಲು ಸಾಧ್ಯವಾಗುವುದಿಲ್ಲ. ಕುಟುಂಬದ ಯಾವುದೇ ಸದಸ್ಯರು ಅಂತಹ ಮಹಿಳೆಯರೊಂದಿಗೆ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಅಂತಹ ಮಹಿಳೆಯರು ತಮ್ಮ ನಕಾರಾತ್ಮಕ ಮನೋಭಾವದಿಂದಾಗಿ ಇಡೀ ಕುಟುಂಬದಲ್ಲಿ ನಕಾರಾತ್ಮಕತೆಯನ್ನು ಹರಡುತ್ತಾರೆ, ಇದು ಸಂತೋಷದ ಕುಟುಂಬವನ್ನು ಸಹ ಒಡೆಯುತ್ತದೆ.

ಮಹಾನ್ ರಾಜತಾಂತ್ರಿಕ ಚಾಣಕ್ಯನ ಪ್ರಕಾರ, ತನ್ನ ಪತಿ ಮತ್ತು ಕುಟುಂಬವನ್ನು ಗೌರವಿಸುವ, ಕುಟುಂಬವನ್ನು ಎಲ್ಲಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುವ, ಪ್ರತಿ ಸಂದರ್ಭದಲ್ಲೂ ತಮ್ಮ ಕುಟುಂಬದೊಂದಿಗೆ ನಿಲ್ಲುವ ಮತ್ತು ಯಾವಾಗಲೂ ನಗುವಿನ ವಾತಾವರಣವನ್ನು ಕಾಪಾಡಿಕೊಳ್ಳುವ ಮಹಿಳೆಯರು ಉತ್ತಮ ಹೆಂಡತಿ, ತಾಯಿ ಮತ್ತು ಸೊಸೆಯಾಗಿರುತ್ತಾರೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.