ದೀಪಾವಳಿ ಹಬ್ಬ ಅಕ್ಟೋಬರ್ 31 ಅಥವಾ ನವೆಂಬರ್ 1 ಯಾವಾಗ ಆಚರಿಸಲಾಗುತ್ತೆ? ದಿನಾಂಕ, ಶುಭ ಮುಹೂರ್ತ ಹೀಗಿದೆ
ದೀಪಾವಳಿ 2024: ಈ ವರ್ಷ ದೀಪಾವಳಿಯನ್ನು ಯಾವಾಗ ಆಚರಿಸಬೇಕು ಎಂಬ ಗೊಂದಲವಿದೆ. ಕೆಲವರು ಅಕ್ಟೋಬರ್ 31 ಎಂದು ಹೇಳಿದರೆ, ಇನ್ನೂ ಕೆಲವರು ನವೆಂಬರ್ 1 ಎಂದು ಹೇಳುತ್ತಾರೆ. ಆದ್ದರಿಂದ ನಿಜವಾಗಿ ಹಬ್ಬವನ್ನು ಯಾವಾಗ ಆಚರಿಸಬೇಕು ಎಂದು ವಿದ್ವಾಂಸರು ತಿಳಿಸಿದ್ದಾರೆ.
ಪ್ರತಿ ವರ್ಷ ಆಶ್ವಯುಜ ಮಾಸದ ಅಮಾವಾಸ್ಯೆಯಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ವರ್ಷದ ದೀಪಾವಳಿ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ವರ್ಷವಿಡೀ ದೀಪಾವಳಿಗಾಗಿ ಎಲ್ಲರೂ ಕಾತರದಿಂದ ಕಾಯುತ್ತಾರೆ. ದೀಪಾವಳಿ ಹಬ್ಬವನ್ನು 5 ದಿನಗಳ ಕಾಲ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಧನ ತ್ರಯೋದಶಿಯಿಂದ ಭಾಯಿ ದೂಜ್‌ವರೆಗೆ ಆಚರಿಸಲಾಗುತ್ತದೆ. ಆದರೆ ಈ ವರ್ಷ ದೀಪಾವಳಿಯನ್ನು ಯಾವ ದಿನಾಂಕದಂದು ಆಚರಿಸಬೇಕು ಎಂಬ ಬಗ್ಗೆ ಗೊಂದಲವಿದೆ. ದೀಪಾವಳಿಯನ್ನು ಆಚರಿಸಲು ಶುಭ ದಿನ ಯಾವುದು? ದೀಪಾವಳಿ ಪೂಜಾ ವಿಧಾನದ ಬಗ್ಗೆ ವಿದ್ವಾಂಸರು ಏನು ಹೇಳಿದ್ದಾರೆ ಎಂಬುದರ ವಿವರ ಇಲ್ಲಿ ನೀಡಲಾಗಿದೆ.
ದೀಪಾವಳಿ ಅಕ್ಟೋಬರ್ 31 ಅಥವಾ ನವೆಂಬರ್ 1 ಯಾವಾಗ ?
ಜ್ಯೋತಿಷಿಗಳ ಪ್ರಕಾರ, ದೀಪಾವಳಿಯನ್ನು ಅಕ್ಟೋಬರ್ 31, ಗುರುವಾರದಂದು ಸರ್ವಾನುಮತದಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಈ ವರ್ಷದ ಅಮಾವಾಸ್ಯೆ ತಿಥಿಯು ಅಕ್ಟೋಬರ್ 31 ರಂದು ಮಧ್ಯಾಹ್ನ 3:11 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 1 ರ ಸಂಜೆ 05:12 ರವರೆಗೆ ಇರುತ್ತದೆ. ಅಂದರೆ ಅಕ್ಟೋಬರ್ 31 ರಾತ್ರಿ ಅಮವಾಸ್ಯೆಯ ತಿಥಿ ಇರುತ್ತದೆ. ಆದ್ದರಿಂದ ಅಕ್ಟೋಬರ್ 31 ರ ರಾತ್ರಿ ದೀಪಾವಳಿಯನ್ನು ಆಚರಿಸುವುದು ಮಂಗಳಕರವಾಗಿದೆ.
ವಾಸ್ತವವಾಗಿ ದೀಪಾವಳಿ ಹಬ್ಬವನ್ನು ಆಶ್ವಯುಜ ಮಾಸದ ಅಮಾವಾಸ್ಯೆಯ ದಿನದಂದು ಆಚರಿಸಲಾಗುತ್ತದೆ. ಪ್ರದೋಷ ಕಾಲದ ನಂತರ ದೀಪಾವಳಿಯನ್ನು ಪೂಜಿಸಲಾಗುತ್ತದೆ. ಅಂದು ರಾತ್ರಿ ಲಕ್ಷ್ಮೀಪೂಜೆ, ಕಾಳಿಪೂಜೆ ಹಾಗೂ ನಿಶಿತ ಕಾಲಪೂಜೆ ನೆರವೇರಲಿದೆ. ಅಕ್ಟೋಬರ್ 31 ರ ರಾತ್ರಿ ಮಾತ್ರ ಮಧ್ಯರಾತ್ರಿಯ ಪೂಜೆಯನ್ನು ಮಾಡಲು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ. ಆದರೆ ಅಮವಾಸ್ಯೆಗೆ ಸಂಬಂಧಿಸಿದ ದಾನ, ಪೂರ್ವಜರ ವಿಧಿಗಳನ್ನು ನವೆಂಬರ್ 01 ರಂದು ನಡೆಸಲಾಗುತ್ತದೆ. ಕೆಲವೊಂದು ಪಂಚಾಗದ ಪ್ರಕಾರ, ಬಲಿಪಾಡ್ಯಮಿಯ ದಿನ ಅಂದರೆ ಅಕ್ಟೋಬರ್ 2 ರಂದು ದೀಪಾವಳಿಯನ್ನು ಆಚರಿಸಬೇಕೆಂದು ಹೇಳಿವೆ.
ದೀಪಾವಳಿ ಪೂಜಾ ವಿಧಾನ
ಬೆಳಗ್ಗೆ ಬೇಗ ಎದ್ದು ಗಂಗಾಜಲ ಮಿಶ್ರಿತ ನೀರಿನಿಂದ ಸ್ನಾನ ಮಾಡಿ. ಬಳಿಕ ಮನೆ ಹಾಗೂ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಬೇಕು. ವಿನಾಯಕ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳನ್ನು ನೀರಿನಿಂದ ಸ್ವಚ್ಛಗೊಳಿಸಬೇಕು. ಗಂಗಾಜಲದೊಂದಿಗೆ ಪಂಚಾಮೃತದಿಂದ ಅಭಿಷೇಕವನ್ನು ಮಾಡಬೇಕು.
ಗಣೇಶನಿಗೆ ಹಳದಿ ಚಂದನ, ಹಳದಿ ಹೂವುಗಳು ಮತ್ತು ದೂರ್ವಾವನ್ನು ಅರ್ಪಿಸಿ. ಬಳಿಕ ಲಕ್ಷ್ಮಿ ದೇವಿಗೆ ಕೆಂಪು ಚಂದನ, ಕೆಂಪು ಹೂವುಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ. ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಹಚ್ಚಿ. ಶ್ರೀ ಲಕ್ಷ್ಮೀ ಸೂಕ್ತಂ, ಗಣೇಶ ಚಾಲೀಸಾ ಪಠಿಸಿ. ಲಕ್ಷ್ಮಿ ದೇವಿಗೆ ಮತ್ತು ವಿನಾಯಕನಿಗೆ ಪೂರ್ಣ ಭಕ್ತಿಯಿಂದ ಆರತಿಯನ್ನು ಅರ್ಪಿಸಬೇಕು. ಗಣೇಶನಿಗೆ ಲಡ್ಡು ಅಥವಾ ಮೋದಕವನ್ನು ಹಾಗೂ ಲಕ್ಷ್ಮಿ ದೇವಿಗೆ ಖೀರ್ ಅನ್ನು ಅರ್ಪಿಸಬೇಕು.
ದೀಪಾವಳಿ ಹಬ್ಬದ ಶುಭ ಮುಹೂರ್ತ
ಅಮಾವಾಸ್ಯೆ ತಿಥಿ ಆರಂಭ ಸಮಯ: ಅಕ್ಟೋಬರ್ 31ರ ಮಧ್ಯಾಹ್ನ 3:52
ಅಮಾವಾಸ್ಯೆ ತಿಥಿ ಮುಕ್ತಾಯದ ಸಮಯ: ನವೆಂಬರ್ 1ರ ಸಂಜೆ 6:16
ಪ್ರದೋಷ ಕಾಲ: ಸಂಜೆ 5:12 ರಿಂದ ರಾತ್ರಿ 7:43
ಲಕ್ಷ್ಮಿ ಪೂಜೆ ಮುಹೂರ್ತ: ಸಂಜೆ 5:12 ರಿಂದ 6:16 ರವರಿಗೆ
ಪೂಜೆ ವೇಳೆ ಪಠಿಸಬೇಕಾದ ಮಂತ್ರಗಳು
ದೀಪಾವಳಿಯ ದಿನದಂದು ಪೂಜೆಯನ್ನು ಮಾಡುವಾಗ ಈ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. "ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮಿ ನಮಃ" ಎಂದು ಜಪಿಸಬೇಕು.