ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ, ವಿಪರೀತ ಚಳಿ - ಹೀಗಿದೆ ಕರ್ನಾಟಕ ಹವಾಮಾನ ಇಂದು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ, ವಿಪರೀತ ಚಳಿ - ಹೀಗಿದೆ ಕರ್ನಾಟಕ ಹವಾಮಾನ ಇಂದು

ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ, ವಿಪರೀತ ಚಳಿ - ಹೀಗಿದೆ ಕರ್ನಾಟಕ ಹವಾಮಾನ ಇಂದು

Karnataka Weather: ಕರ್ನಾಟಕದಲ್ಲಿ ಇಂದು (ನವೆಂಬರ್ 30) ಮಿಶ್ರ ಹವಾಮಾನ ಇರಲಿದೆ. ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಹಗುರ ಅಥವಾ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ ಮತ್ತು ವಿಪರೀತ ಚಳಿ ದಾಖಲಾಗಿದೆ. ಕರ್ನಾಟಕ ಹವಾಮಾನ ಇಂದು ಹೀಗಿದೆ.

ಕರ್ನಾಟಕ ಹವಾಮಾನ: ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ, ವಿಪರೀತ ಚಳಿ ದಾಖಲಾಗಿದೆ.
ಕರ್ನಾಟಕ ಹವಾಮಾನ: ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ, ವಿಪರೀತ ಚಳಿ ದಾಖಲಾಗಿದೆ.

Karnataka Weather: ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿ 7 ಜಿಲ್ಲೆಗಳಲ್ಲಿ ಇಂದು (ನವೆಂಬರ್ 30) ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋ‍ಷಿಸಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಸೃಷ್ಟಿಯಾಗಿರುವ ಚಂಡ ಮಾರುತ ಪರಿಣಾಮ ಮಳೆಯಾಗುತ್ತಿದೆ. ತಮಿಳುನಾಡು, ಕೇರಳ ಭಾಗಕ್ಕೆ ಸಮೀಪ ಇರುವ ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇನ್ನು ಎರಡು ಅಥವಾ ಮೂರು ದಿನ ಮಳೆ ಬರುವ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದಲ್ಲಿ ತಾಪಮಾನ ಇಳಿಕೆ ಮತ್ತು ತೇವಾಂಶ ಕಡಿಮೆಯಾಗಿ ಒಣಹವೆ ಕಾಡಲಿದೆ ಎಂದು ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಹವಾಮಾನ ಇಂದು; ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಮಳೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಸೃಷ್ಟಿಯಾಗಿರುವ ಚಂಡಮಾರುತ ತಮಿಳುನಾಡು, ಪುದುಚೆರಿಯಾಗಿ ಮುಂದುವರಿದ ಕಾರಣ ಇಂದು (ನವೆಂಬರ್‌ 30) ದಕ್ಷಿಣ ಕರ್ನಾಟಕ ಒಳನಾಡು ಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ರಾಮನಗರ, ತುಮಕೂರು ಭಾಗದಲ್ಲಿ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಕಾರಣ ಈ ಏಳೂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತೇವಾಂಶ ಕುಸಿತದ ಕಾರಣ ಒಣಹವೆ ಇರಲಿದೆ. ಅದೇ ರೀತಿ ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನದ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಕೆಲವು ಕಡೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವ ಸಾಧ್ಯತೆಯಿದೆ. ವಿಜಯಪುರ, ಬೀದರ್ ಭಾಗದಲ್ಲಿ ರಾತ್ರಿ ಮತ್ತು ಬೆಳಗ್ಗೆ ಹೊತ್ತು ಚಳಿ ಹೆಚ್ಚಾಗಿರಲಿದೆ. ಬಳಿಕ ಒಣಹವೆ ಇರಲಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ಎನ್ ಪುವಿಯರಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಿನ್ನೆ (ನವೆಂಬರ್ 29) ಗರಿಷ್ಠ ಉಷ್ಣಾಂಶ 34.5 ಡಿಗ್ರಿ ಸೆಲ್ಶಿಯಸ್ ಪಣಂಬೂರು ಭಾಗದಲ್ಲಿ ದಾಖಲಾಗಿದೆ. ಅದೇ ರೀತಿ ಕನಿಷ್ಠ ಉಷ್ಣಾಂಶ 10.6 ಡಿಗ್ರಿ ಸೆಲ್ಶಿಯಸ್‌ ವಿಜಯಪುರದಲ್ಲಿ ದಾಖಲಾಗಿದೆ.

ಪ್ರಮುಖ ನಗರಗಳ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಇಂದು ಮತ್ತು ನಾಳೆ

ಕರ್ನಾಟಕದ ಪ್ರಮುಖ ನಗರಗಳ ತಾಪಮಾನ ನವೆಂಬರ್ 30, ಡಿಸೆಂಬರ್ 1

ನಗರದಿನಾಂಕಗರಿಷ್ಠ ತಾಪಮಾನ (ಡಿಗ್ರಿ ಸೆಲ್ಶಿಯಸ್‌)ಕನಿಷ್ಠ ತಾಪಮಾನ (ಡಿಗ್ರಿ ಸೆಲ್ಶಿಯಸ್‌)
ಬೆಂಗಳೂರುನವೆಂಬರ್ 301826
 ಡಿಸೆಂಬರ್ 11825
ಮಂಗಳೂರುನವೆಂಬರ್ 302232
 ಡಿಸೆಂಬರ್ 12233
ಚಿತ್ರದುರ್ಗನವೆಂಬರ್ 301528
 ಡಿಸೆಂಬರ್ 11628
ಗದಗನವೆಂಬರ್ 301328
 ಡಿಸೆಂಬರ್ 11628
ಹೊನ್ನಾವರನವೆಂಬರ್ 302134
 ಡಿಸೆಂಬರ್ 12033
ಕಲಬುರಗಿನವೆಂಬರ್ 301733
 ಡಿಸೆಂಬರ್ 11932
ಬೆಳಗಾವಿನವೆಂಬರ್ 301328
 ಡಿಸೆಂಬರ್ 11427
ಕಾರವಾರನವೆಂಬರ್ 302035
 ಡಿಸೆಂಬರ್ 12136

ಬೆಂಗಳೂರು ಹವಾಮಾನ ಇಂದು; ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಮಳೆ, ಚಳಿ ಸಾಧ್ಯತೆ

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಡಿಸೆಂಬರ್ 1ರ ಬೆಳಗ್ಗೆ ತನಕ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಹೆಚ್ಚಿನ ಮಳೆಯಾಗಬಹುದು. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಶಿಯಸ್, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಶಿಯಸ್‌, ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ಉಷ್ಣಾಂಸ 25 ಡಿಗ್ರಿ ಸೆಲ್ಶಿಯಸ್‌, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಶಿಯಸ್ ಇರುವ ಸಾಧ್ಯತೆ ಇದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

Whats_app_banner