ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Gajalakshmi Yogam: ಮೇಷ ರಾಶಿಯಲ್ಲಿ ಶುಕ್ರ, ಗುರು ಗ್ರಹಗಳ ಸಂಯೋಜನೆ; ಗಜಲಕ್ಷ್ಮೀ ಯೋಗದಿಂದ ಈ ರಾಶಿಯವರ ಎಲ್ಲಾ ಸಮಸ್ಯೆಗೆ ಫುಲ್‌ ಸ್ಟಾಪ್‌

Gajalakshmi Yogam: ಮೇಷ ರಾಶಿಯಲ್ಲಿ ಶುಕ್ರ, ಗುರು ಗ್ರಹಗಳ ಸಂಯೋಜನೆ; ಗಜಲಕ್ಷ್ಮೀ ಯೋಗದಿಂದ ಈ ರಾಶಿಯವರ ಎಲ್ಲಾ ಸಮಸ್ಯೆಗೆ ಫುಲ್‌ ಸ್ಟಾಪ್‌

Gajalakshmi Yogam: ಮೇ 25 ರಂದು ಶುಕ್ರ ಹಾಗೂ ಗುರುವು ಮೇಷ ರಾಶಿಯಲ್ಲಿ ಭೇಟಿ ಆಗಲಿದ್ದಾರೆ. ಇದರಿಂದ 5 ರಾಶಿಚಕ್ರದ ಜನರಿಗೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಲಿದೆ. ಇಷ್ಟು ದಿನಗಳು ಅವರು ಅನುಭವಿಸುತ್ತಿದ್ದ ಕಷ್ಟಗಳು ಮರೆಯಾಗಲಿವೆ.

ಗುರು ಶುಕ್ರ ಗ್ರಹಗಳ ಸಂಯೋಜನೆಯಿಂದ ಗಜಲಕ್ಷ್ಮೀ ಯೋಗ
ಗುರು ಶುಕ್ರ ಗ್ರಹಗಳ ಸಂಯೋಜನೆಯಿಂದ ಗಜಲಕ್ಷ್ಮೀ ಯೋಗ (PC: Pixabay)

Gajalakshmi Yogam: ಮೇಷ ರಾಶಿಯಲ್ಲಿ ಗಜಲಕ್ಷ್ಮಿ ಯೋಗ ಉಂಟಾಗುತ್ತದೆ. ಪರಿಣಾಮವಾಗಿ, ಕೆಲವು ರಾಶಿಚಕ್ರದ ಜನರಿಗೆ ಇಷ್ಟು ದಿನಗಳ ಕಾಲ ಕಾಡುತ್ತಿದ್ದ ಸಮಸ್ಯೆ ಶೀಘ್ರದಲ್ಲೇ ದೂರವಾಗುತ್ತದೆ. ಜೊತೆಗೆ ಆದಾಯ ಕೂಡಾ ದ್ವಿಗುಣವಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ನೋಡೋಣ.

ಗಜಲಕ್ಷ್ಮಿ ಯೋಗ: ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಸಂಪತ್ತು, ಕೀರ್ತಿ, ಸಮೃದ್ಧಿ, ಪ್ರೀತಿ, ಐಷಾರಾಮಿ ಜೀವನ ಮತ್ತು ಸಂತೋಷದ ದಯಪಾಲಕ ಎಂದು ಪರಿಗಣಿಸಲಾಗಿದೆ. ಸದ್ಯಕ್ಕೆ ಮೀನರಾಶಿಯಲ್ಲಿ ಸಂಚರಿಸುತ್ತಿರುವ ಶುಕ್ರನು ಏಪ್ರಿಲ್ 25ರ ಗುರುವಾರ ಮಧ್ಯಾಹ್ನ ಮೇಷ ರಾಶಿಯಲ್ಲಿ ಸಾಗಲಿದ್ದಾನೆ. ಈಗಾಗಲೇ ಅಲ್ಲಿ ಗುರು ಸಂಚರಿಸುತ್ತಿದ್ದಾನೆ. ಗುರುವನ್ನು ಬುದ್ಧಿವಂತಿಕೆ, ಗೌರವ, ಉತ್ತಮ ಆರೋಗ್ಯ ಮತ್ತು ಸಂಪತ್ತಿನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ.

ಮೇಷ ರಾಶಿಯಲ್ಲಿ ಶುಕ್ರ ಮತ್ತು ಗುರುಗಳ ಸಂಯೋಜನೆಯು ಬಹಳ ಶುಭಕರವಾಗಿರುತ್ತದೆ. ಈ ಎರಡು ಗ್ರಹಗಳ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗ ರಚನೆಯಾಗುವುದು ಅತ್ಯಂತ ಶುಭಕರ ಎನ್ನುತ್ತಾರೆ ಜ್ಯೋತಿಷಿಗಳು. ಈ ಯೋಗವು ಸಂಪತ್ತನ್ನು ಪಡೆಯುವ ಬಲವಾದ ಅವಕಾಶಗಳನ್ನು ನೀಡುತ್ತದೆ. ಆದಾಯ ಹೆಚ್ಚುತ್ತದೆ ಮತ್ತು ಸಂತೋಷದ ದಿನಗಳನ್ನು ತರುತ್ತದೆ. ಮೇ 1 ರವರೆಗೆ ಗುರುವು ಮೇಷ ರಾಶಿಯಲ್ಲಿ ಇರುತ್ತಾನೆ. ಇದರೊಂದಿಗೆ ಆರು ದಿನಗಳ ಕಾಲ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆ ಅದೃಷ್ಟದ ನಕ್ಷತ್ರಗಳು ಯಾವುವು ನೋಡೋಣ.

ಮೇಷ ರಾಶಿ

ವೃತ್ತಿಯಲ್ಲಿ ಹೊಸ ಯಶಸ್ಸು ಸಿಗಲಿದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚುತ್ತದೆ. ವ್ಯಾಪಾರ ಪರಿಸ್ಥಿತಿಗಳು ಪ್ರಬಲವಾಗಿವೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳು ಮಾಯವಾಗುತ್ತವೆ. ನಿಮ್ಮ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಒಂದು ದೊಡ್ಡ ಅವಕಾಶ ನಿಮ್ಮ ಜೀವನವನ್ನು ಬದಲಾಯಿಸಲಿದೆ.

ಮಿಥುನ ರಾಶಿ

ಗುರು ಮತ್ತು ಶುಕ್ರನ ಸಂಯೋಜನೆಯು ಮಿಥುನ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ನೀವು ಮಾಡುವ ಕೆಲಸದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಭೌತಿಕ ಸೌಲಭ್ಯಗಳು ಹೆಚ್ಚುತ್ತವೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಹೊಸ ಆದಾಯದ ಮೂಲಗಳ ಮೂಲಕ ಹಣ ಸಂಪಾದಿಸಿಸಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ.

ಸಿಂಹ

ಗಜಲಕ್ಷ್ಮಿ ಯೋಗದಿಂದ ಸಿಂಹ ರಾಶಿಯಲ್ಲಿ ಆರ್ಥಿಕ ಲಾಭವು ನಿರೀಕ್ಷೆಗಳನ್ನು ಮೀರುತ್ತದೆ. ಹಿಂದೆ ಮಾಡಿದ ಹೂಡಿಕೆಗಳು ಈ ಅವಧಿಯಲ್ಲಿ ನಿಮಗೆ ಲಾಭವನ್ನು ನೀಡುತ್ತದೆ. ಹಣಕಾಸಿನ ಪರಿಸ್ಥಿತಿಯು ಬಲವಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯವಿರುತ್ತದೆ. ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ.

ತುಲಾ ರಾಶಿ

ಗಜಲಕ್ಷ್ಮಿ ಯೋಗವು ತುಲಾ ರಾಶಿಯವರಿಗೆ ಆದಾಯದ ಬೆಳವಣಿಗೆಯ ಹೊಸ ಮಾರ್ಗಗಳನ್ನು ತರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಹಣ ಗಳಿಸಲು ಹೊಸ ಅವಕಾಶಗಳು ಬರಲಿವೆ. ಆಸ್ತಿಗೆ ಸಂಬಂಧಿಸಿದ ವಿವಾದಗಳು ದೂರವಾಗುತ್ತವೆ. ಶಾಂತಿಯುತ ವಾತಾವರಣ ನಿರ್ಮಾಣವಾಗಲಿದೆ. ನಿಮಗೆ ಸಂತೋಷವನ್ನುಂಟು ಮಾಡುವ ಸುದ್ದಿಯನ್ನು ನೀವು ಕೇಳಲಿದ್ದೀರಿ.

ಕನ್ಯಾರಾಶಿ

ಎರಡೂ ಗ್ರಹಗಳ ಸಂಚಾರದೊಂದಿಗೆ, ಕನ್ಯಾ ರಾಶಿಯವರು ತಮ್ಮ ವೈವಾಹಿಕ ಜೀವನದಲ್ಲಿ ಸಾಕಷ್ಟು ಪ್ರೀತಿ ಮತ್ತು ಧನಾತ್ಮಕತೆಯನ್ನು ಹೊಂದಿರುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ದೀರ್ಘಕಾಲದ ಸಮಸ್ಯೆಗಳು ದೂರವಾಗುವುದರಿಂದ ಅವರು ಸಂತೋಷವಾಗಿರುತ್ತಾರೆ. ಪಾಲುದಾರಿಕೆ ವ್ಯಾಪಾರವು ನಿಮಗೆ ಅಪಾರ ಯಶಸ್ಸನ್ನು ನೀಡುತ್ತದೆ. ಸಂಗಾತಿಯೊಂದಿಗೆ ಸುಖವಾಗಿ ಬಾಳಲಿದ್ದೀರಿ. ವೃತ್ತಿಯಲ್ಲಿ ಬಡ್ತಿ ಸಿಗುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ.

ಮಕರ ರಾಶಿ

ಗಜಲಕ್ಷ್ಮಿ ಯೋಗದ ಪ್ರಭಾವದಿಂದ, ಮಕರ ರಾಶಿಯವರು ಕೆಲಸದಲ್ಲಿ ಬಡ್ತಿ ಅಥವಾ ಮೆಚ್ಚುಗೆಯನ್ನು ಪಡೆಯುತ್ತಾರೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಪ್ರಗತಿಯ ಹಾದಿಯಲ್ಲಿ ಅಡೆತಡೆಗಳು ಎದುರಾದರೂ ಅದು ಕೆಲವು ದಿನಗಳಷ್ಟೇ. ಹಣದ ಹರಿವಿನ ಹೊಸ ಮಾರ್ಗಗಳು ಸುಗಮವಾಗಲಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.