ಸಂಪತ್ತಿನ ಅಧಿಪತಿ ಗುರುವಿನ ಆಶೀರ್ವಾದ; 2024ರ ಅಂತ್ಯದವರೆಗೆ ಈ 4 ರಾಶಿಯವರಿಗೆ ಅದೃಷ್ಟ, ಆದಾಯದಲ್ಲಿ ಹೆಚ್ಚಳ -Guru Blessing-horoscope blessing of jupiter good luck for these 4 zodiac signs till the end of 2024 rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಪತ್ತಿನ ಅಧಿಪತಿ ಗುರುವಿನ ಆಶೀರ್ವಾದ; 2024ರ ಅಂತ್ಯದವರೆಗೆ ಈ 4 ರಾಶಿಯವರಿಗೆ ಅದೃಷ್ಟ, ಆದಾಯದಲ್ಲಿ ಹೆಚ್ಚಳ -Guru Blessing

ಸಂಪತ್ತಿನ ಅಧಿಪತಿ ಗುರುವಿನ ಆಶೀರ್ವಾದ; 2024ರ ಅಂತ್ಯದವರೆಗೆ ಈ 4 ರಾಶಿಯವರಿಗೆ ಅದೃಷ್ಟ, ಆದಾಯದಲ್ಲಿ ಹೆಚ್ಚಳ -Guru Blessing

Guru Blessing: ಪ್ರತಿಯೊಂದು ರಾಶಿಯವರಿಗೆ ಗ್ರಹಗಳ ಅನುಗ್ರಹ ಇರುತ್ತದೆ. ಆದರೆ ಕೆಲವೇ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಾತ್ರ ದೊಡ್ಡ ಮಟ್ಟದ ಆಶೀರ್ವಾದ, ಉತ್ತಮ ಫಲಗಳನ್ನು ಇರುತ್ತವೆ. ಗುರುವಿನಿಂದಾಗಿ ಪ್ರಮುಖವಾಗಿ 4 ರಾಶಿಯವರಿಗೆ ಸಾಕಷ್ಟು ಶುಭಫಲಗಳಿವೆ.

ಗುರುವಿನ ಕೃಪೆಯಿಂದ 4 ರಾಶಿಯವರಿಗೆ 2024 ರ ಕೊನೆಯವರೆಗೆ ಉತ್ತಮ ಶುಭಫಲಗಳಿವೆ.
ಗುರುವಿನ ಕೃಪೆಯಿಂದ 4 ರಾಶಿಯವರಿಗೆ 2024 ರ ಕೊನೆಯವರೆಗೆ ಉತ್ತಮ ಶುಭಫಲಗಳಿವೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಗುರುವಿಗೆ ವಿಶೇಷ ಸ್ಥಾನವಿದೆ. ಗುರುವನ್ನು ಜ್ಞಾನ, ಶಿಕ್ಷಕ, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕಾರ್ಯ, ಪವಿತ್ರ ಸ್ಥಳ, ಸಂಪತ್ತು, ದಾನ, ಸದ್ಗುಣ ಮತ್ತು ಬೆಳವಣಿಗೆ ಇತ್ಯಾದಿಗಳ ಅಂಶ ಎಂದು ಕರೆಯಲಾಗುತ್ತದೆ. ಗುರು ಗ್ರಹವು 27 ನಕ್ಷತ್ರಗಳಲ್ಲಿ ಪುನರ್ವಸು, ವಿಶಾಖ ಮತ್ತು ಪೂರ್ವ ಭಾದ್ರಪದ ನಕ್ಷತ್ರಗಳ ಅಧಿಪತಿಯಾಗಿದ್ದಾನೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಡಿಸೆಂಬರ್ 2024 ರವರೆಗೆ ಕೆಲವು ರಾಶಿಚಕ್ರ ಚಿಹ್ನೆಗಳು ಗುರುಗ್ರಹದಿಂದ ವಿಶೇಷವಾಗಿ ಆಶೀರ್ವದಿಸಲ್ಪಡುತ್ತವೆ. ಡಿಸೆಂಬರ್ ವರೆಗಿನ ಸಮಯವು ಯಾವ ರಾಶಿಚಕ್ರ ಚಿಹ್ನೆಗೆ ಶುಭವಾಗಿರುತ್ತದೆ ಎಂದು ತಿಳಿಯೋಣ.

ಮೇಷ ರಾಶಿ

  • ತಾಯಿಗೆ ಬೆಂಬಲ ನೀಡಿ ಅವರ ಮೆಚ್ಚುಗೆಯನ್ನು ಪಡೆಯುತ್ತೀರಿ
  • ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನಗಳು ಉತ್ತಮ ಫಲಗಳನ್ನು ನೀಡುತ್ತವೆ
  • ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮ ನಿಮ್ಮ ಸಂತೋಷವನ್ನು ಹೆಚ್ಚಿಸುತ್ತೆ
  • ವಾಹನದಿಂದಾಗಿ ಸಂತಸ ಹೆಚ್ಚಾಗಲಿದೆ
  • ವೈವಾಹಿಕ ಜೀವನದಲ್ಲೂ ನಿರೀಕ್ಷೆಗೆ ಮೀರಿದ ಸಂತೋಷ ಇರುತ್ತೆ
  • ಬರವಣಿಗೆಯ ಕೆಲಸಗಳಿಂದ ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ

ಮಿಥುನ ರಾಶಿ

  • ಆಸ್ತಿಯಿಂದ ಆದಾಯ ಹೆಚ್ಚಾಗಲಿದೆ
  • ತಾಯಿಯಿಂದ ಹಣ ಪಡೆಯಬಹುದು
  • ಕಲೆ ಮತ್ತು ಸಂಗೀತದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ
  • ಕೆಲಸದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ಸ್ಥಳದ ಬದಲಾವಣೆಯೂ ಸಾಧ್ಯವಿದೆ
  • ನಿಮ್ಮ ಯೋಜನೆಗಳಿಂದಾಗಿ ಆದಾಯ ಹೆಚ್ಚಾಗಲಿದೆ
  • ಕುಟುಂಬ ಜೀವನವು ಆನಂದಮಯವಾಗಿರುತ್ತದೆ
  • ಆಸ್ತಿಯಿಂದ ಬರುವ ಆದಾಯ ಹೆಚ್ಚಾಗುತ್ತೆ
  • ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ
  • ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ
  • ಅಧಿಕಾರಿಗಳಿಗೆ ಬೆಂಬಲ ಸಿಗಲಿದೆ
  • ಆದಾಯದ ಮೂಲಗಳು ಹೆಚ್ಚಾಗುತ್ತವೆ

ಸಿಂಹ ರಾಶಿ

  • ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ
  • ನಿಮ್ಮ ಕೆಲವೊಂದು ಯೋಜನೆಗಳಿಂದ ಮಕ್ಕಳ ಸಂತೋಷ ಹೆಚ್ಚಾಗಲಿದೆ
  • ಉನ್ನತ ಶಿಕ್ಷಣ ಮತ್ತು ಸಂಶೋಧನೆ ಇತ್ಯಾದಿಗಳಿಗಾಗಿ ವಿದೇಶಿಕ್ಕೆ ಹೋಗುವ ಸಾಧ್ಯತೆ ಇರುತ್ತೆ
  • ಕೆಲಸದ ಪ್ರದೇಶದಲ್ಲಿ ಬದಲಾವಣೆಗಳ ಸಾಧ್ಯತೆಗಳಿವೆ
  • ಸ್ಥಳದ ಬದಲಾವಣೆಯೂ ಸಾಧ್ಯವಿದೆ
  • ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ
  • ಆತ್ಮವಿಶ್ವಾಸದಿಂದ ತುಂಬಿರುತ್ತೀರಿ
  • ತಾಯಿ, ಕುಟುಂಬದ ಹಿರಿಯರಿಂದ ಹಣವನ್ನು ಪಡೆಯುತ್ತೀರಿ
  • ಅಧಿಕಾರಿಗಳು ಕೆಲಸದಲ್ಲಿ ಬೆಂಬಲ ಸಿಗಲಿದೆ
  • ಸ್ಥಳ ಬದಲಾವಣೆಯ ಸಾಧ್ಯತೆಯೂ ಇದೆ

ಕನ್ಯಾರಾಶಿ

  • ಜೀವನದಲ್ಲಿ ಸಂತೋಷವನ್ನು ಹೆಚ್ಚಿಸಿಕೊಳ್ಳುತ್ತೀರಿ
  • ನೀವು ಪೋಷಕರಿಂದ ಬೆಂಬಲವನ್ನು ಪಡೆಯುತ್ತೀರಿ
  • ಬಟ್ಟೆ ಇತ್ಯಾದಿಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ
  • ಓದುವುದರಲ್ಲಿ ಆಸಕ್ತಿ ಇರಲಿದೆ
  • ಶೈಕ್ಷಣಿಕ ಕಾರ್ಯಗಳು ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತವೆ
  • ಮಕ್ಕಳ ಸಂತೋಷ ಹೆಚ್ಚಾಗಲಿದೆ
  • ಉದ್ಯೋಗದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ
  • ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯಬಹುದು
  • ಧಾರ್ಮಿಕ ಪ್ರಯಾಣಕ್ಕೆ ಹೋಗುವ ಸಾಧ್ಯತೆಗಳೂ ಇವೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.