ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೂನ್‌ 11ಕ್ಕೆ ಮೃಗಶಿರಾ ನಕ್ಷತ್ರಕ್ಕೆ ಬುಧನ ಸಂಚಾರ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ವಾಹನ, ಆಸ್ತಿ ಖರೀದಿ ಅವಕಾಶ

ಜೂನ್‌ 11ಕ್ಕೆ ಮೃಗಶಿರಾ ನಕ್ಷತ್ರಕ್ಕೆ ಬುಧನ ಸಂಚಾರ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ವಾಹನ, ಆಸ್ತಿ ಖರೀದಿ ಅವಕಾಶ

ಜೂನ್‌ 11 ರಂದು ಬುಧನು ಮೃಗಶಿರಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದರ ಪರಿಣಾಮ 3 ರಾಶಿಗಳಿಗೆ ಅದೃಷ್ಟ ಒದಗಿಬರಲಿದೆ. ಮೇಷ ಸೇರಿದಂತೆ ಉಳಿದ ಯಾವ ರಾಶಿಗಯವರಿಗೆ, ಬುಧನಿಂದ ಯಾವ ರೀತಿಯ ಆಶೀರ್ವಾದ ದೊರೆಯಲಿದೆ ನೋಡೋಣ.

ಜೂನ್‌ 11ಕ್ಕೆ ಮೃಗಶಿರಾ ನಕ್ಷತ್ರಕ್ಕೆ ಬುಧನ ಸಂಚಾರ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ವಾಹನ, ಆಸ್ತಿ ಖರೀದಿ ಅವಕಾಶ
ಜೂನ್‌ 11ಕ್ಕೆ ಮೃಗಶಿರಾ ನಕ್ಷತ್ರಕ್ಕೆ ಬುಧನ ಸಂಚಾರ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ವಾಹನ, ಆಸ್ತಿ ಖರೀದಿ ಅವಕಾಶ

ಜ್ಯೋತಿಷ್ಯಶಾಸ್ತ್ರದಲ್ಲಿ ರಾಶಿಚಕ್ರ ಮತ್ತು ಗ್ರಹಗಳ ನಕ್ಷತ್ರ ಪುಂಜದಲ್ಲಿನ ಬದಲಾವಣೆಯು ಬಹಳ ಪ್ರಮುಖ ಸ್ಥಾನ ಪಡೆದಿದೆ. ಪ್ರತಿ ಬಾರಿ ಗ್ರಹಗಳ ಚಲನೆ ಆದಾಗಲೆಲ್ಲಾ ದ್ವಾದಶ ರಾಶಿಗಳಿಗೆ ಶುಭ, ಅಶುಭ ಫಲಿತಾಂಶ ಉಂಟಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಗ್ರಹಗಳ ರಾಜಕುಮಾರ ಬುಧನು ಜೂನ್ 5 ರಿಂದ ರೋಹಿಣಿ ನಕ್ಷತ್ರದಲ್ಲಿ ಇರುತ್ತಾನೆ. ಜೂನ್ 11, 2024 ರಂದು ಬುಧ ಗ್ರಹವು ನಕ್ಷತ್ರಪುಂಜವನ್ನು ಬದಲಾಯಿಸಿ ಮೃಗಶಿರಾ ನಕ್ಷತ್ರವನ್ನು ಪ್ರವೇಶಿಸಲಿದೆ.

ಬುದ್ಧಿವಂತಿಕೆ ಅನುಗ್ರಹಿಸುವ ಗ್ರಹ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧನು ಬುದ್ಧಿವಂತಿಕೆಯನ್ನು ಕೊಡುವ ಗ್ರಹ. ಬುಧನ ನಕ್ಷತ್ರ ಬದಲಾವಣೆ ಮೂಲಕ ಕೆಲವು ರಾಶಿಚಕ್ರದವರಿಗೆ ಅದೃಷ್ಟ ಒಲಿದು ಬಂದರೆ, ಕೆಲವರಿಗೆ ಸಮಸ್ಯೆ ಉಂಟಾಗಬಹುದು. ಈ ಬಾರಿ ಬುಧನ ರಾಶಿ ಹಾಗೂ ನಕ್ಷತ್ರ ಬದಲಾವಣೆಯಿಂದ ಮೂರು ರಾಶಿಯ ಜನರು ಬಹಳ ಅನುಕೂಲ ಪಡೆಯಲಿದ್ದಾರೆ. ಈ ರಾಶಿಯವರಿಗೆ ಆರ್ಥಿಕ ಸಮಸ್ಯೆಯಿಂದ ಹೊರ ಬರುತ್ತಾರೆ. ಉತ್ತಮ ಜ್ಞಾನ ಸಂಪಾದಿಸಲಿದ್ದೀರಿ. ಕೆಲಸದಲ್ಲಿ ಇದ್ದ ಅಡೆತಡೆಗಳು ದೂರಾಗುತ್ತದೆ. ಬುಧ ಸಂಕ್ರಮಣದಿಂದ ಯಾವ ರಾಶಿಯವರಿಗೆ ಯಾವ ರೀತಿಯ ಲಾಭ ದೊರೆಯಲಿದೆ ನೋಡೋಣ.

3 ರಾಶಿಗಳಿಗೆ ಶುಭ ಫಲ

ಮೇಷ: ಮೃಗಶಿರಾ ನಕ್ಷತ್ರಕ್ಕೆ ಬುಧನ ಪ್ರವೇಶವು ಮೇಷ ರಾಶಿಯವರಿಗೆ ಬಹಳ ಅನುಕೂಲಕರ ಫಲಿತಾಂಶ ತರಲಿದೆ. ವೃತ್ತಿಯಲ್ಲಿ ಉನ್ನತಿಗೆ ಹಲವು ಅವಕಾಶಗಳು ದೊರೆಯಲಿವೆ. ಸವಾಲುಗಳನ್ನು ದಿಟ್ಟತನದಿಂದ ಎದುರಿಸುವಿರಿ. ನೀವು ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ವಿವಿಧ ಮೂಲಗಳಿಂದ ಹಣ ಹರಿದುಬರಲಿದೆ. ಹೊಸ ಆಸ್ತಿ ಅಥವಾ ವಾಹನ ಖರೀದಿಸುವ ಅವಕಾಶವಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಗಮನ ಹರಿಸುವಿರಿ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

ಸಿಂಹ: ಬುಧನು ಮೃಗಶಿರಾ ನಕ್ಷತ್ರಕ್ಕೆ ಪ್ರವೇಶಿಸುವುದು ತುಲಾ ರಾಶಿಯವರಿಗೆ ಕೂಡಾ ಸಾಕಷ್ಟು ಲಾಭ ದೊರೆಯುತ್ತವೆ. ಜೀವನ ಸಂಗಾತಿಯ ಹುಡುಕಾಟದಲ್ಲಿರುವವರಿಗೆ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಗಲಿದ್ದಾರೆ. ಪ್ರೇಮ ಸಂಬಂಧಗಳಲ್ಲಿ ಬಹಳ ಸಂತೋಷ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಪ್ರೀತಿಯನ್ನು ನಿವೇದನೆ ಮಾಡಿದರೆ ಒಪ್ಪುವ ಸಾಧ್ಯತೆ ಇದೆ. ನಿಮ್ಮ ಜೀವನಕ್ಕೆ ಸಂಬಂಧಿಸಿದಂತೆ ನೀವು ಉತ್ತಮ ನಿರ್ಧಾರ ತೆಗೆದುಕೊಳ್ಳುವಿರಿ. ಸಂಗಾತಿಯ ಸಂಪೂರ್ಣ ಬೆಂಬಲ ಪಡೆಯಲಿದ್ದೀರಿ. ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಲಿದೆ.

ತುಲಾ: ಈ ರಾಶಿಯವರಿಗೆ ಬುಧಗ್ರಹದ ಚಲನೆಯಲ್ಲಿನ ಬದಲಾವಣೆಯಿಂದ ಬಹಳ ಶುಭ ಫಲಿತಾಂಶಗಳು ದೊರೆಯುತ್ತವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಿರುತ್ತದೆ. ಬುದ್ಧಿವಂತಿಕೆ ಹೆಚ್ಚಾಗಲಿದೆ. ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ. ಆಧ್ಯಾತ್ಮದಲ್ಲಿ ಆಸಕ್ತಿ ಇರುತ್ತದೆ. ಸಂಬಂಧಗಳಲ್ಲಿನ ಮನಸ್ತಾಪ ದೂರವಾಗುತ್ತದೆ. ಹೂಡಿಕೆಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ